ಕಾಮಿಡಿ ಸ್ಟಾರ್‌ ಗಿಲ್ಲಿನಟ ಯಾರು? – ಗಗನಾಳನ್ನ ಮದುವೆ ಆಗ್ತಾರಾ?
‌ಗಿಲ್ಲಿ ನಲ್ಲಿ ಮೂಳೆ ಕತೆ ಏನು?

ಕಾಮಿಡಿ ಸ್ಟಾರ್‌ ಗಿಲ್ಲಿನಟ ಯಾರು? – ಗಗನಾಳನ್ನ ಮದುವೆ ಆಗ್ತಾರಾ?‌ಗಿಲ್ಲಿ ನಲ್ಲಿ ಮೂಳೆ ಕತೆ ಏನು?

ಗಿಲ್ಲಿ ನಟ.. ಸೋಶಿಯಲ್‌ ಮೀಡಿಯಾ ಬಳಕೆದಾರರಿಗಂತೂ ಈ ಯುವಕನ ಹೆಸ್ರು ಗೊತ್ತೇ ಇದೆ.. ಮಂಡ್ಯ ಶೈಲಿಯಲ್ಲಿ ಮಾತನಾಡೋ ಗಿಲ್ಲಿ ಅಕ್ಕೋ, ಅಣ್ಣೋ ಅಂತಾ ಎಲ್ಲರ ಗಮನವನ್ನ ತನ್ನತ್ತ ಸೆಳಿತಾರೆ.. ಕಾಮಿಡಿ ಮಾಡೋದಕ್ಕೆ ಶುರು ಮಾಡಿದ್ರೆ ಎಲ್ಲರೂ ಬಿದ್ದು ಬಿದ್ದು ನಕ್ತಾರೆ. ಗಿಲ್ಲಿ ಪಂಚಿಂಗ್‌ ಡೈಲಾಗ್ಸ್‌ ಗೆ ಮನಸೋಲದವರೇ ಇಲ್ಲ.. ಸೋಶಿಯಲ್‌ ಮೀಡಿಯಾದಲ್ಲೆಲ್ಲಾ ಈತನದ್ದೇ ಈಗ ಹವಾ.. ಅವರ ಡೈಲಾಗ್ಸ್‌ ಸದ್ಯ ಸೋಶಿಯಲ್‌ ಮೀಡಿಯಾದಲ್ಲಿ ಟ್ರೆಂಡ್‌ ಸೆಟ್‌ ಮಾಡಿದೆ.. ಜೀ ಕನ್ನಡದಲ್ಲಿ ಪ್ರಸಾರವಾಗ್ತಿರುವ ಡ್ಯಾನ್ಸ್‌ ಕರ್ನಾಟಕ ಡ್ಯಾನ್ಸ್‌ ರಿಯಾಲಿಟಿ ಶೋ ನಲ್ಲೂ ಗಿಲ್ಲಿ ಪ್ರೇಕ್ಷಕರ ಮನ ಗೆದ್ದಿದ್ದಾರೆ.. ಗಿಲ್ಲಿ ಟ್ಯಾಲೆಂಟ್‌ ಅನ್ನ ಎಲ್ಲರೂ ಹಾಡಿ ಹೊಗಳ್ತಿದ್ದಾರೆ.. ಅಷ್ಟಕ್ಕೂ ಗಿಲ್ಲಿ ನಟ ಯಾರು? ನಿಜವಾದ ಹೆಸರು ಏನು? ಹಳ್ಳಿ ಪ್ರತಿಭೆ ಇಷ್ಟೊಂದು ಫೇಮಸ್‌ ಆಗಿದ್ದು ಹೇಗೆ? ಈ ಬಗ್ಗೆ ಇಂಟ್ರೆಸ್ಟಿಂಗ್‌ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ದೇವರ ಸಿನಿಮಾದಲ್ಲಿ ಎನ್‌ಟಿಆರ್ ಅಬ್ಬರ.. ಪ್ರೇಕ್ಷಕರ ನಿರೀಕ್ಷೆ ಏನಾಯ್ತು?- ಮೂರೇ ದೃಶ್ಯದಲ್ಲಿ ಮರೆಯಾದ ಜಾನ್ವಿ ಕಪೂರ್

