ಯುವತಿಯ ಮುಖಕ್ಕೆ ಶಾಪವಾಯ್ತು ದುಬಾರಿ ಫೇಶಿಯಲ್!‌ – ಅಂದವಾಗಿ ಕಾಣಿಸಬೇಕೆಂದುಕೊಂಡವಳ ಮುಖವೇ ಸುಟ್ಟೋಯ್ತು!

ಯುವತಿಯ ಮುಖಕ್ಕೆ ಶಾಪವಾಯ್ತು ದುಬಾರಿ ಫೇಶಿಯಲ್!‌ – ಅಂದವಾಗಿ ಕಾಣಿಸಬೇಕೆಂದುಕೊಂಡವಳ ಮುಖವೇ ಸುಟ್ಟೋಯ್ತು!

ಯುವತಿಯರು ತಾವು ಅಂದವಾಗಿ ಕಾಣಬೇಕೆಂದು ಸೌಂದರ್ಯ ವರ್ಧಕಗಳನ್ನು ಬಳಸುತ್ತಾರೆ. ಹೆಚ್ಚು ಅಂದವಾಗಿ ಕಾಣಬೇಕೆಂದು ಬ್ಯೂಟಿ ಪಾರ್ಲರ್‌ಗಳಿಗೆ ತೆರಳುತ್ತಾರೆ. ಏನೇನೋ ಫೇಶಿಯಲ್‌ಗಳನ್ನು ಮಾಡಿಸಿಕೊಳ್ಳುತ್ತಾರೆ. ಇದಕ್ಕಾಗಿ ಸಾವಿರಾರು ರೂಪಾಯಿ ಹಣ ಖರ್ಚು ಮಾಡುತ್ತಾರೆ. ಇಲ್ಲೊಬ್ಬಳು ಯುವತಿ ತಾನು ಅಂದವಾಗಿ ಕಾಣಬೇಕು ಎಂದು ದುಬಾರಿ ಫೇಶಿಯಲ್‌ ಮಾಡಿಸಿದ್ದಾಳೆ. ಆದರೆ ಈ ದುಬಾರಿ ಫೇಶಿಯಲ್‌ ಆಕೆಯ ಅಂದವನ್ನೇ ಕಸಿದುಕೊಂಡಿದೆ. ಅಂದವಾಗಿ ಕಾಣಬೇಕೆಂದುಕೊಂಡವಳ ಮುಖವೇ ಸುಟ್ಟುಹೋಗಿದೆ.

ಇದನ್ನೂ ಓದಿ: ‘ಟೈಟಾನಿಕ್’ ಹಡಗಿನ ಅವಶೇಷಗಳನ್ನು ನೋಡಲು ಹೋದಾಗ ದುರಂತ – ಪ್ರವಾಸಿಗರಿದ್ದ ಜಲಾಂತರ್ಗಾಮಿ ನಾಪತ್ತೆ..!

ಈ ಘಟನೆ ಮುಂಬೈನಲ್ಲಿ ನಡೆದಿದೆ. ಯುವತಿಯೊಬ್ಬಳು ಫೇಶಿಯಲ್ ಮಾಡಿಸಿಕೊಳ್ಳಬೇಕೆಂದು ಬ್ಯೂಟಿಪಾರ್ಲರ್‌ಗೆ ತೆರಳಿದ್ದಾರೆ. ಪಾರ್ಲರ್‌ನಲ್ಲಿ ದುಬಾರಿ ಫೇಶಿಯಲ್‌ ಮಾಡಿಸಿಕೊಳ್ಳುವಂತೆ ಅಲ್ಲಿನ ಸಿಬ್ಬಂದಿ ಸಲಹೆ ನೀಡಿದ್ದರು. ಅವರು ಸಲಹೆಯಂತೆ ಜೂನ್ 17 ರಂದು ಯುವತಿ ಬರೋಬ್ಬರಿ 17,500 ರೂಪಾಯಿ ಬೆಲೆಯ ಫೇಶಿಯಲ್‌ ಮಾಡಿಸಿಕೊಂಡಿದ್ದಾಳೆ. ಮುಖದ ಮಸಾಜ್ ಟ್ರೀಟ್ಮೆಂಟ್‌ ಬಳಿಕ ಮಹಿಳೆಯ ಮುಖದ ಚರ್ಮಕ್ಕೆ ಸುಟ್ಟ ಗಾಯಗಳಾಗಿದ್ದು, ಮತ್ತು ಶಾಶ್ವತ ಹಾನಿಗೊಳಗಾಗಿದೆ. ಈ ಹಿನ್ನೆಲೆ ಆಕೆ ಬ್ಯೂಟಿಪಾರ್ಲರ್‌ ವಿರುದ್ಧ ದೂರು ನೀಡಿದ್ದಾಳೆ.

