ಆಕಾಶದಲ್ಲಿ ಸ್ವರ್ಗದ ಬಾಗಿಲು! – ನಿಗೂಢತೆ ಕಂಡು ನಿಬ್ಬೆರಗಾದ ಬೆಂಗಳೂರಿಗರು

ಆಕಾಶದಲ್ಲಿ ಸ್ವರ್ಗದ ಬಾಗಿಲು! – ನಿಗೂಢತೆ ಕಂಡು ನಿಬ್ಬೆರಗಾದ ಬೆಂಗಳೂರಿಗರು

ಬೆಂಗಳೂರು: ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ಜಿಟಿ ಜಿಟಿ ಮಳೆ ಸುರಿಯುತ್ತಿದೆ. ನಗರದಲ್ಲಿ ಮೋಡ ಕವಿದ ವಾತಾವರಣವಿದ್ದು, ವೆದರ್‌ ಫುಲ್‌ ಕೂಲ್‌ ಕೂಲ್‌ ಆಗಿದೆ. ಈ ನಡುವೆಯೇ ಆಗಸದಲ್ಲಿ ಪ್ರಕೃತಿ ವಿಸ್ಮಯವೊಂದು ನಡೆದಿದೆ.  ಆಗಸದಲ್ಲಿ ‘ನಿಗೂಢ ಬಾಗಿಲು’ ಪತ್ತೆಯಾಗಿದ್ದು, ಜನ ನಿಬ್ಬೆರಗಾಗಿದ್ದಾರೆ. ಈ ವಿದ್ಯಾಮಾನ ವ್ಯಾಪಕ ಚರ್ಚೆಗೆ ಕಾರಣವಾಗಿದೆ.

ಅಗಸದಲ್ಲಿ ನಿಗೂಢ ಬಾಗಿಲು ಭಾನುವಾರ ಮೂಡಿದ್ದು, ಸ್ಥಳೀಯರು ಆಶ್ಚರ್ಯ ಚಕಿತರಾಗಿದ್ದಾರೆ. ಇದರ ಫೋಟೋ, ವಿಡಿಯೋಗಳನ್ನು ಸ್ಥಳೀಯರು ಸೆರೆಹಿಡಿದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್‌ ಆಗುತ್ತಿದೆ. ವಿಡಿಯೋದಲ್ಲಿ ಮಳೆಯ ನಡುವೆ ಸೂರ್ಯನ ಕಿರಣಗಳು ಮತ್ತು ಮೋಡಗಳ ಚಲನೆಯಿಂದಾಗಿ ಬಾಗಿಲಿನ ಆಕಾರದ ಆಕೃತಿ ರಚನೆಯಾಗಿದ್ದು ಇದು ಇದೀಗ ವ್ಯಾಪಕ ಸುದ್ದಿಗೆ ಗ್ರಾಸವಾಗಿದೆ.

ಇದನ್ನೂ ಓದಿ: ಮಳೆಗಾಲದಲ್ಲಿ ‘ವಜ್ರ’ಗಳ ಬೇಟೆ – ಕೆಲವು ರೈತರಿಗೆ ಸುಗ್ಗಿ.. ಇನ್ನು ಕೆಲವರಿಗೆ ಹುಡುಕುವುದೇ ಕಾಯಕ..!

ವಸೀಮ್ ಎಂಬ ಟ್ವಿಟರ್​ ಬಳಕೆದಾರರೊಬ್ಬರು ವಿಡಿಯೋವನ್ನು ಟ್ವೀಟ್ ಮಾಡಿದ್ದು ‘ಬೆಂಗಳೂರಿನ ಹೆಬ್ಬಾಳ ಮೇಲ್ಸೇತುವೆ ಬಳಿ ನಿನ್ನೆ ರಾತ್ರಿ ಆಕಾಶದಲ್ಲಿ ನಿಗೂಢ ನೆರಳು ಕಾಣಿಸಿಕೊಂಡಿದೆ. ಬೇರೆ ಯಾರಾದರೂ ನೋಡಿದ್ದೀರಾ? ಇದು ಏನಾಗಿರಬಹುದು? ಕಟ್ಟಡದ ನೆರಳಾ? ಹಾಗಿದ್ದಲ್ಲಿ, ಇದರ ಹಿಂದಿನ ವಿಜ್ಞಾನ ಏನಿರಬಹುದು? ಎಂದು ಅವರು ವೀಡಿಯೊಗೆ ಶೀರ್ಷಿಕೆ ನೀಡಿ ವಿಡಿಯೋ ಹಂಚಿಕೊಂಡಿದ್ದಾರೆ. ಈ ವಿಚಾರ ಟ್ವಿಟರ್​ನಲ್ಲಿ ಭಾರೀ ಚರ್ಚೆಯಾಗುತ್ತಿದೆ. ಆನೇಕರು ಇದು ಸ್ವರ್ಗದ ಬಾಗಿಲು ಎಂದು ಕಮೆಂಟ್ ಮಾಡುತ್ತಿದ್ದಾರೆ. ಮತ್ತೆ ಕೆಲವರು ಅಚ್ಚರಿ ಹೊರ ಹಾಕಿದ್ದಾರೆ. ಕೇವಲರು ಇದು ಯಾವುದೋ ಎತ್ತರದ ಕಟ್ಟಡದ ಲೈಟ್​ನ ನೆರಳಿರಬಹುದು ಎಂದು ಊಹಿಸಿದರೆ ಇನ್ನೂ ಕೆಲವರು ಇದನ್ನು ‘ಬ್ರೋಕನ್ ಸ್ಪೆಕ್ಟರ್’ ಎಂದು ಊಹಿಸಿದ್ದಾರೆ.

suddiyaana