ಅಂಕಲ್ ನನ್ನ ಖಾಸಗಿ ಅಂಗಗಳನ್ನ ಮುಟ್ಟುತ್ತಿದ್ದರು.. ಗರ್ಭಿಣಿ ಆದಾಗ ಆಂಟಿ ಮಾತ್ರೆ ಕೊಟ್ಟರು – ಭಯಾನಕ ಸತ್ಯ ಹೇಳಿದ ಅತ್ಯಾಚಾರ ಸಂತ್ರಸ್ತೆ

ಅಂಕಲ್ ನನ್ನ ಖಾಸಗಿ ಅಂಗಗಳನ್ನ ಮುಟ್ಟುತ್ತಿದ್ದರು.. ಗರ್ಭಿಣಿ ಆದಾಗ ಆಂಟಿ ಮಾತ್ರೆ ಕೊಟ್ಟರು – ಭಯಾನಕ ಸತ್ಯ ಹೇಳಿದ ಅತ್ಯಾಚಾರ ಸಂತ್ರಸ್ತೆ

ದೆಹಲಿಯಲ್ಲಿ ನಡೆದಿದ್ದ ಅಪ್ರಾಪ್ತ ಬಾಲಕಿ ಮೇಲಿನ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ವೇಳೆ ಭಯಾನಕ ಸತ್ಯಗಳು ಹೊರ ಬರುತ್ತಿವೆ. ಅಪ್ರಾಪ್ತ ಬಾಲಕಿ ಮೇಲೆ ತಿಂಗಳುಗಟ್ಟಲೇ ಅತ್ಯಾಚಾರ ಎಸಗಿ ಆಕೆಯನ್ನ ಗರ್ಭವತಿ ಮಾಡಿದ ಆರೋಪದ ಮೇಲೆ ಅಮಾನತುಗೊಂಡಿರುವ ದೆಹಲಿಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ ಪ್ರೇಮೋದಯ್ ಖಾಖಾ (Premoday Khakha)ನನ್ನ ಪುರುಷತ್ವ ಸಾಮರ್ಥ್ಯ ಪರೀಕ್ಷೆಗೆ ಒಳಪಡಿಸಲಾಗಿದೆ.

ಅತ್ಯಾಚಾರ ಆರೋಪಿ ಲೈಂಗಿಕ ಕ್ರಿಯೆಗಳಲ್ಲಿ ತೊಡಗಿಸಿಕೊಳ್ಳಲು ಸಮರ್ಥನಾಗಿದ್ದಾನೆಯೇ? ಇಲ್ಲವೇ? ಎಂಬುದನ್ನ ತಿಳಿಯಲು ಪ್ರಮಾಣೀಕೃತ ಮೂತ್ರಶಾಸ್ತ್ರಜ್ಞರಿಂದ ಲೈಂಗಿಕ ದೌರ್ಜನ್ಯ ಅಥವಾ ಅತ್ಯಾಚಾರದ ಅಪರಾಧ ಪ್ರಕರಣದಲ್ಲಿ ಸಾಮರ್ಥ್ಯ ಪರೀಕ್ಷೆಯನ್ನು ನಡೆಸಲು ಪೊಲೀಸರು ಮುಂದಾಗಿದ್ದಾರೆ. ಆರೋಪಿಗಳಾದ ಪ್ರಮೋದ್ ಖಾಖಾ ಮತ್ತು ಅವನ ಪತ್ನಿ ಸೀಮಾ ರಾಣಿ ಇಬ್ಬರನ್ನೂ ದೆಹಲಿ ನ್ಯಾಯಾಲಯಕ್ಕೆ (Delhi court) ಹಾಜರುಪಡಿಸಲಾಗಿತ್ತು. ವಾದ-ಪ್ರತಿವಾದಗಳನ್ನು ಆಲಿಸಿದ ನಂತರ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ. ಆರೋಪಿಗಳ ಪರ ವಕೀಲರು ಖಾಖಾ ವಿರುದ್ಧ ಹೊರಿಸಿರುವ ಆರೋಪಗಳು ನಿರಾಧಾರ ಎಂದು ಹೇಳಿದ್ದಾರೆ. ಅಲ್ಲದೇ ಪ್ರಮೋದ್ ಕಳೆದ 20 ವರ್ಷಗಳ ಹಿಂದೆಯೇ ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಅವರಿಂದ ಅತ್ಯಾಚಾರ ಮಾಡಲು ಹೇಗೆ ಸಾಧ್ಯ? ಆದ್ದರಿಂದ ಅಪ್ರಾಪ್ತ ಬಾಲಕಿ ಗರ್ಭಿಣಿಯಾಗುವ ಸಾಧ್ಯತೆಗಳಿಲ್ಲ ಎಂದು ವಾದಿಸಿದ್ದರು. ಈ ಮಧ್ಯೆ ಆರೋಪಿ ಚರ್ಚ್ ನಲ್ಲಿಯೂ ತನಗೆ ಕಿರುಕುಳ ನೀಡುತ್ತಿದ್ದ ಬಗ್ಗೆ ಪೊಲೀಸರಿಗೆ ದೂರು ಬಂದಿತ್ತು. ಆರೋಪಿ ಅಧಿಕಾರಿ ಚರ್ಚ್ ನಲ್ಲಿಯೂ ಉಪಕಾರ್ಯದರ್ಶಿ ಹುದ್ದೆ ಹೊಂದಿದ್ದರು ಎಂದು ತಿಳಿದುಬಂದಿದೆ.

