ಕೂತಲ್ಲೇ  ಪಾರ್ಶ್ವವಾಯು ಅಟ್ಯಾಕ್‌! – 100ಕ್ಕೂ ಅಧಿಕ ವಿದ್ಯಾರ್ಥಿಗಳನ್ನು ಕಾಡುತ್ತಿದೆ ವಿಚಿತ್ರ ಕಾಯಿಲೆ!

ಕೂತಲ್ಲೇ  ಪಾರ್ಶ್ವವಾಯು ಅಟ್ಯಾಕ್‌! – 100ಕ್ಕೂ ಅಧಿಕ ವಿದ್ಯಾರ್ಥಿಗಳನ್ನು ಕಾಡುತ್ತಿದೆ ವಿಚಿತ್ರ ಕಾಯಿಲೆ!

ವಾತಾವರಣ ಸರಿಯಿಲ್ಲ.. ಬೆಳಗ್ಗೆ ಚಳಿ ಇದ್ರೆ, ಮಧ್ಯಾಹ್ನ ಸುಡು ಬಿಸಿಲು, ಸಂಜೆ ಮಳೆ ಬರುತ್ತೆ. ಇದ್ರಿಂದಾಗಿ ದಿನಕ್ಕೊಂದು ರೋಗಗಳು ನಮ್ಮನ್ನ ಕಾಡಲಾರಂಭಿಸಿವೆ. ಇದೀಗ ಇಲ್ಲೊಂದು ಶಾಲೆಯ ವಿದ್ಯಾರ್ಥಿಗಳಿಗೆ ವಿಚಿತ್ರ ರೋಗ ಕಾಣಿಸಿಕೊಂಡಿದೆ. ಕುಳಿತಲ್ಲೇ ಅನಾರೋಗ್ಯಕ್ಕೆ ಒಳಗಾಗುತ್ತಿದ್ದಾರೆ.

ಈ ನಿಗೂಢವಾದ ಕಾಯಿಲೆ ಕೀನ್ಯಾದ ಶಾಲೆಯೊಂದರಲ್ಲಿ ಕಾಣಿಸಿಕೊಂಡಿದೆ. ಈ ಕೀನ್ಯಾದ ಸೇಂಟ್ ಥೆರೆಸಾ ಎರೇಗಿ ಬಾಲಕಿಯರ ಪ್ರೌಢಶಾಲೆಯುನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ. ಅಂದಾಜು 100ಕ್ಕೂ ಅಧಿಕ ಬಾಲಕಿಯರಿಗೆ ಈ ಅನಾರೋಗ್ಯ ಕಾಣಿಸಿಕೊಂಡಿದ್ದು, ಇದರಿಂದಾಗಿ ಅವರು ಕಾಲುಗಳಿಗೆ ಪಾರ್ಶ್ವವಾಯು ಉಂಟಾಗುತ್ತದೆ. ಶಾಲೆಯಲ್ಲಿ ನಡೆದಾಡಲು ಕೂಡ ಅವರು ಕಷ್ಟಪಡುತ್ತಿರುವ ವಿಡಿಯೋಗಳು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಇದನ್ನೂ ಓದಿ: ರಾಹುಲ್‌ ಗಾಂಧಿ ನವಯುಗದ ರಾವಣ! – ಭಾರತವನ್ನು ನಾಶಮಾಡುವುದೇ ರಾಗಾ ಗುರಿ – ಪೋಸ್ಟರ್‌ ರಿವೀಲ್‌ ಮಾಡಿದ ಬಿಜೆಪಿ

ಕೀನ್ಯಾ ಸರ್ಕಾರವು ಈ ವಿಷಯವನ್ನು ತನಿಖೆ ನಡೆಸುತ್ತಿದೆ. ಈ ಕಾಯಿಲೆಗೆ ನಿಖರವಾದ ಕಾರಣ ಏನು ಅನ್ನೋದು ತಿಳಿದುಬಂದಿಲ್ಲ. ಅನಾರೋಗ್ಯದ ಸ್ವರೂಪ ಹಾಗೂ ಅದರ ಮೂಲದ ಬಗ್ಗೆ ಉತ್ತರ ಪಡೆಯುವ ಪಡೆಯುವ ಸಲುವಾಗಿ ಈ ವಿದ್ಯಾರ್ಥಿನಿಯರ ರಕ್ತದ ಮಾದರಿಗಳನ್ನು ಕೀನ್ಯಾ ವೈದ್ಯಕೀಯ ಸಂಶೋಧನಾ ಸಂಸ್ಥೆಗೆ (ಕೆಇಎಂಆರ್‌ಐ) ವಿಶ್ಲೇಷಣೆಗಾಗಿ ಕಳುಹಿಸಲಾಗಿದೆ ಎಂದು ವರದಿ ತಿಳಿಸಿದೆ.

ಶಿಕ್ಷಣ ಇಲಾಖೆ, ಕೌಂಟಿ ಸರ್ಕಾರ ಮತ್ತು ಸಾರ್ವಜನಿಕ ಆರೋಗ್ಯ ಇಲಾಖೆಯು ಮಕ್ಕಳಿಗೆ ಸೂಕ್ತ ಚಿಕಿತ್ಸೆಯನ್ನು ನೀಡುವುದರಲ್ಲಿ ನಿರತವಾಗಿದೆ ಎಂದು ಪ್ರಾದೇಶಿಕ ಶಿಕ್ಷಣ ನಿರ್ದೇಶಕ ಜೇರೆಡ್ ಒಬಿರೋ ಹೇಳಿದ್ದಾರೆ .

ಕೆಲವು ಮಾಧ್ಯಮ ವರದಿಗಳ ಪ್ರಕಾರ ವಿದ್ಯಾರ್ಥಿಗಳ ಪರಿಸ್ಥಿತಿ ಗಂಭೀರ ಹಂತಕ್ಕೆ ಹೋಗಿದೆ. ಪರಿಸ್ಥಿತಿಯನ್ನು ನಿಭಾಯಿಸಲು ಅಲ್ಲಿನ ಸ್ಥಳೀಯ ಸರ್ಕಾರಕ್ಕೆ ಹಾಗೂ ಶಾಲೆಗಳಿಗೆ ಸಾಧ್ಯವಾಗಿಲ್ಲ. ವಿದ್ಯಾರ್ಥಿನಿಯರು ತಮ್ಮನ್ನು ಮನೆಗೆ ಕಳಿಸಿಕೊಡಿ ಎನ್ನುವ ಬೇಡಿಕೆ ಇಟ್ಟಿದ್ದರು ಎಂದು ಹೇಳಿದೆ. ಆರಂಭದಲ್ಲಿ ಶಾಲಾ ಆಡಳಿತ ಮಂಡಳಿಯ ಮಾಹಿತಿಯ ಪ್ರಕಾರ 100ಕ್ಕೂ ಅಧಿಕ ವಿದ್ಯಾರ್ಥಿನಿಯರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇನ್ನೂ ಕೆಲವು ವಿದ್ಯಾರ್ಥಿನಿಯರಿಗೆ ಈ ವಿಚಿತ್ರ ಅನಾರೋಗ್ಯ ಕಾಡಿದೆ ಎಂದು ವರದಿಯಾಗಿದೆ.

Shwetha M