ಲೋಕಸಭೆ ಚುನಾವಣಾ ಫಲಿತಾಂಶಕ್ಕೂ ಮುನ್ನ ಸಂಸದರಾದ ಕಾಂಗ್ರೆಸ್ ಅಭ್ಯರ್ಥಿ! – ಆಹ್ವಾನ ಪತ್ರಿಕೆಯಲ್ಲಿ ಇದೆಂಥಾ ಎಡವಟ್ಟು?

ಲೋಕಸಭೆ ಚುನಾವಣಾ ಫಲಿತಾಂಶಕ್ಕೂ ಮುನ್ನ ಸಂಸದರಾದ ಕಾಂಗ್ರೆಸ್ ಅಭ್ಯರ್ಥಿ! – ಆಹ್ವಾನ ಪತ್ರಿಕೆಯಲ್ಲಿ ಇದೆಂಥಾ ಎಡವಟ್ಟು?

ರಾಜ್ಯದಲ್ಲಿ ಲೋಕಸಭೆ ಚುನಾವಣೆ ಮುಗಿದಿದೆ. ಅಭ್ಯರ್ಥಿಗಳ ಭವಿಷ್ಯ ಇವಿಎಂ ನಲ್ಲಿ ಭದ್ರವಾಗಿದೆ. ಜೂ. 4 ರಂದು ಫಲಿತಾಂಶ ಪ್ರಕಟವಾಗಲಿದೆ. ಆದ್ರೆ ಫಲಿತಾಂಶ ಬರುವುದಕ್ಕೂ ಮುನ್ನವೇ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಂ. ಲಕ್ಷ್ಮಣ  ಅವರನ್ನು ಸಂಸದರನ್ನಾಗಿ ಮಾಡಲಾಗಿದೆ!

ಇದನ್ನೂ ಓದಿ: ನಾನೇ ಪ್ರೊಡ್ಯೂಸರ್‌.. ನಾನೇ ಡೈರೆಕ್ಟರ್‌.. ನಾನೇ ಕಥಾನಾಯಕ! -ಹೆಚ್‌ಡಿಕೆ ಹೀಗಂದಿದ್ಯಾಕೆ?  

ಹೌದು, ಕಳೆದ ಏಪ್ರಿಲ್ 26ರಂದು ಮೊದಲ ಹಂತದಲ್ಲಿ ಚುನಾವಣೆ ನಡೆದಿದೆ. ಅಭ್ಯರ್ಥಿಗಳು ರಿಸಲ್ಟ್‌ಗಾಗಿ ಕಾಯುತ್ತಿದ್ದಾರೆ. ಆದ್ರೆ ಫಲಿತಾಂಶಕ್ಕೂ ಮುನ್ನ ಕಾಂಗ್ರೆಸ್​ನಿಂದ ಸ್ಪರ್ಧೆ ಮಾಡಿದ್ದ ಲಕ್ಷ್ಮಣ ಅವರನ್ನು ಬೀಗರ ಊಟದ ಆಹ್ವಾನ ಪತ್ರಿಕೆಯಲ್ಲಿ   ಸಂಸದರು ಎಂದು ನಮೂದಿಸಲಾಗಿದ್ದು, ಇದೀಗ ಈ ಆಹ್ವಾನ ಪತ್ರಿಕೆ ವೈರಲ್ ಆಗಿದೆ.

ಮೈಸೂರು ಮಹಾನಗರ ಪಾಲಿಕೆ ಗುತ್ತಿಗೆದಾರ ಮಗಳ ಮದುವೆ ಬೀಗರ ಔತಣ ಆಹ್ವಾನ ಪತ್ರಿಕೆಯಲ್ಲಿ ಲಕ್ಣ್ಮಣ್ ಅವರನ್ನು ಮೈಸೂರು ಕೊಡಗು ಸಂಸದ ಎಂದು ನಮೂದಿಸಲಾಗಿದೆ. ದಿನಾಂಕ 12/05/2024ರಂದು ಬೀಗರ ಔತಣ ಕೂಟ ಇದ್ದು, ಸಿಎಂ ಸಿದ್ದರಾಮಯ್ಯ ಡಿಸಿಎಂ ಡಿ ಕೆ ಶಿವಕುಮಾರ್, ಮಾಜಿ ಶಾಸಕ ಡಾ ಯತೀಂದ್ರ ಸಿದ್ದರಾಮಯ್ಯ ಸೇರಿ ಹಲವರ ಹೆಸರು ಆಹ್ವಾನ ಪತ್ರಿಕೆಯಲ್ಲಿ ನಮೂದಿಸಲಾಗಿದೆ. ಅದರಂತೆ ಲಕ್ಷ್ಮಣ್ ಲೋಕಸಭಾ ಸದಸ್ಯರು ಎಂದು ನಮೂದು ಮಾಡಲಾಗಿದ್ದು, ಎಲ್ಲರ ಅಚ್ಚರಿಗೆ ಕಾರಣವಾಗಿದೆ. ಇನ್ನು ಈ ಆಹ್ವಾನ ಪತ್ರಿಕೆ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗಿದೆ.

Shwetha M