ಮೈಸೂರು ಜಂಬೂ ಸವಾರಿಗೆ ಸಕಲ ತಯಾರಿ – 5ನೇ ಬಾರಿ ಅಂಬಾರಿ ಹೊರಲಿರುವ ಅರ್ಜುನ
ಸಿಎಂ ಸಿದ್ದರಾಮಯ್ಯರಿಂದ ಚಿನ್ನದ ಅಂಬಾರಿಗೆ ಪುಷ್ಪಾರ್ಚನೆ

ಮೈಸೂರು ಜಂಬೂ ಸವಾರಿಗೆ ಸಕಲ ತಯಾರಿ – 5ನೇ ಬಾರಿ ಅಂಬಾರಿ ಹೊರಲಿರುವ ಅರ್ಜುನಸಿಎಂ ಸಿದ್ದರಾಮಯ್ಯರಿಂದ ಚಿನ್ನದ ಅಂಬಾರಿಗೆ ಪುಷ್ಪಾರ್ಚನೆ

 

ಜಗದ್ವಿಖ್ಯಾತ ನಾಡಹಬ್ಬ ಮೈಸೂರು ದಸರಾ ಅಂತಿಮ ಘಟ್ಟ ತಲುಪಿದ್ದು, ಜಂಬೂ ಸವಾರಿಗೆ ಸಕಲ ತಯಾರಿ ಮಾಡಲಾಗಿದೆ. ಅ.12ರಂದು ಶನಿವಾರ ಮಧ್ಯಾಹ್ನ 1.41ರಿಂದ 2.10 ವರಗೆ ಸಲ್ಲುವ ಶುಭ ಮಕರ ಲಗ್ನದಲ್ಲಿ ಅರಮನೆಯ ಬಲರಾಮ ದ್ವಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಂದಿಧ್ವಜಕ್ಕೆ ಪೂಜೆ ಸಲ್ಲಿಸಲಿದ್ದಾರೆ. ಬಳಿಕ ಗಜಪಡೆಯ ಧನಂಜಯ ನಿಶಾನೆ ಆನೆಯಾಗಿ ದಸರಾ ಮೆರವಣಿಗೆಯನ್ನು ಮುನ್ನಡೆಸಲಿದ್ದಾನೆ. ನಂತರ ಸಂಜೆ 4ರಿಂದ 4.30 ಗಂಟೆವರೆಗೆ ಸಲ್ಲುವ ಶು ಕುಂಭ ಲಗ್ನದಲ್ಲಿ ವಿಜಯ ದಶಮಿ ಜಂಬೂಸವಾರಿಗೆ ಸಿಎಂ ಸಿದ್ದರಾಮಯ್ಯ, ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಸೇರಿ ಗಣ್ಯರು ಚಿನ್ನದ ಅಂಬಾರಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಲಿದ್ದಾರೆ.

5ನೇ ಬಾರಿ ಅಂಬಾರಿ ಹೊರಲಿರುವ ಅರ್ಜುನ

ಜಂಬೂ ಸವಾರಿ ವೀಕ್ಷಿಸಲು ದೇಶ ವಿದೇಶದ ಲಕ್ಷಾಂತರ ಪ್ರವಾಸಿಗರು ಆಗಮಿಸಲಿದ್ದು, ಮೈಸೂರು ದಸರಾದ ಕೇಂದ್ರ ಬಿಂದು ಅಂದ್ರೆ ಜಂಬೂ ಸವಾರಿ.. ಹೀಗಾಗಿ ಅರಮವೆ ಆವರಣೆ ಸೇರಿ ಜಂಬೂ ಸವಾರಿ ಸಾಗುವ ರಾಜಮಾರ್ಗದಲ್ಲಿ ಆಸನದ ವ್ಯವಸ್ಥೆ ಸೇರಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. 2020, 21ರಲ್ಲಿ ಕೊರೊನಾ ಕಾರಣದಿಂದಾಗಿ ಅರಮನೆಗೆ ಸೀಮಿತವಾಗಿದ್ದ ಜಂಬೂ ಸವಾರಿಯಲ್ಲಿ ಕ್ಯಾಪ್ಟನ್‌ ಅಭಿಮನ್ಯು ಅರಮನೆ ಆವರಣದಲ್ಲಷ್ಟೇ ಅಂಬಾರಿ ಹೊತ್ತಿದ್ದ. 2022, 23ರಲ್ಲಿ ಬನ್ನಿಮಂಟಪದವರೆಗೆ ಚಿನ್ನದ ಅಂಬಾರಿ ಹೊತ್ತು ಸೈ ಎನಿಸಿಕೊಂಡಿದ್ದ ಅಭಿಮನ್ಯು ಸತತ 5ನೇ ಬಾರಿಗೆ 750 ಕೆಜಿ ತೂಕದ ಚಿನ್ನದ ಅಂಬಾರಿ ಹೊರಲು ಸಜ್ಜಾಗಿದ್ದಾನೆ. ಅಭಿಮನ್ಯು ಜತೆಗೆ 8 ಆನೆಗಳು, ಅಶ್ವರೋಹಿಪಡೆ ಮೆರವಣಿಗೆ ಯಲ್ಲಿ ಪಾಲ್ಗೊಳ್ಳಲಿವೆ. ಇದರ ಜತೆಗೆ ರಾಜ್ಯದ 31 ಜಿಲ್ಲಾ ಪಂಚಾಯಿತಿಗಳ, ರಾಜ್ಯಮಟ್ಟದ ವಿವಿಧ ಇಲಾಖೆಗಳು, ನಿಗಮ ಮಂಡಳಿಗಳು, ಸ್ತಬ್ಧಚಿತ್ರ ಉಪಸಮಿತಿ ಸೇರಿ ಒಟ್ಟು 51 ಸ್ತಬ್ಧಚಿತ್ರಗಳು ಸೇರಿ 100ಕ್ಕೂ ಹೆಚ್ಚು ಜಾನಪದ ತಂಡಗಳು ಭಾಗವಹಿಸಲಿವೆ.

Kishor KV

Leave a Reply

Your email address will not be published. Required fields are marked *