ದುರ್ಗಾಗೆ ತಾಳಿ ಕಟ್ಟಿದ ಶರತ್?‌ – ಕಡೆಗೂ ಒಂದಾದ ಅಪ್ಪ ಮಗಳು!

ದುರ್ಗಾಗೆ ತಾಳಿ ಕಟ್ಟಿದ ಶರತ್?‌ – ಕಡೆಗೂ ಒಂದಾದ ಅಪ್ಪ ಮಗಳು!

ಜೀ ಕನ್ನಡದಲ್ಲಿ ಪ್ರಸಾರವಾಗ್ತಿರೋ ನಾನಿನ್ನ ಬಿಡಲಾರೆ ಈ ರೋಚಕ ಘಟ್ಟ ತಲುಪಿದೆ. ಶರತ್‌ ತನ್ನವನಾಗ್ಬೇಕು ಅಂತಾ ಮಾಯಾ ಅಂಬಿಕಾಳನ್ನ ಸಾಯಿಸಿದ್ಲು. ಬಳಿಕ ಹಿತಾಳನ್ನ ನೋಡಿಕೊಳ್ತೇನೆ ಅಂತಾ ಹೇಳ್ಕೊಂಡು ಶರತ್‌ ಮನೆ ಸೇರಿದ್ದಾಳೆ. ಇದೀಗ ಆತನನ್ನ ಮದುವೆ ಮಾಡ್ಕೊಳ್ಬೇಕು ಅಂತ ಹೊರಟಿದ್ದಾಳೆ. ದುರ್ಗಾ ಇದ್ರೆ ತನ್ನ ಆಸೆ ಈಡೇರಲ್ಲಾ ಅಂತ ಮಾಯಾ ಈಗ ಸಿದ್ಧಾಂತ್‌ ನ ಕರೆಸಿದ್ದಾಳೆ. ಆದ್ರೀಗ ಸಿದ್ಧಾಂತ್‌ ಒಳ್ಳೆಯವನಲ್ಲ ಅನ್ನೋದು ಹಿತಾ, ಶರತ್‌ ಗೆ ಗೊತ್ತಾಗಿದೆ. ಇದೀಗ ಸೀರಿಯಲ್‌ ಡೈರೆಕ್ಟರ್‌ ಬಿಗ್‌ ಟ್ವಿಸ್ಟ್‌ ಕೊಟ್ಟಿದ್ದಾರೆ. ಶರತ್‌ ಈಗ ದುರ್ಗಾ ಜೊತೆ ಹಸೆಮಣೆಯಲ್ಲಿ ಕೂತಿದ್ದಾನೆ.

ಇದನ್ನೂ ಓದಿ: ವೆಸ್ಟ್ ಇಂಡೀಸ್ ಸೋಲಿಸಿ ಗೆಲುವಿನ ಖಾತೆ ತೆರೆದ ಇಂಡಿಯಾ ಚಾಂಪಿಯನ್ಸ್- ಗೆದ್ದ ಒಂದೇ ಪಂದ್ಯದಲ್ಲಿ ಇಂಡಿಯಾ ಸೆಮಿಫೈನಲ್‌ಗೆ ಎಂಟ್ರಿ

ನಾನಿನ್ನ ಬಿಡಲಾರೆ ಸೀರಿಯಲ್‌ ಅತೀ ಕಡಿಮೆ ಸಮಯದಲ್ಲೇ ವೀಕ್ಷಕರ ಮನಗೆದ್ದಿದೆ. ಟಿಆರ್‌ಪಿ ರೇಸ್‌ನಲ್ಲೂ ಮುಂದಿದೆ. ಶರತ್‌ ತನ್ನವನಾಗ್ಬೇಕು ಅಂತಾ ಮಾಯ ಏನೇನೋ ಮಾಡ್ತಿದ್ದಾಳೆ. ಈಗಾಗಲೇ ಮಾಯ ಅಂಬಿಕಾಳನ್ನ ಸಾಯಿಸಿದ್ಲು. ಅಂಬಿಕಾ ಸಾಯ್ತಿದ್ದಂತೆ ಹಿತಾಳನ್ನ ನೋಡಿಕೊಳ್ತೇನೆ. ಆಕೆಗೆ ತಾಯಿ ಪ್ರೀತಿ ಬೇಕು ಅಂತ ಶರತ್‌ ಮನೆ ಸೇರಿಕೊಂಡಿದ್ದಾಳೆ. ಆದ್ರೆ ಮಾಯ ಪ್ಲ್ಯಾನ್‌ ಬೇರೆಯೇ ಇದೆ. ಶರತ್‌ ನ ಮದುವೆ ಆದ್ಮೇಲೆ ಹಿತಾಳನ್ನ ಮನೆಯಿಂದ ಆಚೆ ಹಾಕೋ ಪ್ಲ್ಯಾನ್‌ ಮಾಡಿದ್ದಾಳೆ. ಈಗಾಗಲೇ ಹಿತಾಗೆ ಮಾಯ ಸಾಕಷ್ಟು ತೊಂದ್ರೆ ಕೊಟ್ಟಿದ್ದಾಳೆ. ಹಿತಾಳನ್ನ ಸಾಯಿಸೋಕೂ ಹೊರಟಿದ್ಲು. ಆದ್ರೆ ಆ ಸಮಯದಲ್ಲಿ ದುರ್ಗಾ ಬಂದು ಕಾಪಾಡಿದ್ಲು.. ಅಂದ್ರಿಂದಾಗೇ ದುರ್ಗಾ ಹಾಗೂ ಹಿತಾ ಫುಲ್‌ ಕ್ಲೋಸ್‌ ಆದ್ರು.. ಬಳಿಕ ಹಿತಾಳನ್ನ ನೋಡಿಕೊಳ್ಳಲು ದುರ್ಗಾಳನ್ನ ಶರತ್‌ ಮನೆಗೆ ಕರ್ಕೊಂಡು ಬರಲಾಯ್ತು.. ದುರ್ಗಾ ಬಂದ್ಮೇಲೆ ಹಿತಾ ಖುಷಿಯಾಗಿದ್ದಾಳೆ. ಅಷ್ಟೇ ಅಲ್ಲ ಮಾತನಾಡುಲು ಕೂಡ ಶುರುಮಾಡಿದ್ದಾಳೆ ಹಿತಾ. ಇದೀಗ ಅಪ್ಪ ಮಗಳನ್ನ ಒಂದು ಮಾಡ್ತೀನಿ ಅಂತ ಶರತ್‌ ಗೆ ಮಾತು ಕೊಟ್ಟಿದ್ದಾಳೆ. ಆದ್ರೆ ಶರತ್‌ ಹತ್ರ ಯಾರಾದ್ರೂ ಮಾತನಾಡಿದ್ರೂ ಮಾಯಗೆ ತಡ್ಕೊಳ್ಲಿಕ್ಕೆ ಆಗಲ್ಲ.. ತನ್ನ ದಾರಿಗೆ ದುರ್ಗಾ ಅಡ್ಡ ಆಗ್ತಾಳೆ.. ಹಿತಾಗೆ ಕಾವಲಾಗಿದ್ದಾಳೆ ಅಂತಾ ಈಗ ದುರ್ಗಾಳನ್ನ ಮನೆಯಿಂದ ಆಚೆ ಹಾಕೋ ಪ್ಲ್ಯಾನ್‌ ಮಾಡಿದ್ದಾಳೆ. ಹೀಗಾಗೇ ದುರ್ಗಾ ಚಿಕ್ಕಮ್ಮ ಜೊತೆ ಸೇರ್ಕೊಂದು ಮದುವೆ ಪ್ಲ್ಯಾನ್ ಮಾಡಿದ್ದಾಳೆ. ದುಡ್ಡಿನ ಆಸೆಗಾಗಿ ದುರ್ಗಾಳ ಚಿಕ್ಕಮ್ಮ ಮದುವೆಯನ್ನ ಆತುರದಿಂದ ಮಾಡಿಸ್ತಿದ್ದಾಳೆ. ಆದ್ರೀಗ ಶರತ್‌ ಗೆ ಸಿದ್ಧಾಂತ್‌ ಒಳ್ಳೆಯವನಲ್ಲ ಅನ್ನೋದು ಗೊತ್ತಾಗಿದೆ. ಇದೀಗ ದುರ್ಗಾ ಮದುವೆ ನಿಲ್ಲಿಸಲು ಅಪ್ಪ ಮಗಳು ಒಂದಾಗಿದ್ದಾರೆ. ಇದೀಗ ಸೀರಿಯಲ್‌ ಸ್ಟೋರಿಗೆ ಬಿಗ್ ಟ್ವಿಸ್ಟ್‌ ಸಿಕ್ಕಿದೆ.

