ನಮ್ಮ ಮೆಟ್ರೋ ಪಿಂಕ್‌ ಲೈನ್‌ ಅಕ್ಟೋಬರ್‌ 2ನೇ ವಾರದಲ್ಲೇ ಸಂಚಾರಕ್ಕೆ ಮುಕ್ತ? – ಪ್ರತಿ 6 ನಿಮಿಷಕ್ಕೊಂದು ರೈಲು ಸಂಚಾರ!

ನಮ್ಮ ಮೆಟ್ರೋ ಪಿಂಕ್‌ ಲೈನ್‌ ಅಕ್ಟೋಬರ್‌ 2ನೇ ವಾರದಲ್ಲೇ ಸಂಚಾರಕ್ಕೆ ಮುಕ್ತ? – ಪ್ರತಿ 6 ನಿಮಿಷಕ್ಕೊಂದು ರೈಲು ಸಂಚಾರ!

ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ನಿತ್ಯ ಲಕ್ಷಾಂತರ ಮಂದಿ ನಮ್ಮ ಮೆಟ್ರೋದಲ್ಲಿ ಪ್ರಯಾಣಿಸುತ್ತಿದ್ದಾರೆ. ಇದೀಗ ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್‌ನ್ಯೂಸ್‌ ಇದೆ. ನಮ್ಮ ಮೆಟ್ರೊ ಪಿಂಕ್‌ ಲೈ ಆರಂಭದ ಬಗ್ಗೆ ಬಿಗ್‌ ಅಪ್‌ಡೇಟ್‌ ಸಿಕ್ಕಿದೆ.

ಇದನ್ನೂ ಓದಿ:  ಹೃದಯದ ಆರೋಗ್ಯಕ್ಕೆ ಈ ಹಣ್ಣು ಬೆಸ್ಟ್!‌ – ಒಂದು ಹಣ್ಣಿನಿಂದ ಏನೆಲ್ಲಾ ಪ್ರಯೋಜನ?

ಬಹುನಿರೀಕ್ಷಿತ ನಮ್ಮ ಮೆಟ್ರೋದ ಪಿಂಕ್ ಲೈನ್ ಎಲಿವೇಟೆಡ್ ಮಾರ್ಗ ಶೀಘ್ರದಲ್ಲೇ ಸಾರ್ವಜನಿಕರ ಸಂಚಾರಕ್ಕೆ ಮುಕ್ತವಾಗುವ ಸಾಧ್ಯತೆ ಇದೆ. ಅಕ್ಟೋಬರ್ ಮಧ್ಯಭಾಗದಲ್ಲಿ ಪಿಂಕ್ ಲೈನ್‌ನ ಎಲಿವೇಟೆಡ್ ಮಾರ್ಗ ಉದ್ಘಾಟಿಸುವ ಸಾಧ್ಯತೆ ಇದೆ. ಮಾರ್ಗದ ಸುರಕ್ಷತೆ ಹಾಗೂ ಫಿಟ್ನೆಸ್‌ಗೆ ಸಂಬಂಧಿಸಿದಂತೆ ಸ್ವತಂತ್ರ ಏಜೆನ್ಸಿ ನಡೆಸಿದ ಪರಿಶೀಲನೆಯ ಬಳಿಕ ನೀಡುವ ಐಎಸ್‌ಐ ಪ್ರಮಾಣಪತ್ರ ಇದೀಗ ಬಿಎಂಆರ್‌ಸಿಎಲ್ ಕೈ ಸೇರಿದೆ. ಪ್ರಮಾಣಪತ್ರ ದೊರೆತ ಹಿನ್ನೆಲೆ, ಅಗತ್ಯ ದಾಖಲೆಗಳನ್ನ ಇಂದೇ ರೈಲ್ವೆ ಸುರಕ್ಷತಾ ಆಯುಕ್ತರ  ಪರಿಶೀಲನೆಗಾಗಿ ಸಲ್ಲಿಸುವ ಸಾಧ್ಯತೆ ಇದೆ.

ಇದಾದ ಬಳಿಕ ಅಂತಿಮ ಹಂತದ ಸುರಕ್ಷತಾ ತಪಾಸಣೆ ನಡೆಯಲಿದೆ. ಸುಮಾರು 2 ದಿನಗಳ ಕಾಲ ನಡೆಯಲಿರುವ ಸುರಕ್ಷತಾ ಪರಿಶೀಲನೆಗೆ BMRCL ನಿಂದ ಸಿಎಂಆರ್‌ಎಸ್‌ ಅಧಿಕಾರಿಗಳನ್ನ ಆಹ್ವಾನಿಸಲಾಗಿದೆ. ಅಕ್ಟೋಬರ್ ಆರಂಭದಲ್ಲಿ CMRS ನಿಂದ ಪಿಂಕ್ ಲೈನ್ ಮಾರ್ಗದ ಪರಿಶೀಲನೆ ನಡೆಯುವ ಸಾಧ್ಯತೆ ಇದೆ. ಪರಿಶೀಲನೆ ಪೂರ್ಣಗೊಂಡ ಬಳಿಕ ರೈಲ್ವೆ ಮಂಡಳಿಯಿಂದ ವಾರದೊಳಗೆ ಸಂಚಾರಕ್ಕೆ ಗ್ರೀನ್ ಸಿಗ್ನಲ್ ದೊರೆಯುವ ಸಾಧ್ಯತೆ ಇದೆ. ಅಗತ್ಯ ಅನುಮತಿಗಳು ದೊರೆತರೆ ಅಕ್ಟೋಬರ್ ಮಧ್ಯಭಾಗದಲ್ಲಿ ಪಿಂಕ್ ಲೈನ್ ಉದ್ಘಾಟನೆಗೆ ವೇದಿಕೆ ಸಿದ್ಧವಾಗಲಿದೆ.

ಇನ್ನು ಆರಂಭಿಕ ಹಂತದಲ್ಲಿ ಪಿಂಕ್ ಲೈನ್‌ನಲ್ಲಿ ಒಟ್ಟು 6 ಮೆಟ್ರೋ ರೈಲುಗಳು ಕಾರ್ಯಾಚರಣೆ ನಡೆಸುವ ಸಾಧ್ಯತೆ ಇದೆ. ಪೀಕ್ ಅವರ್‌ನಲ್ಲಿ ಪ್ರತಿ 6 ನಿಮಿಷಕ್ಕೊಂದು ರೈಲು, ಸಾಮಾನ್ಯ ಅವಧಿಯಲ್ಲಿ ಪ್ರತಿ 10 ನಿಮಿಷಕ್ಕೊಂದು ರೈಲು ಸಂಚರಿಸುವ ನಿರೀಕ್ಷೆ ಇದೆ.

Shwetha M

Leave a Reply

Your email address will not be published. Required fields are marked *