ಪಕ್ಷಿಯ ಜೀವ ಉಳಿಸಲು ಹೋಗಿ 1 ಲಕ್ಷ ಕಳೆದುಕೊಂಡ ಮಹಿಳೆ!

ಪಕ್ಷಿಯ ಜೀವ ಉಳಿಸಲು ಹೋಗಿ 1 ಲಕ್ಷ ಕಳೆದುಕೊಂಡ ಮಹಿಳೆ!

ನವದೆಹಲಿ: ಪಕ್ಷಿಯೊಂದರ ಜೀವ ಉಳಿಸಲು ಹೋಗಿ ಮಹಿಳೆಯೊಬ್ಬರು ಬರೋಬ್ಬರಿ 1 ಲಕ್ಷ ರೂಪಾಯಿ ಹಣ ಕಳೆದುಕೊಂಡಿರುವ ಘಟನೆ ಮುಂಬೈನಲ್ಲಿ ನಡೆದಿದೆ.

ಮುಂಬೈ ಮೂಲದ ಧ್ವನಿ ಮೆಹ್ತಾ ಎಂಬ ಮಹಿಳೆಯೊಬ್ಬರು ಪ್ರಸಿದ್ಧ ಸುಡಿಯೋವೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಆಕೆ ರಸ್ತೆಯಲ್ಲಿ ಹೋಗುತ್ತಿರುವ ವೇಳೆ ಪಕ್ಷಿಯೊಂದು ಗಾಯಗೊಂಡು ಅರೆ ಜೀವ ಸ್ಥಿತಿಯಲ್ಲಿತ್ತು. ಇದನ್ನು ಕಂಡ ಆಕೆ ಆ ಪಕ್ಷಿಯ ಸಹಾಯಕ್ಕೆ ಧಾವಿಸಿದ್ದಾರೆ. ಆ ಪಕ್ಷಿಯನ್ನು ಆಕೆ ಕೈಯಲ್ಲಿ ಹಿಡಿದುಕೊಂಡು ಚಿಕಿತ್ಸೆ ಕೊಡಿಸಲೆಂದು ಅಲ್ಲೇ ಸುತ್ತಮುತ್ತ ವೈದ್ಯರಿಗಾಗಿ ಹುಡುಕಾಡಿದ್ದಾರೆ. ಯಾವುದೇ ವೈದ್ಯರು ಸಿಗದಿರುವ ಕಾರಣ ಆಕೆ ಗೂಗಲ್‌ ನಲ್ಲಿ ವೈದ್ಯರಿಗಾಗಿ ಹುಡುಕಾಟ ನಡೆಸಿದ್ದಾರೆ.

ಇದನ್ನೂ ಓದಿ: ಕುನೋ ರಾಷ್ಟ್ರೀಯ ಉದ್ಯಾನವನಕ್ಕೆ ಮತ್ತೊಂದು ಚೀತಾ – ವಾಸಸ್ಥಾನದಲ್ಲಿ ಹೇಗಿರಬೇಕು ಗೊತ್ತಾ ವಾತಾವರಣ?

ಮೆಹ್ತಾ ಅವರು ಗೂಗಲ್‌ ನಲ್ಲಿ ಸಿಕ್ಕ ಟೋಲ್‌ ಫ್ರೀ ನಂಬರ್‌ ವೊಂದಕ್ಕೆ ಕರೆ ಮಾಡಿದ್ದಾರೆ. ಕರೆ ಸ್ವೀಕರಿಸಿದ ವ್ಯಕ್ತಿ ದೂರು ನೀಡಲು ಅಪ್ಲೀಕೇಶನ್‌ ವೊಂದನ್ನು ಭರ್ತಿ ಮಾಡಿ ಎಂದು ಹೇಳಿದ್ದಾರೆ. ಎನ್‌ ಜಿಒ ಹೇಳಿದ್ದೆಂದು ಈ ಕೆಲಸವನ್ನು ಧ್ವನಿ ಮೆಹ್ತಾ ಮಾಡಿದ್ದಾರೆ. ಅದರಲ್ಲಿದ್ದ ಮಾಹಿತಿಯನ್ನು ಹಾಕಿದ್ದಾರೆ. ಅಪ್ಲೀಕೇಶನ್‌ ಫಿಲ್‌ ಮಾಡಲು ನಿಗದಿತ ಶುಲ್ಕವಿದ್ದರೂ ಧ್ವನಿ ಮೆಹ್ತಾ ಅವರು ಇದನ್ನು ಪೂರ್ತಿಗೊಳಿಸಿದ್ದಾರೆ. ಈ ಪ್ರಕ್ರಿಯೆ ನಡೆದ ಬಳಿಕವೂ ಅತ್ತ ಕಡೆಯಿಂದ ಯಾವ ಸಹಾಯವೂ ಬಂದಿಲ್ಲ. ಇದಾದ 4 ದಿನಗಳ ಬಳಿಕ ರೈಲಿನಲ್ಲಿ ಸಂಚರಿಸುತ್ತಿದ್ದ ಧ್ವನಿ ಮೆಹ್ತಾ ಅವರ ಮೊಬೈಲ್‌ ಗೆ 99,988 ರೂ. ಕಡಿತವಾಗಿರುವ ಸಂದೇಶ ಬಂದಿದೆ. ಈ ವೇಳೆಯೇ ಅವರಿಗೆ ತಾನು ವಂಚಕರ ಬಲೆಗೆ ಬಿದ್ದಿದ್ದೇನೆ ಎನ್ನುವುದರ ಅರಿವಾಗಿದೆ.

ಆಕೆ ಘಟನೆಯ ಬಗ್ಗೆ ಸೈಬರ್ ಕ್ರೈಂ ಇಲಾಖೆಗೆ ಆನ್‌ಲೈನ್‌ನಲ್ಲಿ ವರದಿ ಮಾಡಿದ್ದಾರೆ. ಬಳಿಕ ಠಾಣೆಗೆ ಆಗಮಿಸಿ ಲಿಖಿತ ದೂರು ಸಲ್ಲಿಸಿದ್ದಾಳೆ. ಸದ್ಯ ಪೊಲೀಸರು ಈ ಸಂಬಂಧ ದೂರು ದಾಖಲಿಸಿಕೊಂಡು ವಂಚಕರ ಪತ್ತೆಗೆ ಬಲೆ ಬೀಸಿದ್ದಾರೆ.

suddiyaana