ಮಹಿಳೆಯರ ಸುರಕ್ಷತೆಗೆ ನಮ್ಮ ಮೆಟ್ರೋದಲ್ಲಿ ಆದ್ಯತೆ – ಪ್ರಯಾಣಿಕರಿಗೆ ತುರ್ತು ಸಹಾಯವಾಣಿ ತೆರೆದ ಬಿಎಂಆರ್‌ಸಿಎಲ್‌

ಮಹಿಳೆಯರ ಸುರಕ್ಷತೆಗೆ ನಮ್ಮ ಮೆಟ್ರೋದಲ್ಲಿ ಆದ್ಯತೆ – ಪ್ರಯಾಣಿಕರಿಗೆ ತುರ್ತು ಸಹಾಯವಾಣಿ ತೆರೆದ ಬಿಎಂಆರ್‌ಸಿಎಲ್‌

ಬೆಂಗಳೂರು: ನಮ್ಮ ಮೆಟ್ರೋದಲ್ಲಿ ದಿನದಿಂದ ದಿನಕ್ಕೆ ಮಹಿಳೆಯರ ಮೇಲೆ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿದೆ. ಕಿಡಿಗೇಡಿಗಳು ಮಹಿಳೆಯರಿಗೆ ಕಿರುಕುಳ ನೀಡುತ್ತಿರುವ ಪ್ರಕರಣಗಳು ವರದಿಯಾಗುತ್ತಿವೆ. ಇದೀಗ ಬಿಎಂಆರ್‌ಸಿಎಲ್‌ ತುರ್ತು ಪರಿಸ್ಥಿತಿಯಲ್ಲಿ ಮೆಟ್ರೋ ಪ್ರಯಾಣಿಕರಿಗೆ ಸಹಾಯಮಾಡಲು ಮುಂದಾಗಿದೆ. ತುರ್ತು ಸಂದರ್ಭಗಳಲ್ಲಿ ಸಹಾಯವಾಣಿಯನ್ನು ತೆರೆದಿದೆ.

ಇದನ್ನೂ ಓದಿ: ಯುವನಿಧಿ ಯೋಜನೆಗೆ ಜಾರಿಗೆ ಮುಹೂರ್ತ ಫಿಕ್ಸ್! – ಯಾವ ತಿಂಗಳಿನಿಂದ ನಿಮ್ಮ ಅಕೌಂಟ್ ಗೆ ಹಣ ಗೊತ್ತಾ?

ಹೌದು, ಬಿಎಂಆರ್‌ಸಿಎಲ್‌ ಯಾವುದೇ ತುರ್ತು ಪರಿಸ್ಥಿತಿಯಲ್ಲಿ ಪ್ರಯಾಣಿಕರಿಗೆ ಸಹಾಯ ಮಾಡಲು ನಮ್ಮ ಮೆಟ್ರೋ ಸಿದ್ಧವಾಗಿದೆ ಎಂದು ತಿಳಿಸಿದೆ. ಭದ್ರತಾ ಸಿಬ್ಬಂದಿಯು ಸದಾ ಜಾಗರೂಕರಾಗಿದ್ದು, ತುರ್ತು ಸಂದರ್ಭದಲ್ಲಿ ಯಾವುದೇ ಸಹಾಯಕ್ಕಾಗಿ ಸಿದ್ಧರಿರುತ್ತಾರೆ. ಪ್ರಯಾಣಿಕರು ತುರ್ತು ಸಂದರ್ಭಗಳಲ್ಲಿ ನಿಯಂತ್ರಣ ಕೇಂದ್ರದ ದೂರವಾಣಿ ಸಂಖ್ಯೆ 080: 2519 1208 ಮತ್ತು 080 2216 2258 / 2208 ಮತ್ತು ಟೋಲ್‌ ಫ್ರೀ ಸಹಾಯವಾಣಿ 1800-425-12345 ಗೆ ಸಂಪರ್ಕಿಸಬಹುದು ಎಂದು ಬಿಎಂಆರ್‌ಸಿಎಲ್‌ ತಿಳಿಸಿದೆ.

ಹೆಚ್ಚುವರಿಯಾಗಿ, ತುರ್ತು ಸಮಯದಲ್ಲಿಪ್ರಯಾಣಿಕರು ಸಹಾಯ ಪಡೆಯಲು ಎಲ್ಲಾಮೆಟ್ರೋ ಬೋಗಿಯಲ್ಲಿನಾಲ್ಕು ಪ್ಯಾನಿಕ್‌ ಬಟನ್‌ ತುರ್ತು ಎಚ್ಚರಿಕೆ ಗಂಟೆ ಅಳವಡಿಸಿರುವ ವ್ಯವಸ್ಥೆ ಬಳಸಿ, ರೈಲು ನಿರ್ವಾಹಕರೊಂದಿಗೆ ಸಂವಹನ ನಡೆಸಬಹುದು. ಇದರಿಂದಾಗಿ ಮುಂದಿನ ನಿಲ್ದಾಣದಲ್ಲಿ ಸಹಾಯ ಒದಗಿಸಲು ಅನುಕೂಲವಾಗಲಿದೆ ಎಂದು ಬಿಎಂಆರ್‌ಸಿಎಲ್‌ ತಿಳಿಸಿದೆ.

Shwetha M