ಹಿತಾ ಮುಂದೆ ಅಮ್ಮನ ಸಾವಿನ ರಹಸ್ಯ.. ದುರ್ಗಾಳನ್ನ ಒಪ್ಪಿಕೊಂಡ ಶರತ್? – ನಾನಿನ್ನ ಬಿಡಲಾರೆಗೆ ಆತ್ಮದ ತಿರುವು!

ವಿಧಿ ನಿಯಮದಂತೆ ದುರ್ಗಾ ಶರತ್ ಮದುವೆಯಾಗಿದ್ದಾರೆ. ದೇವರ ಸಮ್ಮುಖದಲ್ಲೇ ಶರತ್ ದುರ್ಗಾಗೆ ತಾಳಿ ಕಟ್ಟಿದ್ದಾನೆ. ಆದ್ರೆ ಈ ಮದುವೆಯಿಂದಾಗಿ ಹಿತಾ ಬೇಜಾರು ಮಾಡ್ಕೊಂಡಿದ್ದಾಳೆ. ಶರತ್ ಜೊತೆ ಮಾತು ಬಿಟ್ಟಿದ್ದ ಹಿತಾ ಈಗ ದುರ್ಗಾ ಜೊತೆ ಕೂಡ ಮಾತನಾಡ್ತಿಲ್ಲ. ಇವೆಲ್ಲದ್ರ ಮಧ್ಯೆ ಹಿತಾಗೆ ಅಮ್ಮನ ರಹಸ್ಯ ಗೊತ್ತಾಗಿದೆ. ಈ ಮದುವೆ ನಡೆಯಲು ಅಂಬಿಕಾ ಕಾರಣ ಅನ್ನೋದು ರಿವೀಲ್ ಆಗಿದೆ. ಇದೀಗ ಹಿತಾ ಅಮ್ಮ ನನ್ನ ಜೊತೆ ಮಾತನಾಡು.. ಹಗ್ ಮಾಡು ಅಂತಾ ಕೇಳಿಕೊಂಡಿದ್ದಾಳೆ. ಅಂಬಿಕಾ ಕೂಡ ಹಿತಾ ಮುಂದೆ ಬಂದಿದ್ದಾಳೆ.
ಇದನ್ನೂ ಓದಿ: ಸಾಕಿದ ಮಾಲೀಕನ ಪ್ರಾಣಕ್ಕೆ ಕುತ್ತು ತಂದ ಹುಲಿರಾಯ! – ಯಜಮಾನನ ಕತ್ತು ಸೀಳಿತಾ ವ್ಯಾಘ್ರ
ಜೀಕನ್ನಡದಲ್ಲಿ ಪ್ರಸಾರವಾಗ್ತಿರೋ ನಾನಿನ್ನ ಬಿಡಲಾರೆ ಸೀರಿಯಲ್ ಈ ರೋಚಕ ತಿರುವು ಪಡೆದುಕೊಂಡಿದೆ. ಶರತ್ ನ ಮದುವೆ ಆಗ್ಬೇಕು ಅಂದ್ಕೊಂಡಿದ್ದ ಮಾಯಾ ಪ್ಲ್ಯಾನ್ ಎಲ್ಲಾ ಉಲ್ಟಾ ಆಗಿದೆ. ಅಂಬಿಕಾ ಹಾಗೂ ದೇವಿಯೇ ಮುಂದೆ ನಿಂತು ದುರ್ಗಾ ಶರತ್ ಮದುವೆ ಮಾಡಿಸಿದ್ದಾರೆ. ಶರತ್ ತಾಳಿ ಕಟ್ಟುತ್ತಿದ್ದಂತೆ ದುಷ್ಟರು ಶಕ್ತಿ ಕಳ್ಕೊಂಡ್ರೆ, ಅಂಬಿಕಾ ಶಕ್ತಿ ಡಬಲ್ ಆಗಿದೆ. ಆದ್ರೆ ಈ ಮದುವೆ ಹೇಗಾಯ್ತು.. ಮಾಯಾ ಪ್ಲೇಸ್ ಗೆ ದುರ್ಗಾ ಹೇಗೆ ಬಂದ್ಲು ಅನ್ನೋದು ಶರತ್ ನ ಇನ್ನೂ ಕಾಡ್ತಿದೆ.. ಇತ್ತ ಇಷ್ಟು ದಿನ ತನ್ನೊಂದಿಗೆ ಇದ್ದಿದ್ದು, ಶರತ್ ಹೆಂಡ್ತಿ ಅಂಬಿಕಾ ಅನ್ನೋದು ದುರ್ಗಾಗೆ ಗೊತ್ತಾಗಿದೆ. ಈ ವಿಚಾರನ ಶರತ್ ಗೆ ಹೇಳಿದ್ರೂ ಆತ ನಂಬುತ್ತಾ ಇಲ್ಲ. ದುರ್ಗಾ ಮೋಸದಿಂದಲೇ ಮದುವೆ ಆಗಿದ್ದಾಳೆ ಅಂತ ಅಂದ್ಕೊಂಡಿದ್ದಾನೆ. ಇನ್ನು ಹಿತಾ ಕೂಡ ಈ ಮದುವೆಯಿಂದ ಬೇಜಾರು ಮಾಡ್ಕೊಂಡಿದ್ದಾಳೆ. ದುರ್ಗಾ ಜೊತೆ ಕೂಡ ಮಾತು ಬಿಟ್ಟಿದ್ದಾಳೆ. ಆದ್ರೀಗ ದುರ್ಗಾ ಹಿತಾ ಬಳಿ ನಡೆದ ವಿಚಾರ ತಿಳಿಸಿದ್ದಾಳೆ. ತನ್ನನ್ನ ಇಲ್ಲಿವರೆಗೆ ಕರ್ಕೊಂಡು ಬಂದಿದ್ದು ಅಂಬಿಕಾ ಅಂತಾ ಹೇಳಿದ್ದಾಳೆ.
ಅಂಬಿಕಾ ತನ್ನನ್ನ ಈ ಮನೆಗೆ ಕರ್ಕೊಂಡು ಬಂದಿದ್ದು. ಇಷ್ಟು ದಿನ ಆಕೆ ಜೊತೆಯೇ ಮಾತನಾಡಿದ್ದು ಎಂದು ದುರ್ಗಾ ಶರತ್ ಬಳಿ ಎಷ್ಟು ಬಾರಿ ಹೇಳಿದ್ರು ಆತ ಇದನ್ನ ನಂಬಲು ರೆಡಿಯಿಲ್ಲ. ಆಕೆ ಮೇಲೆ ಸಿಟ್ಟು ಮಾಡ್ಕೊಂಡಿದ್ದಾನೆ. ಹೀಗಾಗಿ ದುರ್ಗಾಗೆ ಡಿವೋರ್ಸ್ ಕೊಡಲು ಮುಂದಾಗಿದ್ದಾನೆ. ಲಾಯರ್ ಆಫೀಸ್ ಗೆ ಹೋಗಿ ಡಿವೋರ್ಸ್ ಗೆ ಅಪ್ಲೇ ಮಾಡಿದ್ದಾನೆ. ಅಷ್ಟೊತ್ತಿಗೆ ಅಂಬಿಕಾ ತನ್ನನ್ನ ಸಾಯಿಸಿದ್ದು ಮಾಯ.. ಹಿತಾ ಜೀವಕ್ಕೆ ಅಪಾಯ ಇದೆ ಎಂದು ಕನ್ನಡಿ ಮೇಲೆ ಬರೆದಿದ್ಲು. ಹೀಗಾಗಿ ದುರ್ಗಾ ಡಿವೋರ್ಸ್ ಪೇಪರ್ ಗೆ ಸೈನ್ ಹಾಕಲು ಒಪ್ಪಿಲ್ಲ. ಆದ್ರೀಗ ದುರ್ಗಾ ಹಿತಾ ಬಳಿ ತನ್ನನ್ನ ಇಲ್ಲಿಗೆ ಕರ್ಕೊಂಡು ಬಂದಿದ್ದು ಅಂಬಿಕಾ ಅಂತಾ ಹೇಳಿದ್ದಾಳೆ. ಇದನ್ನೆಲ್ಲಾ ಅವರು ಮಾಡಿದ್ದು ನಿನಗೋಸ್ಕರವೇ ಅಂತಾ ಹೇಳಿದ್ದಾಳೆ. ದುರ್ಗಾ ಮಾತನ್ನ ಕೇಳಿದ ಹಿತಾ.. ನಿನಗೆ ನಿಜ ಅಮ್ಮ ಕಾಣಿಸ್ತಾಳಾ? ಅಮ್ಮ ಈ ಮನೆಯಲ್ಲೇ ಇದ್ದಾಳಾ ಕೇಳಿದ್ದಾಳೆ. ಅಮ್ಮ ನೀನು ನನಗೆ ಬೇಕು.. ಬಾ ಹಗ್ ಮಾಡು ಎಂದಿದ್ದಾಳೆ.. ಆದ್ರೆ ಅಂಬಿಕಾ ಬರಲಿಲ್ಲ ಅಂತಾ ಕಣ್ಣೀರಿಟ್ಟಿದ್ದಾಳೆ. ಅಮ್ಮ ಬೇಕು ಎಂದು ಜೋರಾಗಿ ಅತ್ತಿದ್ದಾಳೆ. ಹಿತಾ ಅಳ್ತಿದ್ದಂತೆ ಅಂಬಿಕಾ ಆತ್ಮ ಮಗಳನ್ನ ಅಪ್ಪಿಕೊಳ್ಳಲು ಬಂದಿದೆ. ಆದ್ರೆ ಇದು ಸಾಧ್ಯವಾಗಿಲ್ಲ. ಮಗಳ ಪರಿಸ್ಥಿತಿ ಕಂಡು ಅಂಬಿಕಾ, ಶರತ್ ಕೂಡ ಬೇಜಾರು ಮಾಡ್ಕೊಂಡಿದ್ದಾರೆ. ಇದೀಗ ಸೀನ್ ವೀಕ್ಷಕರ ಮನಮುಟ್ಟಿದೆ. ಹಿತಾ ಆಕ್ಟಿಂಗ್ ಗೆ ಫ್ಯಾನ್ಸ್ ಭೇಷ್ ಅಂದಿದ್ದಾರೆ.
ಇದೀಗ ಅಂಬಿಕಾ ಶರತ್, ದುರ್ಗಾಳನ್ನ ಒಂದು ಮಾಡೋದಾಗಿ ಪಣ ತೊಟ್ಟಿದ್ದಾಳೆ. ಮಗಳ ಮುಂದೆ ಅಂಬಿಕಾ ಪ್ರತ್ಯಕ್ಷ ಆಗ್ತಾಳಾ? ತನ್ನನ್ನ ಸಾಯಿಸಿದ್ದು ಶರತ್ ಅಲ್ಲ.. ಮಾಯ ಅನ್ನೋದನ್ನ ಮಗಳಿಗೆ ಮನವರಿಕೆ ಮಾಡ್ತಾಳಾ? ಇಂದ್ರಿಂದಾಗಿ ಅಪ್ಪ ಮಗಳು ಒಂದಾಗ್ತಾರಾ ? ಮಗಳಿಗಾಗಿ ಶರತ್ ದುರ್ಗಾಳನ್ನ ಒಪ್ಪಿಕೊಳ್ತಾಳಾ ಅನ್ನೋ ಕ್ಯೂರಿಯಾಸಿಟಿ ಮೂಡಿದೆ. ಒಟ್ಟಿನಲ್ಲಿ ಮುಂಬರುವ ಎಪಿಸೋಡ್ ಸಾಕಷ್ಟು ಟ್ವಿಸ್ಟ್ ಆಂಡ್ ಟರ್ನ್‌ನಿಂದ ಕೂಡಿದೆ.

ನೋಡಿರಿ

