‘ಸ್ವಲ್ಪವೇ ದೂರದಲ್ಲಿ ನನ್ನ ಸಾವು ಕಾಣಿಸಿತು. ದೇವರಿಗೆ ನನ್ನ ಧನ್ಯವಾದ’ – ಅಪಾಯದಿಂದ ಪಾರಾದ ನಟ ವಿಶಾಲ್

‘ಸ್ವಲ್ಪವೇ ದೂರದಲ್ಲಿ ನನ್ನ ಸಾವು ಕಾಣಿಸಿತು. ದೇವರಿಗೆ ನನ್ನ ಧನ್ಯವಾದ’ – ಅಪಾಯದಿಂದ ಪಾರಾದ ನಟ ವಿಶಾಲ್

ಶೂಟಿಂಗ್ ವೇಳೆ ನಡೆದ ಅವಘಡದಲ್ಲಿ ತಮಿಳು ನಟ ವಿಶಾಲ್ ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರಾಗಿದ್ದಾರೆ. ನಟ ವಿಶಾಲ್ ಮಾರ್ಕ್ ಆಂಟೋನಿ ಚಿತ್ರದಲ್ಲಿ ನಟಿಸುತ್ತಿದ್ದು, ಚೆನ್ನೈನ ಸ್ಟುಡಿಯೋವೊಂದರಲ್ಲಿ ಚಿತ್ರೀಕರಣ ನಡೆಯುತ್ತಿತ್ತು. ಲಾರಿ​ಗೆ ಸಂಬಂಧಿಸಿದ ದೃಶ್ಯವೊಂದರ ಚಿತ್ರೀಕರಣ ನಡೆಯುತ್ತಿತ್ತು. ಈ ವೇಳೆ ಲಾರಿಚಾಲಕ ನಿಯಂತ್ರಣ ತಪ್ಪಿದ್ದು, ಎಲ್ಲಿ ಲಾರಿ ನಿಲ್ಲಬೇಕೋ ಅಲ್ಲಿ ಲಾರಿಯನ್ನು ನಿಲ್ಲಿಸಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಲಾರಿ ಮುಂದಕ್ಕೆ ನುಗ್ಗಿದೆ. ಅಲ್ಲೇ ಕೆಳಗಡೆ ಮಲಗಿದ್ದ ವಿಶಾಲ್​ ಅವರ ಪಕ್ಕದಲ್ಲೇ ಲಾರಿ ಹಾದು ಹೋಗಿದ್ದು, ನಟ ವಿಶಾಲ್ ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅವಘಡ ಸಂಭವಿಸಿದ ಸ್ಥಳದಲ್ಲಿ ನಾಯಕ ನಟ ವಿಶಾಲ್​ ಸೇರಿದಂತೆ ಅನೇಕ ಸಹ ಕಲಾವಿದರು, 100ಕ್ಕೂ ಹೆಚ್ಚು ಕಾರ್ಮಿಕರು, ತಂತ್ರಜ್ಞರು ಇದ್ದರು. ಲಾರಿ ನಿಯಂತ್ರಣ ಕಳೆದುಕೊಂಡು ತಮ್ಮ ಬಳಿ ಬರುತ್ತಿರುವುದನ್ನು ನೋಡಿ ಕ್ಷಣಾರ್ಧದಲ್ಲೇ ಎಲ್ಲರೂ ತಪ್ಪಿಸಿಕೊಂಡು ಪ್ರಾಣ ಉಳಿಸಿಕೊಂಡಿದ್ದಾರೆ.

ಇದನ್ನೂ ಓದಿ:  ಸೆಲ್ಫಿ ಕಿರಿಕ್​.. ಸೋನು ನಿಗಮ್ & ತಂಡದವರ ಮೇಲೆ ಅಟ್ಯಾಕ್ – ಬೆಚ್ಚಿ ಬೀಳಿಸುವ ವಿಡಿಯೋ ವೈರಲ್!

ವಿಶಾಲ್​ ಅವರು ಸೊಶೀಯಲ್​ಮೀಡಿಯಾದಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದು, ‘ಕೆಲವೇ ಕ್ಷಣ ಸ್ವಲ್ಪವೇ ದೂರದಲ್ಲಿ ನನ್ನ ಸಾವು ಕಾಣಿಸಿತು. ದೇವರಿಗೆ ಧನ್ಯವಾದ ತಿಳಿಸುತ್ತೇನೆ. ಅವಘಡದಲ್ಲಿ ಯಾರಿಗೂ ಯಾವುದೇ ರೀತಿಯ ತೊಂದರೆ ಆಗಿಲ್ಲ. ಸ್ವಲ್ಪ ಸಮಯದ ಬಳಿಕ ಮತ್ತೆ ಶೂಟಿಂಗ್ ಮುಂದುವರೆಸಲಾಯಿತು’ ಎಂದು ಬರೆದುಕೊಂಡಿದ್ದಾರೆ.

 

ಸದ್ಯ ವಿಶಾಲ್​ ಅಪಘಾತದಿಂದ ಪಾರಾಗಿರುವ ವಿಚಾರ ತಿಳಿದ ಅಭಿಮಾನಿಗಳು ನಿಟ್ಟುಸಿರು ಬಿಟ್ಟಿದ್ದಾರೆ. ಮೇಲ್ನೋಟಕ್ಕೆ ತಾಂತ್ರಿಕ ದೋಷದಿಂದ ಈ ಅವಘಡ ಸಂಭವಿಸಿದೆ ಎನ್ನಲಾಗ್ತಿದೆ. ಸದ್ಯ ಅಪಘಾತದ ವಿಡಿಯೋ ಸೊಶೀಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿದೆ.

suddiyaana