BJP ಸಂಸದ ಶ್ರೀನಿವಾಸ್ ಪ್ರಸಾದ್ ಸೋದರ ಸೇರಿ 30 ಮುಖಂಡರು ಕಾಂಗ್ರೆಸ್ ಸೇರ್ಪಡೆ

BJP ಸಂಸದ ಶ್ರೀನಿವಾಸ್ ಪ್ರಸಾದ್ ಸೋದರ ಸೇರಿ 30 ಮುಖಂಡರು ಕಾಂಗ್ರೆಸ್ ಸೇರ್ಪಡೆ

ಲೋಕಸಭೆ ಚುನಾವಣೆಗೆ ಕ್ಷಣಗಣನೆ ಆರಂಭವಾಗಿದೆ. ಚುನಾವಣೆಯ ಅಸಲಿ ಯುದ್ಧ ಈಗ ಶುರುವಾಗಿದೆ. ಒಂದ್ಕಡೆ ನಾಮಪತ್ರ ಭರಾಟೆ ಜೋರಾಗಿದ್ರೆ, ಮತ್ತೊಂದ್ಕೆಡೆ, ಪ್ರಚಾರ, ಮಾತಿನ ಯುದ್ಧ, ಆಪರೇಷನ್ ಹಸ್ತ ನಡೆಯುತ್ತಿದೆ. ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಯಲ್ಲಿ ಆಪರೇಷನ್ ಹಸ್ತದ ಭರಾಟೆ ಜೋರಾಗಿದೆ. ಬಿಜೆಪಿ ಸಂಸದ ಶ್ರೀನಿವಾಸ್ ಪ್ರಸಾದ್ ಸೋದರ ವಿ.ರಾಮಸ್ವಾಮಿ ಅವರಿಗೆ ಕಾಂಗ್ರೆಸ್ ಗಾಳ ಹಾಕಿದ್ದು ಮಂಗಳವಾರ ​​​​​ರಾಮಸ್ವಾಮಿ ಸೇರಿ 30 ಮುಖಂಡರು BJP ತೊರೆದು ಕಾಂಗ್ರೆಸ್ ಸೇರಲಿದ್ದಾರೆ.

ಇದನ್ನೂ ಓದಿ: ಹಾರ್ದಿಕ್ ಪಡೆಗೆ ಮುಂಬೈನಲ್ಲೂ ಮುಖಭಂಗ – ಮುಂಬೈ ಇಂಡಿಯನ್ಸ್​ಗೆ ಸತತ 3ನೇ ಸೋಲು

ಮೈಸೂರು ಕ್ಷೇತ್ರವನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿರೋ ಸಿಎಂ ಸಿದ್ದರಾಮಯ್ಯ, ಮೂರು ದಿನ ಠಿಕಾಣಿ ಹೂಡಿ, ಆಪರೇಷನ್ ಅಸ್ತ್ರ ಹೂಡಿದ್ದಾರೆ. ಮೈಸೂರು ಜಿಲ್ಲೆಯಲ್ಲಿ ಸಿಎಂ ಸಿದ್ದರಾಮಯ್ಯ ಪ್ರವಾಸ ಮುಂದುವರೆದಿದೆ. ಮೈಸೂರು-ಕೊಡಗು, ಚಾಮರಾಜನಗರ ಕ್ಷೇತ್ರದ ಮೇಲೆ ಕಣ್ಣಿಟ್ಟಿರುವ ಸಿಎಂ ಭಾರಿ ಕಸರತ್ತು ನಡೆಸುತ್ತಿದ್ದಾರೆ. ನಾನಾ ಕಡೆಗಳಿಗೆ ಭೇಟಿ ನೀಡಿ ಸಭೆ ಹಾಗೂ ಚುನಾವಣಾ ಪ್ರಚಾರ ಕೈಗೊಳ್ಳುತ್ತಿದ್ದಾರೆ. ಮಂಗಳವಾರ ಮಧ್ಯಾಹ್ನ 3 ಗಂಟೆಗೆ ಸಿಎಂ ಸಿದ್ದರಾಮಯ್ಯ ಸಮ್ಮುಖದಲ್ಲಿ 30 ಜನ ಕಾಂಗ್ರೆಸ್​ ಸೇರ್ಪಡೆಯಾಗಲಿದ್ದಾರೆ. ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ಸೋದರ ವಿ.ರಾಮಸ್ವಾಮಿ, ಪುತ್ರ ಭರತ್​​​​​ ರಾಮಸ್ವಾಮಿ ಸೇರಿ 30 ಮುಖಂಡರು ಕಾಂಗ್ರೆಸ್ ಸೇರಲಿದ್ದಾರೆ.

