ಬೆಳಗಾವಿಯಲ್ಲಿ ನಿಗೂಢ ಬಲೂನ್ ಪತ್ತೆ – ಆತಂಕದಲ್ಲಿ ಕುಂದಾನಗರಿ ಜನತೆ

ಬೆಳಗಾವಿಯಲ್ಲಿ ನಿಗೂಢ ಬಲೂನ್ ಪತ್ತೆ – ಆತಂಕದಲ್ಲಿ ಕುಂದಾನಗರಿ ಜನತೆ

ಬೆಳಗಾವಿ ಜಿಲ್ಲೆಯಲ್ಲಿ ವಿಚಿತ್ರ ಬಲೂನ್‌ವೊಂದು ಕೆಲಕಾಲ ಆತಂಕ ಸೃಷ್ಟಿಸಿದೆ. ಬೈಲಹೊಂಗಲ ತಾಲೂಕಿನ ಗದ್ದಿಕರಿವಿನಕೊಪ್ಪ ಗ್ರಾಮದ ಜಮೀನಿನಲ್ಲಿ ವಿಚಿತ್ರ ಬಲೂನ್‌ವೊಂದು ಪತ್ತೆಯಾಗಿತ್ತು. ಅದರಲ್ಲಿ ಕೆಲವು ಎಲೆಕ್ಟ್ರಿಕ್ ಡಿವೈಸ್‌ಗಳು ಕೂಡಾ ಪತ್ತೆಯಾಗಿದ್ದವು. ಜಮೀನಿನಲ್ಲಿ ಬಿದ್ದ ದೊಡ್ಡ ಬಿಳಿ ಬಣ್ಣದ ಬಲೂನ್ ಕಂಡು ಗ್ರಾಮಸ್ಥರು ಆತಂಕಗೊಂಡಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಬೈಲಹೊಂಗಲ ಪೊಲೀಸರು ಪರಿಶೀಲನೆ ನಡೆಸಿ ವಿಚಿತ್ರ ಬಲೂನ್ ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ:  ಪಾರಿವಾಳದ ಕಾಲಲ್ಲಿ ಕ್ಯಾಮರಾ, ಮೈಕ್ರೋಚಿಪ್! – ಗೂಢಚರ್ಯೆ ನಡೆಯುತ್ತಿದ್ಯಾ?

ಬಲೂನ್ ಎಲ್ಲಿಂದ ಬಂತು ? ಯಾವಾಗ ಹಾರಿ ಬಂತು ? ಅದರಲ್ಲಿ ಸಿಕ್ಕ ಎಲೆಕ್ಟ್ರಿಕ್ ಡಿವೈಸ್‌ಗಳು ಯಾವುದು? ಅವು ಹೇಗೆ ಕೆಲಸ ಮಾಡುತ್ತವೆ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಇನ್ನು ಈ ಪತ್ತೆಯಾದ ಬಲೂನ್ ಬಗ್ಗೆ ಪ್ರಾಥಮಿಕ ತನಿಖೆ ನಡೆದಿದ್ದು ಇದು ಅತೀ ಎತ್ತರದ ಪ್ರದೇಶದಲ್ಲಿ ಹವಾಮಾನ ನಿರ್ಧರಿಸಲು ಬಳಸುವ ಸಾಧನವಾಗಿದೆ. ಹೀಗಾಗಿ ಯಾವುದೇ ಆತಂಕ ಪಡುವ ಅಗತ್ಯವಿಲ್ಲ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂಜೀವ್ ಪಾಟೀಲ್ ಹೇಳಿದ್ದಾರೆ. ಇನ್ನು ಈ ಬಲೂನ್ ಮೂಲವನ್ನು ಕೂಡಾ ಪತ್ತೆ ಹಚ್ಚಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದು ಎತ್ತರದ ತಾಪಮಾನ, ಗಾಳಿಯ ವೇಗ ಹಾಗೂ ಗಾಳಿಯ ಒತ್ತಡದ ಮೇಲ್ವಿಚಾರಣೆ ಮಾಡಲು ಬಳಸುವ ಸಾಧನವಾಗಿದೆ ಎಂದು ಜಿಲ್ಲಾ ಎಸ್. ಪಿ ತಿಳಿಸಿದ್ದಾರೆ.

suddiyaana