ನಮ್ ಮನ್ಸು ಒಳ್ಳೇದ್ ಮಾಡಿದ್ರೆ ದೇವ್ರು – ಎಲ್ಲೆಲ್ಲೂ ಏನಂತೀರಾ ರೀಲ್ಸ್ ಟ್ರೆಂಡ್!
ಸೋಶಿಯಲ್ ಮೀಡಿಯಾದಲ್ಲಿ ಕೆಲವೊಂದು ಟ್ರೋಲ್ಗಳು ಸಿಕ್ಕಾಪಟ್ಟೆ ಫೇಮಸ್ ಆಗಿ ಬಿಡ್ತಾವೆ. ಡೈಲಾಗ್ಸ್, ಸಾಂಗ್ಸ್, ಡ್ಯಾನ್ಸ್, ಕಾಮಿಡಿ ಸೀನ್ಸ್ ಕೂಡ ಟ್ರೆಂಡಿಂಗ್ಗೆ ಬರುತ್ತವೆ. ಸದ್ಯ ಮನ್ಸು, ಮರ, ದೇವ್ರು, ಏನಂತೀರಾ ಪದಗಳ ಕ್ರೇಜ್ ಜೋರಾಗೇ ಇದೆ. ಇನ್ಸ್ಟಾ ಗ್ರಾಂ, ಫೇಸ್ಬುಕ್, ಯೂಟ್ಯೂಬ್ ರೀಲ್ಸ್ ತುಂಬಾ ಹಲ್ಚಲ್ ಸೃಷ್ಟಿಸಿದೆ. ಸಾಮಾನ್ಯ ಜನ್ರಿಂದ ಹಿಡಿದು ಸೆಲೆಬ್ರಿಟಿಗಳವರೆಗೂ ಲಿಂಪ್ ಸಿಂಕ್ ಮಾಡ್ತಿದ್ದಾರೆ. ಅಷ್ಟಕ್ಕೂ ಈ ಹವಾ ಶುರುವಾಗಿದ್ದು ಎಲ್ಲಿಂದ..? ಯಾರೆಲ್ಲಾ ಈ ಡೈಲಾಗ್ಸ್ಗೆ ರೀಲ್ಸ್ ಮಾಡಿದ್ದಾರೆ ಅನ್ನೋ ಮಾಹಿತಿ ಇಲ್ಲಿದೆ..
ಇದನ್ನೂ ಓದಿ: ಪುಂಡರ ಕಾಟ.. ಗಂಡನ ಪೆಟ್ಟು.. – ರೀಲ್ಸ್ ರಾಣಿ ರೇಷ್ಮಾ ರಿಯಲ್ ಸ್ಟೋರಿ..
ಡಿಜಿಟಲ್ ಮೀಡಿಯಾ ಟ್ರೆಂಡ್ ಹೆಚ್ಚಾಗ್ತಿದ್ದು, ಜನರಿಗೆ ಕೆಲವ್ರು ಫನ್ನಿ ಫನ್ನಿ ಕ್ವಶ್ಚನ್ಗಳನ್ನ ಕೇಳುತ್ತಾ ಅದನ್ನ ತಮ್ಮ ಚಾನಲ್ಗಳಲ್ಲಿ ಅಪ್ಲೋಡ್ ಮಾಡ್ತಾರೆ. ಹೀಗೆಯೇ ಅಪ್ಲೋಡ್ ಆಗಿದ್ದ ವಿಡಿಯೋ ಒಂದು ಸಿಕ್ಕಾಪಟ್ಟೆ ವೈರಲ್ ಆಗಿದೆ.. ಜೊತೆ ಜೊತೆಗೆ ಫೇಮಸ್ ಕೂಡ ಆಗಿದೆ. ಮರದಲ್ಲಿ ಮತ್ತು ಗಿಡದಲ್ಲಿ ಬಿಡದೇ ಇರೋ ಕಾಯಿ ಯಾವ್ದು ಅಂತಾ ಯುವತಿ ಪ್ರಶ್ನೆ ಕೇಳಿದ್ದಳು. ಆದ್ರೆ ಈ ಅಣ್ಣ ಕೊಟ್ಟ ಬೆಂಕಿಯಂತ ಆನ್ಸರ್ ಕೊಟ್ಟಿದ್ರು.
ನಮ್ ಮನ್ಸು ನಮ್ಗೆ ಒಳ್ಳೇದ್ ಮಾಡಿದ್ರೆ ದೇವ್ರು.. ಅಷ್ಟೇ ಸಾಕು, ಮರ ಯಾಕೆ ನಮ್ಗೆ, ಏನಂತೀರಾ? ತಾಯಿಗೆ ಕೈ ಮುಗ್ಸಿ, ದೇವ್ರು ಒಳ್ಳೇದ್ ಮಾಡ್ತಾನೆ.. ಏನಂತೀರಾ…? ಇದಿಷ್ಟೇ ಡೈಲಾಗ್ ಹೇಳಿದ್ದು.. ವಿಡಿಯೋ ಅಪ್ಲೋಡ್ ಆಗ್ತಿದ್ದಂತೆ ಟ್ರೋಲ್ ಆಗಿದೆ. ಮೋದಿ, ರಾಹುಲ್ ಗಾಂಧಿ, ಸಿದ್ದರಾಮಯ್ಯ, ಪ್ರಿಯಾಂಕಾ ಗಾಂಧಿ, ಸೀರಿಯಲ್, ಸಿನಿಮಾ ಸ್ಟಾರ್ಸ್ ಕೂಡ ರೀಲ್ಸ್ ನಲ್ಲಿ ರಾರಾಜಿಸುತ್ತಿದ್ದಾರೆ. ಪ್ರಧಾನಿ ಮೋದಿ ವಿಡಿಯೋಗೆ ಅವ್ರದ್ದೇ ವಾಯ್ಸ್ ಟೋನ್ನಲ್ಲಿ ರೀಲ್ಸ್ ಮಾಡಿದ್ದಾರೆ.
