ಗಜಪಡೆ ಸ್ವಾಗತಕ್ಕೆ ಸಿದ್ಧವಾಗುತ್ತಿದೆ ಆರಮನೆ ನಗರಿ – ಜಂಬೂಸವಾರಿಗೆ ಮಿಸ್ ಆಗಲಿವೆ ಈ ಎರಡು ಆನೆಗಳು!

ಗಜಪಡೆ ಸ್ವಾಗತಕ್ಕೆ ಸಿದ್ಧವಾಗುತ್ತಿದೆ ಆರಮನೆ ನಗರಿ – ಜಂಬೂಸವಾರಿಗೆ ಮಿಸ್ ಆಗಲಿವೆ ಈ ಎರಡು ಆನೆಗಳು!

ವಿಶ್ವವಿಖ್ಯಾತ ಮೈಸೂರು ದಸರಾಗೆ ದಿನಗಣನೆ ಆರಂಭವಾಗಿದೆ. ಈಗಾಗಲೇ ಸಕಲ ಸಿದ್ದತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಮೈಸೂರು ದಸರಾದ ಪ್ರಮುಖ ಆಕರ್ಷಣೆ ಜಂಬೂಸವಾರಿ. ಈ ಬಾರಿಯ ದಸರಾದಲ್ಲಿ ಭಾಗವಹಿಸುವ ಆನೆಗಳ ಆಯ್ಕೆ ಪ್ರಕ್ರಿಯೆ ಬಹುತೇಕ ಪೂರ್ಣಗೊಂಡಿದ್ದು, ದಸರಾ ಗಜಪಡೆ ಸ್ವಾಗತಕ್ಕೆ ಮೈಸೂರು ಅರಮನೆ ಸಜ್ಜಾಗುತ್ತಿದೆ.

ದಸರಾ ಗಜಪಡೆ ಮೈಸೂರು ಆಗಮನಕ್ಕೆ ಕೇವಲ 10 ದಿನ ಮಾತ್ರ ಬಾಕಿ ಇದೆ. ಆದರೆ ಈ ಬಾರಿ ಎರಡು ಆನೆಗಳು ಜಂಬೂ ಸವಾರಿಯಲ್ಲಿ ಭಾಗವಹಿಸುತ್ತಿಲ್ಲ. ಚೈತ್ರಾ ಹಾಗೂ ವಿಕ್ರಮ ಆನೆಗಳು ಈ ಬಾರಿಯ ದಸರಾ ಜಂಬೂಸವಾರಿಗೆ ಮಿಸ್ ಆಗಲಿದ್ದಾರೆ. ಚೈತ್ರಾ ಗರ್ಭಿಣಿ, ವಿಕ್ರಮ ಆನೆಗೆ ಮದ ಹಿನ್ನೆಲೆ ಜಂಬೂಸವಾರಿಗೆ ಮಿಸ್ ಆಗಲಿದ್ದಾರೆ.

ಇದನ್ನೂ ಓದಿ: ಮೈಸೂರು ದಸರಾದಲ್ಲಿ ಭಾಗವಹಿಸುವ ಆನೆಗಳಿಗೆ ಪ್ರೆಗ್ನೆನ್ಸಿ ಟೆಸ್ಟ್ ಕಡ್ಡಾಯ!

ದಸರಾಗೆ ಆಗಮಿಸುವ ಆನೆಗಳಿಗೆ ಪ್ರಗ್ನೆನ್ಸಿ ಪರೀಕ್ಷೆ ನಡೆಸಿದ್ದು ಚೈತ್ರಾ ಆನೆ ಗರ್ಭಿಣಿಯಾಗಿದೆ. ಹೀಗಾಗಿ ಹತ್ತು ಬಾರಿ ಜಂಬೂಸವಾರಿಯಲ್ಲಿ ಭಾಗವಹಿಸಿದ್ದ  ಚೈತ್ರಾ ಆನೆ ಬಂಡೀಪುರದ ರಾಂಪುರ ಕ್ಯಾಂಪ್‌ನಲ್ಲಿದೆ. 59 ವರ್ಷದ ವಿಕ್ರಮ ಆನೆ 19 ಬಾರಿ ದಸರೆಯಲ್ಲಿ ಭಾಗಿಯಾಗಿದೆ.

ಚೈತ್ರಾ ಆನೆ ಇದುವರೆಗೂ 13 ಮರಿಗಳಿಗೆ ಜನ್ಮ ನೀಡಿದೆ. ಕಳೆದ ಬಾರಿ ಗರ್ಭಿಣಿ ಆನೆ ಲಕ್ಷ್ಮೀಯನ್ನು ಗೊತ್ತಿಲ್ಲದೆ ಕರೆ ತರಲಾಗಿತ್ತು. ದಸರಾ ವೇಳೆ ಮೈಸೂರು ಅರಮನೆಯಲ್ಲೇ ಲಕ್ಷ್ಮೀ ಆನೆ ಮರಿಗೆ ಜನ್ಮ ನೀಡಿತ್ತು.

ಇನ್ನು ಸೆಪ್ಟೆಂಬರ್ 1 ರಂದು ಗಜಪಯಣದ ಮೂಲಕ ಅಭಿಮನ್ಯು ನೇತೃತ್ವದ ಗಜಪಡೆ ಮೈಸೂರಿಗೆ ಆಗಮಿಸಲಿದೆ. ಸೆ.4ರಂದು ಮೈಸೂರು ಅರಮನೆ ಆವರಣ ಪ್ರವೇಶಿಸಲಿರುವ ಗಜಪಡೆ ವಾಸ್ತವ್ಯಕ್ಕಾಗಿ ತಾತ್ಕಾಲಿಕ ಶೆಡ್ ಗಳ ನಿರ್ಮಾಣ ಕಾರ್ಯ ಆರಂಭವಾಗಿದೆ.

ಮಾವುತರು ಕಾವಾಡಿಗಳ ಕುಟುಂಬಕ್ಕೂ ತಾತ್ಕಾಲಿಕ ಶೆಡ್ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ. ಮೊದಲ ತಂಡದಲ್ಲಿ ಮೈಸೂರಿಗೆ 9 ಆನೆಗಳು ಆಗಮಿಸಲಿವೆ. ಆನೆಗಳ ಜೊತೆಗೆ ಮಾವುತರು, ಕಾವಾಡಿಗಳು ಕೂಡ ಬರಲಿದ್ದಾರೆ.

suddiyaana