ರೋHIT.. ಪಾಂಡ್ಯಾ OUT! -ನೀತಾ ಅಂಬಾನಿ ಎಡವಿದ್ದೆಲ್ಲಿ?- ಮರಿ ತೆಂಡುಲ್ಕರ್ ತಪ್ಪೇನು?
ಸೋಲಿನೊಂದಿಗೆ ಆರಂಭವಾದ ಮುಂಬೈನ ಐಪಿಎಲ್‌ನ ಅಭಿಯಾನ ಸೋಲಿನೊಂದಿಗೇ ಅಂತ್ಯವಾಗಿದೆ.. ಹೊಸ ಕ್ಯಾಫ್ಟನ್‌ನೊಂದಿಗೆ, ಹೊಸ ರೀತಿಯಲ್ಲಿ ಐಪಿಎಲ್‌ಗೆ ಎಂಟ್ರಿ ಕೊಟ್ಟಿದ್ದ ಮುಂಬೈಗೆ ಗೆಲುವಿನ ಟ್ರ್ಯಾಕ್‌ಗೆ ಹೊರಳಲು ಸಾಧ್ಯವಾಗಲೇ ಇಲ್ಲ.. ರೋಹಿತ್ ಅಭಿಮಾನಿಗಳ ತೀವ್ರ ವಿರೋಧ ಎದುರಿಸಿದ ಮುಂಬೈ ಇಂಡಿಯನ್ಸ್ ಈ ಬಾರಿಯ ಐಪಿಎಲ್‌ನಲ್ಲಿ ಮಾಲೀಕರ ನಿರ್ಧಾರಕ್ಕೂ ದೊಡ್ಡ ಬೆಲೆ ತೆರಬೇಕಾಯಿತು.. ಎಲ್‌ಎಸ್‌ಜಿ ವಿರುದ್ಧ ಗೆದ್ದಾದರೂ ಮಾನ ಉಳಿಸಿಕೊಳ್ಳಲು ಇದ್ದ ಅವಕಾಶವನ್ನೂ ಮಿಸ್ ಮಾಡಿಕೊಂಡಿದೆ.. ಟೇಬಲ್ ಟಾಪರ್ ಆಗುವ ಕನಸಿನೊಂದಿಗೆ ಐಪಿಎಲ್‌ಗೆ ಎಂಟ್ರಿ ಕೊಟ್ಟವರು ಬಾಟಮ್ ಟಾಪರ್ ಆಗಿ ಎಕ್ಸಿಟ್ ಆಗಿದ್ದಾರೆ.. ಸಚಿನ್ ಪುತ್ರ ಅರ್ಜುನ್‌ಗೆ ಕಡೆಯ ಪಂದ್ಯದಲ್ಲಿ ಅವಕಾಶ ಕೊಟ್ಟಿದ್ದನ್ನು ಬಿಟ್ಟರೆ ಈ ಮುಂಬೈ ಇಂಡಿಯನ್ಸ್ ತಂಡದ ಮತ್ತದೇ ನೀರಸ ಆಟವಾಡಿದೆ.. ಹಾಗಿದ್ದರೂ ರೋಹಿತ್ ಅಭಿಮಾನಿಗಳಿಗಂತೂ ಖುಷಿಯ ಸಿಂಚನವಾಗಿದೆ.. ಹಿಟ್‌ಮ್ಯಾನ್ ಒಳ್ಳೆಯ ಇನ್ನಿಂಗ್ಸ್ ಕಟ್ಟಿದ್ದು, ಟಿ20 ವರ್ಲ್ಡ್‌ಕಪ್‌ನಲ್ಲಿ ಭರ್ಜರಿ ಆಟವಾಡುವ ನಿರೀಕ್ಷೆ ಮೂಡಿಸಿದ್ದಾರೆ.
ಇದನ್ನೂ ಓದಿ: ಟೆಸ್ಟ್ ಮ್ಯಾಚ್.. ರಾಹುಲ್ಲಾ ರನ್ಸ್ ಎಲ್ಲಪ್ಪಾ – 4 ಪಂದ್ಯಗಳಿಂದ ಬಾಲ್ ತಿಂದಿದ್ದೇ ಸಾಧನೆ?
