ಹಿತಾಗಾಗಿ ಒಂದಾದ 2 ಆತ್ಮಗಳು.. ಶರತ್ ದುರ್ಗಾ ಕಲ್ಯಾಣ! – ಅಪ್ಪನನ್ನ ಒಪ್ಪಿಕೊಂಡ ಹಿತಾ?

ಶರತ್ ತನ್ನವನಾಗ್ಬೇಕು ಅಂತ ಮಾಯಾ ಮಾಡಿದ ಸರ್ಕಸ್ ಒಂದೆರಡಲ್ಲ.. ಮಾಯಾ ಜೊತೆ ಮಾಳವಿಕಾ ಕೂಡ ಕೈ ಜೋಡಿಸಿದ್ಲು.. ಮಾಟ ಮಂತ್ರ ಮಾಡಿ, ಶರತ್ ತನ್ನ ಮಾತು ಕೇಳುವಂತೆ ಮಾಡಿದ್ಲು ಮಾಳವಿಕಾ.. ಆದ್ರೆ ಅಲ್ಲಿ ಆಗಿದ್ದೇ ಬೇರೆ.. ಶರತ್ ಮಾಯಾಳನ್ನ ಮದುವೆಯಾಗಿಲ್ಲ.
ಇದನ್ನೂ ಓದಿ: ರೋಹಿತ್ ಗೆ BCCI ಫಿಟ್ ನೆಸ್ ಟೆಸ್ಟ್ – ಯೋ-ಯೋ ಓಕೆ.. ಬ್ರಾಂಕೋ ಟೆಸ್ಟ್ ಏಕೆ?
ನಾ ನಿನ್ನ ಬಿಡಲಾರೆ ಧಾರಾವಾಹಿ ವಿಭಿನ್ನ ಕಥೆಯನ್ನು ಹೊಂದಿದೆ. ಅಲ್ಲದೇ ಈ ಸೀರಿಯಲ್ ಮೇಕಿಂಗ್ನಿಂದಲೇ ಪ್ರಾರಂಭದ ದಿನದಿಂದಲೂ ಹೆಚ್ಚು ಫೇಮಸ್ ಆಗಿದೆ. ದುಷ್ಟ ಶಕ್ತಿಗಳು, ಮಾಟ ಮಂತ್ರ ಹಾಗೂ ದೇವಿ ಮಹಾತ್ಮೆಯ ಮೂಲಕ ಒಳ್ಳೆಯ ವಿಚಾರ ಯಾವಾಗಲೂ ಗೆಲ್ಲುತ್ತದೆ ಎನ್ನುವಂತೆ ತೋರಿಸಿಕೊಂಡು ಬರಲಾಗಿದೆ. ಭಾವನಾತ್ಮಕವಾಗಿ ಒಂದು ಕುಟುಂಬದ ಕತೆಯನ್ನು ಅದ್ಭುತವಾಗಿ ತೋರಿಸಲಾಗುತ್ತಿದೆ. ಇದೀಗ ಈ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್ ಎದುರಾಗಿದೆ. ಇದೀಗ ಶರತ್ ದುರ್ಗಾಳಿಗೆ ತಾಳಿಕಟ್ಟಿದ್ದಾನೆ.
ಹೌದು, ಶರತ್ ಮಲತಾಯಿ ಮಾಳವಿಕಾ ಮಾಟ-ಮಂತ್ರ ಕಲಿತವಳು. ಆಕೆ ತನ್ನ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು, ಮೂರು ಬಲಿ ಕೊಡಲು ನಿರ್ಧರಿಸಿದ್ದಳು. ಈಗಾಗಲೇ ಆಕೆ ಅಂಬಿಕಾಳನ್ನ ಬಲಿ ಪಡೆದಿದ್ಲು. ಈಗ ಶರತ್ ಹಾಗೂ ಮಾಯಾ ಮದುವೆ ಮಾಡಿ ಆತ್ಮವಾಗಿ ಓಡಾಡುತ್ತಿರುವ ಅಂಬಿಕಾಳ ಶಕ್ತಿ ಕಡಿಮೆ ಮಾಡ್ಬೇಕು ಅಂತಾ ಅಂದ್ಕೊಂಡಿದ್ಲು. ಇದೀಗ ಕಾರಣಕ್ಕೆ ಮಾಳವಿಕಾ ಮಾಯಾ ಹಾಗೂ ಶರತ್ ಮದುವೆ ಮಾಡಿಸಲು ಮುಂದಾಗಿದ್ಲು. ಆದರೆ, ಈ ಮದುವೆ ಶರತ್ ಗೆ ಇಷ್ಟ ಇರ್ಲಿಲ್ಲ. ಹಿತಾಗೆ ತಾಯಿ ಪ್ರೀತಿ ಬೇಕು ಅಂತ ಹೇಳಿ ಮಾಳವಿಕಾ ಈ ಮದುವೆ ಒಪ್ಪಿಸಿದ್ಲು. ಆದ್ರೆ ದುರ್ಗಾ ಹೇಳಿದ ಮಾತು ಶರತ್ ಮನಸ್ಸಿನ ಮೇಲೆ ಸಾಕಷ್ಟು ಪ್ರಭಾವ ಬೀರಿತು. ಅಂಬಿಕಾಳೇ ಎಲ್ಲವನ್ನೂ ಹೇಳಿದಂತೆ ಇತ್ತು. ಈ ಕಾರಣದಿಂದಲೇ ಅವನು ಮದುವೆ ಆಗೋದಿಲ್ಲ ಎಂದಿದ್ದ.. ಆದ್ರೆ ಮಾಳವಿಕಾ ಆತನಿಗೆ ತನ್ನ ಶಕ್ತಿಯಿಂದ ವಶೀಕರಣ ಮಾಡಿದ್ದಾಳೆ. ‘ಮದುವೆ ಮಂಟಪಕ್ಕೆ ಹೋಗಬೇಕು, ತಾಳಿ ಕಟ್ಟಬೇಕು’ ಎಂದು ಹೇಳಿದ್ದಾಳೆ. ಆತ ಹಾಗೆಯೇ ಮಾಡಿದ್ದಾನೆ. ಅಲ್ಲಿ ಮಾಯಾ ಬದಲು ದುರ್ಗಾ ಕೂತಿದ್ದಾಳೆ. ದುರ್ಗಾಳಿಗೆ ಶರತ್ ತಾಳಿ ಕಟ್ಟಿದ್ದಾನೆ.
