ನಮೀಬಿಯಾದಿಂದ ಕರೆತಂದಿದ್ದ 5 ವರ್ಷದ ಹೆಣ್ಣು ಚೀತಾ ಸಾವು

ನಮೀಬಿಯಾದಿಂದ ಕರೆತಂದಿದ್ದ 5 ವರ್ಷದ ಹೆಣ್ಣು ಚೀತಾ ಸಾವು

ಭೋಪಾಲ್‌: ಕಳೆದ ವರ್ಷ ನಮೀಬಿಯಾದಿಂದ ಭಾರತಕ್ಕೆ ಕರೆತಂದ ಎಂಟು ಚೀತಾಗಳ ಪೈಕಿ ಒಂದು ಹೆಣ್ಣು ಚೀತಾ ಸಾಶಾ ಸಾವನ್ನಪ್ಪಿದೆ ಎಂದು ಕುನೋ ರಾಷ್ಟ್ರೀಯ ಉದ್ಯಾನವನದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇದನ್ನೂಓದಿ: ಈ ಕಾಡಿನ ಒಳಗೆ ಹೋದರೆ ಜೀವಂತ ಬರುವುದೇ ಅನುಮಾನ – ಇದೊಂದು ಸೂಸೈಡ್ ಫಾರೆಸ್ಟ್..!

ನಮೀಬಿಯಾದಿಂದ ಚೀತಾಗಳನ್ನು ತಂದ ಬಳಿಕ ಅವುಗಳನ್ನು ಮಧ್ಯಪ್ರದೇಶದ ಶಿಯೋಪುರದಲ್ಲಿರುವ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಬಿಡಲಾಗಿತ್ತು. ಜನವರಿ 22 ರಂದು ಸಾಶಾ ಆರೋಗ್ಯದಲ್ಲಿ ಏರುಪೇರು ಉಂಟಾಗಿತ್ತು. ಬಳಿಕ ಸಾಶಾಳನ್ನು ಕ್ವಾರಂಟೈನ್ ಮಾಡಿ ಆಕೆಯ ಆರೋಗ್ಯದ ಬಗ್ಗೆ ಮೇಲ್ವಿಚಾರಣೆ ಮಾಡಲಾಗುತ್ತಿತ್ತು. ಆದರೆ, ಸಾಶಾ ಆಹಾರ ಸೇವನೆ ಮಾಡುತ್ತಿರಲಿಲ್ಲ ಹಾಗೂ ಎಲ್ಲದರಲ್ಲೂ ನಿರಾಸಕ್ತಿ ತೋರುತ್ತಿದ್ದಳು. ಇದಾದ ನಂತರ, ಕುನೊ ರಾಷ್ಟ್ರೀಯ ಉದ್ಯಾನವನದಲ್ಲಿದ್ದ ಮೂವರು ವೈದ್ಯರು ಮತ್ತು ಭೋಪಾಲ್‌ನಿಂದ ಆಗಮಿಸಿದ ವೈದ್ಯರು ಅವಳನ್ನು ಪರೀಕ್ಷಿಸಿದಾಗ, ಹೆಣ್ಣು ಚೀತಾದ ಮೂತ್ರಪಿಂಡದಲ್ಲಿ ಸೋಂಕು ಇರುವುದು ಗೊತ್ತಾಗಿತ್ತು. ಇದೀಗ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.

ಸಾಶಾಳನ್ನು ಭಾರತಕ್ಕೆ ಕರೆತರುವ ಮೊದಲೇ ಮೂತ್ರಪಿಂಡದ ಸಮಸ್ಯೆ ಇತ್ತು ಎನ್ನಲಾಗಿದೆ.  ವೈಲ್ಡ್‌ಲೈಫ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ, ಡೆಹ್ರಾಡೂನ್ ಮತ್ತು ಕುನೋ ನ್ಯಾಷನಲ್ ಪಾರ್ಕ್ ಮ್ಯಾನೇಜ್‌ಮೆಂಟ್‌ನ ಹಿರಿಯ ವಿಜ್ಞಾನಿಗಳು ನಮೀಬಿಯಾದಲ್ಲಿನ ಚೀತಾ ಕನ್ಸರ್ವೇಶನ್ ಫೌಂಡೇಶನ್‌ನಿಂದ ಸಾಶಾಗೆ ನೀಡಿದ್ದ ಚಿಕಿತ್ಸೆಯ ಮಾಹಿತಿಯನ್ನೂ ಪಡೆದುಕೊಂಡಿದ್ದಾರೆ. 2022ರ ಆಗಸ್ಟ್‌ 15 ರಂದು ಕೊನೆಯ ಬಾರಿಗೆ ನಡೆಸಿದ ಪರೀಕ್ಷೆಯಲ್ಲೂ ಸಾಶಾದ ರಕ್ತದಲ್ಲಿ ಕೆರೆಟಿನ್‌ ಕ್ರಿಯೇಟಿನೈನ್‌ ಮಟ್ಟ 400ಕ್ಕಿಂತ ಹೆಚ್ಚಿತ್ತು. ಅದರೊಂದಿಗೆ ಆಕೆಗೆ ಈ ಮೊದಲೇ ಕಿಡ್ನಿ ಸಮಸ್ಯೆ ಇತ್ತು ಎನ್ನುವುದು ಖಚಿತಗೊಂಡಿದೆ.

suddiyaana