ಟ್ವಿಟರ್ ಉದ್ಯೋಗಿಗಳಿಗೆ ಶಾಕ್ ಮೇಲೆ ಶಾಕ್!: ವರ್ಕ್ ಫ್ರಂ ಹೋಮ್ ರದ್ದು ಮಾಡಿದ ಮಸ್ಕ್
ಭವಿಷ್ಯದಲ್ಲಿ ಕಷ್ಟದ ದಿನಗಳನ್ನು ಎದುರಿಸಲು ಸಜ್ಜಾಗಿ ಎಂದ ಮಸ್ಕ್

ಟ್ವಿಟರ್ ಉದ್ಯೋಗಿಗಳಿಗೆ ಶಾಕ್ ಮೇಲೆ ಶಾಕ್!: ವರ್ಕ್ ಫ್ರಂ ಹೋಮ್ ರದ್ದು ಮಾಡಿದ ಮಸ್ಕ್ಭವಿಷ್ಯದಲ್ಲಿ ಕಷ್ಟದ ದಿನಗಳನ್ನು ಎದುರಿಸಲು ಸಜ್ಜಾಗಿ ಎಂದ ಮಸ್ಕ್

ನವದೆಹಲಿ: ಟ್ವಿಟರ್ ಮಾಲೀಕ ಎಲಾನ್ ಮಸ್ಕ್ ಒಂದಿಲ್ಲೊಂದಿಲ್ಲ ಕಾರಣಕ್ಕೆ ಸುದ್ದಿಯಾಗುತ್ತಲೇ ಇದ್ದಾರೆ. ಸುಮಾರು 3,500 ನೌಕರರನ್ನು ವಜಾ ಮಾಡಿದ ಬೆನ್ನಲ್ಲೇ, ಟ್ವಿಟರ್ ಮಾಲೀಕ ಎಲಾನ್ ಮಸ್ಕ್ ಇದೀಗ ನೌಕರರಿಗೆ ಇದ್ದ ವರ್ಕ್ ಫ್ರಂ ಹೋಮ್ ಅನ್ನು ರದ್ದು ಮಾಡಿದ್ದಾರೆ.

ಇದನ್ನೂ ಓದಿ: ಸೇತುವೆ ದುರಂತದಲ್ಲಿ ನದಿಗೆ ಹಾರಿ ಜೀವ ಉಳಿಸಿದವನಿಗೆ ಬಿಜೆಪಿ ಟಿಕೆಟ್!

ಈ ಕುರಿತು ಬುಧವಾರ ತಡರಾತ್ರಿ ಟ್ವಟರ್ ಉದ್ಯೋಗಿಗಳಿಗೆ ಇಮೇಲ್ ಕಳುಹಿಸಿದ್ದು, ಟ್ವಿಟರ್ ಉದ್ಯೋಗಿಗಳಿಗೆ ರಿಮೋಟ್ ಕೆಲಸ (ವರ್ಕ್ ಫ್ರಂ ಹೋಮ್  ಹಾಗೂ ವರ್ಕ್ ಫ್ರಂ ಆಫೀಸ್) ಆಯ್ಕೆ ಇನ್ನು ಮುಂದೆ ಇರುವುದಿಲ್ಲ. ವಾರಕ್ಕೆ ಕನಿಷ್ಠ 40 ಗಂಟೆ ಉದ್ಯೋಗಿಗಳು ಕಚೇರಿಯಲ್ಲಿ ಇರಬೇಕು. ಭವಿಷ್ಯದಲ್ಲಿ ಕಷ್ಟದ ದಿನಗಳನ್ನು ಎದುರಿಸಲು ಸಜ್ಜಾಗಿ ಎಂದು ಹೇಳಿದ್ದಾರೆ.

ಎಲಾನ್ ಮಸ್ಕ್ ಟ್ವಿಟರ್ ಅನ್ನು ಸ್ವಾಧೀನ ಪಡಿಸಿಕೊಂಡು ಎರಡು ವಾರಗಳು ಸಂದಿವೆ. ತಮ್ಮ ತೆಕ್ಕೆಗೆ ಟ್ವಿಟರ್ ಬರುತ್ತಿದ್ದಂತೆಯೇ ಸಿಇಒ ಪರಾಗ್ ಅಗರ್  ವಾಲ್ ಅವರನ್ನು ಮನೆಗೆ ಕಳುಹಿಸಿದ್ದರು. ಬಳಿಕ ಆಡಳಿತ ಮಂಡಳಿಯನ್ನು ವಿಸರ್ಜಿಸಿದ್ದರು. ಇದರ ಬೆನ್ನಲ್ಲೇ ಮೂರುವರೆ ಸಾವಿರ ಉದ್ಯೋಗಿಗಳನ್ನು ವಜಾ ಮಾಡಿದ್ದಲ್ಲದೇ, ಬ್ಲೂಟಿಕ್ ಹೊಂದಿರುವ ಬಳಕೆದಾರರಿಗೆ ಮಾಸಿಕ $8 ಶುಲ್ಕ ವಿಧಿಸಲು ಆರಂಭಿಸಿದ್ದರು.

suddiyaana