ಲಾಲ್ಬಾಗ್ನಲ್ಲಿ ಫಲಪುಷ್ಪ ಪ್ರದರ್ಶನ – ಮೆಟ್ರೋ ಪ್ರಯಾಣಿಕರಿಗೆ ಗುಡ್ನ್ಯೂಸ್ ನೀಡಿದ ಬಿಎಂಆರ್ಸಿಎಲ್!
ಸಸ್ಯಕಾಶಿ ಲಾಲ್ಬಾಗ್ನಲ್ಲಿ ಫ್ಲವರ್ಶೋ ನಡೆಯುತ್ತಿದೆ. ಫಲಪುಷ್ಪ ಪ್ರದರ್ಶನ ವೀಕ್ಷಿಸಲು ಬರುವ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಲು ನಮ್ಮ ಮೆಟ್ರೋ ರೈಲು ನಿಗಮ ರಿಟರ್ನ್ ಜರ್ನಿ ಪೇಪರ್ ಟಿಕೆಟ್ ಸೌಲಭ್ಯ ಜಾರಿಗೊಳಿಸಿದೆ.
ಇದನ್ನೂ ಓದಿ: ಸಮಂತಾಗೆ ಮದುವೆ ಪ್ರಪೋಸಲ್! – ಒಪ್ಪಿಗೆ ಕೊಟ್ಟೇ ಬಿಟ್ರಾ ಸ್ಯಾಮ್?
ಹೌದು, ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಲಾಲ್ಬಾಗ್ನಲ್ಲಿ ಸಂವಿಧಾನ ಶಿಲ್ಪಿ ಡಾ. ಬಿಆರ್ ಅಂಬೇಡ್ಕರ್ ವಿಷಯಾಧಾರಿತವಾಗಿ ಫ್ಲವರ್ ಶೋ ಪ್ರದರ್ಶನಗೊಳ್ಳುತ್ತಿದೆ. ಇದೀಗ ಫ್ಲವರ್ ಶೋ ವೀಕ್ಷಿಸಲು ತೆರಳುವವರಿಗೆ ಬೆಂಗಳೂರು ಮೆಟ್ರೋ ರೈಲು ನಿಗಮ ಸಿಹಿಸುದ್ದಿ ನೀಡಿದೆ. ಆ. 15, 17 ಮತ್ತು 18ರಂದು ಮೆಟ್ರೋದಲ್ಲಿ ರಿಟರ್ನ್ ಜರ್ನಿ ಪೇಪರ್ ಟಿಕೆಟ್ ವ್ಯವಸ್ಥೆ ಮಾಡಲಾಗಿದೆ.
ಪೇಪರ್ ಟಿಕೆಟನ್ನು ಬೆಳಗ್ಗೆ 8ರಿಂದ ಸಂಜೆ 6 ಗಂಟೆವರೆಗೆ ನಗರದ ಎಲ್ಲ ನಿಲ್ದಾಣಗಳಲ್ಲಿ ಖರೀದಿಸಬಹುದು. ಲಾಲ್ಬಾಗ್ ಮೆಟ್ರೋ ನಿಲ್ದಾಣದಲ್ಲಿ ರಾತ್ರಿ 8 ಗಂಟೆವರೆಗೆ ಪೇಪರ್ ಟಿಕೆಟ್ ಲಭ್ಯವಿದೆ. ಬೆಳಗ್ಗೆ 10 ರಿಂದ ರಾತ್ರಿ 8 ಗಂಟೆವರೆಗೆ ಲಾಲ್ಬಾಗ್ ಮೆಟ್ರೋ ನಿಲ್ದಾಣದಿಂದ ಯಾವುದೇ ಮೆಟ್ರೋ ನಿಲ್ದಾಣಕ್ಕೆ ಪ್ರಯಾಣಿಸಲು ₹30 ಟಿಕೆಟ್ ದರ ನಿಗದಿಸಲಾಗಿದೆ ಎಂದು ಬಿಎಂಆರ್ಸಿಎಲ್ ತಿಳಿಸಿದೆ.
ಲಾಲ್ಬಾಗ್ ನಿಲ್ದಾಣಕ್ಕೆ ಟೋಕನ್, ಸ್ಮಾರ್ಟ್ಕಾರ್ಡ್ ಸೇರಿ ಕ್ಯೂಆರ್ ಕೋಡ್ ಟಿಕೆಟ್ಗಳ ಮೂಲಕ ಪ್ರಯಾಣಿಸಬಹುದು. ನಂತ್ರ ಲಾಲ್ಬಾಗ್ ಮೆಟ್ರೋ ನಿಲ್ದಾಣದಿಂದ ಹಿಂತಿರುಗಲು ಟೋಕನ್ ಗಳ ಬದಲಿಗೆ ಪೇಪರ್ ಟಿಕೆಟ್, ಕಾರ್ಡ್ ಮತ್ತು ಕ್ಯೂಆರ್ ಟಿಕೆಟ್ ಮೂಲಕ ಮಾತ್ರ ಪ್ರಯಾಣಿಸಲು ವ್ಯವಸ್ಥೆ. ಪ್ರಯಾಣಕ್ಕೆ ಮುಂಚಿತವಾಗಿ ಕ್ಯೂಆರ್ ಟಿಕೆಟ್ಗಳನ್ನು ಖರೀದಿಸುವಂತೆ ವಿನಂತಿ ಮಾಡಲಾಗಿದೆ.