ರಸ್ತೆಯಲ್ಲೇ ಪ್ರೇಯಸಿಗೆ ಹೊಡೆದ ಪ್ರಿಯಕರ – ಕಾರಿನಿಂದ ಇಳಿದು ಯುವಕನಿಗೆ ಚಳಿ ಬಿಡಿಸಿದ ನಟ..!

ರಸ್ತೆಯಲ್ಲೇ ಪ್ರೇಯಸಿಗೆ ಹೊಡೆದ ಪ್ರಿಯಕರ – ಕಾರಿನಿಂದ ಇಳಿದು ಯುವಕನಿಗೆ ಚಳಿ ಬಿಡಿಸಿದ ನಟ..!

ತೆರೆ ಮೇಲೆ ಮಿಂಚುವ ನಟರ ಪೈಕಿ ಕೆಲವರು ನಿಜ ಜೀವನದಲ್ಲಿಯೂ ಹೀರೋಗಳಾಗಿರುತ್ತಾರೆ. ಮತ್ತೊಬ್ಬರ ಕಷ್ಟಕ್ಕೆ ಮಿಡಿಯುತ್ತಾರೆ. ಸರಿ ತಪ್ಪುಗಳ ಬಗ್ಗೆ ಧ್ವನಿ ಎತ್ತುತ್ತಾರೆ. ಸದ್ಯ ಇಂಥದ್ದೇ ಘಟನೆಯೊಂದ ನಡೆದಿದ್ದು ಭಾರೀ ವೈರಲ್ ಆಗುತ್ತಿದೆ. ನಟನ ಗುಣಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ.

ಸಿನಿಮಾ, ಖಾಸಗಿ ಜೀವನ ಅಂತಾ ನಟ-ನಟಿಯರು ಬ್ಯುಸಿ ಇರುತ್ತಾರೆ. ಇತರೆ ವಿಚಾರಗಳ ಬಗ್ಗೆ ತಲೆ ಕೆಡಿಸಿಕೊಳ್ಳುವ ಗೋಜಿಗೆ ಹೋಗುವುದಿಲ್ಲ. ಹೀಗಿರುವಾಗ ಟಾಲಿವುಟ್ ನಟ ನಾಗಶೌರ್ಯ ಮಾಡಿರುವ ಕೆಲಸ ಅಭಿಮಾನಿಗಳಿಗೆ ಖುಷಿ ಕೊಟ್ಟಿದೆ. ಸಿನಿಮಾದಲ್ಲಿಷ್ಟೇ ಹೀರೋ ಅಲ್ಲ, ತೆರೆ ಹಿಂದೆ ಕೂಡ ರಿಯಲ್ ಹೀರೋ ಎಂಬುದನ್ನ ನಟ ಪ್ರೂವ್ ಮಾಡಿದ್ದಾರೆ.

ಇದನ್ನೂ ಓದಿ : 

ಅಷ್ಟಕ್ಕೂ ಅಲ್ಲಿ ನಡೆದ ಘಟನೆ ಏನೆಂದರೆ, ಪ್ರೇಮಿಗಳಿಬ್ಬರು ರಸ್ತೆ ಮಧ್ಯೆ ಜಗಳವಾಡುತ್ತಿದ್ದರು. ಆಗ ಯುವಕ, ಯುವತಿ ಮೇಲೆ ಹಲ್ಲೆ ಮಾಡಿದ್ದಾನೆ. ಈ ವೇಳೆ ಅದೇ ರಸ್ತೆಯಲ್ಲಿ ಹೋಗುತ್ತಿದ್ದ ನಟ ನಾಗಶೌರ್ಯ ಇದನ್ನ ನೋಡಿದ್ದಾರೆ. ಕೂಡಲೇ ಕಾರು ನಿಲ್ಲಿಸಿ ಕಾರಿನಿಂದ ಕೆಳಗಿಳಿದು ಯುವತಿ ಹಲ್ಲೆ ಮಾಡಿದ್ದಕ್ಕಾಗಿ ಕ್ಷಮೆ ಕೇಳುವಂತೆ ಆ ಯುವಕನನ್ನ ತರಾಟೆಗೆ ತೆಗೆದುಕೊಂಡಿದ್ದಾರೆ. ಆದರೆ ಆ ಹುಡುಗ, ನಾನು ಆಕೆಯ ಲವರ್ ಎಂದು ಸಬೂಬು ಹೇಳಿದ್ದಾನೆ. ಇದರಿಂದ ಮತ್ತಷ್ಟು ಕೋಪಗೊಂಡ ನಾಗಶೌರ್ಯ, ಲವರ್ ಆಗಿಬಿಟ್ಟರೆ, ಆಕೆಯ ಮೇಲೆ ಕೈ ಮಾಡಬಹುದಾ ಕ್ಷಮೆ ಕೇಳು ಎಂದು ಯುವಕನ ವಿರುದ್ಧ ಗರಂ ಆಗಿದ್ದಾರೆ. ಈ ರೀತಿ ಆ ಹುಡುಗನಿಗೆ ನಟ ಜೋರು ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ.

ಆರಂಭದಲ್ಲಿ ಈ ವಿಡಿಯೋ ವೈರಲ್ ಆದಾಗ, ನಟ ನಾಗ ಶೌರ್ಯ ಅವರು ನಡುರಸ್ತೆಯಲ್ಲಿ ಯಾರೋ ಯುವಕನ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದಾರೆ ಎಂದು ಹೇಳಲಾಗಿತ್ತು. ಸತ್ಯಾಸತ್ಯತೆ ಗೊತ್ತಾದ ಮೇಲೆ ನಾಗ ಶೌರ್ಯ ಅವರ ಕಾರ್ಯಕ್ಕೆ ಎಲ್ಲರಿಂದ ಮೆಚ್ಚುಗೆ ಸಿಕ್ಕಿದೆ. ಇನ್ನೂ, ಆ ಯುವಕನ ಪರವಾಗಿ ಮಾತನಾಡಿರುವ ಆ ಯುವತಿ, ಏನೋ ಆಗಿದ್ದು ಆಗಿದೆ, ಬಿಟ್ಟುಬಿಡಿ ಎಂದು ಕೇಳಿಕೊಂಡರು ಎನ್ನಲಾಗಿದೆ. ಅಲ್ಲಿದ್ದವರು ಕೂಡ ಆ ಯುವಕನಿಗೆ ಕ್ಷಮೆ ಕೇಳುವಂತೆ ಪಟ್ಟುಹಿಡಿದಿದ್ದರು. ಒಟ್ಟಾರೆ ನಟ ನಾಗಶೌರ್ಯ ನಡೆಗೆ ಫ್ಯಾನ್ಸ್ ಭೇಷ್ ಎಂದಿದ್ದಾರೆ. ಮಹಿಳೆಯರಿಗೆ ನಾಗಶೌರ್ಯ ಗೌರವಿಸುವ ರೀತಿಯನ್ನ ಫ್ಯಾನ್ಸ್‌ ಮೆಚ್ಚಿದ್ದಾರೆ.

suddiyaana