ನಮ್ಮ ಮೆಟ್ರೋ ನೀಲಿ ಮಾರ್ಗದ ಬಗ್ಗೆ ಬಿಗ್‌ ಅಪ್‌ಡೇಟ್!‌ – ಬ್ಲೂ ಲೈನ್‌ಗೆ ಬರಲಿವೆ 2 ಡ್ರೈವರ್‍ಲೆಸ್ ರೈಲು

ನಮ್ಮ ಮೆಟ್ರೋ ನೀಲಿ ಮಾರ್ಗದ ಬಗ್ಗೆ ಬಿಗ್‌ ಅಪ್‌ಡೇಟ್!‌ – ಬ್ಲೂ ಲೈನ್‌ಗೆ ಬರಲಿವೆ 2 ಡ್ರೈವರ್‍ಲೆಸ್ ರೈಲು

ರಾಜಧಾನಿ ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ಜಾಲ ವಿಸ್ತರಣೆಗೆ ವೇಗ ಸಿಕ್ಕಿದೆ. ಏಕೆಂದರೆ ಈಗಾಗಲೇ ಗುಲಾಬಿ ಮಾರ್ಗ ತೆರೆಯಲು ಸಜ್ಜಾಗಿರುವ ಬೆಂಗಳೂರು ಮೆಟ್ರೋ ರೈಲು ನಿಗಮದ ನೀಲಿ ಮಾರ್ಗಕ್ಕೆ ಮುಂದಿನ ವಾರಗಳಲ್ಲಿ ಬೆಂಗಳೂರು ಅರ್ಥ್ ಮೂವರ್ಸ್ ಲಿಮಿಟೆಡ್ ಎರಡು ಡ್ರೈವರ್‍ಲೆಸ್ ಮೆಟ್ರೋ ರೈಲು ಸೆಟ್‌ಗಳನ್ನು ಒದಗಿಸಲಿದೆ.

ಇದನ್ನೂ ಓದಿ: ಜೋಡಿ ನಂಬರ್-1 ಶೋನಲ್ಲಿ ಮಿಮಿಕ್ರಿ ಗೋಪಿ, ಸಿಂಗರ್ ಬಾಳು ಬೆಳಗುಂದಿ – ಜಗಪ್ಪ, ನಯನಾಗೂ ಸಿಕ್ತು ಚಾನ್ಸ್..!

ವಾಹನ ದಟ್ಟಣೆ ಇರುವ ಬೆಂಗಳೂರು ಹೊರವರ್ತುಲ ರಸ್ತೆಯ ಕೆ.ಆರ್‍‌.ಪುರಂ, ಮಹಾದೇವಪುರ, ಎಚ್‌ಎಸ್‌ಆರ್‍‌ ಬಡಾವಣೆ, ಬೆಳ್ಳಂದೂರು, ಮಾರತ್ತಹಳ್ಳಿ ಸೇರಿದಂತೆ ಈ ಭಾಗಗಳಲ್ಲಿ ಐಟಿ ಕಂಪನಿಗಳ ಸಂಖ್ಯೆ ಹೆಚ್ಚಿವೆ. ಇದೆಲ್ಲ ಗಮನದಲ್ಲಿಟ್ಟುಕೊಂಡೆ ನಿರ್ಮಿಸಲಾಗುತ್ತಿರುವ ಸಿಲ್ಕ್ ಬೋರ್ಡ್-ಕೆ.ಆರ್.ಪುರಂ ನೀಲಿ ಮೆಟ್ರೋ ಮಾರ್ಗಕ್ಕಾಗಿ ಎರಡು ಮೆಟ್ರೋ ರೈಲು ಸೆಟ್‌ಗಳು ಶೀಘ್ರವೇ ಬೈಯಪ್ಪನಹಳ್ಳಿ ಡಿಪೋಗೆ ಬರಲಿವೆ.

ಸುಮಾರು 55 ಕಿಲೋ ಮೀಟರ್ ಉದ್ದದ ನೀಲಿ ಮೆಟ್ರೋ ಮಾರ್ಗವು ಎರಡು ಹಂತಗಳಲ್ಲಿ ನಿರ್ಮಾಣಗೊಳ್ಳುತ್ತಿದೆ. ಸಿಲ್ಕ್ ಬೋರ್ಡ್‌ನಿಂದ ಕೆ.ಆರ್‍‌.ಪುರಂವರೆಗೆ ಮೊದಲ ಹಂತದಲ್ಲಿ (2ಎ) 18 ಕಿಲೋ ಮೀಟರ್, ಎರಡನೇ ಹಂತದಲ್ಲಿ ಕೆ.ಆರ್.ಪುರಂನಿಂದ ದೇವನಹಳ್ಳಿ ವಿಮಾನ ನಿಲ್ದಾಣವರೆಗೆ ಸುಮಾರು 37 ಕಿಲೋ ಮೀಟರ್ (2ಬಿ) ಯೋಜನೆಯ ಕಾಮಗಾರಿ ನಡೆಯುತ್ತಿದೆ.

ಇದೀಗ ಎರಡು ಸೆಟ್ ರೈಲುಗಳನ್ನು ಬಿಇಎಂಎಲ್ ಮೆಟ್ರೊ ಡಿಪೋಗೆ ಕಳುಹಿಸಲಿದೆ. ರೈಲುಗಳು ಬರುತ್ತಿದ್ದಂತೆ ಲಗೇಜ್ ರ್ಯಾಕ್‌ಗಳೊಂದಿಗೆ ಪರೀಕ್ಷೆಗಳು ಆರಂಭವಾಗಲಿವೆ ಎಂದು ಬಿಎಂಆರ್‍‌ಸಿಎಲ್ ಮೂಲಗಳು ಮಾಹಿತಿ ನೀಡಿವೆ.

Shwetha M