ನಾಡಹಬ್ಬ ಮೈಸೂರು ದಸರಾಕ್ಕೆ ಅದ್ಧೂರಿ ಚಾಲನೆ- ಉದ್ಘಾಟನೆ ಮಾಡಿದ ಹಂ.ಪಾ. ನಾಗರಾಜಯ್ಯ
ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಭಾಗಿ

ನಾಡಹಬ್ಬ ಮೈಸೂರು ದಸರಾಕ್ಕೆ ಅದ್ಧೂರಿ ಚಾಲನೆ-  ಉದ್ಘಾಟನೆ ಮಾಡಿದ ಹಂ.ಪಾ. ನಾಗರಾಜಯ್ಯಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಭಾಗಿ

ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ-2024 ಕ್ಕೆ ಚಾಮುಂಡಿ ಬೆಟ್ಟದಲ್ಲಿ ವಿದ್ಯುಕ್ತವಾಗಿ ಚಾಲನೆ ನೀಡಲಾಯಿತು. ನಗರದ ಚಾಮುಂಡಿ ಬೆಟ್ಟದಲ್ಲಿ ಹಾಕಲಾಗಿರುವ ಬೃಹತ್ ವೇದಿಕೆಯಲ್ಲಿ ಬೆಳಗ್ಗೆ 9.15  ರಿಂದ 9.45 ರೊಳಗೆ ಸಲ್ಲುವ ಶುಭ ವೃಶ್ಚಿಕ ಲಗ್ನದಲ್ಲಿ ಶ್ರೀಚಾಮುಂಡೇಶ್ವರಿ ಉತ್ಸವ ಮೂರ್ತಿಗೆ ನಾಡೋಜ, ಹಿರಿಯ ಸಾಹಿತಿ ಹಂ.ಪ ನಾಗರಾಜಯ್ಯ ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಿದ್ರು.

ಇದನ್ನೂ ಓದಿ: ಸಿಎಂ ಪಟ್ಟಕ್ಕೆ ಸಂಚಕಾರ – ಹೆಗಡೆ TO ಬಿಎಸ್ ವೈ

ಇದಕ್ಕೂ ಮೊದಲು ದಟ್ಟ ಮಂಜು ಕವಿದ ವಾತಾವರಣದಲ್ಲಿ ನಾಡೋಜ ಹಂ.ಪ.ನಾಗರಾಜಯ್ಯರಿಗೆ ಪೂರ್ಣ ಕುಂಭ ಸ್ವಾಗತ ನೀಡಲಾಯಿತು. ಡೊಳ್ಳು, ವಾದ್ಯ ಸೇರಿದಂತೆ ಕಲಾ ಮೇಳಗಳೊಂದಿಗೆ ಬರಮಾಡಿಕೊಳ್ಳಲಾಯಿತು ಮಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಸಚಿವ ಸಂಪುಟದ ಸಹೋದ್ಯೋಗಿಗಳು ಮೈಸೂರಿನಿಂದ ಕೆಎಸ್‌ಆರ್‌ಟಿಸಿ ಐರಾವತ ಬಸ್ ನಲ್ಲಿ ಆಗಮಿಸಿದರು. ಈ ವೇಳೆ ಸಿಎಂ ಸೇರಿ ಸಚಿವ ಸಂಪುಟ ತಂಡಕ್ಕೆ ಅದ್ಧೂರಿ ಸ್ವಾಗತ ನೀಡಿದ್ರು.

ನಾಡಹಬ್ಬಕ್ಕೆ ಚಾಲನೆ ನೀಡಿ ಮಾತನಾಡಿದ ಹಿರಿಯ ಸಾಹಿತಿ ಹಂಪನಾ ದಸರಾ ಕನ್ನಡದ ಹಬ್ಬ, ಕನ್ನಡಿಗರ ಉತ್ಸವ. ದಸರಾಗೆ ತನ್ನದೇ ಆದ ಪ್ರಭಾವಳಿ, ಪರಂಪರೆ ಇದೆ. ಇದರ ಕೀರ್ತಿ ಎಲ್ಲೆಡೆ ಪಸರಿಸಿದೆ. ಇಂತಹ ವೈಭವದ ಉತ್ಸವಕ್ಕೆ ಚಾಲನೆ ನೀಡಿರುವುದು ಸಂತಸ ತಂದಿದೆ ಎಂದು ತಿಳಿಸಿದ್ರು.

ಚಾಮುಂಡಿ ಬೆಟ್ಟದಲ್ಲಿ ಮುಂದಿನ 9 ದಿನಗಳ ವಿವಿಧ ಪೂಜಾ ಕಾರ್ಯಗಳು ಜರುಗಲಿವೆ. ನಿತ್ಯ ಸಂಜೆ 4.30ರಿಂದ 5.30ರವರೆಗೆ ಮಹಾಬಲೇಶ್ವರ ದೇವಾಲಯ ಮುಂಭಾಗದ ದರ್ಬಾರ್ ಮಂಟಪದಲ್ಲಿ ಚಾಮುಂಡೇಶ್ವರಿ ದೇವಿಗೆ ದರ್ಬಾರ್ ಉತ್ಸವ ಮಾಡಲಾಗುತ್ತದೆ. ಮೈಸೂರು ವೃತ್ತ, ದೇವಸ್ಥಾನ, ಅರಮನೆ ದೀಪಾಲಂಕಾರಗಳಿಂದ ಕಂಗೊಳಿಸುತ್ತಿದೆ. ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ. ಸಂಚಾರಿ ಪೊಲೀಸರು ಅಗತ್ಯ ಸಿದ್ಧತೆ ಕೈಗೊಂಡಿದ್ದಾರೆ.

Kishor KV