ಸಿದ್ಧಾಂತ್‌ ಇನ್ನೊಂದು ಮುಖ ಅಂಬಿಕಾಗೆ ಗೊತ್ತಾಗಿತ್ತು. ಆದ್ರೆ ದುರ್ಗಾ ಕೈಗೆ ಕಂಕಣ ಕಟ್ಟಿದ್ರಿಂದ ಅಂಬಿಕಾಗೆ ಹೇಳಲು ಸಾಧ್ಯ ಆಗ್ತಿರ್ಲಿಲ್ಲ..‌ ಇದೀಗ ಹಿತಾ ಮುಂದೆ ಸಿದ್ಧಾಂತ್‌ ಬಣ್ಣ ಬಯಲಾಗಿದೆ. ಆತ ಕಾಲ್‌ನಲ್ಲಿ ಮಾತಾಡ್ತಿರುವಾಗ ಹಿತಾ ಮೊಬೈಲ್‌ನಲ್ಲಿ ವಿಡಿಯೋ ರೆಕಾರ್ಡ್‌ ಮಾಡಿದ್ದಾಳೆ. ಇದನ್ನ ಶರತ್‌ ಗೆ ಹೇಳುವಷ್ಟರಲ್ಲಿ ಸಿದ್ಧಾಂತ್‌ ಫೋನ್‌ ಎಸೆದಿದ್ದಾನೆ. ಇದೀಗ ಸಿದ್ಧಾಂತ್‌ ಒಳ್ಳೆಯವನಲ್ಲ ಅನ್ನೋದು ಶರತ್‌ ಗೂ ಗೊತ್ತಾಗಿದೆ. ಈ ವಿಚಾರವನ್ನ ದುರ್ಗಾಗೆ ಹೇಳಿದ್ರೆ ಆಕೆ ಈ ಮದುವೆ ಆಗ್ತೀನಿ ಅಂತ ಕಡಾ ಖಂಡಿತಾವಾಗಿ ಹೇಳಿದ್ದಾಳೆ. ಯಾಕಂದ್ರೆ ದುರ್ಗಾ ಈ ಮದುವೆ ಆಗ್ತೀನಿ ಅಂತ ಮಾತು ಕೊಟ್ಟಿದ್ಲು.. ಹೀಗಾಗಿ ಚಿಕ್ಕಮ್ಮನ ಮಾತು ಮುರಿಯಲ್ಲ ಅಂತ ಹೇಳಿದ್ದಾಳೆ. ಆದ್ರೀಗ ಹಸೆಮಣೆಯಲ್ಲಿ ಸಿದ್ಧಾಂತ್‌ ಬದಲು ಶರತ್‌ ಕುಳಿತಿದ್ದಾನೆ. ಯಾರಿಗೂ ಡೌಟ್‌ ಬರ್ಬಾರ್ದು ಅಂತಾ ಮಾಸ್ಕ್‌ ಹಾಕಿಕೊಂಡು ಬಂದಿದ್ದಾನೆ. ಇದೀಗ ಶರತ್‌ ದುರ್ಗಾಗೆ ತಾಳಿ ಕಟ್ಟಲು ಮುಂದಾಗಿದ್ದಾನೆ..

ಹೌದು.. ದುರ್ಗಾ ಹಸೆಮಣೆಯಲ್ಲು ಕುಳಿತಿದ್ದಾಳೆ. ಶರತ್‌ ಮಾಸ್ಕ್‌ ಹಾಕಿಕೊಂಡು ಬಂದು ಕೂತಿದ್ದಾನೆ. ಅದೇ ವೇಳೆ ಅಂಬಿಕಾ ತಾಯಿ ಈ ಮದುವೆಯನ್ನ ನಿಲ್ಲಿಸಲು ನೀನೇ ಏನಾದ್ರೂ ಪವಾಡ ಮಾಡು ಅಂತ ಹೇಳಿದ್ದಾಳೆ. ಅಷ್ಟೊತ್ತಿಗೆ ಶರತ್‌ ಮುಖಕ್ಕೆ ಹಾಕಿರೋ ಮಾಸ್ಕ್‌ ತೆಗೆದಿದ್ದಾನೆ. ಬಳಿಕ ಶರತ್‌ ದುರ್ಗಾಗೆ ತಾಳಿ ಕಟ್ಟಲು ಮುಂದಾಗಿದ್ದಾನೆ.. ಹಾಗಾದ್ರೆ ಶರತ್‌ ದುರ್ಗಾಳನ್ನ ಮದುವೆ ಆಗ್ತಾನಾ? ಮಾಯ ಕತೆ ಏನು? ಅನ್ನೋ ಕ್ಯೂರಿಯಾಸಿಟಿ ವೀಕ್ಷಕರಲ್ಲಿ ಮೂಡಿದೆ. ಇದೀಗ ಶರತ್‌ ದುರ್ಗಾಳನ್ನ ಮದುವೆ ಆದ್ರೆ, ಹಿತಾ ಖುಷಿಯಿಂದ ಇರ್ತಾಳೆ.. ಈ ಮದುವೆಯಿಂದ ಅಪ್ಪ ಮಗಳು ಒಂದಾಗ್ಬೋದು.. ಒಟ್ಟಿನಲ್ಲಿ ಮುಂಬರುವ ಎಪಿಸೋಡ್‌ ಸಾಕಷ್ಟು ಟ್ವಿಸ್ಟ್‌ನಿಂದ ಕೂಡಿರಲಿದೆ.

Shwetha M