‘ಬೇಬಿ ಗರ್ಲ್.. ಐ ಲವ್ ಯು, ನಿನಗೋಸ್ಕರ ನಾನು ಯಾವ ಮಟ್ಟಕ್ಕೆ ಬೇಕಾದರೂ ಇಳಿಯಲು ಸಿದ್ಧ’
 ಜಾಕ್ವೆಲಿನ್ ಗೆ ಜೈಲಿಂದಲೇ ಹೋಳಿ ಹಬ್ಬಕ್ಕೆ ವಿಶ್ ಮಾಡಿದ ಸುಕೇಶ್!

‘ಬೇಬಿ ಗರ್ಲ್.. ಐ ಲವ್ ಯು, ನಿನಗೋಸ್ಕರ ನಾನು ಯಾವ ಮಟ್ಟಕ್ಕೆ ಬೇಕಾದರೂ ಇಳಿಯಲು ಸಿದ್ಧ’ ಜಾಕ್ವೆಲಿನ್ ಗೆ ಜೈಲಿಂದಲೇ ಹೋಳಿ ಹಬ್ಬಕ್ಕೆ ವಿಶ್ ಮಾಡಿದ ಸುಕೇಶ್!

ಅಕ್ರಮ ಆಸ್ತಿ ವರ್ಗಾವಣೆ ಹಾಗೂ 200 ಕೋಟಿಗೂ ಹೆಚ್ಚು ಸುಲಿಗೆ ಮಾಡಿ ಜೈಲುಪಾಲಾಗಿರೋ ಮಹಾವಂಚಕ ಸುಕೇಶ್ ಚಂದ್ರಶೇಖರ್ ಸದ್ಯ ತಿಹಾರ್ ಜೈಲಿನಲ್ಲಿ ಕಂಬಿ ಎಣಿಸ್ತಿದ್ದಾನೆ. ಆದ್ರೀಗ ಜೈಲಲ್ಲಿದ್ದುಕೊಂಡೇ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಗೆ ಪತ್ರ ಬರೆದು ಹೋಳಿ ಹಬ್ಬದ ಶುಭಾಶಯ ಕೋರಿದ್ದಾನೆ.

ಇದನ್ನೂಓದಿ : ಹೋಳಿ ಹಬ್ಬದಂದೇ ಇಡೀ ಮಸೀದಿಗೆ ಕಪ್ಪು ಟಾರ್ಪಲ್ – ಪೊಲೀಸರೇ ಸೂಚನೆ ಕೊಟ್ಟಿದ್ದೇಕೆ..?

ಪತ್ರದಲ್ಲಿ ಮಾಧ್ಯಮದವರು, ಸ್ನೇಹಿತರು, ಬೆಂಬಲಿಗರು ಹಾಗೂ ಕಾನೂನು ತಂಡಕ್ಕೂ ಹೋಳಿ ಹಬ್ಬದ ಶುಭಾಶಯ ಕೋರಿದ್ದಾರೆ. ಆದ್ರೆ ಪತ್ರದಲ್ಲಿ ನಟಿ ಜಾಕ್ವೆಲಿನ್ ಬಗ್ಗೆಯೇ ಹೆಚ್ಚು ಬರೆದಿದ್ದಾನೆ. ಜಾಕ್ವೆಲಿನ್​ರನ್ನ ಅತ್ಯಂತ ಅದ್ಭುತ ಹಾಗೂ ಸುಂದರಿ ಎಂದು ಕರೆದಿದ್ದಾನೆ. ಈ ದಿನ, ಬಣ್ಣಗಳ ಹಬ್ಬ, ನಾನು ನಿಮಗೆ ಭರವಸೆ ನೀಡುತ್ತೇನೆ. ನಿಮ್ಮಿಂದ ಮರೆಯಾದ ಬಣ್ಣಗಳು 100 ಪಟ್ಟು  ಹೆಚ್ಚಾಗಿ ನಿಮ್ಮ ಬಳಿ ಬರುತ್ತವೆ. ಈ ವರ್ಷ ನಿಮ್ಮ ಬದುಕು ಪ್ರಕಾಶಮಾನವಾಗುತ್ತದೆ. ಆ ರೀತಿ ಆಗುವಂತೆ ಮಾಡೋದು ನನ್ನ ಜವಾಬ್ದಾರಿ’ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾನೆ. ಹಾಗೇ ‘ಬೇಬಿ ಗರ್ಲ್. ನಿನಗೋಸ್ಕರ ನಾನು ಯಾವ ಮಟ್ಟಕ್ಕೆ ಬೇಕಾದರೂ ಹೋಗಲು ಸಿದ್ಧ. ಐ ಲವ್ ಯು’ ಎಂದು ಜಾಕ್ವೆಲಿನ್​ಗೆ ಶುಭಾಶಯ ಕೋರಿದ್ದಾನೆ.

ಸುಕೇಶ್ ಚಂದ್ರಶೇಖರ್ ಸಹಚರೆ ಪಿಂಕಿ ಇರಾನಿಯಿಂದ ಜಾಕ್ವೆಲಿನ್​ಗೆ ಆತನ ಪರಿಚಯ ಆಗಿತ್ತು. ಸರ್ಕಾರಿ ಅಧಿಕಾರಿ ಎಂದು ಸುಕೇಶ್​​ನನ್ನು ಪಿಂಕಿ ಪರಿಚಯಿಸಿದ್ದಳು. ‘ನಾನು ಸನ್ ಟಿವಿ ಮಾಲೀಕ’ ಎಂದು ಕೂಡ ಸುಕೇಶ್ ಹೇಳಿಕೊಂಡಿದ್ದ. ಜಯಲಲಿತಾ ತನ್ನ ಚಿಕ್ಕಮ್ಮ ಎಂದು ಆತ ಹೇಳಿಕೊಂಡಿದ್ದ.

suddiyaana