ಇದನ್ನೂ ಓದಿ : ಅಮಾವಾಸ್ಯೆಯಂದು ಹೆಚ್ಚಾಗುತ್ತೆ ಅಪರಾಧ ಕೃತ್ಯಗಳು.. ಹಿಂದೂ ಪಂಚಾಂಗ ಅನುಸರಿಸಿ! – ಪೊಲೀಸ್‌ ಇಲಾಖೆ ಸುತ್ತೋಲೆ!

ಸದ್ಯ ಅಮಾನತಿನಲ್ಲಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ಪ್ರೇಮೋದಯ್ ಖಾಖಾ ಎಂಬಾತ ತನ್ನ ಸ್ನೇಹಿತನ ಅಪ್ರಾಪ್ತ ಮಗಳ ಮೇಲೆ (ಆಗ 14 ವರ್ಷ, ಈಗ 17 ವರ್ಷ) ತಿಂಗಳುಗಟ್ಟಲೇ ಅತ್ಯಾಚಾರ ಎಸಗಿದ್ದಾನೆ ಎಂಬ ಆರೋಪದ ಮೇಲೆ ಬಂಧಿಸಲಾಗಿದೆ. ಅಲ್ಲದೇ ಅಧಿಕಾರಿಯ ಪತ್ನಿ ಸೀಮಾ ರಾಣಿ ಬಾಲಕಿಗೆ ಗರ್ಭಪಾತದ ಮಾತ್ರೆಗಳನ್ನು ನೀಡಿದ ಆರೋಪದ ಮೇಲೆ ಅರೆಸ್ಟ್ ಆಗಿದ್ದಾಳೆ. ಸಿಎಂ ಅರವಿಂದ್ ಕೇಜ್ರಿವಾಲ್ (Arvind Kejriwal) ಆದೇಶದ ಮೇರೆಗೆ ಸೋಮವಾರ ಅಧಿಕಾರಿಯನ್ನ ಹುದ್ದೆಯಿಂದ ಅಮಾನತುಗೊಳಿಸಲಾಗಿತ್ತು.

ಆರೋಪಿ ವಿರುದ್ಧ ಪೋಕ್ಸೋ ಹಾಗೂ ಭಾರತೀಯ ದಂಡ ಸಂಹಿತೆ ಸೆಕ್ಷನ್ 376(2)(F), ಸೆಕ್ಷನ್ 509, 506, 323, 313, 120 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ತನಿಖೆ ಮುಂದುವರಿದಿದೆ.

