ಹೊಸ ತಿರುವು ಪಡೆದುಕೊಂಡ ಮುಡಾ ಕೇಸ್‌ – ಸಿಎಂ ಸಿದ್ಧರಾಮಯ್ಯ ಪತ್ನಿ ವಿರುದ್ಧ ಮತ್ತೊಂದು ಕೇಸ್‌ ದಾಖಲು

ಹೊಸ ತಿರುವು ಪಡೆದುಕೊಂಡ ಮುಡಾ ಕೇಸ್‌ – ಸಿಎಂ ಸಿದ್ಧರಾಮಯ್ಯ ಪತ್ನಿ ವಿರುದ್ಧ ಮತ್ತೊಂದು ಕೇಸ್‌ ದಾಖಲು

ಮುಡಾ ಹಗರಣ ಕೇಸ್‌ ಸಿಎಂ ಸಿದ್ಧರಾಮಯ್ಯಗೆ ಕಂಟಕವಾಗಿ ಪರಿಣಮಿಸಿದೆ. ಇದೀಗ ಈ ಪ್ರಕರಣ ಮತ್ತೊಂದು ತಿರುವು ಪಡೆದುಕೊಂಡಿದೆ. ಜಮೀನು ಮಾಲೀಕ ದೇವರಾಜು ವಿರುದ್ಧ ಅಣ್ಣನ ಮಗಳು ಜಮುನಾ ಮೈಸೂರಿನ  ಜೆಎಂಎಫ್​ಸಿ ನ್ಯಾಯಾಲಯದಲ್ಲಿ ದಾವೆ ಹೂಡಿದ್ದಾರೆ.

ಇದನ್ನೂ ಓದಿ: ಕೀರ್ತಿ.. ಕೀರ್ತಿನೇ ಅಲ್ಲ..! ಲಕ್ಷ್ಮೀ ಪಾತ್ರ ಎಂಡ್? – ಮುಖವಾಡದ ಆಟ ಗೆಲ್ಲೋದ್ಯಾರು?

ಹೌದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿಯವರ ಹೆಸರಿನಲ್ಲಿರುವ ಜಮೀನು ದೇವರಾಜು ಅವರದ್ದು ಅಲ್ಲ, ಬದಲಿಗೆ ನಮ್ಮ ತಂದೆ ಮೈಲಾರಯ್ಯ ಅವರಿಗೆ ಸೇರಿದ್ದು ಎಂದು ದೇವಾರಜು ಅವರ ಅಣ್ಣನ ಮಗಳು ಜಮುನಾ ದಾವೆ ಹೂಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ನಿ ಪಾರ್ವತಿ ಸೇರಿದಂತೆ 12 ಜನರ ಮೇಲೆ ಸಿವಿಲ್ ಕೇಸ್ ದಾಖಲಿಸಿದ್ದಾರೆ.

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿರುವ, ಜಮುನಾ ಸಹೋದರ ಮಂಜುನಾಥಸ್ವಾಮಿ, “ನಮ್ಮ ಚಿಕ್ಕಪ್ಪ ದೇವರಾಜು ಮೋಸದಿಂದ ಜಮೀನು ಮಾರಾಟ ಮಾಡಿದ್ದಾರೆ. ಜಮೀನು ಮೊದಲು ನನ್ನ ತಂದೆ ಮೈಲಾರಯ್ಯ ಅವರ ಹೆಸರಿನಲ್ಲಿ ಇತ್ತು. ನಮ್ಮ ಹೆಸರಿಗೆ ಮಾಡಿಸಿಕೊಡುತ್ತೇನೆ ಎಂದು ನಮ್ಮ ಚಿಕ್ಕಪ್ಪ ದೇವರಾಜು ನನ್ನ ಹಾಗೂ ತಾಯಿ ಬಳಿ ಸಹಿ ಪಡೆದುಕೊಂಡರು. ನನ್ನ ರೀತಿ ನನ್ನ ಸಹೋದರಿ ಜಮುನಾಗು ಅನ್ಯಾಯವಾಗಿದೆ” ಎಂದು ಅಳಲು ತೋಡಿಕೊಂಡರು.

ನನ್ನ ತಾತ ನಿಂಗ ಅಲಿಯಾಸ್​ ಜವರ ಅವರಿಗೆ ಮಲ್ಲಯ್ಯ, ಮೈಲಾರಯ್ಯ ಹಾಗೂ ದೇವರಾಜು ಮೂರು ಜನ ಗಂಡು ಮಕ್ಕಳು. ಕೆಸರೆ ಸರ್ವೇ ನಂ 464ರ 3.16 ಎಕರೆ ಭೂಮಿ ನನ್ನ ತಂದೆ ಮೈಲಾರಯ್ಯ ಪಾಲಿಗೆ ಬಂದಿತ್ತು. ನಮ್ಮ ಹೆಸರಿಗೆ ಮಾಡಿಸಿಕೊಡುತ್ತೇನೆ ಎಂದು ನಮ್ಮ ಚಿಕ್ಕಪ್ಪ ದೇವರಾಜು ನನ್ನ ಹಾಗೂ ತಾಯಿ ಬಳಿ ಸಹಿ ಪಡೆದುಕೊಂಡು, ಮೋಸದಿಂದ ಮಾರಾಟ ಮಾಡಿದ್ದಾರೆ. ನಮಗೆ ಪರಿಹಾರ ಕೊಡಬೇಕು. ಈ ಕಾರಣದಿಂದ ನ್ಯಾಯಾಲಯದ ಮೊರೆ ಹೋಗಿದ್ದೇವೆ. ಸಹೋದರಿ ಜಮುನಾ ಪ್ರಕರಣ ದಾಖಲಿಸಲು ನನ್ನ ಸಹಮತ ಇದೆ. ಜಮೀನಿನ ಪರಿಹಾರ ನಮಗೆ ಕೊಡಬೇಕಾಗಿತ್ತು ಎಂದರು ತಿಳಿಸಿದರು.

Shwetha M

Leave a Reply

Your email address will not be published. Required fields are marked *