ಸಿಎಂ ಸಿದ್ದರಾಮಯ್ಯನವರು ಮಂಗಳವಾರ ಮೈಸೂರಿನ ಚಾಮರಾಜ ಹಾಗೂ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಭೆ ನಡೆಸಲಿದ್ದಾರೆ. ಚಾಮರಾಜ ವಿಧಾನಸಭ ಕ್ಷೇತ್ರ ವ್ಯಾಪ್ತಿಯಲ್ಲಿ ಬಹಿರಂಗ ಪ್ರಚಾರ ಸಭೆಯಲ್ಲಿ ಭಾಗಿಯಾಗಿ ನಂತರ ಪಕ್ಷ ಸೇರ್ಪಡೆ ಕಾರ್ಯಕ್ರಮ ನಡೆಯಲಿದೆ. ಇನ್ನು ಮತ್ತೊಂದೆಡೆ ಚಾಮುಂಡೇಶ್ವರಿ ಕ್ಷೇತ್ರದ ಮುಖಂಡರ ಸಭೆ ನಡೆಸಲಿದ್ದಾರೆ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಲೀಡ್ ಕೊಡಲೇಬೇಕು ಎಂದು ಈಗಾಗಲೇ ಸಿಎಂ ಮುಖಂಡರಿಗೆ ಸೂಚನೆ ನೀಡಿದ್ದಾರೆ. ಇದೀಗಾ ಕ್ಷೇತ್ರ ಪ್ರತಿಯೊಬ್ಬ ಮುಖಂಡರ ಜೊತೆ ಸಭೆ ನಡೆಸಿ ಮತಗಳಿಕೆಗೆ ಪ್ಲಾನ್ ಮಾಡಿದ್ದಾರೆ. ಕ್ಷೇತ್ರದಲ್ಲಿ ಜೆಡಿಎಸ್ ಬಿಜೆಪಿ ಮುಖಂಡರು ಕಾಂಗ್ರೆಸ್ ಸೇರ್ಪಡೆ ಬಗ್ಗೆಯು ಚರ್ಚೆ ನಡೆಯಲಿದೆ. ಮುಖಂಡರುಗಳ ಸೇರ್ಪಡೆಯಿಂದ ಅನುಕೂಲ ಅನಾನುಕೂಲ ಬಗ್ಗೆಯು ಚರ್ಚೆ ನಡೆಯಲಿದೆ.

ಇನ್ನು ಚಾಮರಾಜನಗರ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರೋ ವರುಣದಲ್ಲಿ ಸಿಎಂ ಅಬ್ಬರದ ಪ್ರಚಾರ ಮಾಡಿದ್ರು. ಸಚಿವ ಹೆಚ್‌.ಸಿ ಮಹದೇವಪ್ಪ ಪುತ್ರ ಸುನಿಲ್‌ ಬೋಸ್ ಪರ ಮತ ಮತಯಾಚಿಸಿದ ಸಿಎಂ, ವರುಣದಿಂದ ಕಾಂಗ್ರೆಸ್ ಅಭ್ಯರ್ಥಿಗೆ 60 ಸಾವಿರ ಲೀಡ್ ಕೊಡಿ. ನೀವು ಒಳ್ಳೆ ಲೀಡ್ ಕೊಟ್ರೆ ನನಗೆ ಸಂತೋಷ ವಾಗುತ್ತೆ. ನನ್ನ ಯಾರೂ ಮುಟ್ಟೋಕೆ ಆಗಲ್ಲ ಎಂದಿದ್ದಾರೆ. ಅಷ್ಟೇ ಅಲ್ಲ, ನಾನು ಇರ್ಬೇಕೋ ಬೇಡ್ವೋ ಅನ್ನೋ ಪ್ರಶ್ನೆಯನ್ನ ಜನರ ಮುಂದಿಟ್ಟಿದ್ದಾರೆ.

Shwetha M