ಭೂಮಿ ಸುತ್ತ ನಿಗೂಢ ಸಿಗ್ನಲ್ – ವಿಜ್ಞಾನಿಗಳಿಂದ ಶಾಕಿಂಗ್ ವಿಚಾರ ರಿವೀಲ್!
ಭೂಮಿ ಮೇಲೆ ಸದಾ ಅಧ್ಯಯನ ಮಾಡುತ್ತಿರುವ ವಿಜ್ಞಾನಿಗಳು ಈಗ ಶಾಕಿಂಗ್ ವಿಚಾರವೊಂದನ್ನ ರಿವೀಲ್ ಮಾಡಿದ್ದಾರೆ. ಭೂಮಿಯ ಸುತ್ತ ನಿಗೂಢ ಸಿಗ್ನಲ್ ಹೊರ ಹೊಮ್ಮಿದ್ಯಂತೆ. ವಿಶ್ವದಾದ್ಯಂತ ಭೂಕಂಪನ ಚಟುವಟಿಕೆಯನ್ನು ಮೇಲ್ವಿಚಾರಣೆ ಮಾಡುವ ವೇಳೆ ವಿಜ್ಞಾನಿಗಳು ನಿಗೂಢ ಸಂಕೇತವನ್ನು ಪತ್ತೆಹಚ್ಚಿದ್ದಾರೆ.
ಇದನ್ನೂ ಓದಿ: KL ಬಾಯಲ್ಲಿ ಈ ಸಲ ಕಪ್ ನಮ್ದೇ – ರಾಹುಲ್ RCB ಸೇರೋದು ಪಕ್ಕಾ?
2023ರ ಸೆಪ್ಟೆಂಬರ್ ತಿಂಗಳಲ್ಲಿ ವಿಶ್ವದಾದ್ಯಂತ ಭೂಕಂಪನ ಚಟುವಟಿಕೆಯನ್ನು ಮೇಲ್ವಿಚಾರಣೆ ಮಾಡುವ ವೇಳೆ ವಿಜ್ಞಾನಿಗಳು ನಿಗೂಢ ಸಂಕೇತವನ್ನು ಪತ್ತೆಹಚ್ಚಿದ್ದಾರೆ. ಆರ್ಕ್ಟಿಕ್ನಿಂದ ಅಂಟಾರ್ಕ್ಟಿಕಾದ ವರೆಗೆ ಈ ಸಿಗ್ನಲ್ ದಾಖಲಿಸಲಾಗಿದೆ. ಸುಮಾರು 9 ದಿನಗಳ ವರೆಗೆ ಈ ಸಿಗ್ನಲ್ ದಾಖಲಾಗಿದೆ. ಈ ಸಿಗ್ನಲ್ ನಿಂದ ಸಂಶೋಧಕರು ಗೊಂದಲಕ್ಕೆ ಒಳಗಾಗಿದ್ದು, ಅದನ್ನು ಯುಎಸ್ಒ ಅಂದ್ರೆ, ಗುರುತಿಸಲಾಗದ ಭೂಕಂಪನ ವಸ್ತು ಎಂದು ವರ್ಗೀಕರಿಸಿದ್ದಾರೆ.
10,000 ಒಲಿಂಪಿಕ್ ಈಜುಕೊಳಗಳನ್ನು ತುಂಬುವಷ್ಟು ದೊಡ್ಡ ಪ್ರಮಾಣದ ಕಲ್ಲು ಮತ್ತು ಮಂಜುಗಡ್ಡೆಗಳು ಫ್ಜೋರ್ಡ್ಗೆ ಧುಮುಕಿದ್ದವು. ಇದು ಲಂಡನ್ನಲ್ಲಿರುವ ಬಿಗ್ ಬೆನ್ಗಿಂತ ಎರಡು ಪಟ್ಟು ಎತ್ತರದ ಅಲೆಯೊಂದಿಗೆ ಮೆಗಾ-ಸುನಾಮಿಯನ್ನು ಉಂಟುಮಾಡಿತು. ಭೂಕುಸಿತವು ಫ್ಜೋರ್ಡ್ನಲ್ಲಿ ಭಾರಿ ಸಂಕೇತ ಉಂಟುಮಾಡಿತ್ತು. ಇದು ಒಂಬತ್ತು ದಿನಗಳವರೆಗೆ ಮುಂದುವರೆದಿತ್ತು.
ಸೈನ್ಸ್ ಜರ್ನಲ್ನಲ್ಲಿ ಪ್ರಕಟವಾದ ವರದಿಯಲ್ಲಿ, ಬಂಡೆಗಳ ಕುಸಿತದಿಂದಾಗಿ ಡಿಕ್ಸನ್ ಫ್ಜೋರ್ಡ್ನಲ್ಲಿ ಅಲೆಗಳಿಂದ ಸಂಕೇತ ರಚಿಸಲಾಗಿದೆ ಎಂದು ತಿಳಿದುಬಂದಿದೆ. ಹವಾಮಾನ ಬದಲಾವಣೆಯು ಕ್ರಯೋಸ್ಪಿಯರ್, ಹೈಡ್ರೋಸ್ಫಿಯರ್ ಮತ್ತು ಲಿಥೋಸ್ಫಿಯರ್ ನಡುವೆ ಕ್ಯಾಸ್ಕೇಡಿಂಗ್, ಅಪಾಯಕಾರಿ ಪ್ರತಿಕ್ರಿಯೆಗಳನ್ನು ಹೇಗೆ ಉಂಟುಮಾಡುತ್ತದೆ ಎಂಬುದನ್ನು ನಮ್ಮ ಸಂಶೋಧನೆಗಳು ಎತ್ತಿ ತೋರಿಸುತ್ತವೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.