ಇದಕ್ಕಿಂತ ಕೆಟ್ಟ ಆಟ ಆಡೋದಿಕ್ಕೆ ಸಾಧ್ಯವೇ ಇಲ್ಲ ಎಂಬಂತೆ ಐಪಿಎಲ್‌ನ ಈ ಸೀಸನ್‌ನಲ್ಲಿ ಮುಂಬೈ ಆಟ ಮುಗಿಸಿದೆ. ಐದು ಬಾರಿ ಟೀಮನ್ನು ಚಾಂಪಿಯನ್ ಮಾಡಿದ್ದ ರೋಹಿತ್ ಶರ್ಮಾ ಕಳೆದ ಬಾರಿಯೂ ತಂಡವನ್ನು ಪ್ಲೇಆಫ್‌ಗೆ ಕೊಂಡೊಯ್ದಿದ್ದರು.. 2022ರಲ್ಲೂ ಹತ್ತನೇ ಸ್ಥಾನಕ್ಕೆ ಕುಸಿದಿದ್ದ ಮುಂಬೈ ಇಂಡಿಯನ್ಸ್ ತಂಡವನ್ನು 2023ರಲ್ಲಿ ಪ್ಲೇಆಫ್‌ಗೆ ಕೊಂಡೊಯ್ಯುವಲ್ಲಿ ರೋಹಿತ್ ಯಶಸ್ವಿಯಾಗಿದ್ದರು.. ಕಡೆಯದಾಗಿ 2020ರಲ್ಲಿ ಐಪಿಎಲ್ ಕಪ್ ಗೆದ್ದಿದ್ದ ಮುಂಬೈ ಇಂಡಿಯನ್ಸ್ ನಂತರದ ನಾಲ್ಕು ಸೀಸನ್‌ಗಳಲ್ಲಿ ಎರಡು ಬಾರಿ ಕಡೆಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ..
ಇಷ್ಟಕ್ಕೂ ಈ ಸೀಸನ್ ಶುರುವಾಗೋದಿಕ್ಕೂ ಮೊದಲೇ ಮುಂಬೈ ಇಂಡಿಯನ್ಸ್ ಟೀಂ ಮ್ಯಾನೇಜ್‌ಮೆಂಟ್, ರೋಹಿತ್ ಶರ್ಮಾರನ್ನು ಕ್ಯಾಫ್ಟನ್ಸಿಯಿಂದ ಕೆಳಗಿಳಿಸಿ, ಹಾರ್ದಿಕ್ ಪಾಂಡ್ಯಾಗೆ ಪಟ್ಟಕಟ್ಟಲು ತೀರ್ಮಾನಿಸಿತ್ತು.. 2023ರಲ್ಲಿ ಟೀಂ ಇಂಡಿಯಾವನ್ನು ವರ್ಲ್ಡ್‌ಕಪ್‌ನ ಫೈನಲ್‌ವರೆಗೂ ಕೊಂಡೊಯ್ದಿದ್ದ ರೋಹಿತ್ ಶರ್ಮಾಗೆ ಇದು ಅತಿದೊಡ್ಡ ಆಘಾತವಾಗಿತ್ತು.. ಸದಾ ಖುಷಿಯಿಂದ ಎಲ್ಲರನ್ನೂ ನಗಿಸುವ ರೋಹಿತ್ ಶರ್ಮಾ, ಮುಂಬೈ ಇಂಡಿಯನ್ಸ್ ತಂಡದಲ್ಲಿ ಒಂದು ಒಳ್ಳೆಯ ಟೀಂ ಸ್ಪಿರಿಟ್ ತಂದಿದ್ದರು.. ಸಚಿನ್ ತೆಂಡೂಲ್ಕರ್, ಸನತ್ ಜಯಸೂರ್ಯ, ರಿಕಿ ಪಾಂಟಿಂಗ್‌ರಂತಹ ಘಟಾನುಘಟಿ ವಿಶ್ವಶ್ರೇಷ್ಠ ಬ್ಯಾಟ್ಸ್‌ಮನ್‌ಗಳು ತಂಡದಲ್ಲಿದ್ದರೂ ಮುಂಬೈ ಇಂಡಿಯನ್ಸ್ ಐಪಿಎಲ್‌ನಲ್ಲಿ ಕಪ್ ಗೆಲ್ಲೋದಿಕ್ಕೆ ಸಾಧ್ಯ ಆಗಿರಲಿಲ್ಲ.. ಆದರೆ 2013ರಲ್ಲಿ ರೋಹಿತ್ ಶರ್ಮಾಗೆ ನಾಯಕತ್ವ ನೀಡುತ್ತಿದ್ದಂತೆ ಮೊದಲ ಸೀಸನ್‌ನಲ್ಲೇ ಕಪ್ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು.. ಅಲ್ಲಿಂದ ನಂತರ ಕೇವಲ 7 ವರ್ಷಗಳ ಅಂತರದಲ್ಲಿ 5 ಬಾರಿ ಐಪಿಎಲ್ ಗೆದ್ದಿದ್ದು ಕಡಿಮೆ ಸಾಧನೆಯೇನಲ್ಲ.. ಆದ್ರೆ ಹೀಗೆ ಕಪ್ ಮೇಲೆ ಕಪ್ ಗೆದ್ದಿದ್ದರಿಂದಲೇ ಟೀಂ ಮ್ಯಾನೇಜ್‌ಮೆಂಟ್‌ಗೂ ಕೇವಲ ಮೂರೇ ಮೂರು ಸೀಸನ್ ಗಳಲ್ಲಿ ಟೈಟಲ್ ಗೆಲ್ಲಲು ಸಾಧ್ಯವಾಗದೇ ಹೋದಾಗ, ತಂಡಕ್ಕೆ ಸರ್ಜರಿ ತರುವಷ್ಟು ಆತುರ ಶುರುವಾಗಿತ್ತು.. ಒಂದೂ ಕಪ್ ಗೆಲ್ಲದ ಆರ್‌ಸಿಬಿ.. ಪಂಜಾಬ್ ಕಿಂಗ್ಸ್.. ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಇದುವರೆಗೂ ತಮ್ಮ ತಂಡದಲ್ಲಿ ಬದಲಾವಣೆ ಮಾಡುವಾಗ ಯಾವುದೇ ರೀತಿಯಲ್ಲೂ ಕಾಂಟ್ರವರ್ಸಿ ಮಾಡಿಲ್ಲ.. ಜೊತೆಗೆ ಕಪ್ ಗೆದ್ದಿಲ್ಲವೆಂದು ಆಕಾಶವೇ ತಲೆ ಮೇಲೆ ಕಳಚಿಬಿದ್ದವರಂತೆ ವರ್ತಿಸಿಲ್ಲ.. ಆದ್ರೆ ಅಂಬಾನಿ ಒಡೆತನ ಮುಂಬೈ ಟೀಂ ಮಾತ್ರ, ನಾವಿರೋದೇ ಕಪ್ ಗೆಲ್ಲೋಕೆ ಎಂಬ ರೀತಿಯಲ್ಲಿ ಏಕಾಏಕಿ ತಂಡದ ಕ್ಯಾಫ್ಟನ್ ಬದಲಿಸಿ, ಮುಂಬೈ ಟೀಂನಲ್ಲಿ ಕೋಟಿ ಕೋಟಿ ಅಭಿಮಾನಿಗಳಿಗೆ ಆಘಾತ ನೀಡಿತ್ತು.. ಟೀಂ ಇಂಡಿಯಾದ ಕ್ಯಾಫ್ಟನ್ ಮತ್ತು ಹಿಟ್‌ಮ್ಯಾನ್ ಖ್ಯಾತಿಯ ರೋಹಿತ್‌ಗೆ ಕೇವಲ ಮುಂಬೈ ಮಾತ್ರವಲ್ಲ ಇಡೀ ಪ್ರಪಂಚದ ಉದ್ದಗಲಕ್ಕೂ ಅಭಿಮಾನಿಗಳಿದ್ದಾರೆ.. ರೋಹಿತ್ ಕಾರಣಕ್ಕೇ ಮುಂಬೈ ತಂಡವನ್ನು ಬೆಂಬಲಿಸುವ ಅಸಂಖ್ಯ ಫ್ಯಾನ್ಸ್ ಇದ್ದಾರೆ.. ಆದರೆ ಟೀಂ ಇಂಡಿಯಾದಲ್ಲಿ ಅತ್ಯಂತ ಸೆಲ್ಫಿಷ್ ಆಟಗಾರ ಎಂಬ ರೀತಿಯಲ್ಲೇ ವರ್ತಿಸುವ ಹಾರ್ದಿಕ್ ಪಾಂಡ್ಯಾರನ್ನು ಕೇವಲ ಜಿಟಿಯನ್ನು ಸತತ ಎರಡು ಬಾರಿ ಫೈನಲ್‌ಗೆ ಕೊಂಡೊಯ್ದು, ಒಮ್ಮೆ ಕಪ್ ಕೂಡ ಗೆಲ್ಲಿಸಿದ್ರು ಎಂಬ ಕಾರಣಕ್ಕೆ ಮುಂಬೈ ಟೀಂ ಮ್ಯಾನೇಜ್‌ಮೆಂಟ್ ಖರೀದಿಸಿತ್ತು.. ವಾಸ್ತವಾಗಿ ಹಾರ್ದಿಕ್ ಪಾಂಡ್ಯಾಗೆ ಎಷ್ಟು ಹಣಕೊಟ್ಟು ಖರೀದಿಸಿದ್ದಾರೆ ಎಂದು ಸೀಕ್ರೆಟ್ ರಿವೀಲ್ ಆಗದಿದ್ದರೂ, ಪಾಂಡ್ಯಾಗೆ ಎಲ್ಲಾ ಯಾರೂ ಊಹಿಸಲು ಸಾಧ್ಯವಿಲ್ಲದಷ್ಟು ದೊಡ್ಡ ಮೊತ್ತದ ಹಣಕೊಟ್ಟು ಖರೀದಿಸಿರುವ ಸಾಧ್ಯತೆಯೇ ಹೆಚ್ಚು.. ಆದ್ರೆ ನೀತಾ ಅಂಬಾನಿ ಇಷ್ಟೆಲ್ಲಾ ಕಷ್ಟಪಟ್ಟು ಟೀಂ ಮ್ಯಾನೇಜ್‌ಮೆಂಟ್‌ನ ಸಲಹೆಯಂತೆ ಪಾಂಡ್ಯಾರನ್ನು ಖರೀದಿಸಿದ್ರೂ ಫಲಿತಾಂಶ ಮಾತ್ರ ಶೂನ್ಯ.. ಐಪಿಎಲ್‌ನಲ್ಲಿ ಸತತ ಎರಡು ಬಾರಿ ತಂಡವನ್ನು ಫೈನಲ್‌ಗೆ ಕೊಂಡೊಯ್ದ ಖ್ಯಾತಿ ಹೊಂದಿದ್ದ ಕ್ಯಾಫ್ಟನ್ ಹಾರ್ದಿಕ್ ಪಾಂಡ್ಯಾ ಮೂರನೇ ಸೀಸನ್‌ನಲ್ಲಿ ಬಾಟಮ್ ಟಾಪರ್ ಆಗುವಂತಾಗಿದೆ.. ಕನಿಷ್ಠ ಲಕ್ನೋ ವಿರುದ್ಧ ಗೆದ್ದಿರುತ್ತಿದ್ದರೆ 9ನೇ ಸ್ಥಾನಕ್ಕೆ ಏರುವ ಅವಕಾಶವಾದರೂ ಇತ್ತು.. ಆದ್ರೆ ಅದೂ ಸಾಧ್ಯವಾಗದೆ 10ನೇ ಸ್ಥಾನಕ್ಕೆ ಕುಸಿಯುವಂತಾಗಿದೆ..
