ಮಾತು ಬಿಟ್ಟ ನಾಗ ಚೈತನ್ಯ ಮತ್ತು ಶೋಭಿತಾ – ದಂಪತಿ ಮಧ್ಯೆ ಬಂದಿದ್ಯಾಕೆ ಸಾಯಿ ಪಲ್ಲವಿ..!

ಟಾಲಿವುಡ್ ಸ್ಟಾರ್ ನಟ ನಾಗ ಚೈತನ್ಯ ನಟನೆಯ ಸಿನಿಮಾ ತಂಡೇಲ್ ಹಿಟ್ ಆಗಿತ್ತು. ಸಿನಿಮಾ ಹಿಟ್ ಆಗಿರುವ ಖುಷಿಯಲ್ಲಿ ಇರಬೇಕಾದ ನಾಗಚೈತನ್ಯ ತುಂಬಾ ಟೆನ್ಷನ್ ಆಗಿದ್ದರಂತೆ. ಇದಕ್ಕೆ ಕಾರಣ ಸಾಯಿ ಪಲ್ಲವಿ ಅಂತಾ ನೇರವಾಗಿಯೇ ಹೇಳಿದ್ದಾರೆ ನಾಗಚೈತನ್ಯ.
ಇದನ್ನೂ ಓದಿ:ಕಾಂತಾರ ಚಾಪ್ಟರ್ 1 ನೋಡಿದ KL ರಾಹುಲ್ – ರಿಷಭ್ ಶೆಟ್ಟಿ ಮ್ಯಾಜಿಕ್ ಸೂಪರ್ ಎಂದ ಕನ್ನಡಿಗ ಕ್ರಿಕೆಟರ್
ನಾಗ ಚೈತನ್ಯ, ಇತ್ತೀಚೆಗೆ ಸಂದರ್ಶನವೊಂದರಲ್ಲಿ ಒಂದು ಹೇಳಿಕೊಂಡಿದ್ದಾರೆ. ಖ್ಯಾತ ತೆಲುಗು ನಟ ಜಗಪತಿ ಬಾಬು ನಡೆಸಿಕೊಡುತ್ತಿರುವ ಟಾಕ್ ಶೋನಲ್ಲಿ ಅತಿಥಿಯಾಗಿ ಭಾಗಿ ಆಗಿದ್ದ ನಾಗ ಚೈತನ್ಯ, ಶೋಭಿತಾ ಧುಲಿಪಾಲ ಅವರು ತನ್ನೊಂದಿಗೆ ಮಾತು ಬಿಟ್ಟ ವಿಚಾರವನ್ನು ಹಂಚಿಕೊಂಡಿದ್ದಾರೆ. ಮಾತು ಬಿಡಲು ನಟಿ ಸಾಯಿ ಪಲ್ಲವಿ ಕಾರಣ ಎಂದು ಹೇಳಿದ್ದಾರೆ. ಅದು ಹೇಗೆ ಅನ್ನೋದನ್ನು ಕೂಡಾ ವಿವರಿಸಿದ್ದಾರೆ.
