ನಾಗ ಚೈತನ್ಯ 2ನೇ ಮದುವೆ – ಶೋಭಿತಾ ಜೊತೆ ದಿಢೀರ್ ನಿಶ್ಚಿತಾರ್ಥ
ಸಮಂತಾ ರಿಯಾಕ್ಷನ್ ಹೇಗಿತ್ತು?
ಟಾಲಿವುಡ್ ನಟ ನಾಗ ಚೈತನ್ಯ ಎರಡನೇ ಮದುವೆಗೆ ರೆಡಿಯಾಗಿದ್ದಾರೆ. ಇಷ್ಟು ದಿನ ನಾಗಚೈತನ್ಯ ನಟಿಯೊಬ್ಬರ ಜೊತೆ ಸುತ್ತಾಡೋ ವಿಚಾರ ಜೋರಾಗಿಯೇ ಸೌಂಡ್ ಮಾಡ್ತಿತ್ತು. ಕೊನೆಗೂ ಇದೇ ವಿಚಾರ ಈಗ ಅಧಿಕೃತವಾಗಿದೆ. ನಾಗಚೈತನ್ಯ ಮತ್ತು ಶೋಭಿತಾ ಪ್ರೀತಿಯಲ್ಲಿ ಇರೋ ವಿಚಾರ ಕನ್‌ಫರ್ಮ್ ಆಗಿದೆ. ಈ ಜೋಡಿ ನಿಶ್ಚಿತಾರ್ಥ ಮಾಡಿಕೊಂಡಿದೆ. ಜೊತೆಗೆ ಸಾಮಾಜಿಕ ಜಾಲತಾಣದ ಮೂಲಕ ತಮ್ಮ ಸಂಬಂಧವನ್ನು ಕೂಡಾ ಅಧಿಕೃತಗೊಳಿಸಿದ್ದಾರೆ. ಈ ಶೋಭಿತಾ ಯಾರು? ನಾಗಚೈತನ್ಯ ಮತ್ತೊಂದು ಮದುವೆ ಬಗ್ಗೆ ತಂದೆ ನಾಗರ್ಜುನ ಹೇಳಿದ್ದೇನು ಅನ್ನೋ ಮಾಹಿತಿ ಇಲ್ಲಿದೆ..
ಇದನ್ನೂ ಓದಿ: ಬೆಳ್ಳಿ ಗೆದ್ದ ನೀರಜ್ ಚೋಪ್ರಾ – ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ 5ನೇ ಪದಕ
ಸಮಂತಾ ಮತ್ತು ನಾಗಚೈತನ್ಯ ಜೋಡಿ ಟಾಲಿವುಡ್‌ನ ಸೂಪರ್ ಜೋಡಿ ಎಂದೇ ಕರೆಯಲಾಗುತ್ತಿತ್ತು. ಈ ಲವ್ ಬರ್ಡ್ಸ್ ಪ್ರೀತಿಸಿ ಮದ್ವೆಯಾಗಿದ್ದರು. ನಂತರ ದಿಢೀರ್ ಅಂತಾ ದೂರಾದ್ರು. ಇದಾದ ಮೇಲೆ ಸಮಂತಾ ನಟನೆಯಲ್ಲಿ ಬ್ಯುಸಿಯಾದ್ರು. ನಾಗಚೈತನ್ಯ ಕೂಡಾ ಆಗಾಗ್ಗೆ ಲವ್, ಗಾಸಿಪ್ ವಿಚಾರದಲ್ಲಿ ಸುದ್ದಿಯಾಗ್ತಿದ್ರು. ಕೊನೆಗೂ ನಾಗಚೈತನ್ಯ ಎರಡನೇ ಮದುವೆಗೆ ರೆಡಿಯಾಗಿದ್ದಾರೆ. ನಟಿ ಶೋಭಿತಾ ಜೊತೆ ಇಷ್ಟು ದಿನ ಫಾರಿನ್ ಟ್ರಿಪ್‌ನಲ್ಲಿ ಬ್ಯುಸಿಯಾಗಿದ್ದ ನಾಗಚೈತನ್ಯ ತಮ್ಮ ಸಂಬಂಧವನ್ನ ಅಧಿಕೃತಗೊಳಿಸಿಕೊಂಡಿದ್ದಾರೆ. ಮನೆಯಲ್ಲಿಯೇ ಸಿಂಪಲ್ ಆಗಿ ಎಂಗೇಜ್‌ಮೆಂಟ್ ನಡೆದಿದೆ.
ಇನ್ನು ನಿಶ್ಚಿತಾರ್ಥದ ವೇಳೆ ನಟ ನಾಗ ಚೈತನ್ಯ ಸಾಂಪ್ರದಾಯಿಕ ಉಡುಗೆಯಲ್ಲಿ ಕಾಣಿಸಿಕೊಂಡಿದ್ದಾರೆ. ಶೋಭಿತಾ ತಿಳಿ ಕಿತ್ತಳೆ ಬಣ್ಣದ ಸೀರೆಯಲ್ಲಿ ಮಿಂಚುತ್ತಿದ್ದಾರೆ. ಇಬ್ಬರೂ ಜೋಡಿಯನ್ನು ನಟ ನಾಗಾರ್ಜುನ ತೋಳಬಂಧಿಯಲ್ಲಿ ತಬ್ಬಿ ಹಿಡಿದು ಮುಗುಳ್ನಗುತ್ತಾ ಶುಭ ಕೋರಿದ್ದಾರೆ. ಮತ್ತೊಂದು ಚಿತ್ರದಲ್ಲಿ, ಶೋಭಿತಾ ತನ್ನ ಭಾವಿ ಪತಿ ಚೈತನ್ಯ ಅವರನ್ನು ಪ್ರೀತಿಯಿಂದ ತಬ್ಬಿಕೊಂಡು ಪೋಟೋಗೆ ಪೋಸ್ ಕೊಟ್ಟಿದ್ದಾರೆ.ಇಬ್ಬರೂ ಕುಟುಂಬದವರ ಸಮ್ಮುಖದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಅಕ್ಕಿನೇನಿ ನಾಗಾರ್ಜುನ ಅವರ ಬಲಕ್ಕೆ ಶೋಭಿತಾ ಹಾಗೂ ಎಡಕ್ಕೆ ನಾಗ ಚೈತನ್ಯ ಇದ್ದಾರೆ. ನಾಗ ಚೈತನ್ಯ ಅವರ ನಿವಾಸದಲ್ಲೇ ನಿಶ್ಚಿತಾರ್ಥ ನಡೆದಿದೆ.