ಯುವತಿಯು ಫೇಶಿಯಲ್‌ ಮಾಡಿಸಿಕೊಂಡ ಬಳಿಕ ಆಕೆಗೆ ಮುಖ ಉರಿಯಲು ಆರಂಭವಾಗಿದೆ. ಬಳಿಕ ಸುಟ್ಟ ಗಾಯವಾದಂತೆ ಮುಖದಲ್ಲಿ ಕಲೆ ಮೂಡಲು ಆರಂಭಿಸಿದೆ. ಹೀಗಾಗಿ ಆಕೆ ವೈದ್ಯರ ಬಳಿ ತೆರಳಿದ್ದಾಳೆ. ಈ ವೇಳೆ ಫೇಶಿಯಲ್‌ ನಿಂದಾಗಿ ಮುಖಕ್ಕೆ ಸುಟ್ಟ ಗಾಯಗಳಾಗಿದ್ದು ಶಾಶ್ವತ ಹಾನಿಗೊಳಗಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಬಳಿಕ ಯುವತಿ ಪೊಲೀಸರಿಗೆ ದೂರು ನೀಡಿದ್ದಾರೆ.

ಯುವತಿಯ ಸುಟ್ಟು ಹೋದ ಮುಖದ ಫೋಟೋಗಳು ಸೋಶಿಯಲ್‌ ಮೀಡಿಯಾದಲ್ಲಿ ಭಾರಿ ವೈರಲ್‌ ಆಗುತ್ತಿದೆ. ಟ್ವಿಟರ್‌ ಬಳಕೆದಾರರು ಅಂತಹ  ಸಲೂನ್‌ಗಳನ್ನು ನಿಯಂತ್ರಿಸಬೇಕು ಎಂದು ಹೇಳಿದ್ದಾರೆ. ಪಾರ್ಲರ್‌ಗಳ ಮೇಲೆ ಯಾವುದೇ ಕಾನೂನು ಇಲ್ಲ, ಅದಕ್ಕಾಗಿಯೇ ಅವು ನಗರದಾದ್ಯಂತ ನಾಯಿಕೊಡೆಗಳಂತೆ ಬೆಳೆಯುತ್ತಿದೆ. ಮತ್ತು ಪ್ರತಿಯೊಬ್ಬರೂ ರಾತ್ರೋರಾತ್ರಿ ಶ್ರೀಮಂತರಾಗಲು ಬಯಸಿದಾಗ ಇಂತಹ ಸಮಸ್ಯೆಗಳು ಸ್ಫೋಟಗೊಳ್ಳುತ್ತವೆ  ಎಂದು ಮತ್ತೊಬ್ಬರು ಬರೆದಿದ್ದಾರೆ. ಮತ್ತೊಬ್ಬ ಬಳಕೆದಾರರು ಒಳ್ಳೆಯ ಬ್ಯೂಟಿಷಿಯನ್ ಜೊತೆಗೆ, ಮುಖವು ವಿಶ್ರಾಂತಿ ಮತ್ತು ಹಿತಕರವಾಗಿರುತ್ತದೆ. ಆದರೆ ಕೆಲವೊಮ್ಮೆ ಕೆಲವು ಕ್ರೀಮ್‌ಗೆ ಅಲರ್ಜಿಯ ಪ್ರತಿಕ್ರಿಯೆ, ತಪ್ಪು ಮಸಾಜ್ ತಂತ್ರಗಳು ಅಥವಾ ಬ್ಯೂಟಿಷಿಯನ್ ಕಡೆಯಿಂದ ಅಜ್ಞಾನದಿಂದಾಗಿ ಒಳ್ಳೆಯದಕ್ಕಿಂತ ಹೆಚ್ಚು ಹಾನಿ ಮಾಡುತ್ತದೆ  ಎಂದು ಹೇಳಿದ್ದಾರೆ.

suddiyaana