ಬಿಗ್ ಬಾಸ್ನಲ್ಲಿ ಯಾರು ಗೆಲ್ಲಬೇಕು ಅನ್ನೋದು ಮೊದಲೇ ಫಿಕ್ಸಿಂಗ್ ಆಗಿತ್ತಾ? – ರಿಯಾಲಿಟಿ ಶೋ ಮೇಲೆ ಇದೆಂತಾ ಆರೋಪ?

ಪ್ರತಿ ಬಾರಿ ರಿಯಾಲಿಟಿ ಶೋ ಫಿನಾಲೆ ನಡೆದಾಗ ಒಂದಲ್ಲ ಒಂದು ಕೊಂಕು ಮಾತುಗಳು, ಆರೋಪಗಳು ಕೇಳಿಬರುತ್ತಲೇ ಇರುತ್ತವೆ. ಇದ್ರಿಂದ ಬಿಗ್ಬಾಸ್ ರಿಯಾಲಿಟಿ ಶೋ ಕೂಡ ಹೊರತಲ್ಲ. ತಮ್ಮಿಷ್ಟದ ಸ್ಪರ್ಧಿಯೇ ಟ್ರೋಫಿ ಗೆದ್ದರೆ ವೀಕ್ಷಕರು ಖುಷಿ ಪಡುತ್ತಾರೆ. ಒಂದು ವೇಳೆ ತಮಗೆ ಇಷ್ಟ ಇಲ್ಲದ ಸ್ಪರ್ಧಿಗೆ ಟ್ರೋಫಿ ಸಿಕ್ಕರೆ ಹಲವು ಆರೋಪಗಳನ್ನು ಮಾಡಲಾಗುತ್ತದೆ. ಈ ಬಾರಿಯೂ ಹಾಗೇ ಆಗಿದೆ. ʼಬಿಗ್ಬಾಸ್ ಹಿಂದಿ ಸೀಸನ್ 17ʼ ಫಿನಾಲೆ ಮುಗಿದ್ದು, ಮುನಾವರ್ ಫಾರೂಖಿ ಟ್ರೋಪಿ ಗೆದ್ದಿದ್ದಾರೆ. ಇವರ ಗೆಲುವು ಅಭಿಮಾನಿಗಳಿಗೆ ಖುಷಿ ಕೊಟ್ಟಿದ್ರೆ, ಇತ್ತ ಇನ್ನೊಂದು ವರ್ಗದ ಜನರು ಈ ಶೋ ಬಗ್ಗೆ ಕೊಂಕು ಮಾತಾಡುತ್ತಿದ್ದಾರೆ. ಅಷ್ಟೇ ಅಲ್ಲದೇ ಕೆಲ ಆರೋಪಗಳನ್ನು ಮಾಡುತ್ತಿದ್ದಾರೆ.
ಇದನ್ನೂ ಓದಿ: ಬಿಗ್ಬಾಸ್ ಮನೆಯ ಸಿಂಹಿಣಿಗೆ ಸೋಲು – ಕರ್ನಾಟಕದ ಕ್ರಷ್ ಸಂಗೀತಾ ಎಡವಿದ್ದು ಎಲ್ಲಿ?
ಹೌದು, ಬಿಗ್ ಬಾಸ್ ಹಿಂದಿ ಸೀಸನ್ 17’ ಫಿನಾಲೆ ಮುಗಿದಿದೆ. ಫಿನಾಲೆಗೆ ಅಂಕಿತಾ ಲೋಖಂಡೆ, ಮನ್ನಾರಾ ಚೋಪ್ರಾ, ಅಭಿಷೇಕ್ ಕುಮಾರ್, ಮುನಾವರ್ ಫಾರೂಖಿ, ಅರುಣ್ ಮಶೆಟ್ಟಿ ಅವರು ಬಂದಿದ್ದರು. ಈ ಟಾಪ್ 5 ಸ್ಪರ್ಧಿಗಳಲ್ಲಿ ಅಂತಿಮವಾಗಿ ಮುನಾವರ್ ಫಾರೂಖಿ ಟ್ರೋಫಿ ಎತ್ತಿಹಿಡಿದಿದ್ದಾರೆ. ಶೋ ಗೆದ್ದ ಮುನಾವರ್ ಅವರಿಗೆ 50 ಲಕ್ಷ ರೂಪಾಯಿ ಹಣ ಸಿಕ್ಕಿದೆ. ಹ್ಯೂಂಡೈ ಕ್ರೆಟಾ ಕಾರು ನೀಡಲಾಗಿದೆ. ಅವರ ಅಭಿಮಾನಿಗಳಿಗೆ ಈ ಗೆಲುವು ಖುಷಿ ನೀಡಿದೆ. ಆದರೆ ಇನ್ನೊಂದು ವರ್ಗದ ಜನರು ಕೊಂಕು ನುಡಿಯುತ್ತಿದ್ದಾರೆ. ಇದು ಫಿಕ್ಸಿಂಗ್ನಿಂದ ಆದ ಗೆಲುವು ಎಂದು ಕೆಲವರು ಸೋಶಿಯಲ್ ಮೀಡಿಯಾದಲ್ಲಿ ಆರೋಪ ಮಾಡುತ್ತಿದ್ದಾರೆ.