ಜೂನ್ನಲ್ಲಿ ನಾಗಚೈತನ್ಯ ಮತ್ತು ಶೋಭಿತಾ ಯುರೋಪ್ ನಲ್ಲಿ ಹಾಲಿಡೇ ಎಂಜಾಯ್ ಮಾಡಿದ್ದರು. ಇದು ಅವರ ರಿಲೇಷನ್ಶಿಪ್ ಬಗ್ಗೆ ಮತ್ತಷ್ಟು ಚರ್ಚೆಗೆ ಕಾರಣವಾಗಿತ್ತು. ಅವರ ಟ್ರಿಪ್ ಫೋಟೋ ವೈರಲ್ ಆಗಿತ್ತು. 2021ರಲ್ಲಿ ನಾಗ ಚೈತನ್ಯ ಅವರು ಸಮಂತಾ ಅವರಿಂದ ದೂರವಾದ ನಂತರ ಅವರು ಶೋಭಿತಾ ಜೊತೆ ಡೇಟಿಂಗ್ ಶುರು ಮಾಡಿದ್ದರು. ಹಿಂದಿ, ತೆಲುಗು ಸಿನಿಮಾಗಳಲ್ಲಿ ನಟಿಸಿರೋ ಶೋಭಿತಾ ಅವರು ಈವರೆಗೆ ನಾಗ ಚೈತನ್ಯ ಜೊತೆ ತೆರೆ ಹಂಚಿಕೊಂಡಿಲ್ಲ. ಆದಾಗ್ಯೂ ಇಬ್ಬರ ಮಧ್ಯೆ ಹೇಗೆ ಪ್ರೀತಿ ಮೂಡಿತು ಎಂಬುದು ಇನ್ನೂ ರಿವೀಲ್ ಆಗಿಲ್ಲ.
ಸಮಂತಾ ಹಾಗೂ ನಾಗ ಚೈತನ್ಯ ಅವರು ಹಲವು ವರ್ಷಗಳ ಕಾಲ ಪ್ರೀತಿಸಿ ಆ ಬಳಿಕ ಮದುವೆ ಆದರು. 2017ರಲ್ಲಿ ಅದ್ದೂರಿಯಾಗಿ ಇವರ ವಿವಾಹ ನೆರವೇರಿತು. ನಾಲ್ಕೇ ವರ್ಷಕ್ಕೆ ಇವರ ಸಂಬಂಧ ಕೊನೆ ಆಯಿತು. 2021ರ ಅಕ್ಟೋಬರ್ನಲ್ಲಿ ನಾಗ ಚೈತನ್ಯ ಹಾಗೂ ಸಮಂತಾ ದೂರ ಆದರು. ಈಗ ನಾಗ ಚೈತನ್ಯ ಶೋಭಿತಾ ಜೊತೆ ಹೊಸ ಬಾಳು ಆರಂಭಿಸಲು ರೆಡಿಯಾಗಿದ್ದಾರೆ. ಮದುವೆ ಮಾತುಕತೆಗಳು ಕೂಡಾ ನಡೆಯುತ್ತಿದೆ. ನಾಗ ಚೈತನ್ಯ ತಂದೆ ಅಕ್ಕಿನೇನಿ ನಾಗಾರ್ಜುನ ಕೂಡಾ ಮಗನ ಎರಡನೇ ಮದುವೆ ಬಗ್ಗೆ ಖುಷಿ ಆಗಿದ್ದಾರೆ. ಇನ್ನು ಈ ಎಂಗೇಜ್‌ಮೆಂಟ್‌ನಲ್ಲಿ ಕೇವಲ ಆಪ್ತರು ಹಾಗೂ ಕುಟುಂಬದವರು ಮಾತ್ರ ಭಾಗಿಯಾಗಿದ್ದರು. ಇನ್ನು ನಾಗಚೈತನ್ಯ ಹಾಗೂ ಶೋಭಿತಾ ಮಧ್ಯೆ ಹೇಗೆ ಪ್ರೀತಿ ಮೂಡಿತು ಎಂಬುದು ಇನ್ನೂ ರಿವೀಲ್ ಆಗಿಲ್ಲ. ಆದ್ರೆ ಶೋಭಿತಾ ಹಾಗೂ ನಾಗ ಚೈತನ್ಯ ವಿರುದ್ಧ ಫ್ಯಾನ್ಸ್ ಕಿಡಿಕಾರುತ್ತಿದ್ದಾರೆ. ಈ ಬಗ್ಗೆ ಸಮಂತಾ ಅವರ ಪ್ರತಿಕ್ರಿಯೆ ಯಾವ ರೀತಿಯಲ್ಲಿ ಇರುತ್ತದೆ ಎಂಬುದನ್ನು ಕಾದು ನೋಡಬೇಕಿದೆ.