ಅಭಿಮನ್ಯು ಶಾಂತ.. ಭೀಮ ತಿಂಡಿಪೋತ – ಸರ್ಕಸ್ ಸಂಕಟ ತಪ್ಪಿಸಿ ಈಗ ರಾಜಾತಿಥ್ಯ
ದಸರೆಯ 14 ಆನೆಗಳ ರೋಚಕ ಕಥೆ

ಅಭಿಮನ್ಯು ಶಾಂತ.. ಭೀಮ ತಿಂಡಿಪೋತ – ಸರ್ಕಸ್ ಸಂಕಟ ತಪ್ಪಿಸಿ ಈಗ ರಾಜಾತಿಥ್ಯದಸರೆಯ 14 ಆನೆಗಳ ರೋಚಕ ಕಥೆ

ದಸರಾ ಆನೆಗಳು ಅಂದ್ರೇನೆ ನಾಡಹಬ್ಬದ ಅವಿಭಾಗ್ಯ ಅಂಗ. ವಿಜಯದಶಮಿಯಂದು ಅಭಿಮನ್ಯು ಮೇಲೆ ಚಿನ್ನದ ಅಂಬಾರಿಯಲ್ಲಿ ಚಾಮುಂಡೇಶ್ವರಿ ತಾಯಿಯನ್ನು ಹೊತ್ತು ಸಾಗುವ ದೃಶ್ಯಕ್ಕಾಗಿ ಕೋಟ್ಯಂತರ ಜನ ಕಾಯ್ತಾ ಇರ್ತಾರೆ. ಕಂಪ್ಲೀಟ್ ಚಿನ್ನದಿಂದ ಮಾಡಿದ 750 ಕೆಜಿ ತೂಕದ ಅಂಬಾರಿಯಲ್ಲಿ ಅಧಿದೇವತೆ ಚಾಮುಂಡೇಶ್ವರಿ ಸಾಗುವ ಕ್ಷಣವನ್ನ ಕಣ್ತುಂಬಿಕೊಳ್ಳೋದೆ ಮಹದಾನಂದ. ಈ ದೇವಲೋಕದ ವೈಭವಕ್ಕೆ ಕಳಶಪ್ರಾಯದಂತೆ ಇರೋದೇ ಗಜಪಡೆ. ಸದ್ಯ ಸಿಡಿಮದ್ದು ಸದ್ದು, ಅಂಬಾರಿ ಸಾಗುವ ದಾರಿ ಸೇರಿದಂತೆ ಸವಾರಿಗೆ ಸಿದ್ಧವಾಗಲು ಭರ್ಜರಿ ತಾಲೀಮು ನಡೀತಿದೆ. ಒಟ್ಟು 14 ಆನೆಗಳು ಈ ತಾಲೀಮಿನಲ್ಲಿ ಭಾಗಿಯಾಗ್ತಿವೆ. ಕ್ಯಾಪ್ಟನ್​ ಅಭಿಮನ್ಯು ಸೇರಿದಂತೆ ಗಜಪಡೆಯಲ್ಲಿ 10 ಗಂಡಾನೆ ಹಾಗೂ 4 ಹೆಣ್ಣಾನೆಗಳಿವೆ.

ದಸರಾ ಗಜಪಡೆ ದರ್ಬಾರ್!

ಹೆಸರು                         ವಯಸ್ಸು                      ತೂಕ              ಶಿಬಿರ

ಅಭಿಮನ್ಯು                       59                         5,360            ಮತ್ತಿಗೋಡು

ಧನಂಜಯ                      45                          5,310             ದುಬಾರೆ

ಭೀಮ                           25                          5,465           ಮತ್ತಿಗೋಡು

ಕಂಜನ್                         26                           4,880            ದುಬಾರೆ

ಏಕಲವ್ಯ                         40                            5,305          ದೊಡ್ಡಹರವೆ

ಪ್ರಶಾಂತ                       53                             5,110            ದುಬಾರೆ

ಮಹೇಂದ್ರ                     42                              5,120             ಬಳ್ಳೆ

ಗೋಪಿ                        42                              4,990             ದುಬಾರೆ

ಸುಗ್ರೀವ                      43                               5,545            ದುಬಾರೆ

ಶ್ರೀಕಂಠ                      56                               5,540            ಮತ್ತಿಗೋಡು

ಲಕ್ಷ್ಮೀ                       54                               3,730             ಬಳ್ಳೆ

ಕಾವೇರಿ                      45                               3,010           ದುಬಾರೆ

ರೂಪಾಗೆ                     44                               3,320             ಶಿಬಿರ

ಹೇಮಾವತಿ                  11                               2,440           ದುಬಾರೆ

ಹೀಗೆ 14 ಆನೆಗಳಲ್ಲಿ ಕೆಲ ಆನೆಗಳು ಸುಮಾರು ವರ್ಷಗಳಿಂದ ದಸರೆಯಲ್ಲಿ ಭಾಗಿಯಾಗ್ತಿದ್ರೆ ಇನ್ನೂ ಕೆಲವ್ರು ಇದೇ ಮೊದಲ ಬಾರಿಗೆ ದಸರೆಗೆ ಕಾಲಿಟ್ಟಿವೆ. ಹಾಗೇ ಭರ್ಜರಿ ರಾಜಾತಿಥ್ಯ ಸವಿಯುತ್ತಿವೆ. ದಸರಾದ ಪ್ರಮುಖ ಆಕರ್ಷಣೆಯಾಗಿರುವ ಗಜಪಡೆಯಿಂದ ಮೈಸೂರಿನಲ್ಲಿ ಗತವೈಭವ ಪ್ರತೀ ವರ್ಷ ಮರುಕಳಿಸಲಿದೆ. 750 ಕೆಜಿ ತೂಕದ ಚಿನ್ನದ ಅಂಬಾರಿಯನ್ನು ವಿಜಯದಶಮಿ ದಿವಸ ಮೈಸೂರು ಮಲ್ಲಿಗೆಯಿಂದ ವಿಶೇಷ ಅಲಂಕಾರ ಮಾಡಿ ಪೊಲೀಸ್ ಬಂದೋಬಸ್ತ್​ನಲ್ಲಿ ಮೆರವಣಿಗೆ ಮಾಡಲಾಗುತ್ತೆ. ರೇಷ್ಮೆ ಸೀರೆಯಿಂದ ಅಲಂಕೃತಗೊಂಡ ಚಾಮುಂಡಿ ತಾಯಿಯ ವಿಗ್ರಹವನ್ನು ಚಿನ್ನದ ಅಂಬಾರಿಯೊಳಗೆ ಕೂರಿಸಿ ಪುಷ್ಪಾರ್ಚನೆ ಮಾಡುವ ಮೂಲಕ ಜಂಬೂಸವಾರಿಗೆ ಚಾಲನೆ ನೀಡಲಾಗುತ್ತೆ.. ಚಿನ್ನದ ಅಂಬಾರಿ ಹೊತ್ತ ಆನೆ 5 ಕಿಲೋಮೀಟರ್ ವರೆಗಿನ ಬನ್ನಿ ಮಂಟಪದವರೆಗೆ ಸಾಗಿದ ನಂತರ ಜಂಬೂಸವಾರಿ ಕೊನೆಗೊಳ್ಳುತ್ತದೆ. ಈ ಚಿನ್ನದ ಅಂಬಾರಿ ಈಗಲೂ ರಾಜ ಒಡೆಯರ್​ರವರ ಒಡೆತನದಲ್ಲಿದೆ.

Shantha Kumari