ಸುಂದರ್ ಆಟ ಮುಗಿಸಿದ್ರಾ ನಮನ್? – T-20I ಆಲ್ ರೌಂಡರ್ SLOT ಫಿಕ್ಸ್!
TESTಗಷ್ಟೇ ಸೀಮಿತ ವಾಷಿಂಗ್ಟನ್?

ಸುಂದರ್ ಆಟ ಮುಗಿಸಿದ್ರಾ ನಮನ್? – T-20I ಆಲ್ ರೌಂಡರ್ SLOT ಫಿಕ್ಸ್!TESTಗಷ್ಟೇ ಸೀಮಿತ ವಾಷಿಂಗ್ಟನ್?

ಕ್ರಿಕೆಟ್​ನಲ್ಲಿ ಒಬ್ಬರ ಇಂಜುರಿ ಮತ್ತೊಬ್ಬರಿಗೆ ವರವಾಗಬಹುದು. ಅಥವಾ ಒಬ್ಬರ ಆಬ್ಸೆನ್ಸ್ ಇನ್ನೊಬ್ಬರಿಗೆ ಪ್ಲಸ್ ಆಗ್ಬೋದು. ಪ್ರಸ್ತುತ ಟಿ-20ಐ ಫಾರ್ಮೆಟ್​ನಲ್ಲಿ ನಮನ್ ಧೀರ್ ಎಂಟ್ರಿ ಮತ್ತೊಬ್ಬ ಸ್ಟಾರ್ ಪ್ಲೇಯರ್​ಗೆ ಟೆನ್ಷನ್ ತಂದಿಟ್ಟಿದೆ. ಅಕ್ಟೋಬರ್ 6ರಂದು ಲಕ್ನೋದಲ್ಲಿ ನಡೆದ ವಿಂಡೀಸ್ ವಿರುದ್ಧದ ಮೊದಲ ಟಿ-20ಐ ಮ್ಯಾಚಲ್ಲಿ ಭಾರತದ ಪರ ನಮನ್ ಧೀರ್ ಡೆಬ್ಯೂ ಮಾಡಿದ್ರು. ತಮ್ಮ ಮೊದಲ ಪಂದ್ಯದಲ್ಲೇ ಬಿಗ್ ಇಂಪ್ಯಾಕ್ಟ್ ಕೂಡ ಮಾಡಿದ್ರು. ಐದು ಪಂದ್ಯಗಳ ಸರಣಿಯ ಮೊದಲ ಟಿ20ಐನಲ್ಲಿ 4 ಓವರ್​ಗಳಲ್ಲಿ 3/31 ವಿಕೆಟ್ ಪಡೆದರು. 2026ರ ಐಪಿಎಲ್​ನಲ್ಲಿ ಒಂದೇ ಒಂದು ಓವರ್ ಬೌಲ್ ಮಾಡದೆ 318 ರನ್ ಗಳಿಸಿದ ನಮನ್ ಧೀರ್ ಮೊದಲ ಟಿ-20ಐನಲ್ಲೇ ಎಲ್ಲರ ಗಮನ ಸೆಳೆದ್ರು. ಅವ್ರ ಪರ್ಫಾಮೆನ್ಸ್ ಹೀಗೇ ಇತ್ತಂದ್ರೆ ವಾಷಿಂಗ್ಟನ್ ಸುಂದರ್​​ಗೆ ಸಂಕಷ್ಟ ಫಿಕ್ಸ್ ಅಂತಾ ಕೆ. ಶ್ರೀಕಾಂತ್ ಹೇಳಿದ್ದಾರೆ.

ಇದನ್ನೂ ಓದಿ : KL, DDP ಆಯ್ತು ಈಗ ಸ್ಮರಣ್ ರವಿಚಂದ್ರನ್ – TESTನಲ್ಲಿ ಕನ್ನಡಿಗರಿಗೆ ಜಾಕ್ ಪಾಟ್

ಸುಂದರ್ ಗೆ ತಪ್ಪದ ಇಂಜುರಿ.. ನಮನ್ ಧೀರ್ ಯುಗ ಆರಂಭ!

