ನನ್ನ ನೆಚ್ಚಿನ ಬ್ಯಾಟಿಂಗ್ ಪಾಲುಗಾರ ಎಂ.ಎಸ್ ಧೋನಿ – ಮಾಜಿ ಕೂಲ್ ಕ್ಯಾಪ್ಟನ್ ನನ್ನು ಹೊಗಳಿ ಅಚ್ಚರಿ ಮೂಡಿಸಿದ ಗೌತಮ್ ಗಂಭೀರ್

ನನ್ನ ನೆಚ್ಚಿನ ಬ್ಯಾಟಿಂಗ್ ಪಾಲುಗಾರ ಎಂ.ಎಸ್ ಧೋನಿ – ಮಾಜಿ ಕೂಲ್ ಕ್ಯಾಪ್ಟನ್ ನನ್ನು ಹೊಗಳಿ ಅಚ್ಚರಿ ಮೂಡಿಸಿದ ಗೌತಮ್ ಗಂಭೀರ್

ಟೀಮ್ ಇಂಡಿಯಾದ ಮಾಜಿ ನಾಯಕ ಗೌತಮ್ ಗಂಭೀರ್‌ ಭಾರತದ ಪರ ಅತ್ಯುತ್ತಮ ಪ್ರದರ್ಶನ ನೀಡಿದ ಕ್ರೀಡಾಪಟುಗಳಲ್ಲಿ ಒಬ್ಬರು. ತಮ್ಮ ಸುದೀರ್ಘಾವಧಿಯ ಅಂತಾರಾಷ್ಟ್ರೀಯ ಕ್ರಿಕೆಟ್‌ ಬದುಕಿನಲ್ಲಿ ಬಹುಪಾಲು ಪಂದ್ಯಗಳನ್ನು ಡ್ಯಾಷಿಂಗ್‌ ಓಪನರ್‌ ವೀರೇಂದ್ರ ಸೆಹ್ವಾಗ್‌ ಜೊತೆಯೇ ಆರಂಭಿಸಿದ್ದಾರೆ. ಸೆಹ್ವಾಗ್‌-ಗಂಭೀರ್‌ ಜೋಡಿ ಆರಂಭಿಕವಾಗಿ ಬಹುದೊಡ್ಡ ರನ್ ಗಳಿಸುವ ಮೂಲಕ ಭಾರತದ ಪರ ಹಲವು ಅದ್ಭುತ ಇನಿಂಗ್ಸ್‌ ನೀಡಿದ್ದಾರೆ. ಆದರೆ ಎಲ್ಲಾ ಮಾದರಿಯ ಕ್ರಿಕೆಟ್‌ನಲ್ಲಿ ತಮ್ಮ ನೆಚ್ಚಿನ ಜೊತೆಗಾರನ ಬಗ್ಗೆ ಅಚ್ಚರಿಯ ಹೆಸರು ಉಲ್ಲೇಖಿಸಿದ್ದಾರೆ. ನಾನು ಧೋನಿಯೊಂದಿಗೆ ಆಡಲು ಹೆಚ್ಚು ಇಷ್ಟಪಡುತ್ತೇನೆ ಎಂದು ಗೌತಮ್ ಗಂಭೀರ್ ಹೇಳಿದ್ದಾರೆ.

ಇಷ್ಟು ದಿನ ಟೀಂ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿ ಎಂದರೆ ಸಿಡಿದು ಬೀಳ್ತಿದ್ದ ಗೌತಮ್ ಗಂಭೀರ್ (Gautam Gambhir) ಇದೀಗ ಧೋನಿ ಪರ ಬ್ಯಾಟ್ ಬೀಸಿರೋದು ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದ್ದಾರೆ. ಅಪರೂಪಕ್ಕೆಂಬಂತೆ ಧೋನಿಯನ್ನು ಮೆಚ್ಚಿ ಮಾತನಾಡಿರುವ ಗಂಭೀರ್, ವೈಟ್ ಬಾಲ್ ಕ್ರಿಕೆಟ್‌ನಲ್ಲಿ ತಮ್ಮ ನೆಚ್ಚಿನ ಬ್ಯಾಟಿಂಗ್ ಪಾಲುದಾರ ಎಂಎಸ್ ಧೋನಿ ಎಂದು ಹೇಳುವ ಮೂಲಕ ಎಲ್ಲರ ಹುಬ್ಬೆರಿಸಿದ್ದಾರೆ. ವಾಸ್ತವವಾಗಿ ಕ್ರಿಕೆಟ್ ಆಡುವ ದಿನಗಳಲ್ಲಿ ಸೆಹ್ವಾಗ್ ಅವರೊಂದಿಗೆ ಭಾರತದ ಇನ್ನಿಂಗ್ಸ್ ಆರಂಭಿಸುತ್ತಿದ್ದ ಗಂಭೀರ್, ಎಂಎಸ್ ಧೋನಿ ಅವರನ್ನು ತಮ್ಮ ನೆಚ್ಚಿನ ಬ್ಯಾಟಿಂಗ್ ಪಾರ್ಟ್ನರ್ ಎಂದು ಏಕೆ ಕರೆದರು ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ. ನನ್ನ ನೆಚ್ಚಿನ ಕ್ರಿಕೆಟ್ ಪಾಲುದಾರ ಎಂಎಸ್ ಧೋನಿ. ಜನರು ನನ್ನ ನೆಚ್ಚಿನ ಬ್ಯಾಟಿಂಗ್ ಪಾಲುದಾರ ವೀರೇಂದ್ರ ಸೆಹ್ವಾಗ್ ಎಂದು ಭಾವಿಸುತ್ತಾರೆ. ಆದರೆ ವಾಸ್ತವವಾಗಿ ನಾನು ಧೋನಿಯೊಂದಿಗೆ ಆಡಲು ಹೆಚ್ಚು ಇಷ್ಟಪಡುತ್ತೇನೆ, ಅದರಲ್ಲೂ ವಿಶೇಷವಾಗಿ ವೈಟ್-ಬಾಲ್ ಕ್ರಿಕೆಟ್‌ನಲ್ಲಿ. ನಾವಿಬ್ಬರು ಅನೇಕ ದೊಡ್ಡ ಜೊತೆಯಾಟವನ್ನು ಹಂಚಿಕೊಂಡಿದ್ದೇವೆ ಎಂದು ಗಂಭೀರ್ ಹೇಳಿದ್ದಾರೆ.