ಸದ್ಯ ನ್ಯಾಯಾಂಗ ಬಂಧನದಲ್ಲಿರುವ 51 ವರ್ಷದ ಪ್ರೇಮೋದಯ್ ಖಾಖಾ ಮತ್ತು ಅವರ ಪತ್ನಿ ಸೀಮಾ ರಾಣಿ ವಿರುದ್ಧ ದೆಹಲಿ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಖಾಖಾ ಅವರು ದೆಹಲಿ ಸರ್ಕಾರದ ಮಹಿಳಾ ಮತ್ತು ಮಕ್ಕಳ ಇಲಾಖೆಯಲ್ಲಿ ಉಪ ನಿರ್ದೇಶಕರಾಗಿದ್ದರು. ಎಫ್‌ಐಆರ್ ಪ್ರಕಾರ, 2020ರಲ್ಲಿ 14 ವರ್ಷ ವಯಸ್ಸಿನ ಬಾಲಕಿ ತನ್ನ ತಂದೆಯ ಮರಣದ ನಂತರ ತನ್ನ ಕುಟುಂಬದ ಆಪ್ತ ಸ್ನೇಹಿತ ಖಾಖಾ ಜೊತೆ ಇರಲು ಹೋಗಿದ್ದಳು. ಈ ವೇಳೆ ನವೆಂಬರ್ 2020 ರಿಂದ ಜನವರಿ 2021ರವರೆಗೆ ಪ್ರೇಮೋದಯ್ ಖಾಖಾ ನನ್ನ ಮೇಲೆ 4-5 ಬಾರಿ ಅತ್ಯಾಚಾರವೆಸಗಿದ್ದಾರೆ. ಅವರು ನನ್ನ ಖಾಸಗಿ ಅಂಗಗಳನ್ನು ಮುಟ್ಟುತ್ತಿದ್ದರು. ನಾನು ಅದನ್ನು ದ್ವೇಷಿಸುತ್ತಿದ್ದೆ ಎಂದು ಬಾಲಕಿ ತಿಳಿಸಿರುವುದಾಗಿ ಎಫ್‌ಐಆರ್‌ನಲ್ಲಿ ಹೇಳಲಾಗಿದೆ.

ಖಾಖಾ ಮೊದಲ ಬಾರಿಗೆ ತನ್ನ ಮೇಲೆ ಅತ್ಯಾಚಾರವೆಸಗಿದಾಗ, ತನ್ನ ಖಾಸಗಿ ಅಂಗಗಳು ಊದಿಕೊಂಡಿದ್ದವು. ನಾನು ಅದರ ಬಗ್ಗೆ ಸೀಮಾ ಆಂಟಿಗೆ ತಿಳಿಸಿದ್ದೆ. ಆದರೆ, ಅವರು ನಾನೇ ಸರಿಯಿಲ್ಲ ಅಥವಾ ನಾನೇ ಅವರ ಪತಿಗೆ ಸನ್ನೆ ಮಾಡಿರುವುದಾಗಿ ರೇಗಿದ್ದರು’ ಎಂದು ಅವರ ದೂರಿನಲ್ಲಿ ಹೇಳಲಾಗಿದೆ. ನಾನು ತರಗತಿಯಲ್ಲಿ ಉತ್ತಮ ಅಂಕಗಳನ್ನು ಗಳಿಸಲು ವಿಫಲವಾದಾಗಲೆಲ್ಲಾ ಸೀಮಾ ಆಂಟಿ ದೊಣ್ಣೆಗಳಿಂದ ನನಗೆ ಒಡೆಯುತ್ತಿದ್ದಳು. ‘2021ರ ಜನವರಿಯಲ್ಲಿ ಕೊನೆಯ ಬಾರಿಗೆ ಅವರು ನನ್ನ ಮೇಲೆ ಅತ್ಯಾಚಾರ ಎಸಗಿದ ನಂತರ, ನಾನು ಗರ್ಭಿಣಿಯಾದೆ. ನನಗೆ ಪಿರಿಯಡ್ಸ್ ಮಿಸ್ ಆದಾಗ ಸೀಮಾ ಆಂಟಿಗೆ ಹೇಳಿದ್ದೆ. ಇದು ಮೊದಲ ತಿಂಗಳಾಗಿದ್ದರಿಂದ ಮಗುವನ್ನು ಗರ್ಭಪಾತ ಮಾಡಬಹುದು ಎಂದು ಅವರು ಉತ್ತರಿಸಿದರು ಎಂದು ಎಫ್‌ಐಆರ್‌ನಲ್ಲಿ ತಿಳಿಸಲಾಗಿದೆ.

suddiyaana