1983ರ ಭಾರತ ವಿಶ್ವಕಪ್ ವಿಜೇತ ಕೃಷ್ಣಮಾಚಾರಿ ಶ್ರೀಕಾಂತ್ ನಮನ್ ಧೀರ್ ಬಗ್ಗೆ ಅಚ್ಚರಿಯ ಮಾತುಗಳನ್ನಾಡಿದ್ದಾರೆ. ನಮನ್ ಧೀರ್ ಮುಂದಿನ ಪಂದ್ಯಗಳಲ್ಲೂ ಹೀಗೆಯೇ ಪರ್ಫಾಮ್ ಮಾಡಿದ್ರೆ ವಾಷಿಂಗ್ಟನ್ ಸುಂದರ್ ಅವರ ಅವಕಾಶಗಳನ್ನು ಕೊನೆಗೊಳಿಸಬಹುದು ಎಂದಿದ್ದಾರೆ. ಭಾರತ ತಂಡದ ಪ್ರಮುಖ ಆಲ್‌ರೌಂಡರ್ ವಾಷಿಂಗ್ಟನ್ ಸುಂದರ್ Left Hamstring Strain ಸಮಸ್ಯೆಯಿಂದಾಗಿ ವೆಸ್ಟ್ ಇಂಡೀಸ್ ವಿರುದ್ಧದ ಪ್ರಸ್ತುತ ಟಿ-20ಐ ಸರಣಿಯಿಂದ ಸಂಪೂರ್ಣವಾಗಿ ಹೊರಬಿದ್ದಿದ್ದಾರೆ. ನಮನ್ ಧೀರ್ ಬದಲಿ ಆಟಗಾರನಾಗಿ ಪ್ಲೇಯಿಂಗ್ 11ನಲ್ಲಿ ವಾಷಿಂಗ್ಟನ್ ಸುಂದರ್ ಅವರ ಸ್ಥಾನಕ್ಕೆ ಬಂದಿದ್ದಾರೆ. ವಾಷಿಂಗ್ಟನ್ ಸುಂದರ್ ಪ್ರತಿ ಎರಡು ಪಂದ್ಯಗಳ ನಂತರವೂ ಗಾಯಗೊಳ್ಳುತ್ತಲೇ ಇದ್ದಾರೆ. ಈಗ ನಮನ್ ಧೀರ್ ಅವರ ಬದಲಿಯಾಗಿ ಬಂದು ಅವ್ರ ಅವಕಾಶಗಳನ್ನೇ ಮುಗಿಸಬಹುದು. ನಮನ್ ಧೀರ್ ಅವರನ್ನು ಏಕದಿನ ಮತ್ತು ಟಿ20ಐಗಳಿಂದ ಕೈಬಿಡೋದು ಕಷ್ಟ ಆಗ್ಬೋದು. ಹೀಗಾಗಿ ವಾಷಿಂಗ್ಟನ್ ಸುಂದರ್ ಭಾರತಕ್ಕಾಗಿ ಟೆಸ್ಟ್ ಕ್ರಿಕೆಟ್‌ನಲ್ಲಿ ಮಾತ್ರ ಆಡಬಹುದು ಎಂದಿದ್ದಾರೆ. ಌಂಡ್ ಮೋಸ್ಟ್ ಇಂಪಾರ್ಟೆಂಟ್ಲಿ ನಮನ್ ಬಳಿ ಟ್ಯಾಲೆಂಟ್ ಇದೇ ಅನ್ನೋದನ್ನೂ ಹೇಳಿದ್ದಾರೆ.

ವೇಗವಾಗಿ ಬೌಲಿಂಗ್ ಮಾಡಿ ಸಿಕ್ಸ್.. ನೆಕ್ಸ್ ಟ್ ಸ್ಲೋ ಬಾಲ್ ನಲ್ಲಿ ವಿಕೆಟ್!

