ಮೈ ನಡುಗಿಸುವ ಚಳಿಯಲ್ಲೂ ಕೈ ಸುಡುತ್ತಿದೆ ಮಟನ್ ದರ! – ಹೊಸ ವರ್ಷದ ಹೊಸ್ತಿಲಲ್ಲಿ ಮಾಂಸಪ್ರಿಯರಿಗೆ ಶಾಕ್!

ರಾಜ್ಯದಲ್ಲಿ ಚಳಿ ಹೆಚ್ಚಾಗಿದೆ. ಜನ ಮಾಂಸಹಾರಕ್ಕೆ ಹೆಚ್ಚು ಮೊರೆ ಹೋಗುತ್ತಿದ್ದಾರೆ. ಕ್ರಿಸ್ಮಸ್ ಹಾಗೂ ಹೊಸ ವರ್ಷದಿಂದಾಗಿ ಮಾಂಸಕ್ಕೆ ಬೇಡಿಕೆ ಹೆಚ್ಚಾಗುತ್ತಿದ್ದಂತೆ ದರ ಕೂಡ ಏರಿಕೆಯಾಗಿದೆ.
ಇದನ್ನೂ ಓದಿ: ಕಳಪೆ ಮಟ್ಟಕ್ಕೆ ಕುಸಿದ ಸಿಲಿಕಾನ್ ಸಿಟಿ ಏರ್ ಕ್ವಾಲಿಟಿ! – ಬೆಂಗಳೂರಿಗರೇ ಎಚ್ಚರ.. ನಿಮ್ಮ ಹಾರ್ಟ್ ಜೋಪಾನ!
ಚಳಿಗಾಲದ ಮಧ್ಯೆ ನಾನ್ವೆಜ್ ಪ್ರಿಯರಿಗೆ ಬಿಗ್ಶಾಕ್ ಎದುರಾಗಿದೆ. ಒಂದು ಕೆಜಿ ಮಟನ್ಗೆ 900 ರೂಪಾಯಿಯಿಂದ 1ಸಾವಿರ ರೂಪಾಯಿ ದರ ಇದೆ. ಚಿಕನ್ ರೇಟ್ ಕೂಡ ಹೆಚ್ಚಾಗಿದೆ. ಕೆಜಿ 280 ರಿಂದ 300 ರೂಪಾಯಿಗೆ ಏರಿಕೆ ಮಾಡಲಾಗಿದೆ. ಮಟನ್, ಚಿಕನ್ ದರ ನೋಡಿ ಜನರು ಕಂಗಾಲಾಗಿದ್ದಾರೆ.
ಚಳಿಗಾಲದಲ್ಲಿ ನಾನ್ವೆಜ್ ಸೇವನೆ ಮಾಡುವವರ ಸಂಖ್ಯೆ ಹೆಚ್ಚಳವಾಗಿದೆ. ಕಾಲ್ ಸೂಪ್, ಬಿರಿಯಾನಿ ತಿನ್ನುವವವರ ಸಂಖ್ಯೆಯೂ ಕೊಂಚ ಹೆಚ್ಚೇ ಇದೆ. ಇದರಿಂದ ಚಳಿಗಾಲದಲ್ಲಿ ಡಿಮ್ಯಾಂಡ್ ಹೆಚ್ಚಾಗುತ್ತಿದೆ. ಆದ್ರೆ ಡಿಮ್ಯಾಂಡ್ಗೆ ತಕ್ಕಂತೆ ಸಪ್ಲೈ ಆಗ್ತಿಲ್ಲ. ಮತ್ತೊಂದ್ಕಡೆ, ಈ ಕಾಲದಲ್ಲಿ ಮೇಕೆ, ಕುರಿಯ ಬೆಳವಣಿಗೆ ಕೂಡ ಕಮ್ಮಿ ಇರುತ್ತೆ. ಹೀಗಾಗಿ ಮೇಕೆ ಕುರಿ ಮೇಕೆಯನ್ನ ಮಾರಾಟ ಮಾಡೋದು ಕಡಿಮೆಯಾಗಿದೆ. ಅಲ್ಲದೆ ಚಳಿಗಾಲದಲ್ಲಿ ಪ್ರಾಣಿಗಳಿಗೆ ರೋಗ ಹರಡುತ್ತೆ. ಇದ್ರಿಂದಲೂ ಮಾರುಕಟ್ಟೆಗೆ ಮಾಂಸದ ಸಾಗಾಟ ಇಳಿಕೆಯಾಗಿದೆ. ಇವೆಲ್ಲಾ ಕಾರಣದಿಂದಾಗಿ ದರ ಕೂಡ ಜಾಸ್ತಿಯಾಗಿದೆ.
ಹೇಗಿದೆ ಬೆಲೆ ಏರಿಕೆ..?
ಯಾವುದು? ಹಿಂದಿನ ದರ ಈಗಿನ ದರ
ಮಟನ್ ದರ ಕೆ.ಜಿಗೆ 650-750ರೂ 900ರೂ.-1000 ರೂ
ಚಿಕನ್ ದರ ಕೆ.ಜಿಗೆ 250 ರೂ. 280-300ರೂ.
ಮೊಟ್ಟೆ ದರ 1 ಮೊಟ್ಟೆಗೆ 5.5 ರೂ 1 ಮೊಟ್ಟೆಗೆ 7.10/8 ರೂ.

ನೋಡಿರಿ