ಜೀಕನ್ನಡದಲ್ಲಿ ಪ್ರಸಾರವಾಗ್ತಿರುವ  ಡ್ಯಾನ್ಸ್‌ ಕರ್ನಾಟಕ ಡ್ಯಾನ್ಸ್‌ ರಿಯಾಲಿಟಿ ಶೋನಲ್ಲಿ ಗಿಲ್ಲಿನಟ ಒಳ್ಳೆ ಮನರಂಜನೆ ನೀಡ್ತಾ ಇದ್ದಾರೆ.. ಪಂಚ್‌ ಡೈಲಾಗ್ಸ್‌, ಕಾಮಿಡಿಗೆ ಜನ ಫಿದಾ ಆಗಿದ್ದಾರೆ.. ಶೋ ನಲ್ಲಿ ಯಶಸ್ವಿನಿ ಹಾಗೂ ಗಗನಾಳನ್ನ ಕಾಲೆಳಿತಾ ಇರ್ತಾರೆ.. ಒಂದೇ ಒಂದು ಟೇಕ್‌ ಇಲ್ಲದೇ ಉದ್ದುದ್ದ ಡೈಲಾಗ್ಸ್‌ ಹೊಡೆಯೋ ಈತನ ಪ್ರತಿಭೆಗೆ ನಟ ಶಿವರಾಜ್‌ ಕುಮಾರ್‌ ಕೂಡ ಮನಸೋತಿದ್ದಾರೆ.. ಅಷ್ಟೇ ಅಲ್ಲ ಸೋಶಿಯಲ್‌ ಮೀಡಿಯಾದಲ್ಲೂ ಈತನ ಡೈಲಾಗ್ಸ್‌ ಸದ್ಯ ಟ್ರೆಂಡ್‌ ಆಗ್ಬಿಟ್ಟಿದೆ.. ಗಿಲ್ಲಿ ನಟನ ಕಾಮಿಡಿ ವೈರಲ್‌ ಆಗ್ತಿದ್ದಂತೆ ಈತ ಯಾರು? ಅವರ ಹಿನ್ನಲೆ ಏನು ಅಂತಾ ಹುಡುಕಾಡ್ತಿದ್ದಾರೆ..