ಅಷ್ಟಕ್ಕೂ ನಮನ್ ಪರ ಬ್ಯಾಟ್ ಬೀಸಿರೋ ಶ್ರೀಕಾಂತ್ ಅವ್ರ ಸ್ಕಿಲ್ ಬಗ್ಗೆಯೂ ಮಾತನಾಡಿದ್ದಾರೆ. ನಮನ್ ಧೀರ್ ಆರಂಭದಲ್ಲಿ ವೇಗವಾಗಿ ಬೌಲಿಂಗ್ ಮಾಡಿದಾಗ ಸಿಕ್ಸರ್‌ಗಳನ್ನ ಹೊಡೆಸಿಕೊಳ್ಳುತ್ತಾರೆ. ಹಾಗಂತ ನಮನ್ ಡಿಸ್ಟರ್ಬ್ ಆಗಲ್ಲ. ನೆಕ್ಸ್​ಟ್ ಬಾಲ್​ನಲ್ಲೇ ವೇರಿಯೇಷನ್ ಚೇಂಜ್ ಮಾಡ್ತಾರೆ. ತಕ್ಷಣವೇ ಚೆಂಡನ್ನು ಸ್ವಲ್ಪ ಸ್ಲೋ ಆಗಿ ರಿಲೀಸ್ ಮಾಡ್ತಾರೆ. ಆಗ ವಿಕೆಟ್ಸ್ ಬೀಳೋ ಚಾನ್ಸಸ್ ಜಾಸ್ತಿ ಇರುತ್ತೆ. ವಿಂಡೀಸ್ ವಿರುದ್ಧದ ಮೊದಲ ಮ್ಯಾಚಲ್ಲಿ ಮಾಡಿದ್ದೂ ಇದನ್ನೇ. ಹೀಗಾಗಿ ಟಿ20 ಕ್ರಿಕೆಟ್‌ಗೆ ಬೆಸ್ಟ್ ಚಾಯ್ಸ್ ಎಂದಿದ್ದಾರೆ. ಒಟ್ನಲ್ಲಿ ಭಾರತದ ಪರ ಸಾಕಷ್ಟು ಸ್ಟಾರ್ ಪ್ಲೇಯರ್ ಗಳೇ ಇಂಜುರಿಯಿಂದಾಗಿ ತಿಂಗಳುಗಟ್ಟಲೆ ತಂಡದಿಂದ ಹೊರಗುಳಿದು ಕೊನೆಗೆ ತಮ್ಮ ಸ್ಲಾಟ್​ಗಳನ್ನೇ ಕಳ್ಕೊಂಡಿದ್ದಾರೆ. ಮೊಹಮ್ಮದ್ ಶಮಿಗೂ ಹೀಗೇ ಆಯ್ತು. ಹಾರ್ದಿಕ್ ಪಾಂಡ್ಯ ಕೂಡ ಐಪಿಎಲ್ ಆದ್ಮೇಲೆ ಆಡಿಲ್ಲ. ಹರ್ಷಿತ್ ರಾಣಾ, ಆಕಾಶ್ ದೀಪ್ ಹೀಗೆ ಸಾಕಷ್ಟು ಪ್ಲೇಯರ್ಸ್ ಈಗ್ಲೂ ಇಂಜುರಿಯಿಂದ ರಿಕವರ್ ಆಗೋಕೆ ಒದ್ದಾಡ್ತಿದ್ದಾರೆ. ಆದ್ರೆ ಅವ್ರು ಕಂಪ್ಲೀಟ್ ಆಗಿ ಫಿಟ್ ಌಂಡ್ ಫೈನ್ ಆಗಿ ವಾಪಸ್ ಬರೋ ಅಷ್ಟ್ಟರಲ್ಲಿ ಸಾಕಷ್ಟು ಚೇಂಜಸ್ ಕೂಡ ಆಗಿರುತ್ತೆ.

Shantha Kumari

One thought on “ಸುಂದರ್ ಆಟ ಮುಗಿಸಿದ್ರಾ ನಮನ್? – T-20I ಆಲ್ ರೌಂಡರ್ SLOT ಫಿಕ್ಸ್!
TESTಗಷ್ಟೇ ಸೀಮಿತ ವಾಷಿಂಗ್ಟನ್?
”

Leave a Reply

Your email address will not be published. Required fields are marked *