2021ರಲ್ಲಿ ತಾವು ಬೇರಾಗುತ್ತಿರುವ ಬಗ್ಗೆ ನಾಗ ಚೈತನ್ಯ ಮತ್ತು ಸಮಂತಾ ಘೋಷಿಸಿದರು. ಅದಾದ ಮರು ವರ್ಷ 2022 ರಲ್ಲಿ ನಾಗ ಚೈತನ್ಯ ‘ಶೋಯು’ ಹೆಸರಿನ ಕ್ಲೌಡ್ ಕಿಚನ್ ಪ್ರಾರಂಭ ಮಾಡಿದರು. ಶೋಯು ಬಗ್ಗೆ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ಗಳನ್ನು ಆಗಾಗ್ಗೆ ನಾಗ ಚೈತನ್ಯ ಹಂಚಿಕೊಳ್ಳುತ್ತಿದ್ದರು. ಅವರ ಪೋಸ್ಟ್ ಒಂದಕ್ಕೆ ಶೋಭಿತಾ ಪ್ರತಿಕ್ರಿಯೆ ನೀಡಿದ್ದರಂತೆ. ಅಲ್ಲಿಂದ ಇಬ್ಬರ ನಡುವೆ ಪರಿಚಯ ಪ್ರಾರಂಭವಾಗಿ ಅದು ಸ್ನೇಹಕ್ಕೆ ತಿರುಗಿ ಬಳಿಕ ಪ್ರೀತಿಗೆ ತಿರುಗಿದೆ. ಕಳೆದ ವರ್ಷ ಈ ಜೋಡಿ ಮದುವೆ ಆದರು. ಆದರೆ ಮದುವೆಗೆ ಮುಂಚೆ ಶೋಭಿತಾ ಹಾಗೂ ನಾಗ ಚೈತನ್ಯ ನಡುವೆ ಮುನಿಸು ಉಂಟಾಗಿತ್ತಂತೆ. ಶೋಭಿತಾ, ನಾಗ ಚೈತನ್ಯ ಜೊತೆಗೆ ಮಾತನಾಡುವುದನ್ನು ಬಿಟ್ಟಿದ್ದರಂತೆ. ಅದಕ್ಕೆ ಕಾರಣವಾಗಿದ್ದು ನಟಿ ಸಾಯಿ ಪಲ್ಲವಿ. ನಾಗ ಚೈತನ್ಯ ಹಾಗೂ ಸಾಯಿ ಪಲ್ಲವಿಯದ್ದು ಸೂಪರ್ ಹಿಟ್ ಜೋಡಿ. ಇವರು ಒಟ್ಟಿಗೆ ನಟಿಸಿರುವ ‘ಲವ್ ಸ್ಟೋರಿ’ ಸೂಪರ್ ಹಿಟ್ ಆಗಿದೆ. ‘ತಂಡೇಲ್’ ಸಹ ಬ್ಲಾಕ್ ಬಸ್ಟರ್. ಆದರೆ ಸಾಯಿ ಪಲ್ಲವಿ ಕಾರಣಕ್ಕೆ ಶೋಭಿತಾ, ನಾಗ ಚೈತನ್ಯ ಜೊತೆ ಮಾತು ಬಿಟ್ಟಿದ್ದರಂತೆ. ‘ತಂಡೇಲ್’ ಸಿನಿಮಾನಲ್ಲಿ ನಾಗ ಚೈತನ್ಯ, ಸಾಯಿ ಪಲ್ಲವಿಗೆ ‘ಬುಜ್ಜಿ ತಲ್ಲಿ’ ಎಂದು ಮುದ್ದು ಹೆಸರಿನಿಂದ ಕರೆಯುತ್ತಾರೆ. ಅದು ಶೋಭಿತಾಗೆ ಇಷ್ಟವಾಗಲಿಲ್ಲವಂತೆ. ಅದಕ್ಕೆ ಕಾರಣವೆಂದರೆ, ನಾಗ ಚೈತನ್ಯ, ಶೋಭಿತಾರನ್ನು ಮುದ್ದಾಗಿ ಬುಜ್ಜಿ ತಲ್ಲಿ ಎಂದೇ ಕರೆಯುತ್ತಿದ್ದರಂತೆ. ತಮ್ಮನ್ನು ಪ್ರೀತಿಯಿಂದ ಕರೆಯುವ ಹೆಸರನ್ನು ಸಿನಿಮಾ ನಾಯಕಿಗೆ ನಾಗ ಚೈತನ್ಯ ಅವರೇ ಸೂಚಿಸಿದ್ದಾರೆಂದುಕೊಂಡು ಶೋಭಿತಾ ಮಾತು ಬಿಟ್ಟಿದ್ದರಂತೆ. ಆದರೆ ಆ ಹೆಸರನ್ನು ‘ತಂಡೇಲ್’ ಸಿನಿಮಾ ನಾಯಕಿಗೆ ನಾನು ಸೂಚಿಸಿದ್ದಲ್ಲ ಎಂದು ನಾಗ ಚೈತನ್ಯ ಹೇಳಿದ್ದು, ಅದನ್ನು ಶೋಭಿತಾಗೆ ಮನದಟ್ಟು ಮಾಡಿಸಿದ ಬಳಿಕ ಮುನಿಸು ಕರಗಿತು ಎಂದು ನಾಗ ಚೈತನ್ಯ ಹೇಳಿಕೊಂಡಿದ್ದಾರೆ.

ನೋಡಿರಿ