ಇದೀಗ ಮುನಾವರ್ ಅವರು ಮಾಧ್ಯಮವೊಂದರ ಸಂದರ್ಶನದಲ್ಲಿ ಫಿಕ್ಸಿಂಗ್ ಆರೋಪದ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ. ‘ನಾನು ಫಿಕ್ಸಿಂಗ್ ವಿನ್ನರ್ ಆಗಿದ್ದಿದ್ದರೆ ಇಷ್ಟೆಲ್ಲ ಕಷ್ಟ ಅನುಭವಿಸಬೇಕಿರಲಿಲ್ಲ. ಎಲ್ಲವೂ ನನಗೆ ಸುಲಭವಾಗಿ ಸಿಗುತ್ತಿತ್ತು. ಇಡೀ ಸೀಸನ್ನಲ್ಲಿ ನಾನು ಕಷ್ಟಪಟ್ಟಿದ್ದೇನೆ. ನನ್ನನ್ನು ಫಿಕ್ಸ್ಡ್ ವಿನ್ನರ್ ಎಂದು ಕರೆಯುವವರು ಕುಳಿತುಕೊಂಡು ಪೂರ್ತಿ ಸೀಸನ್ನ ಸಂಚಿಕೆಗಳನ್ನು ನೋಡಲಿ. ಫಿಕ್ಸಿಂಗ್ ಅಲ್ಲ ಎಂಬುದು ಆಗ ಗೊತ್ತಾಗುತ್ತದೆ’ ಎಂದು ಮುನಾವರ್ ಫಾರೂಖಿ ಹೇಳಿದ್ದಾರೆ.
‘ನನಗೆ ಜನರಿಂದ ಪ್ರೀತಿ ಸಿಕ್ಕಿದೆ. ಯಾರೆಲ್ಲ ನನ್ನನ್ನು ಫಿಕ್ಸ್ಡ್ ವಿನ್ನರ್ ಎಂದು ಕರೆಯುತ್ತಿದ್ದಾರೋ ಅವರ ಅಭಿಪ್ರಾಯವನ್ನು ನಾನು ಬದಲಾಯಿಸಲು ಸಾಧ್ಯವಿಲ್ಲ. ಬಿಗ್ ಬಾಸ್ಗೆ ಹೋಗುವುದಕ್ಕೂ ಮುನ್ನ ನಾನು ಜನರ ಅಭಿಪ್ರಾಯ ಬದಲಾಯಿಸಲು ಪ್ರಯತ್ನಿಸುತ್ತಿದ್ದೆ. ಆದರೆ ಈಗ ಎಲ್ಲರನ್ನೂ ಬದಲಾಯಿಸಲು ಆಗಲ್ಲ ಎಂಬುದು ನನಗೆ ಗೊತ್ತಾಗಿದೆ’ ಎಂದು ಮುನಾವರ್ ಫಾರೂಖಿ ಹೇಳಿದ್ದಾರೆ. ಈ ಮೊದಲು ಸ್ಟ್ಯಾಂಡಪ್ ಕಾಮಿಡಿ ಮಾಡುವಾಗ ಸಲ್ಮಾನ್ ಖಾನ್ ಅವರನ್ನು ಮುನಾವರ್ ಟ್ರೋಲ್ ಮಾಡಿದ್ದರು. ಹಾಗಿದ್ದರೂ ಕೂಡ ಮುನಾವರ್ ಅವರೇ ಗೆದ್ದಿರುವುದು ಅನೇಕರಿಗೆ ಅಚ್ಚರಿ ಮೂಡಿಸಿದೆ.