ಮತ್ತೊಂದು ವಿಡಿಯೋದಲ್ಲಿ ಕಾಂಗ್ರೆಸ್ ನಾಯಕರಾದ ಪ್ರಿಯಾಂಕಾಗಾಂಧಿ, ರಾಹುಲ್ ಗಾಂಧಿ, ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ಎಲ್ರನ್ನೂ ಸೇರಿಸಿ ಈ ಡೈಲಾಗ್ಸ್ ಗೆ ವಿಡಿಯೋ ಎಡಿಟಿಂಗ್ ಮಾಡಿ ಅಪ್ಲೋಡ್ ಮಾಡಿದ್ದಾರೆ.
ಸ್ಯಾಂಡಲ್ವುಡ್ ನಟ ಅಜಯ್ ರಾವ್ ಅಂತೂ ರಿಯಲ್ ಆಗಿ ಅವ್ರೇ ಈ ಡೈಲಾಗ್ ಹೇಳಿದ್ದಾರೇನೋ ಅನ್ನೋ ಹಾಗೇ ಲಿಪ್ ಸಿಂಕ್ ಮಾಡಿದ್ದಾರೆ.
ಇನ್ನು ಅಮೃತಧಾರೆ ಧಾರಾವಾಹಿಯ ನಟರಾದ ಜೈದೇವ್ ಮತ್ತು ನಟಿ ಕೂಡ ಡಿಫ್ರೆಂಟ್ ಆಗಿ ರೀಲ್ಸ್ ಮಾಡಿದ್ದಾರೆ. ಕೊನೆಗೆ ಕಾಮಿಡಿ ಟಚ್ ಕೂಡ ಕೊಟ್ಟಿದ್ದಾರೆ.
ಇನ್ನು ಈ ಹುಡುಗ್ರಂತೂ ನಮ್ ನಮ್ಸು ನಮಗೆ ಒಳ್ಳೇದ್ ಮಾಡಿದ್ರೆ ದೇವ್ರು ಅಂತಾ ಡ್ಯಾನ್ಸ್ನೇ ಮಾಡಿದ್ದಾರೆ. ಅದ್ರ ಜೊತೆಗೆ ಮಿಡ್ಲಲ್ಲಿ ಒನ್ ಮೋರ್ ಒನ್ ಮೋರ್ ಅನ್ಬೇಕು ಅಂತಾ ಬೆಳ್ಳುಳ್ಳಿ ಕಬಾಬ್ ಡೈಲಾಗ್ನೂ ಸೇರಿಸಿಕೊಂಡಿದ್ದಾರೆ.
ಇನ್ನು ಮತ್ತೊಂದು ವಿಡಿಯೋದಲ್ಲಿ ಈ ಡೈಲಾಗ್ಗಳನ್ನ ಫನ್ನಿಯಾಗಿ ತೋರಿಸಲಾಗಿದೆ. ಅಡ್ರೆಸ್ ಕೇಳೋ ಸನ್ನಿವೇಶದಲ್ಲಿ ಡಿಫ್ರೆಂಟ್ ಆಗಿ ಡೈಲಾಗ್ಸ್ ಬಳಸಿಕೊಂಡಿದ್ದಾರೆ.
ಇನ್ನು ಹಾಸನದ ಯೂಟ್ಯೂಬರ್ ಭುವನೇಶ್ ಅವ್ರು ಇದೇ ವಿಡಿಯೋವನ್ನ ಕಾಮಿಡಿ ಸ್ಟೈಲಲ್ಲಿ ಮಾಡಿದ್ದಾರೆ. ಅದೇಗೆ ಇದೆ ಅನ್ನೋದನ್ನ ಒಂದ್ಸಲ ನೋಡ್ಬಿಡಿ.
ಹೀಗೆ ಸಾಮಾನ್ಯರಿಂದ ಹಿಡಿದು ಸೆಲೆಬ್ರಿಟಿಗಳವರೆಗೂ ಎಲ್ರೂ ಈ ಡೈಲಾಗ್ಸ್ಗೆ ಫಿದಾ ಆಗಿದ್ದಾರೆ. ತಮ್ಮದೇ ಸ್ಟೈಲಲ್ಲಿ ರೀಲ್ಸ್ ಮಾಡಿ ಅಪ್ಲೋಡ್ ಮಾಡ್ತಿದ್ದಾರೆ. ಕರಿಮಣಿ ಮಾಲೀಕ ಹಾಗೂ ಬೆಳ್ಳುಳ್ಳಿ ಕಬಾಬ್ ನಡುವೆ ನಮ್ ಮನ್ಸು ಒಳ್ಳೇದ್ ಮಾಡಿದ್ರೆ ದೇವ್ರು.. ಏನಂತೀರಾ ಡೈಲಾಗ್ಸ್ ಸಿಕ್ಕಾಪಟ್ಟೆ ಟ್ರೆಂಡಿಂಗ್ನಲ್ಲಿದೆ.