ಎಲ್‌ಎಸ್‌ಜಿ ಮತ್ತು ಮುಂಬೈ ನಡುವಿನ ಪಂದ್ಯ ಐಪಿಎಲ್‌ನಲ್ಲಿ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಿತ್ತು.. ಇದೇ ಕಾರಣಕ್ಕೆ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಪುತ್ರ ಅರ್ಜುನ್ ತೆಂಡುಲ್ಕರ್‌ಗೆ ತಂಡದಲ್ಲಿ ಸ್ಥಾನ ನೀಡಲಾಗಿತ್ತು.. ಹೊಸ ಬಾಲ್‌ನೊಂದಿಗೆ ಬೌಲಿಂಗ್ ಮಾಡಿದ ಅರ್ಜುನ್ ಮೊದಲೆರಡು ಓವರ್‌ಗಳಲ್ಲಿ ಚೆನ್ನಾಗಿಯೇ ಬೌಲಿಂಗ್ ಮಾಡಿದ್ದರು.. ಈ ಮುಂಬೈ ಇಂಡಿಯನ್ಸ್‌ನಲ್ಲಿ ಇರೋಬರೋ ಆಟಗಾರರಿಗೆಲ್ಲಾ ಅವಕಾಶ ನೀಡಲಾಗ್ತಿದೆ.. ಆದ್ರೆ ಬಹುತೇಕ ತೆಂಡೂಲ್ಕರ್ ಪುತ್ರ ಎಂಬ ಒಂದೇ ಕಾರಣಕ್ಕೆ ಅರ್ಜುನ್‌ಗೆ ಸರಿಯಾದ ಅವಕಾಶ ಸಿಗುತ್ತಿಲ್ಲ ಎನ್ನುವುದು ಕೂಡ ಸ್ಪಷ್ಟವಾಗಿ ಗೋಚರಿಸುತ್ತಿದೆ.. ಮುಂಬೈ ಬದಲು ಐಪಿಎಲ್‌ನ ಬೇರೆ ಯಾವುದೇ ತಂಡದಲ್ಲಿಇದ್ದಿರುತ್ತಿದ್ದರೂ ಅರ್ಜುನ್‌ಗೆ ಹೆಚ್ಚು ಅವಕಾಶ ಸಿಗುವ ಇತ್ತು.. ಆದ್ರೆ ಅಪ್ಪನ ಕಾರಣಕ್ಕಾಗಿ ಮುಂಬೈ ಬಿಟ್ಟು ಬೇರೆ ಯಾವುದೇ ತಂಡ ಕೂಡ ಅರ್ಜುನ್ ಖರೀದಿಗೆ ಮುಂದಾಗ್ತಿಲ್ಲ.. ಮುಂಬೈ ತಂಡದಲ್ಲೂ ಸಚಿನ್ ಮಗ ಎಂಬ ಕಾರಣಕ್ಕೋ ಏನೋ ಅರ್ಜುನ್ ನನ್ನು ಪ್ಲೇಯಿಂಗ್ ಇಲೆವೆನ್ ಸೇರಿಸಲು ಹಿಂದೆ ಮುಂದೆ ನೋಡ್ತಿದ್ದಾರೆ.. ಹೀಗಾಗಿ ಸಚಿನ್ ಪುತ್ರ ಒಂದು ರೀತಿಯಲ್ಲಿ ಐಪಿಎಲ್‌ನ ಪರ್ಮನೆಂಟ್ ಬೆಂಚ್ ಕಾಯಿಸುವ ಆಟಗಾರನಾಗಿಯೇ ಉಳಿದಿದ್ದಾರೆ..
