ಔರಂಗಜೇಬನ ಸಮಾಧಿಗಾಗಿ ಎರಡು ಗಂಪುಗಳ ನಡುವೆ ಗಲಾಟೆ – ಮಹಾರಾಷ್ಟ್ರದಲ್ಲಿ ಮಹಾ ಕಿಚ್ಚು

ಔರಂಗಜೇಬನ ಸಮಾಧಿಗಾಗಿ ಎರಡು ಗಂಪುಗಳ ನಡುವೆ ಗಲಾಟೆ – ಮಹಾರಾಷ್ಟ್ರದಲ್ಲಿ ಮಹಾ ಕಿಚ್ಚು

ಮಹಾರಾಷ್ಟ್ರದ  ನಾಗ್ಪುರದಲ್ಲಿ ಮೊಘಲ್​ ರಾಜ ಔರಂಗಜೇಬನ ಸಮಾಧಿಯನ್ನು ನಾಶಪಡಿಸುವುದನ್ನು ವಿರೋಧಿಸಿ ನಡೆದ ಪ್ರತಿಭಟನೆಯು ಎರಡು ಗುಂಪುಗಳ ನಡುವೆ ಘರ್ಷಣೆಗೆ ಕಾರಣವಾಗಿತು. ಈ ಘಟನೆಯಲ್ಲಿ ಎರಡೂ ಕಡೆಯಿಂದ ಭಾರೀ ಕಲ್ಲು ತೂರಾಟ ನಡೆದಿದ್ದು, ಕೆಲವೆಡೆ ಬೆಂಕಿ ಹಚ್ಚಲಾಗಿದೆ. ಇದರ ಪರಿಣಾಮವಾಗಿ ನಾಗ್ಪುರದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ನಿಯಂತ್ರಿಸಲು ಕ್ರಮವಹಿಸಿದ್ದಾರೆ. ಏತನ್ಮಧ್ಯೆ ನಗರದಾದ್ಯಂತ 144 ಸೆಕ್ಷನ್​ ಜಾರಿಮಾಡಲಾಗಿದೆ.

ವಿಶೇಷವಾಗಿ ಮಹಲ್ ಪ್ರದೇಶದಲ್ಲಿ ಕಲ್ಲು ತೂರಾಟ ಮತ್ತು ಉದ್ವಿಗ್ನತೆಯ ನಂತರ ಪೊಲೀಸರು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ನಿಭಾಯಿಸುತ್ತಿದೆ. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ನಾಗರಿಕರಲ್ಲಿ ಸಂಪೂರ್ಣ ಸಹಕಾರ ನೀಡುವಂತೆ ಮನವಿ ಮಾಡಿದ್ದಾರೆ. “ನಾವು ಪೊಲೀಸ್ ಆಡಳಿತದೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ. ನಾಗರಿಕರು ಅವರೊಂದಿಗೆ ಸಹಕರಿಸಬೇಕು. ನಾಗ್ಪುರ ಶಾಂತಿಯುತ ಮತ್ತು ಸಹಕಾರಿ ನಗರವಾಗಿದೆ. ಇದು ಇಲ್ಲಿನ ಶಾಶ್ವತ ಸಂಪ್ರದಾಯವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಯಾವುದೇ ವದಂತಿಗಳನ್ನು ನಂಬದೇ ಆಡಳಿತಕ್ಕೆ ಪೂರ್ಣ ಸಹಕಾರ ನೀಡಿ,” ಎಂದು ಅವರು ಹೇಳಿದ್ದಾರೆ.

ನಾಗ್ಪುರದಲ್ಲಿ ಔರಂಗಜೇಬನ ಸಮಾಧಿ ವಿವಾದ

ಸೋಮವಾರ ನಾಗ್ಪುರದಲ್ಲಿ ಉದ್ವಿಗ್ನತೆ ತಾರಕಕ್ಕೇರಿತು. ಮೊಘಲ್ ರಾಜ ಔರಂಗಜೇಬನ ಸಮಾಧಿಯನ್ನು ಕೆಡವಬೇಕೆಂದು ಬಜರಂಗದಳ ಮತ್ತು ವಿಶ್ವ ಹಿಂದೂ ಪರಿಷತ್  ಸದಸ್ಯರು ಛತ್ರಪತಿ ಸಂಭಾಜಿನಗರದಲ್ಲಿ ಪ್ರತಿಭಟನೆ ನಡೆಸಿದರು. ಇದಾದ ನಂತರ ಎರಡು ಗುಂಪುಗಳ ನಡುವೆ ದೊಡ್ಡ ಮಟ್ಟದಲ್ಲಿ ಗಲಾಟೆ ನಡೆದಿದೆ.  ಇದರಿಂದ ಕಾನೂನು ಸುವ್ಯವಸ್ಥೆ ಕಾಪಾಡಲು ಭಾರೀ ಪೊಲೀಸ್ ಪಡೆಯನ್ನು ನಿಯೋಜಿಸಲಾಯಿತು. ವಿಎಚ್‌ಪಿ ಮತ್ತು ಬಜರಂಗದಳ ಸಂಘಟನೆಗಳು ಔರಂಗಜೇಬನ ಸಮಾಧಿಯನ್ನು ತೆಗೆದುಹಾಕಬೇಕೆಂದು ಒತ್ತಾಯಿಸಿವೆ. ಈ ಸಮಾಧಿ ಅವನ ಆಳ್ವಿಕೆಯಲ್ಲಿ ನಡೆದ ಶತಮಾನಗಳ ದಬ್ಬಾಳಿಕೆ ಮತ್ತು ದೌರ್ಜನ್ಯಗಳ ಸಂಕೇತವಾಗಿದೆ ಎಂದು ಅವರು ವಾದಿಸುತ್ತಾರೆ.

Kishor KV

Leave a Reply

Your email address will not be published. Required fields are marked *