ಮೊಟ್ಟೆ ಮುನಿರತ್ನಗೆ ಮತ್ತೆ ಜೈಲಾಗುತ್ತಾ? – ರೇಪ್, ಏಡ್ಸ್ ಟ್ರ್ಯಾಪ್ ನಿಜ!
ಭಯಾನಕ ಸತ್ಯ ಬಿಚ್ಚಿಟ್ಟ SIT!

ಮೊಟ್ಟೆ ಮುನಿರತ್ನಗೆ ಮತ್ತೆ ಜೈಲಾಗುತ್ತಾ? – ರೇಪ್, ಏಡ್ಸ್ ಟ್ರ್ಯಾಪ್ ನಿಜ!ಭಯಾನಕ ಸತ್ಯ ಬಿಚ್ಚಿಟ್ಟ SIT!

ರಾಜರಾಜೇಶ್ವರಿ ನಗರ ಕ್ಷೇತ್ರದ ಬಿಜೆಪಿ ಶಾಸಕ ಹಾಗೂ ಮಾಜಿ ಸಚಿವ ಮುನಿರತ್ನಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ರೇಪ್ ಹಾಗೂ ತಮ್ಮ ವಿರೋಧಿಗಳನ್ನು ಎಚ್‌ಐವಿ ಏಡ್ಸ್‌ ಪೀಡಿತರ ಮೂಲಕ ಹನಿಟ್ರ್ಯಾಪ್ ಬಲೆಗೆ ಬೀಳಿಸಿ ಏಡ್ಸ್ ಹರಡುವಿಕೆಗೆ ಶಾಸಕರು ದುಷ್ಕೃತ್ಯ ಎಸಗಿದ್ದು ನಿಜವೆಂದು  ಎಸ್‌ಐಟಿ ಹೇಳಿದೆ.. ಈ ಬಗ್ಗೆ   ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಎಸ್‌ಐಟಿ  ಚಾರ್ಜ್ ಶೀಟ್ ಸಲ್ಲಿಸಿದೆ. ಅಂದಹಾಗೇ ಕಳೆದ ಸೆಪ್ಟೆಂಬರ್‌ನಲ್ಲಿ ಕಗ್ಗಲೀ ಪುರ ಪೊಲೀಸ್ ಠಾಣೆಯಲ್ಲಿ ಶಾಸಕ ಮುನಿರತ್ನ ಹಾಗೂ ಸಹಚರರ ವಿರುದ್ಧ ಅತ್ಯಾಚಾರ ಆರೋಪ ಮಾಡಿ ಆರ್.ಆರ್.ನಗರ ಕ್ಷೇತ್ರದ ಬಿಜೆಪಿ ಕಾರ್ಯಕರ್ತೆ ದೂರು ನೀಡಿದ್ದರು. ಪ್ರಕರಣದ ತನಿಖೆಗೆ ಸರ್ಕಾರ ಎಸ್‌ಐಟಿ ರಚಿಸಿತ್ತು. ಈ ಬಗ್ಗೆ ಸುದೀರ್ಘ ತನಿಖೆ ನಡೆಸಿದ ಎಸ್‌ಐಟಿ, ಶಾಸಕರ ವಿರುದ್ಧ ಆತ್ಯಾ ಚಾರ ಹಾಗೂ ಅವರ ಸಹಚರರ ಮೇಲೆ ಕೃತ್ಯಕ್ಕೆ ಸಹಕರಿಸಿದ ಆರೋಪದಡಿ ಆರೋಪ ಪಟ್ಟಿ ಸಲ್ಲಿಸಿದೆ.

 

Full Gfx:  2,481 ಪುಟ, 180 ಸಾಕ್ಷಿಗಳ ಹೇಳಿಕೆ  

 

ಕೋರ್ಟ್‌ಗೆ ಮುನಿರತ್ನ ಹಾಗೂ ಮೂವರು ಸಹಚರರ ವಿರುದ್ಧ 2481 ಪುಟಗಳ ಆರೋಪ ಪಟ್ಟಿಯನ್ನು ಎಸ್ ಐಟಿ ಸಲ್ಲಿಸಿದೆ. ಇದರಲ್ಲಿ 146 ಸಾಕ್ಷಿಗಳ ಹೇಳಿಕೆ, 350 ದಾಖಲೆ ಗಳು ಸಲ್ಲಿಕೆಯಾಗಿವೆ. ಅಲ್ಲದೆ ನ್ಯಾಯಾಧೀಶರ ಮುಂದೆ ಸಿಆರ್ ಪಿಸಿ 164 ರಡಿ ದೂರುದಾರೆ ಸೇರಿ 8 ಮಂದಿ ಹೇಳಿಕೆ ನೀಡಿದ್ದಾರೆ. ವೈದ್ಯಕೀಯ ಹಾಗೂ ಎಫ್‌ಎಸ್ಎಲ್ ವರದಿಯಗಳನ್ನು ಕೂಡ ಆರೋಪಪಟ್ಟಿಯಲ್ಲಿ ಲಗತ್ತಿಸಲಾಗಿದೆ ಎಂದು ಮೂಲಗಳು ಹೇಳಿವೆ.

ಯಾವ್ಯಾವ ಸೆಕ್ಷನಗಳಡಿ ಜಾರ್ಜ್‌ಶೀಟ್?