ಲಕ್ನೋ ಸೂಪರ್ ಜೈಂಟ್ಸ್‌ನ ಕಡೆಯ ಪಂದ್ಯದಲ್ಲಿ ಕೆಎಲ್‌ರಾಹುಲ್ ಉತ್ತಮವಾಗಿ ಬ್ಯಾಟ್ ಬೀಸಿದ್ದಾರೆ.. ಜೊತೆಗೆ ನಿಕೋಲಸ್ ಪೂರನ್ ಮಾತ್ರ ಸತತ ಎರಡನೇ ಪಂದ್ಯದಲ್ಲೂ ಸಿಡಿಲಬ್ಬರದ ಬ್ಯಾಟಿಂಗ್ ಮೂಲಕ ಗಮನ ಸೆಳೆದಿದ್ದಾರೆ.. ಮುಂದಿನ ಟಿ20 ವರ್ಲ್ಡ್‌ಕಪ್‌ನಲ್ಲಿ ಪೂರನ್ ಅಪಾಯಕಾರಿ ಬ್ಯಾಟ್ಸ್‌ಮನ್ ಆಗೋದ್ರಲ್ಲಿ ಅನುಮಾನವೇ ಇಲ್ಲ.. ಇದು ವೆಸ್ಟಿಂಡೀಸ್ ಟೀಂಗಂತೂ ಖುಷಿಯ ವಿಚಾರ.. ಪೂರನ್ ಅಬ್ಬರಿಸಿದ್ರೆ, ಟಿ20 ವರ್ಲ್ಡ್‌ಕಪ್‌ನಲ್ಲಿ ಕೆರಿಬಿಯನ್ ತಂಡವನ್ನು ಅಲುಗಾಡಿಸೋದು ಕಷ್ಟವಿದೆ..
ಮುಂಬೈ ಸೋತರೂ ಹಿಟ್‌ಮ್ಯಾನ್ ಅಭಿಮಾನಿಗಳಿಗಂತೂ ಖುಷಿಯಾಗಿದೆ.. ಯಾಕಂದ್ರೆ ರೋಹಿತ್ ಶರ್ಮಾ ಕಡೆಯ ಪಂದ್ಯದಲ್ಲಿ ಅಧ್ಭುತವಾಗಿ ಆಡಿದ್ದಾರೆ.. 38 ಎಸೆತೆಗಳಲ್ಲಿ ಭರ್ಜರಿ ಮೂರು ಸಿಕ್ಸರ್‌ಗಳ ಜೊತೆಗೆ 68 ರನ್ ಬಾರಿಸಿದ್ದಾರೆ.. ಟಿ20 ವರ್ಲ್ಡ್‌ಕಪ್ ನಲ್ಲೂ ರೋಹಿತ್ ಇದೇ ರೀತಿಯಲ್ಲಿ ಹಿಟ್ ಮಾಡಿದ್ರೆ ಇಂಡಿಯಾ ವರ್ಲ್ಡ್‌ಕಪ್ ಗೆಲ್ಲೋದನ್ನು ತಪ್ಪಿಸಲು ಯಾರಿಗೂ ಸಾಧ್ಯವೇ ಇಲ್ಲ..
ಇನ್ನು ಹಿಟ್‌ಮ್ಯಾನ್ ಔಟಾಗುವವರೆಗೂ ತಂಡಕ್ಕೆ ಗೆಲ್ಲಲು ಒಳ್ಳೆಯ ಅವಕಾಶವಿತ್ತು. ಅಷ್ಟೇ ಅಲ್ಲ. ತಂಡದ ಕ್ಯಾಫ್ಟನ್ ಹಾರ್ದಿಕ್ ಪಾಂಡ್ಯಾ ಚೆನ್ನಾಗಿ ಆಡಿದರೂ ಸಾಕಿತ್ತು.. ಮುಂಬೈ ಗೆದ್ದು ಬೀಗುವ ಅವಕಾಶವಿತ್ತು.. ಆದ್ರೆ ಹಾರ್ದಿಕ್ ಮಾತ್ರ ಒತ್ತಡದಲ್ಲಿಯೇ ಬ್ಯಾಟಿಂಗ್ ಮಾಡಿದಂತಿತ್ತು.. 13 ಎಸೆತಗಳಲ್ಲಿ ಕೇವಲ 16 ರನ್‌ಗಳಿಸಿ ಔಟಾಗಿದ್ದರಿಂದ ಮುಂಬೈ ಸೋಲುವುದು ಖಾತ್ರಿಯಾಗಿತ್ತು..
