ವಿಚ್ಛೇದನಕ್ಕಾಗಿ ಕೌಟುಂಬಿಕ ನ್ಯಾಯಾಲಯ ಮಾತ್ರ ಸಂಪರ್ಕಿಸಿ – ಮದ್ರಾಸ್ ಹೈಕೋರ್ಟ್!

ವಿಚ್ಛೇದನಕ್ಕಾಗಿ ಕೌಟುಂಬಿಕ ನ್ಯಾಯಾಲಯ ಮಾತ್ರ ಸಂಪರ್ಕಿಸಿ – ಮದ್ರಾಸ್ ಹೈಕೋರ್ಟ್!

ಮುಸ್ಲಿಂ ಮಹಿಳೆಯರು ಗಂಡಂದಿರಿಂದ ವಿವಾಹ ವಿಚ್ಛೇದನ ಬಯಸಿದರೆ ಕೌಟುಂಬಿಕ ನ್ಯಾಯಾಲಯದ ಮೂಲಕವೇ ಪಡೆಯಬೇಕು. ಷರಿಯತ್ ಕೌನ್ಸಿಲ್‌ಗಳಂತಹ ಖಾಸಗಿ ಸಂಸ್ಥೆಗಳನ್ನು ಸಂಪರ್ಕಿಸಬಾರದು ಎಂದು ಮದ್ರಾಸ್ ಹೈಕೋರ್ಟ್ ತೀರ್ಪು ನೀಡಿದೆ.

ಇದನ್ನೂ ಓದಿ : ನ್ಯೂಜಿಲೆಂಡ್ ವಿರುದ್ಧ ಸರ್ವಶ್ರೇಷ್ಠ ಗೆಲುವು – ಅದೆಷ್ಟು ದಾಖಲೆಗಳಿಗೆ ಸಾಕ್ಷಿಯಾಯ್ತು ‘ಮೋದಿ’ ಸ್ಟೇಡಿಯಂ?

ಇದೇ ವೇಳೆ ವಿಚ್ಛೇದನ ಸಂಬಂಧ ಖಾಸಗಿ ಸಂಸ್ಥೆಗಳು ನೀಡುವ ಮುಕ್ತ ಪ್ರಮಾಣಪತ್ರಗಳು ಕಾನೂನುಬಾಹಿರ ಎಂದು ನ್ಯಾಯಾಲಯ ಹೇಳಿದೆ. ನ್ಯಾಯಮೂರ್ತಿ ಸಿ. ಶಿವರಾಮನ್ ಅವರ ಪೀಠವು ತಮಿಳುನಾಡು ತೌಹೀದ್ ಜಮಾತ್, ಚೆನ್ನೈನ ಷರಿಯತ್ ಕೌನ್ಸಿಲ್ ನೀಡಿದ ‘ಖುಲಾ’(ವಿಚ್ಛೇದನ) ಪ್ರಮಾಣಪತ್ರವನ್ನು ನ್ಯಾಯಾಧೀಶರು ರದ್ದುಗೊಳಿಸಿದರು ಮತ್ತು ಬೇರೆ ಬೇರೆಯಾದ ದಂಪತಿ ತಮ್ಮ ವಿವಾದಗಳನ್ನು ಪರಿಹರಿಸಲು ಕುಟುಂಬ ನ್ಯಾಯಾಲಯ ಅಥವಾ ತಮಿಳುನಾಡು ಕಾನೂನು ಸೇವೆಗಳ ಪ್ರಾಧಿಕಾರವನ್ನು ಸಂಪರ್ಕಿಸಲು ಸೂಚನೆ ನೀಡಿದ್ದಾರೆ.

ಮುಸ್ಲಿಂ ಪುರುಷರು ಪತ್ನಿಯರಿಗೆ ತಲಾಖ್ ನೀಡುವ ರೀತಿ ಮಹಿಳೆಯರಿಗೂ ಗಂಡಂದಿರಿಗೆ ವಿಚ್ಛೇದನ ನೀಡುವ ಹಕ್ಕಿದೆ. ಇದಕ್ಕೆ ಖುಲಾ ಎಂದು ಹೇಳಲಾಗುತ್ತದೆ. ಸ್ವಯಂಘೋಷಿತ ಕೋರ್ಟ್ ಆದ ಶರಿಯಾ ಸಂಸ್ಥೆಯೊಂದು ಮಹಿಳೆಯೊಬ್ಬರಿಗೆ 2017ರಲ್ಲಿ ಖುಲಾ ಸರ್ಟಿಫಿಕೇಟ್ ನೀಡಿತ್ತು. ಇದನ್ನು ಪ್ರಶ್ನಿಸಿ ಆಕೆಯ ಗಂಡ ಹೈಕೋರ್ಟ್ ಮೊರೆ ಹೋಗಿದ್ದರು. ಇದರ ವಿಚಾರಣೆ ನಡೆಸಿದ ಹೈಕೋರ್ಟ್ ಖುಲಾ (ವಿಚ್ಛೇದನ) ನೀಡುವ ಅಧಿಕಾರ ಖಾಸಗಿ ಕೋರ್ಟ್​ಗಳಿಗಿಲ್ಲ. 1937ರ ಪ್ರಕಾರ ಕೇವಲ ಸರ್ಕಾರಿ ಕೌಟುಂಬಿಕ ನ್ಯಾಯಾಲಯಗಳಿಗೆ ಮಾತ್ರ ಇರುತ್ತದೆ ಎಂದು ಹೇಳಿದೆ.

suddiyaana