ಕೋಲಾರದಲ್ಲಿ ಕಣಕ್ಕಿಳಿಯುವ ಮೊದಲು ಸಿದ್ದರಾಮಯ್ಯಗೆ ಎಚ್ಚರಿಕೆ
ಸಮಸ್ಯೆ ಪರಿಹರಿಸಿಕೊಂಡು ಕೋಲಾರಕ್ಕೆ ಬನ್ನಿ- ಸಿದ್ದುಗೆ ಮುನಿಯಪ್ಪ ಸಂದೇಶ

ಕೋಲಾರದಲ್ಲಿ ಕಣಕ್ಕಿಳಿಯುವ ಮೊದಲು ಸಿದ್ದರಾಮಯ್ಯಗೆ ಎಚ್ಚರಿಕೆಸಮಸ್ಯೆ ಪರಿಹರಿಸಿಕೊಂಡು ಕೋಲಾರಕ್ಕೆ ಬನ್ನಿ- ಸಿದ್ದುಗೆ ಮುನಿಯಪ್ಪ ಸಂದೇಶ

ಬೆಂಗಳೂರು: ವಿಧಾನಸಭೆ ಚುನಾವಣೆಗೆ ಕೋಲಾರದಲ್ಲಿ ಸ್ಪರ್ಧೆ ಮಾಡಲು ಮನಸು ಮಾಡಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಮಾಜಿ ಸಂಸದ ಕೆ.ಎಚ್ ಮುನಿಯಪ್ಪ ಪರೋಕ್ಷವಾಗಿಯೇ ಎಚ್ಚರಿಕೆ ನೀಡಿದ್ದಾರೆ. ಜೊತೆಗೆ ತನ್ನ ಸಹಕಾರವಿಲ್ಲದಿದ್ದರೆ, ತನ್ನನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದಿದ್ದರೆ ಗೆಲುವು ಕಷ್ಟ ಅನ್ನೋ ರೀತಿಯಲ್ಲೇ ಸಂದೇಶವನ್ನೂ  ರವಾನಿಸಿದ್ದಾರೆ. ಕೋಲಾರ ಕಾಂಗ್ರೆಸ್‌ನಲ್ಲಿ ಸಮಸ್ಯೆಯಿದೆ. ಇದನ್ನೆಲ್ಲಾ ಸರಿಪಡಿಸಿಕೊಂಡು ಕೋಲಾರಕ್ಕೆ ಬಂದರೆ ಸ್ಪರ್ಧೆಗೆ ಅನುಕೂಲವಾಗಬಹುದು. ನೀವು ಮೂಲ ಕಾಂಗ್ರೆಸ್ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಿ. ಕಳೆದ ಬಾರಿ ಬಿಜೆಪಿ ಪರವಾಗಿ ಕೆಲಸ ಮಾಡಿದವರನ್ನು ನಂಬಿಕೊಂಡು ಕೋಲಾರಕ್ಕೆ ಬರಬೇಡಿ. ಅವರನ್ನು ನಂಬಿಕೊಂಡು ಬಂದರೆ ಗೆಲುವು ಕಷ್ಟವಾಗಬಹುದು ಎಂದು ಕೆ.ಎಚ್ಚ ಮುನಿಯಪ್ಪ ಹೇಳಿದ್ದಾರೆ.

ಇದನ್ನೂ ಓದಿ:  ಅರಮನೆ ಮಾದರಿಯಂತೆ ಬಸ್ ಶೆಲ್ಟರ್ ನಿರ್ಮಾಣ -ಸಂಸದರಿಗೆ ಶಾಸಕರ ಸವಾಲ್

ದೇವನಹಳ್ಳಿಯಿಂದ ಸ್ಪರ್ಧೆ ಮಾಡಲು ಮುನಿಯಪ್ಪ ಮುಂದಾಗಿದ್ದಾರೆ ಅನ್ನೋ ವಿಚಾರದ ಬಗ್ಗೆ ಸ್ಪಷ್ಟಪಡಿಸಿದ ಮುನಿಯಪ್ಪ, ಹೈಕಮಾಂಡ್ ತೀರ್ಮಾನದಂತೆ ನಾನು ಹೋಗಬೇಕಾಗುತ್ತದೆ. ಒಂದು ವರ್ಷದಿಂದ ಒತ್ತಾಯವಿದೆ. ಆದರೆ ಇಲ್ಲಿಯವರೆಗೂ ಹೈಕಮಾಂಡ್‌ ಏನು ಹೇಳಿಲ್ಲ ಎಂದಿದ್ದಾರೆ. ಇನ್ನು ಸಿದ್ದರಾಮಯ್ಯ ಕೋಲಾರಕ್ಕೆ ಬಂದಾಗ ತಾನು ಗೈರಾದ ವಿಚಾರದ ಬಗ್ಗೆ ಕೇಳಿ ಬಂದ ಮಾತುಗಳ ಬಗ್ಗೆಯೂ ಮುನಿಯಪ್ಪ ಸ್ಪಷ್ಟನೆ ನೀಡಿದ್ದಾರೆ. ಗುಜರಾತ್ ನಲ್ಲಿ ಚುನಾವಣೆಯ ಕೆಲಸ ಇತ್ತು. ಈ ಬಗ್ಗೆ ಸಿದ್ದರಾಮಯ್ಯ ಅವ್ರ ಜೊತೆಯೂ ಮಾತಾಡಿದ್ದೇನೆ ಅಂತಾ ಸ್ಪಷ್ಪ ಪಡಿಸಿದ್ರು. ಕೋಲಾರದಲ್ಲಿ ಸಿದ್ದರಾಮಯ್ಯ ಅವ್ರಿಗೆ ರಿಸ್ಕ್ ಏನು ಇಲ್ಲ. ಕಾಂಗ್ರೆಸ್ ನಲ್ಲಿ ಅವರನ್ನು ಸೋಲಿಸಲು ಯಾರೂ ಸಂಚು ಮಾಡುತ್ತಿಲ್ಲ. ನಾವೆಲ್ಲ ಒಂದಾಗಿ ಕೆಲಸ ಮಾಡಿದ್ರೆ ಗೆಲ್ಲಲು ಕಷ್ಟವಿಲ್ಲ ಎಂದು ಮುನಿಯಪ್ಪ ಹೇಳಿದ್ದಾರೆ.

ಆಗುತ್ತದೆ. ಇದೇ ವೇಳೆ ಮುನಿಯಪ್ಪ ಅವರು, ರಮೇಶ್ ಕುಮಾರ್ ಬಣದ ವಿರುದ್ದ ಅಸಮಾಧಾನ ಹೊರಹಾಕಿದ್ದಾರೆ.

suddiyaana