ಮುಂಬೈ ತಂಡದಲ್ಲಿ ಕಡೆಯದಾಗಿ ನಮನ್ ಧಿರ್ ಆಟದ ವೈಖರಿ ಮಾತ್ರ ಸೋಲಿನಲ್ಲೂ ಹೊಸ ಭರವಸೆ ಮೂಡಿಸಿದೆ.. ಕಡೆಯ ಓವರ್‌ವರೆಗೂ ಪಂದ್ಯವನ್ನು ಕುತೂಹಲದಿಂದ ನೋಡುವಂತೆ ಮಾಡಿದ್ದು ಇದೇ ನಮನ್.. ಕಡೆಯ ಓವರ್‌ನಲ್ಲಿ 34 ರನ್ ಬೇಕಿದ್ದಾಗ ಮೊದಲ ಎಸೆತ ಸಿಕ್ಸರ್‌ಗಟ್ಟಿದ್ದರು.. ಎರಡನೇ ಎಸೆತದಲ್ಲೂ ಸಿಕ್ಸರ್ ಬಾರಿಸಲು ಮುಂದಾದಾಗ ಬೌಂಡರಿ ಲೈನ್‌ನಲ್ಲಿ ಕೃಣಾಲ್ ಪಾಂಡ್ಯಾ ಅದ್ಭುತ ಫೀಲ್ಡಿಂಗ್ ಮೂಲಕ ಸಿಕ್ಸರ್‌ಗೆ ಹೋಗುತ್ತಿದ್ದ ಬಾಲ್ಅನ್ನು ತಡೆದರು.. ಇದ್ರಿಂದಾಗಿ ಕೇವಲ ಒಂದು ರನ್ ಮಾತ್ರ ಸಿಕ್ಕಿತು.. ನಂತರದ ಮೂರು ಎಸೆತಗಳಲ್ಲಿ ಮುಂಬೈ ವಿಕೆಟ್ ಕಳೆದುಕೊಂಡು ಕಡೆಯ ಎಸೆತ ಮಾತ್ರ ನಮನ್‌ಗೆ ಸಿಕ್ಕಿತ್ತು.. ಆ ಎಸೆತವನ್ನೂ ನಮನ್ ಸಿಕ್ಸರ್‌ಗಟ್ಟುವ ಮೂಲಕ, ಅವಕಾಶ ಸಿಗುತ್ತಿದ್ದರೆ ಆರು ಎಸೆತದಲ್ಲೂ ಆರು ಸಿಕ್ಸ್ ಬಾರಿಸುತ್ತಿದ್ದೆ ಎಂಬ ರೀತಿಯಲ್ಲಿ ಬೇಸರದಿಂದಲೇ ಬ್ಯಾಟಿಂಗ್ ಮುಗಿಸಿದ್ರು.. 28 ಎಸೆತಗಳಲ್ಲಿ 62 ರನ್ ಹೊಡೆದ ನಮನ್, ಮುಂಬೈ ಇಂಡಿಯನ್ಸ್ ತಂಡಕ್ಕೆ ಮುಂದಿನ ಸೀಸನ್‌ನಲ್ಲೂ ನನ್ನನ್ನು ಮರೆಯಬೇಡಿ ಎಂಬ ಸಂದೇಶ ರವಾನಿಸಿದ್ದಾರೆ.. ಏನೇ ಆದ್ರೂ ಈ ಸೀಸನ್‌ನಲ್ಲಿ ಕೆಟ್ಟದಾಗಿ ಆಡಿ ಹೊರಬಿದ್ದ ಮುಂಬೈ ಇಂಡಿಯನ್ಸ್ ಮುಂದಿನ ಸೀಸನ್‌ನಲ್ಲಿ ಬಹುತೇಕ ರೋಹಿತ್ ಶರ್ಮಾ ಇಲ್ಲದೆಯೇ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚು.. ರೋಹಿತ್ ಶರ್ಮಾ ಮುಂಬೈ ಬದಲು ಬೇರೆ ಯಾವ ಟೀಂನಲ್ಲಿ ಕಾಣಿಸಿಕೊಳ್ತಾರೆ ಎಂಬುದು ಹಿಟ್‌ಮ್ಯಾನ್ ಅಭಿಮಾನಿಗಳಿಗಿರುವ ಕಾತರ..