ಐಪಿಸಿ 354ಎ -ಲೈಂಗಿಕ ಕಿರುಕುಳ , 354ಸಿ  ಅನುಮತಿ ಇಲ್ಲದೆ ಮಹಿಳೆಯ ಆಶ್ಲೀಲ ದೃಶ್ಯಾವಳಿ ಚಿತ್ರೀಕರಣ , 376(2)ಎನ್ – ನಿರಂತರ ಅತ್ಯಾ ಚಾರ , 308 -ಸಂತ್ರಸ್ತೆಯ ಕೊಲ್ಲುವ ಉದ್ದೇಶ , 120ಬಿ  ಅಪರಾಧಿಕ ಸಂಚು , 504  ಉದೇಶ ಪೂರ್ವಕ ಅವಮಾನ , 506  ಜೀವ ಬೆದರಿಕೆ , 270  ಅಪಾಯಕಾರಿ ರೋಗ ಹರಡುವಿಕೆ  ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆ-2000 ಸೇರಿ ಇತರೆ ಪರಿಚ್ಛೇದಗಳಡಿ ಶಾಸಕ ಮುನಿರತ್ನ ಹಾಗೂ ಸಹಚರರ ವಿರುದ್ಧ ಆರೋಪ ಪಟ್ಟಿ ಸಲ್ಲಿಕೆಯಾಗಿದೆ.)

  ಏನಿದು ಮುನಿರತ್ನ ಕೇಸ್‌?

ಕೊರೋನಾ ಲಾಕ್‌ಡೌನ್ ಸಮಯದಲ್ಲಿ  ಸಂತ್ರತ್ತೆಯ ಸಾಮಾಜಿಕ ಸೇವಾ ಕಾರ್ಯಗಳನ್ನು ನೋಡಿ ಶಾಸಕ ಮುನಿರತ್ನ  ಪರಿಚಯಿಸಿಕೊಂಡಿದ್ರಂತೆ.. ನಂತರ ಆಕೆಯನ್ನ ಜೆ.ಪಿ.ಪಾರ್ಕ್ ಸಮೀಪದ  ಗೋಡೌನ್‌ಗೆ ಸಾಮಾಜಿಕ ಸೇವಾ ಕಾರ್ಯಗಳ ಕುರಿತ ಮಾತುಕತೆ ನೆಪದಲ್ಲಿ ಕರೆಸಿಕೊಂಡು ಜೀವ  ಬೆದರಿಕೆ ಹಾಕಿ ಅತ್ಯಾಚಾರ ಎಸಗಿದ್ರಂತೆ. ನಂತರ ನಿನ್ನ ಕುಟುಂಬ ಸದಸ್ಯರನ್ನು ಕೊಲ್ಲುವುದಾಗಿ ಹಾಗೂ ಅಶ್ಲೀಲ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಆಪ್ ಲೋಡ್ ಮಾಡಿ ಮರ್ಯಾದೆ ಕಳೆಯುವುದಾಗಿ ಬೆದರಿಸಿ ಲೈಂಗಿಕವಾಗಿ ಶೋಷಿಸಿದ್ದರು. ಅಲ್ಲದೆ ಸಚಿವರಾಗಿದ್ದಾಗ ವಿಕಾಸ ಸೌಧದ ಕಚೇರಿಯಲ್ಲೂ ಅತ್ಯಾಚಾರ ಎಸಗಿದ್ದರಂತೆ. ಜೆ.ಪಿ.ನಗರ ವಾರ್ಡ್ ಮಾಜಿ ಸದಸ್ಯೆ ಪತಿಗೆ ಏಡ್ಸ್ ರೋಗ ಹರಡಲು ಏಡ್ಸ್ ಸಂತ್ರಸ್ತೆಯನ್ನು ಹನಿಟ್ರ್ಯಾಪ್‌ಗೆ ಬಳಸಿಕೊಂಡಿದ್ದರು ಎಂದು ಆರೋಪಿಸಿ ಸೆ.18 ರಂದು ರಾಮನಗರ ಜಿಲ್ಲೆಯ ಕಗ್ಗಲಿಪುರ ಪೊಲೀಸ್ ಠಾಣೆಯಲ್ಲಿ ಬಿಜೆಪಿ ಕಾರ್ಯಕರ್ತೆ ದೂರು ನೀಡಿದ್ದರು. ಪ್ರಕರಣದಲ್ಲಿ ಶಾಸಕರನ್ನು ರಾಮನಗರ ಪೊಲೀಸರು ಬಂಧಿಸಿದ್ದರು. ಬಳಿಕ ಮುನಿರತ್ನ ವಿರುದ್ಧ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿದ ರಾಜ್ಯ ಸರ್ಕಾರವು, ಈ ಬಗ್ಗೆ ತನಿಖೆಗೆ ಎಸ್‌ಐಟಿ ರಚಿಸಿತ್ತು. ಈಗ ಈ ಬಗ್ಗೆ SITಗೆ ಕೋರ್ಟ್‌ಗೆ ಮನಿರತ್ನ ರೇಪ್, ಏಡ್ಸ್ ಟ್ರ್ಯಾಪ್ ನಿಜವೆಂದು ಚಾರ್ಜ್ ಶೀಟ್ ಸಲ್ಲಿಸಿದ್ದಾರೆ.

Kishor KV

Leave a Reply

Your email address will not be published. Required fields are marked *