ಮೈಸೂರು ಅರಮನೆ ಮುಂಭಾಗದಲ್ಲಿ ಬ್ಲಾ*ಸ್ ಕೇಸ್! – ಸಾ*ವಿನ ಸಂಖ್ಯೆ 2ಕ್ಕೆ ಏರಿಕೆ

ಮೈಸೂರು ಅರಮನೆ ಮುಂಭಾಗದಲ್ಲಿ ಹೀಲಿಯಂ ಗ್ಯಾಸ್ ಸಿಲಿಂಡರ್ ಸ್ಟೋಟ ಪ್ರಕರಣದಲ್ಲಿ ಸಾವಿನ ಸಂಖ್ಯೆ 2ಕ್ಕೆ ಏರಿಕೆಯಾಗಿದೆ. ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಹಿಳೆ ಮೃತಪಟ್ಟಿದ್ದಾರೆ.
ಇದನ್ನೂ ಓದಿ: ರೈಲ್ವೇ ಪ್ರಯಾಣಿಕರಿಗೆ ಬಿಗ್‌ಶಾಕ್! – 6 ತಿಂಗಳಲ್ಲಿ ಎರಡನೇ ಬಾರಿ ಟಿಕೆಟ್ ದರ ಹೆಚ್ಚಳ
ಗುರುವಾರ ರಾತ್ರಿ ಸುಮಾರು 8.30ರ ಹೊತ್ತಿಗೆ ಮೈಸೂರು ಅರಮನೆ ಮುಂಭಾಗ ದುರಂತ ಘಟನೆ ಸಂಭವಿಸಿತ್ತು. ಜಯಮಾರ್ತಂಡ ದ್ವಾರದ ಬಳಿ ಹೀಲಿಯಂ ಸಿಲಿಂಡರ್ ಸ್ಫೋಟಗೊಂಡು ಬಲೂನ್ ವ್ಯಾಪರ ಮಾಡುತ್ತಿದ್ದ ಸಲೀಂ ಎಂಬಾತ ಸಾವನ್ನಪ್ಪಿದ್ದನು. ಘಟನೆಯಲ್ಲಿ ನಾಲ್ವರು ಗಾಯಗೊಂಡಿದ್ದರು. ಸ್ಥಳಕ್ಕೆ ಮೈಸೂರು ಪೊಲೀಸರು ಆಗಮಿಸಿ ತಕ್ಷಣವೇ ಗಾಯಾಳುಗಳನ್ನ ಕೆ.ಆರ್ ಆಸ್ಪತ್ರೆಗೆ ದಾಖಲು ಮಾಡಿದ್ರು. ಆದ್ರೀಗ ಚಿಕಿತ್ಸೆ ಫಲಕಾರಿಯಾಗದೇ ನಂಜಗೂಡಿನ ಮಹಿಳೆ ಮಂಜುಳಾ ಸಾವನ್ನಪ್ಪಿದ್ದಾರೆ.
ಇನ್ನು ಹೊಸ ವರ್ಷ ಸಮೀಪವಿರುವಾಗ್ಲೇ ಸ್ಪೋಟ ಸಂಭವಿಸಿದ್ದು, ಆತಂಕಕ್ಕೂ ಕಾರಣವಾಗಿದೆ. ಉತ್ತರ ಪ್ರದೇಶದಿಂದ ಮೈಸೂರಿಗೆ ಬಂದಿದ್ದ ಸಲೀಂ, ಕಳೆದ 15 ದಿನಗಳಿಂದ ಮೈಸೂರಿನ ಲಷ್ಕರ್ ಮೊಹಲ್ಲಾದ ಖಾಸಗಿ ಲಾಡ್ಜ್ ನಲ್ಲಿ ವಾಸವಿದ್ದ ಎನ್ನಲಾಗ್ತಿದೆ. ಈ ಬೆನ್ನಲ್ಲೇ ಗ್ಯಾಸ್ ಸ್ಟೋಟ ಪ್ರಕರಣದವನ್ನ ಪೊಲೀಸರು ಗಂಭೀರವಾಗಿ ತೆಗೆದುಕೊಂಡಿದ್ದಾರೆ. ಪ್ರಕರಣದ ತನಿಖೆ ಮತ್ತಷ್ಟು ಚುರುಕುಗೊಂಡಿದೆ. ಸ್ಪೋಟ ಪ್ರಕರಣದ ಬಗ್ಗೆ ಪೊಲೀಸರು ಮತ್ತೊಂದು ಆಯಾಮದಲ್ಲಿ ತನಿಖೆ ಶುರು ಮಾಡಿದ್ದಾರೆ. ಸ್ಫೋಟದಿಂದ ಸಾವನ್ನಪ್ಪಿದ ಬಲೂನ್ ವ್ಯಾಪಾರಿ ಸಲೀಂ ಎಷ್ಟು ದಿನಗಳಿಂದ ಬಲೂನ್ ಮಾರಾಟ ಮಾಡ್ತಿದ್ದ? ಅರಮನೆ ಮುಂಭಾಗಕ್ಕೆ ಸಲೀಂ ಬಂದ ಕೆಲ ಕ್ಷಣಗಳಲ್ಲೇ ಗ್ಯಾಸ್ ಸ್ಪೋಟಗೊಂಡಿದ್ದು ಹೇಗೆ? ಸ್ಪೋಟ ಆಕಸ್ಮಿಕನಾ ಅಥವಾ ಉದ್ದೇಶ ಪೂರ್ವಕನಾ? ಎಂಬ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಗ್ಯಾಸ್ ಸ್ಪೋಟಗೊಂಡ ಸ್ಥಳಕ್ಕೆ ಎಫ್ಎಸ್ಎಲ್ ತಂಡ ಇಂದೂ ಕೂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಘಟನಾಸ್ಥಳದಲ್ಲಿ ಕೆಲವು ಸ್ಯಾಂಪಲ್ ಕಲೆಕ್ಟ್ ಮಾಡಿದೆ. ಹೀಲಿಯಂ ಗ್ಯಾಸ್ ಸಿಲಿಂಡರ್ ಸ್ಪೋಟದ ಬಗ್ಗೆ ಸಂಪೂರ್ಣ ಮಾಹಿತಿ ಕಲೆ ಹಾಕುತ್ತಿರುವ FSL ತಂಡ, ಸ್ಪೋಟದ ಜಾಗದಲ್ಲಿ ರಕ್ತದ ಸ್ಯಾಂಪಲ್ಗಳ ಜೊತೆಗೆ ಒಂದಷ್ಟು ವಸ್ತುಗಳನ್ನ ಸಂಗ್ರಹಿಸಿದೆ.

ನೋಡಿರಿ

