ಆಸ್ಕರ್ ಗೆದ್ದ ‘ನಾಟು ನಾಟು’ ನೋಡಲು ಮುಗಿಬಿದ್ದ ಜನ – 24 ಗಂಟೆಗಳಲ್ಲೇ ಅದೆಷ್ಟು ಮಿಲಿಯನ್ ವೀಕ್ಷಣೆ..?

ರಾಜಮೌಳಿ ನಿರ್ದೇಶನದ ‘RRR’ ಸಿನಿಮಾದ ‘ನಾಟು ನಾಟು’ (Natu Natu) ಹಾಡು ಆಸ್ಕರ್ ಪ್ರಶಸ್ತಿ ಗೆದ್ದಿದೆ. ಇಡೀ ದೇಶವೇ ಇದನ್ನ ಸಂಭ್ರಮಿಸುತ್ತಿದೆ. ಇನ್ನೊಂದು ಅಚ್ಚರಿಯ ವಿಚಾರ ಅಂದ್ರೆ ನಾಟು ನಾಟು ಹಾಡಿಗೆ ಆಸ್ಕರ್ ಘೋಷಣೆಯಾಗುತ್ತಿದ್ದಂತೆ ಮಿಲಿಯನ್ಗಟ್ಟಲೆ ಜನ ಈ ಹಾಡನ್ನ ನೋಡಿದ್ದಾರೆ.
ನಾಟು ನಾಟು ಹಾಡಿಗೆ ಆಸ್ಕರ್ ಪ್ರಶಸ್ತಿ ಘೋಷಣೆಯಾದ ಬೆನ್ನಲ್ಲೇ ಭಾರತ ಮಾತ್ರವಲ್ಲದೆ ವಿದೇಶಿಗರು ಕೂಡ ಈ ಹಾಡನ್ನ ಹುಡುಕಿ ವೀಕ್ಷಣೆ ಮಾಡುತ್ತಿದ್ದಾರೆ. ಹೀಗಾಗಿ ಆಸ್ಕರ್ ಅನೌನ್ಸ್ ಆದ ಕೇವಲ 24 ಗಂಟೆಗಳ ಅವಧಿಯಲ್ಲೇ ಬರೋಬ್ಬರಿ 8 ಮಿಲಿಯನ್ ಅಂದ್ರೆ 80 ಲಕ್ಷ ಜನ ವೀಕ್ಷಣೆ ಮಾಡಿದ್ದಾರೆ.
ಇದನ್ನೂ ಓದಿ : ಆಸ್ಕರ್ ಗೆದ್ದ RRR.. ಟ್ವೀಟ್ ನಲ್ಲಿ ಶುಭಕೋರಿದ ಆಂಧ್ರ ಸಿಎಂ – ತೆಲುಗು ಬಾವುಟ ಎಂದಿದ್ದಕ್ಕೆ ಕಾಲೆಳೆದ ಅದ್ನಾನ್ ಸಾಮಿ!
ಅಫಿಶಿಯಲ್ ಯೂ ಟ್ಯೂಬ್ ಚಾನಲ್ ಗಳಲ್ಲೂ ಈ ಹಾಡು ಬಿಲಿಯನ್ ಗಿಂತಲೂ ಹೆಚ್ಚು ವ್ಯೂಸ್ ಪಡೆದಿದೆ. ಲಹರಿ ಅಫಿಶಿಯಲ್ ಯೂಟ್ಯೂಬ್ ಚಾನಲ್ನಲ್ಲಿ ಈ ಹಾಡು 452 ಮಿಲಿಯನ್ ವೀಕ್ಷಣೆ ಪಡೆದಿದೆ. ಹಾಗೇ ಟಿ ಸಿರೀಸ್ ಚಾನಲ್ನಲ್ಲಿ 561 ಮಿಲಿಯನ್ ವ್ಯೂಸ್ ಪಡೆದಿದೆ. ಆಸ್ಕರ್ ಅನೌನ್ಸ್ ಆದ ಮೇಲಂತೂ ಈ ಹಾಡು ನೋಡುವವರ ಸಂಖ್ಯೆ ಹೆಚ್ಚಾಗಿದೆ. 24 ಗಂಟೆಗಳ ಅವಧಿಯಲ್ಲೇ 80 ಲಕ್ಷ ಜನ ಈ ಹಾಡನ್ನ ವೀಕ್ಷಣೆ ಮಾಡಿದ್ದಾರೆ. ಒಟ್ಟಾರೆ ಎಲ್ಲಾ ಌಪ್ಗಳಿಂದ ಈ ಹಾಡು ಬರೋಬ್ಬರಿ 750 ಮಿಲಿಯನ್ ಜನರಿಂದ ವೀಕ್ಷಣೆ ಪಡೆದಿದೆ. ಹಾಗೇ 50 ಲಕ್ಷ ಜನ ಈ ಹಾಡಿನ ರಿಂಗ್ ಟೋನ್ ಡೌನ್ ಲೋಡ್ ಮಾಡಿಕೊಂಡಿದ್ದಾರೆ.