ಹೌದು, ಮಾಳವಿಕಾ ಹಾಲ್ ಗೆ ದಿಗ್ಬಂಧನ ಹಾಕಿದ್ರೆ, ಇತ್ತ ಮಾಯಾ ದುರ್ಗಾಳನ್ನ ಸಾಯಿಸಲು ಪ್ಲ್ಯಾನ್ ಮಾಡಿದ್ಲು. ಹೀಗಾಗಿ ಆಕೆಯನ್ನ ಕೂಡಿ ಹಾಕಿ ರೌಡಿಗಳಿಂದ ಹೊಡೆಸಿದ್ಲು. ಆದ್ರೆ ಅಂಬಿಕಾ ಅಲ್ಲಿಗೆ ಬಂದು ದುರ್ಗಾಳನ್ನ ಕಾಪಾಡಿದ್ದಾಳೆ. ಬಳಿಕ ದುರ್ಗಾ ದೇಹಕ್ಕೆ ಅಂಬಿಕಾ ಆತ್ಮ ಸೇರಿಕೊಂಡಿದೆ. ಬಳಿಕ ದುರ್ಗಾ ರೌದ್ರಾವಾತಾರ ತಾಳಿ ರೌಡಿಗಳ ಜೊತೆ ಫೈಟ್ ಮಾಡಿದ್ದಾಳೆ. ಅಷ್ಟೊತ್ತಿಗೆ ದೇವಿ ಕೂಡ ಮದುವೆ ಮಂಟಪಕ್ಕೆ ಬಂದಿದೆ. ದೇವಿ ಸಮ್ಮುಖದಲ್ಲೇ ಶರತ್ ದುರ್ಗಾಗೆ ತಾಳಿ ಕಟ್ಟಿದ್ದಾನೆ. ಇದೀಗ ಮಾಳವಿಕ ಪ್ಲ್ಯಾನ್ ಫ್ಲಾಪ್ ಆಗಿದೆ. ಶರತ್ ದುರ್ಗಾಗೆ ತಾಳಿ ಕಟ್ತಿದ್ದಂತೆ ಅಂಬಿಕಾ ಶಕ್ತಿ ದುಪ್ಪಟ್ಟಾಗಿದೆ. ಆದ್ರೀಗ ಶರತ್ ದುರ್ಗಾಳನ್ನ ಹಿತಾ ಒಪ್ಪಿಕೊಳ್ತಾಳಾ ಅನ್ನೋ ಕ್ಯೂರಿಯಾಸಿಟಿ ವೀಕ್ಷಕರನ್ನ ಕಾಡ್ತಿದೆ. ಈ ಮದುವೆಯನ್ನ ಹಿತಾ ಒಪ್ಪಿಕೊಳ್ಬೋದು. ಜೊತೆಗೆ ಶರತ್ನ ಹಿತಾ ಅಪ್ಪಾ ಅಂತಾ ಒಪ್ಪಿಕೊಳ್ಳೋದು ಪಕ್ಕಾ. ಯಾಕಂದ್ರೆ ಹಿತಾಗೆ ಮಾಯಾ ಇಷ್ಟ ಇರ್ಲಿಲ್ಲ, ಆದ್ರೆ ದುರ್ಗಾ ಅಂದ್ರೆ ಆಕೆಗೆ ತುಂಬಾ ಇಷ್ಟ.. ಹೀಗಾಗಿ ಆಕೆ ಖುಷಿ ಪಡೋದು ಗ್ಯಾರಂಟಿ.

ನೋಡಿರಿ