ಗಿಲ್ಲಿ ನಟನ  ನಿಜವಾದ ಹೆಸರು ಗಿಲ್ಲಿ ನಟರಾಜ್..‌ ಆದ್ರೆ ಗಿಲ್ಲಿ ನಟ ಅಂತಾ ಫೇಮಸ್‌ ಆಗಿದ್ದಾರೆ.. ಗಿಲ್ಲಿ ನಟ ಮಂಡ್ಯ ಜಿಲ್ಲೆಯವರು. ಐಟಿಐ ಓದಿರುವ ಈತನಿಗೆ ಸಿನಿಮಾ ಇಂಡಸ್ಟ್ರಿಗೆ ಬರ್ಬೇಕು ಅನ್ನೋ ಕನಸಿತ್ತು.. ಹೀಗಾಗಿ ಮಂಡ್ಯದ ಮಳವಳ್ಳಿಯಿಂದ ಸೀದಾ ಮಹಾನಗರಿ ಬೆಂಗಳೂರಿಗೆ ಬಂದಿಳಿದಿದ್ದಾರೆ.. ತಾನು ಅಂದು ಕೊಂಡಿದ್ದನ್ನ ಸಾಧಿಸ್ಬೇಕು.. ಸಿನಿಮಾ ಇಂಡಸ್ಟ್ರಿಯಲ್ಲಿ ಒಳ್ಳೆ ಹೆಸರು ಮಾಡ್ಬೇಕು ಅನ್ನೋದು ಗಿಲ್ಲಿನಟನ ಕನಸಾಗಿತ್ತು.. ಆದ್ರೇನು ಮಾಡೋದು.. ಡೈರೆಕ್ಟರ್‌ ಆಗ್ಬೇಕು ಅಂತಾ ಕನಸು ಕಂಡವನಿಗೆ ಎಲ್ಲೂ ಅವಕಾಶ ಸಿಕ್ಕಿಲ್ಲ..  ಬಳಿಕ ಸ್ನೇಹಿತರ ಸಹಾಯದಿಂದ ಡೈರೆಕ್ಷನ್ ಡಿಪಾರ್ಟ್ಮೆಂಟ್ ಕೆಲಸಕ್ಕೆ ಸೇರ್ತಾರೆ. ಹಳ್ಳಿಯಿಂದ ಬೆಂಗಳೂರಿಗೆ ಮಕ್ಕಳು ಬಂದರೆ ಮುಗೀತು, ಮಗ ಏನೋ ಸಂಪಾದನೆ ಮಾಡಿಬಿಡುತ್ತಾನೆ ಅಂತ ಮನೆಯವರು ಅಂದ್ಕೊಳ್ತಾರೆ.. ಇತ್ತ ಅವನು ಉದ್ಧಾರ ಆದ ಅಂತಾ ಊರವರು ಅಂದುಕೊಂಡು ಬಿಡುತ್ತಾರೆ. ಅವರಿಗೆ ಉತ್ತರ ಕೊಡುವುದಕ್ಕೂ ಆಗುವುದಿಲ್ಲ, ಜವಾಬ್ದಾರಿ ನಿಭಾಯಿಸದೇ ಇರುವುದಕ್ಕೂ ಆಗುವುದಿಲ್ಲ. ಅಂಥದ್ದೇ ಸ್ಥಿತಿಯಲ್ಲಿ ಗಿಲ್ಲಿನಟ ಕೂಡ ಸಿಲುಕಿಕೊಂಡಿದ್ರು.. ಯಾಕಂದ್ರೆ ಡೈರೆಕ್ಷನ್‌ ಡಿಪಾರ್ಟ್‌ಮೆಂಟ್‌ನಲ್ಲಿ ಕೆಲಸ ಮಾಡಿದರೂ ಗಿಲ್ಲಿ ನಟನಿಗೆ ಸಂಬಳ ಸಿಕ್ಕಿರ್ಲಿಲ್ಲ.. ಈ ವೇಳೆ ಅತಂತ್ರ ಸ್ಥಿತಿಯಲ್ಲಿ ಸಿಲುಕಿಕೊಳ್ತಾರೆ ಗಿಲ್ಲಿನಟ.. ಸಿನಿಮಾ ಇಂಡಸ್ಟ್ರಿ ಬಿಡುವುದಕ್ಕೆ ಇಷ್ಟವಿರದೆ ಆನಂತ್ರ ಸೆಟ್ ಕೆಲಸಕ್ಕೆ ಸೇರ್ತಾರೆ.  ಆ ಕೆಲಸವನ್ನು ಮಾಡುತ್ತಿರುವಾಗ ಏನೋ ಅಂದುಕೊಂಡು ಏನೋ ಮಾಡುತ್ತಿದ್ದೀನಲ್ಲ ಅಂತಾ ಮನಸ್ಸು ಹೇಳ್ತಾ ಇತ್ತು. ಆಗ ಸ್ಕ್ರಿಪ್ಟ್ ಗಳನ್ನು ಬರೆಯೋದಕ್ಕೆ ಗಿಲ್ಲಿ ಶುರು ಮಾಡ್ತಾರೆ.. ಸ್ಕಿಟ್ ಮಾಡ್ಕೊಂಡು ಬರ್ತಾರೆ. ಆದರೆ ಹಣ ಅನಿವಾರ್ಯತೆ ಇರೋದ್ರಿಂದ ಸೆಟ್ ಕೆಲಸವನ್ನ ಮುಂದುವರಿಸಿಕೊಂಡು ಬಂದ್ರು.. ಬಳಿಕ ನಲ್ಲಿ ಮೂಳೆ ಕಂಟೆಂಡ್‌ ಕ್ರಿಯೆಟ್‌ ಮಾಡ್ತಾರೆ.. ಯೂಟ್ಯೂಬ್‌ ಸೋಶಿಯಲ್‌ ಮೀಡಿಯಾದಲ್ಲಿ ಈ ವೆಬ್‌ ಸೀರಿಸ್‌ ಅನ್ನ ಅಪ್ಲೋಡ್‌ ಮಾಡೋದಿಕ್ಕೆ ಶುರುಮಾಡ್ತಾರೆ..  ಇದ್ರಲ್ಲಿ ಉದ್ದುದ್ದ ಡೈಲಾಗ್ಸ್‌ ಅನ್ನ ಒಂದೇ ಒಂದು ಟೇಕ್‌ ಇಲ್ಲದೇ ಹೇಳ್ತಾ ಹೋಗ್ತಾರೆ.. ನಲ್ಲಿ ಮೂಳೆ ಕಾನ್ಸೆಪ್ಟ್‌ ಕೊನೆಗೂ ಸಕ್ಸಸ್‌ ಆಯ್ತು.. ಕೋಟ್ಯಂತರ ವೀವ್ಸ್‌ ಕಂಡಿತು..  ಅಲ್ಲಿಂದ ಗಿಲ್ಲಿನಟನಿಗೆ ಒಂದೊಂದೇ ಆಫರ್‌ ಗಳು ಬರೋದಿಕ್ಕೆ ಶುರುವಾಗುತ್ತೆ. ಜೀ ಕನ್ನಡದ ಕಾಮಿಡಿ ಕಿಲಾಡಿ ಸೀಸನ್‌ 4 ಗೆ ಕಾಲಿಡ್ತಾರೆ.. ಈ ಶೋನಲ್ಲಿ ಫಸ್ಟ್ ರನ್ನರ್ ಅಪ್ ಆಗ್ತಾರೆ.. ಅದಾದ್ಮೇ ಅದೇ ವಾಹಿನಿಯ ಮತ್ತೊಂದು ರಿಯಾಲಿಟಿ ಶೋ ಭರ್ಜರಿ ಬ್ಯಾಚುಲರ್ಸ್ ನಲ್ಲೂ ಅವಕಾಶ ಸಿಗುತ್ತೆ.. ಅಲ್ಲೂ ಉತ್ತಮ ಮನರಂಜನೆ ನೀಡಿದ್ರು ಗಿಲ್ಲಿನಟ.

