ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್‌ನ್ಯೂಸ್!‌ – ಪಿಂಕ್‌ ಲೈನ್‌ ಮೆಟ್ರೋ ಸಂಚಾರಕ್ಕೆ ಮುಹೂರ್ತ ಫಿಕ್ಸ್!‌

ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್‌ನ್ಯೂಸ್!‌ – ಪಿಂಕ್‌ ಲೈನ್‌ ಮೆಟ್ರೋ ಸಂಚಾರಕ್ಕೆ ಮುಹೂರ್ತ ಫಿಕ್ಸ್!‌

ಸಿಲಿಕಾನ್‌ ಸಿಟಿ ಮಂದಿಗೆ ನಮ್ಮ ಮೆಟ್ರೋ ಸಂಚಾರಕ್ಕೆ ಜೀವನಾಡಿಯಾಗಿದೆ. ನಿತ್ಯ ಲಕ್ಷಾಂತರ ಮಂದಿ ನಮ್ಮ ಮೆಟ್ರೋದಲ್ಲೇ ಪ್ರಯಾಣಿಸುತ್ತಿದ್ದಾರೆ. ಪ್ರಯಾಣಿಕರ ಅನುಕೂಲಕ್ಕಾಗಿ ಬಿಎಂಆರ್‌ಸಿಎಲ್‌ ನಮ್ಮ ಮೆಟ್ರೋ ಮಾರ್ಗವನ್ನ ವಿಸ್ತರಿಸುತ್ತಲೇ ಇದೆ.  ಪಿಂಕ್‌ ಲೈನ್‌ ಮೆಟ್ರೋ ಸಂಚಾರಕ್ಕೆ ಮುಹೂರ್ತ ಫಿಕ್ಸ್ ಆಗಿದೆ.

ಇದನ್ನೂ ಓದಿ: ಭೀಮ ಜೊತೆ ಫೋಟೋ ತೆಗೆಸಿಕೊಂಡ್ರೆ ಹುಷಾರ್! – ಆನೆ ಹತ್ತಿರ ಹೋದ್ರೂ ಬೀಳುತ್ತೆ ಕೇಸ್!

ನಮ್ಮ ಮೆಟ್ರೋ ಮಾರ್ಗದ ಕಾಮಕಾರಿಗಳು ವೇಗವಾಗಿ ಸಾಗುತ್ತಿದೆ.  ವರದಿಯ ಪ್ರಕಾರ, 2027ರ ಅಂತ್ಯದ ವೇಳೆಗೆ ಮೆಟ್ರೋ ಜಾಲ 175.55 ಕಿಲೋಮೀಟರ್‌ಗೆ ವಿಸ್ತರಿಸಲಿದೆ. ಈ ವಿಸ್ತರಣೆಯಿಂದ ನಗರದಲ್ಲಿನ ವಾಹನ ದಟ್ಟಣೆ ಕಡಿಮೆಯಾಗುವ ಜೊತೆಗೆ ಸಾರ್ವಜನಿಕರಿಗೆ ವೇಗದ ಹಾಗೂ ಸುರಕ್ಷಿತ ಸಂಚಾರ ವ್ಯವಸ್ಥೆ ಲಭ್ಯವಾಗಲಿದೆ. ಇದೀಗ ಪಿಂಕ್‌ ಲೈನ್‌ ಬಗ್ಗೆ ಅಪ್‌ಡೇಟ್‌ ಸಿಕ್ಕಿದೆ.

ಪಿಂಕ್‌ ಲೈನ್‌ ಮೆಟ್ರೋ ಸಂಚಾರಕ್ಕೆ ಮುಹೂರ್ತ ಫಿಕ್ಸ್!‌

ಬನ್ನೇರುಘಟ್ಟ ರಸ್ತೆಯಿಂದ ನಾಗವಾರದವರೆಗೆ ಸಾಗುವ ಪಿಂಕ್ ಲೈನ್ ಕಾಮಗಾರಿ ಈಗ ಅಂತಿಮ ಹಂತದಲ್ಲಿದೆ. ಈ ಮಾರ್ಗವನ್ನು ಎರಡು ಹಂತಗಳಲ್ಲಿ ಸಾರ್ವಜನಿಕರ ಬಳಕೆಗೆ ತೆರೆಯಲಾಗುತ್ತದೆ. ಕಾಳೇನ ಅಗ್ರಹಾರದಿಂದ ತಾವರೆಕೆರೆವರೆಗಿನ 7.5 ಕಿ.ಮೀ ಏರಿಸಿದ ಮಾರ್ಗವನ್ನು ಮೇ 2026ರ ವೇಳೆಗೆ ಆರಂಭಿಸುವ ನಿರೀಕ್ಷೆ ಇದೆ. ಇದು ದಕ್ಷಿಣ ಬೆಂಗಳೂರಿನ ಜನರಿಗೆ ಹೆಚ್ಚಿನ ಅನುಕೂಲ ಒದಗಿಸಲಿದೆ.

ಪಿಂಕ್ ಲೈನ್‌ನ ಡೈರಿ ವೃತ್ತದಿಂದ ನಾಗವಾರದವರೆಗಿನ 13.76 ಕಿ.ಮೀ ಸುರಂಗ ಮಾರ್ಗವು ನಗರದ ಪ್ರಮುಖ ಭಾಗಗಳನ್ನು ಸಂಪರ್ಕಿಸುತ್ತದೆ. ಈ ಭಾಗದ ಕಾಮಗಾರಿ ವೇಗವಾಗಿ ಸಾಗುತ್ತಿದ್ದು, ಡಿಸೆಂಬರ್ 2026ಕ್ಕೆ ಸಂಚಾರ ಆರಂಭವಾಗಲಿದೆ. ಈ ಮಾರ್ಗವು ನಗರ ಮಧ್ಯಭಾಗದ ಸಂಚಾರದ ಒತ್ತಡವನ್ನು ಬಹಳಷ್ಟು ಕಡಿಮೆ ಮಾಡಲಿದೆ. ಬೆಂಗಳೂರು ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಬ್ಲೂ ಲೈನ್ ಮೆಟ್ರೋ ಯೋಜನೆ ಬಹು ನಿರೀಕ್ಷಿತವಾಗಿದೆ. ಹೊರ ವರ್ತುಲ ರಸ್ತೆಯ ಅತಿ ಹೆಚ್ಚು ಟ್ರಾಫಿಕ್ ಇರುವ ಸೆಂಟ್ರಲ್ ಸಿಲ್ಕ್ ಬೋರ್ಡ್‌ನಿಂದ ಕೃಷ್ಣರಾಜಪುರವರೆಗಿನ 19.75 ಕಿ.ಮೀ ಮಾರ್ಗವನ್ನು ಡಿಸೆಂಬರ್ 2026ಕ್ಕೆ ಪೂರ್ಣಗೊಳಿಸುವ ಗುರಿ ಇಟ್ಟುಕೊಳ್ಳಲಾಗಿದೆ. ಈ ಮಾರ್ಗದಿಂದ ಐಟಿ ಉದ್ಯೋಗಿಗಳ ದಿನನಿತ್ಯದ ಪ್ರಯಾಣ ಸುಲಭವಾಗಲಿದೆ.

Shwetha M