ಆಲಿಯಾ ಭಟ್ ಮನೆಯಲ್ಲಿ ಮೈಸೂರಿನ ಗಣಪ – ಮೂರ್ತಿ ರೆಡಿಮಾಡಿ ಮುಂಬೈಗೆ ಕಳಿಸಿದ ಅರುಣ್ ಯೋಗಿರಾಜ್

ಅಯೋಧ್ಯೆಯ ರಾಮ ಮಂದಿರ ಮೂರ್ತಿ ಕೆತ್ತಿದ ಅರುಣ್ ಯೋಗಿರಾಜ್, ಈಗ ಬಾಲಿವುಡ್ ನಟಿಗಾಗಿ ಗಣಪನ ವಿಗ್ರಹ ರೆಡಿಮಾಡಿದ್ದಾರೆ. ಖ್ಯಾತ ಬಾಲಿವುಡ್ ನಟಿ ಆಲಿಯಾ ಭಟ್ ಮನೆಗಾಗಿ ಗಣೇಶನ ಮೂರ್ತಿ ರೆಡಿ ಮಾಡಿದ್ದಾರೆ ಮೈಸೂರಿನ ಅರುಣ್ ಯೋಗಿರಾಜ್.
ಇದನ್ನೂ ಓದಿ:ಬಾಲರಾಮನಿಗಾಗಿ ಮಹಾ ತಪಸ್ಸು! – ದೇವ ಶಿಲ್ಪಿ ಅರುಣ್ ಯೋಗಿರಾಜ್ ಹೇಳಿದ್ದೇನು?
ಅಯೋಧ್ಯೆಯಲ್ಲಿ ರಾಮನ ಮೂರ್ತಿ ಕೆತ್ತನೆಯ ಮೂಲಕ ಜನಪ್ರಿಯರಾಗಿದ್ದ ಮೈಸೂರಿನ ಅರುಣ್ ಯೋಗಿರಾಜ್ ಈಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಬಾಲಿವುಡ್ ನಟಿ ಆಲಿಯಾ ಭಟ್ ಅವರಿಗಾಗಿ ಗಣೇಶನ ಮೂರ್ತಿ ರೆಡಿ ಮಾಡಿದ್ದಾರೆ ಅರುಣ್ ಯೋಗಿರಾಜ್. ಮುಂಬೈನ ಆಲಿಯಾ ಭಟ್ ಮನೆಗೆ ಮೈಸೂರಿನ ಗಣಪ ಸೇರಲಿದ್ದಾನೆ. ಕಳೆದ ಆರು ತಿಂಗಳಿಂದ ನಿರಂತರ ಕೆತ್ತನೆ ಕಾರ್ಯ ನಡೆದಿದ್ದು ಆ.17 ರಂದು ಆಲಿಯಾ ಭಟ್ ಕುಟುಂಬಸ್ಥರಿಂದ ಪೂಜೆ ಕೂಡಾ ನಡೆಯಲಿದೆ. ಗಣಪನ ಮೂರ್ತಿ ಮುಂಬೈಗೆ ತೆರಳಿದೆ.
ಆಲಿಯಾ ಭಟ್ ಅವರು ಅರುಣ್ ಅವರ ಅಯೋಧ್ಯೆಯ ಶ್ರೀರಾಮಲಲ್ಲಾ ಮೂರ್ತಿ ಕೆತ್ತನೆ ಗಮನಿಸಿದ್ದರು. ಗಣಪ ಮೂರ್ತಿ ಮಾಡಿಕೊಡುವಂತೆ ಮನವಿ ಮಾಡಿದ್ದರು ಎಂದು ಅರುಣ್ ತಿಳಿಸಿದ್ದಾರೆ. ನಮ್ಮನ್ನ ಮುಂಬೈಗೆ ಕರೆಸಿಕೊಂಡು ಮಾತನಾಡಿದ್ದರು. ನಾವು ಮನೆಯ ಸ್ಥಳ ಎಲ್ಲವನ್ನೂ ಗಮನಿಸಿ ಬಂದಿದ್ದೆ. ಆ ಮನೆಗೆ ಹೊಂದಿಕೊಳ್ಳುವಂತೆ ಗಣಪ ಕೆತ್ತನೆ ಮಾಡಲಾಗಿದೆ ಎಂದು ಶಿಲ್ಪಿ ಅರುಣ್ ಯೋಗಿರಾಜ್ ಹೇಳಿಕೆ ನೀಡಿದರು.
ಬಾಲಿವುಡ್ ನಟಿ ಆಲಿಯಾ ಭಟ್ ಮತ್ತು ರಣಬೀರ್ ದಂಪತಿ 200 ಕೋಟಿ ಬೆಲೆ ಬಾಳುವಂತಹ ಹೊಸ ಬಂಗಲೆ ನಿರ್ಮಿಸಿದ್ದಾರೆ. ಈಗ ಇದೇ ಬಂಗಲೆಯಲ್ಲಿ ಮೈಸೂರಿನಲ್ಲಿ ತಯಾರಾದ ಗಣೇಶನ ಮೂರ್ತಿ ವಿರಾಜಿಸಲಿದೆ.

ನೋಡಿರಿ