RRR ಸಿನಿಮಾದ ಮ್ಯೂಸಿಕ್ ಹಕ್ಕನ್ನು ವೇಲು ಒಡೆತನದ ಕನ್ನಡದ ಹೆಮ್ಮೆಯ ಲಹರಿ ಸಂಸ್ಥೆ ಪಡೆದುಕೊಂಡಿದೆ. ಹಾಡುಗಳ ಪ್ರಸಾರದ ಹಕ್ಕನ್ನ 18 ಕೋಟಿಗೆ ಖರೀದಿ ಮಾಡಲಾಗಿತ್ತು. ‘ನಾಟು ನಾಟು ಹಾಡು ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿಯಲ್ಲಿದೆ. ಟಿ ಸೀರಿಸ್ ಮತ್ತು ಲಹರಿ ಮ್ಯೂಸಿಕ್ ಎರಡರಲ್ಲೂ ಹಾಡನ್ನು ವೀಕ್ಷಿಸಬಹುದಾಗಿದೆ. ಅತೀ ಹೆಚ್ಚು ತೆಲುಗಿನಲ್ಲೇ ಈ ಹಾಡನ್ನು ನೋಡಿದ್ದಾರೆ. ಗ್ಲೋಡನ್ ಗ್ಲೋಬ್ ಪ್ರಶಸ್ತಿ ಬಂದಾಗಲೂ ಹೆಚ್ಚಿನ ಸಂಖ್ಯೆಯಲ್ಲಿ ಈ ಹಾಡನ್ನು ವೀಕ್ಷಿಸಿದ್ದರು. ಆಸ್ಕರ್ ಬಂದ ನಂತರ ಮತ್ತಷ್ಟು ಹೆಚ್ಚಾಗಿದೆ.
ನಾಟು ನಾಟು ಹಾಡು ಆಸ್ಕರ್ ಪ್ರಶಸ್ತಿ ಪಡೆಯುವ ಮೂಲಕ ಜಗತ್ತಿನಾದ್ಯಂತ ಸುದ್ದಿ ಮಾಡಿದೆ. ಸೋಶಿಯಲ್ ಮೀಡಿಯಾದಲ್ಲೂ ಅದು ಟ್ರೆಂಡ್ ಸೃಷ್ಟಿಸಿದೆ. ರಾಜಮೌಳಿ ನಿರ್ದೇಶನದಲ್ಲಿ ಮೂಡಿ ಬಂದ ಆರ್.ಆರ್.ಆರ್ ಸಿನಿಮಾದ ಗೀತೆ ಇದಾಗಿದ್ದು, ಎಂ.ಎಂ.ಕೀರವಾಣಿ ಅವರ ಸಂಗೀತ ಸಂಯೋಜನೆಯಲ್ಲಿ ಮೂಡಿ ಬಂದಿದೆ. ಜ್ಯೂನಿಯರ್ ಎನ್.ಟಿ.ಆರ್ ಹಾಗೂ ರಾಮ್ ಚರಣ್ ಈ ಹಾಡಿಗೆ ಸಖತ್ ಸ್ಟೆಪ್ಸ್ ಹಾಕಿದ್ದಾರೆ.