ಇದನ್ನೂ ಓದಿ : ವಿಶ್ವಕಪ್ ಟ್ರೋಫಿ ಮೇಲೆ ಕಾಲಿಟ್ಟು ಕುಳಿತ ಮಿಚೆಲ್ ಮಾರ್ಷ್ – ಆಸೀಸ್ ಆಟಗಾರನ ಅತಿರೇಕದ ವರ್ತನೆಗೆ ಆಕ್ರೋಶ

ಟೀಂ ಇಂಡಿಯಾ ಅಭಿಮಾನಿಗಳು ಗೌತಮ್ ಗಂಭೀರ್ ಯಾವಾಗಲೂ ಧೋನಿ ವಿರುದ್ಧ ಮಾತನಾಡುತ್ತಾರೆ ಎಂದು ಆರೋಪಿಸುತ್ತಾರೆ. ಆದರೆ ಇದೀಗ ಗಂಭೀರ್ ಈ ಬಾರಿ ಎಂಎಸ್ ಧೋನಿ ಅವರನ್ನು ತಮ್ಮ ನೆಚ್ಚಿನ ಬ್ಯಾಟಿಂಗ್ ಪಾಲುದಾರ ಎಂದು ಕರೆಯುವ ಮೂಲಕ ಎಲ್ಲರ ಬಾಯಿ ಮುಚ್ಚಿಸಿದ್ದಾರೆ. ನಿಜ ಹೇಳಬೇಕೆಂದರೆ ಟೀಂ ಇಂಡಿಯಾ 2011 ರ ಏಕದಿನ ವಿಶ್ವಕಪ್ ಗೆಲ್ಲಲು ಈ ಇಬ್ಬರ ಆಟವೇ ಪ್ರಮುಖ ಕಾರಣವಾಗಿತ್ತು. 2011ರ ವಿಶ್ವಕಪ್‌ನ ಫೈನಲ್‌ನಲ್ಲಿ ಗಂಭೀರ್ ಮತ್ತು ಧೋನಿ 109 ರನ್‌ಗಳ ಐತಿಹಾಸಿಕ ಜೊತೆಯಾಟವನ್ನು ಮಾಡಿದ್ದರು. ಈ ಜೊತೆಯಾಟದಿಂದಾಗಿ ಭಾರತ, ಶ್ರೀಲಂಕಾ ವಿರುದ್ಧ ಪ್ರಶಸ್ತಿ ಗೆದ್ದುಕೊಂಡಿತು. ಇದರಲ್ಲಿ ಗೌತಮ್ ಗಂಭೀರ್ 97 ರನ್ ಮತ್ತು ಧೋನಿ ಔಟಾಗದೆ 91 ರನ್ ಬಾರಿಸಿದ್ದರು. ಭಾರತದ ಪರ 1000 ಅಥವಾ ಅದಕ್ಕಿಂತ ಹೆಚ್ಚು ರನ್‌ಗಳನ್ನು ಗಳಿಸಿದ ಬ್ಯಾಟ್ಸ್‌ಮನ್‌ಗಳಲ್ಲಿ ಗಂಭೀರ್ ಮತ್ತು ಧೋನಿ ಮೂರನೇ ಅತಿ ಹೆಚ್ಚು ಸರಾಸರಿ ಹೊಂದಿರುವ ಜೋಡಿಯಾಗಿದೆ. ಇವರಿಬ್ಬರೂ 18 ಏಕದಿನ ಇನ್ನಿಂಗ್ಸ್‌ಗಳಲ್ಲಿ 74.70 ಸರಾಸರಿಯಲ್ಲಿ ರನ್ ಗಳಿಸಿದ್ದಾರೆ. ರೋಹಿತ್-ರಾಹುಲ್ ಮತ್ತು ಗವಾಸ್ಕರ್-ಅಜರುದ್ದೀನ್ ಜೋಡಿ ಮಾತ್ರ ಜೊತೆಯಾಟದಲ್ಲಿ ಉತ್ತಮ ದಾಖಲೆಗಳನ್ನು ಹೊಂದಿದೆ. ರೋಹಿತ್-ರಾಹುಲ್ ತಲಾ 16 ಇನ್ನಿಂಗ್ಸ್‌ಗಳಲ್ಲಿ 83.53 ಸರಾಸರಿಯಲ್ಲಿ 1000 ಪ್ಲಸ್ ರನ್ ಗಳಿಸಿದ್ದಾರೆ ಮತ್ತು ಗವಾಸ್ಕರ್-ಅಜರುದ್ದೀನ್ ಜೋಡಿ 78ರ ಸರಾಸರಿಯಲ್ಲಿ ರನ್ ಗಳಿಸಿದ್ದಾರೆ.

Shantha Kumari