ಇನ್ನು ಗಿಲ್ಲಿನಟ ಗಿಲ್ಲಿ ನಟ ಪಕ್ಕಾ ಮಂಡ್ಯ ಸ್ಟೈಲ್ ನಲ್ಲಿ ಮೂರು ಶಾರ್ಟ್ ಮೂವಿಗಳನ್ನ ಮಾಡಿದ್ದಾರೆ.. ಈ ಶಾರ್ಟ್‌ ಮೂವಿ ಜನರ ಮನಗೆದ್ದಿದೆ. ಸೆಲ್ಫಿ ತೆಗೆದುಕೊಳ್ಳಲು ಹೋಗಿ ಸೂಸೈಡ್ ಮಾಡಿಕೊಂಡಿದ್ದು, ಟಿಕ್ ಟಾಕ್‌ನಲ್ಲಿ ಹೆಂಡತಿ ಎಷ್ಟರ ಮಟ್ಟಿಗೆ ಅಡಿಕ್ಟ್ ಆಗಿರುತ್ತಾಳೆ. ಆನ್ ಲೈನ್ ಕ್ಲಾಸಿಗೆ ಅಂತ ಮೊಬೈಲ್ ತೆಗೆದುಕೊಟ್ಟರೆ ಮಗಳೂ ಏನೆಲ್ಲಾ ಮಾಡುತ್ತಾಳೆ ಎಂಬ ವಿಚಾರವನ್ನಿಟ್ಟುಕೊಂಡು ಈ ಮೂರು ಶಾರ್ಟ್‌ ಫಿಲ್ಮ್‌ಗಳನ್ನು ಮಾಡಿದ್ದಾರೆ. ಅದು ಪಕ್ಕಾ ಮಂಡ್ಯ ಭಾಷೆಯಲ್ಲಿದ್ದು, ಜನರನ್ನು ನಗೆಗಡಲಲ್ಲಿ ತೇಲಿಸುತ್ತವೆ.

ಇದೀಗ ಡಿಕೆಡಿಯಲ್ಲೂ ಕೂಡ ಗಿಲ್ಲಿನಟ ವೀಕ್ಷಕರ ಮನಗೆದ್ದಿದ್ದಾರೆ.. ಕಾಮಿಡಿ ಮಾಡ್ತಾ ಡ್ಯಾನ್ಸ್‌ ನಲ್ಲೂ ಮೋಡಿ ಮಾಡ್ತಾ ಇದ್ದಾರೆ.. ಡ್ಯಾನ್ಸ್‌ ಜೊತೆಗೆ ಪಂಚಿಂಗ್‌ ಡೈಲಾಗ್ಸ್‌, ಗಿಲ್ಲಿ ಲೈಫ್‌ನ ಹೊಸ ಹೊಸ ಸಿದ್ಧಾಂತ ಎಲ್ಲರಿಗೂ ಇಷ್ಟ ಆಗ್ತಿದೆ.. ಅಷ್ಟೇ ಅಲ್ಲ ಗಗನಾಳನ್ನ ಚೆನ್ನಾಗೇ ಕಾಲೆಳಿತಾ ಇದ್ದಾರೆ.. ಗಗನಾ ನಾನು ನೀನು ಮದುವೆ ಆಗೋಣ ಅಂತಾ ಡಿಕೆಡಿ ಶೋನಲ್ಲಿ ಕಾಲೆಳಿತಾ ಇರ್ತಾರೆ.. ಹೀಗಾಗಿ ಅನೇಕರು ನಿಮ್ಮ ಜೋಡಿ ಚೆನ್ನಾಗಿದೆ. ನೀವಿಬ್ರು ನಿಜವಾಗ್ಲೂ ಮದುವೆ ಆಗ್ತೀರಾ? ನೀವಿಬ್ರೂ ಮದುವೆ ಆದ್ರೆ ಒಳ್ಳೆದು ಅಂತಾ ಕಮೆಂಟ್‌ ಮಾಡ್ತಾ ಇರ್ತಾರೆ.. ಆದ್ರೆ ಗಿಲ್ಲಿ ನಟ ಡಿಕೆಡಿಯಲ್ಲಿ ತಮಾಷೆಗಾಗಿ ಹೀಗೆ ಗಗನಾ ಕಾಲೆಳಿತಾ ಇರ್ತಾರೆ ಹೊರತು ಸೀರಿಯಸ್‌ ಆಗಿ ಅಲ್ಲ.. ಇದು ಟಿ ಆರ್‌ ಪಿ ಗಿಮಿಕ್‌ ಅಷ್ಟೇ..

Shwetha M

Leave a Reply

Your email address will not be published. Required fields are marked *