ಕಾಮಗಾರಿಯಲ್ಲಿದ್ದ ಕೆರೆಯಲ್ಲಿ ಸಿಲುಕಿ ಮೇಲೆದ್ದು ಬರಲಾಗದೇ ಒದ್ದಾಡಿದ ಬಿಜೆಪಿ ಸಚಿವ! – ಆಮೇಲೆ ಏನಾಯ್ತು ಗೊತ್ತಾ?

ಕಾಮಗಾರಿಯಲ್ಲಿದ್ದ ಕೆರೆಯಲ್ಲಿ ಸಿಲುಕಿ ಮೇಲೆದ್ದು ಬರಲಾಗದೇ ಒದ್ದಾಡಿದ  ಬಿಜೆಪಿ ಸಚಿವ! – ಆಮೇಲೆ ಏನಾಯ್ತು ಗೊತ್ತಾ?

ನಾಗಾಲ್ಯಾಂಡ್ ಸಚಿವ ತೆಮ್ಜೆನ್ ಇಮ್ನಾ ಅಲೋಂಗ್ ಅವರ ಹಾಸ್ಯ ಪ್ರಜ್ಞೆ ನೆಟಿಜನ್‌ಗಳಿಗೆ ಚಿರಪರಿಚಿತ. ಅವರ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳು ಆಗಾಗ್ಗೆ ಆನ್‌ಲೈನ್‌ನಲ್ಲಿ ವೈರಲ್ ಆಗುತ್ತವೆ. ಇದೀಗ ತೆಮ್ಜೆನ್ ಇಮ್ನಾ ಅಲೋಂಗ್ ಅವರು ಕಾಮಗಾರಿಯಲ್ಲಿದ್ದ ಕೆರೆಯಲ್ಲಿ ಸಿಲುಕಿ ಮೇಲೆದ್ದು ಬರಲಾಗದೇ ಪರದಾಡಿದ್ದಾರೆ. ಇದರ ವಿಡಿಯೋವನ್ನು ಸ್ವತಃ ಅವರೇ ಶೇರ್‌ ಮಾಡಿದ್ದಾರೆ.

ಇದನ್ನೂ ಓದಿ: ಗಗನಕ್ಕೇರುತ್ತಿದೆ ಬೆಳ್ಳುಳ್ಳಿ ಬೆಲೆ! – ಕೆ.ಜಿ ಬೆಳ್ಳುಳ್ಳಿಗೆ 500ರ ಗಡಿದಾಟಿದ ದರ!

ತೆಮ್ಜೆನ್ ಇಮ್ನಾ ಅಲೋಂಗ್ ಪೋಸ್ಟ್‌ ಮಾಡಿದ ವಿಡಿಯೋದಲ್ಲೇನಿದೆ?

ಕಾಮಗಾರಿಯಲ್ಲಿದ್ದ ಕೆರೆಯಲ್ಲಿ ಸಿಲುಕಿ ಮೇಲೆದ್ದು ಬರಲಾಗದೇ ಪರದಾಡಿದ ಅನುಭವವನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದಾರೆ.  4 ನಿಮಿಷ 42 ಸೆಕೆಂಡ್ ಇರುವ ವಿಡಿಯೋದಲ್ಲಿ, ಅಲೋಂಗ್ ಕಾಮಗಾರಿಯಲ್ಲಿದ್ದ ಕೆರೆಯೊಂದಕ್ಕೆ ಇಳಿದಿದ್ದಾರೆ. ಬಳಿಕ ಕೆರೆಯಿಂದ ಮೇಲೆ ಬರುಲು  ಯತ್ನಿಸಿದ್ದಾರೆ. ಈ ವೇಳೆ ಕೆರೆಯಲ್ಲಿ ಸಿಲುಕಿಕೊಂಡಿದ್ದಾರೆ. ನಂತರ ಅವರನ್ನು ಮೇಲೆ ಎತ್ತಲು ಅಲ್ಲಿದ್ದವರು ಸಹಾಯ ಮಾಡುತ್ತಾರೆ. ಕೊನೆಗೂ ಅಲ್ಲಿಂದ ಮೇಲೆದ್ದು ಬಂದು ಖುರ್ಚಿ ಮೇಲೆ ಕೂತಿದ್ದಾರೆ. ಅವರ ಹಿಂದೆ ಜೆಸಿಬಿ ನಿಂತಿರೋದನ್ನು ನಾವು ಗಮನಿಸಬಹುದಾಗಿದೆ.

ಈ ವಿಡಿಯೋವನ್ನು ಟ್ವಿಟರ್​ನಲ್ಲಿ ಹಂಚಿಕೊಂಡಿರುವ ಅವರು, ಇಂದು ಜಿಸಿಬಿಯ ಪರೀಕ್ಷೆ! ಗಮನಿಸಿ: ಎನ್​​ಪಿಸಿ ರೇಟಿಂಗ್​ಗೆ ಸಂಬಂಧಿಸಿದ್ದು, ಕಾರನ್ನು ಖರೀದಿಸುವ ಮೊದಲು ಎನ್​ಸಿಎಪಿ ರೇಟಿಂಗ್ ಪರಿಶೀಲಿಸಿ. ಏಕೆಂದರೆ ಇದು ನಿಮ್ಮ ಜೀವನದ ವಿಷಯವಾಗಿದೆ ಎಂದು ಕ್ಯಾಪ್ಷನ್ ನೀಡಿದ್ದಾರೆ.

ಈ ವಿಡಿಯೋಗೆ ಜನರು ಬಗೆಬಗೆಯ ಕಮೆಂಟ್ ಮಾಡುತ್ತಿದ್ದಾರೆ. ಒಬ್ಬ ಬಳಕೆದಾರ ಕ್ಯಾ ಮಹಾರಾಜ್, ನೀವು ಎಲ್ಲಿಗೆ ಹೋಗಿದ್ದೀರಿ. ಜೆಸಿಬಿ ಹತ್ತಿರದಲ್ಲಿದ್ದಾಗ ನೀವು ಅದನ್ನು ಬಳಸಬೇಕಾಗುತ್ತದೆ. ನೀವು ಹೆಚ್ಚು ಶಕ್ತಿಯನ್ನು ವ್ಯರ್ಥ ಮಾಡಿದ್ದೀರಿ ಎಂದು ಬರೆದಿದ್ದಾರೆ.

Shwetha M