ಮುಂಬೈ ವಿರುದ್ಧ ಚೆನ್ನೈ ಸವಾಲ್ – ಸಿಎಸ್ಕೆ ಪರ ಸ್ಪೆನ್ಸರ್ ಜಾನ್ಸನ್ ಎಂಟ್ರಿ, ಮುಂಬೈ ಸೇರಿಕೊಂಡ ವಿಲ್ ಜಾಕ್ಸ್

ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳ ನಡುವಿನ ಸೆಣಸಾಟಕ್ಕೆ ಕೌಂಟ್‌ಡೌನ್ ಶುರುವಾಗಿದೆ. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಈ ಪಂದ್ಯ ನಡೆಯಲಿದೆ. ಇದರ ಮಧ್ಯೆ ಈ ಎರಡೂ ತಂಡಗಳಿಗೆ ಗುಡ್‌ನ್ಯೂಸ್ ಸಿಕ್ಕಿದೆ.
ಇದನ್ನೂ ಓದಿ:RCB ಹಿಂದಿಕ್ಕಿದ RR – LSG ಬ್ಯಾಟರ್ ಗಳ ZERO ರೇಸ್
ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಆಸ್ಟ್ರೇಲಿಯನ್ ವೇಗಿ ಸ್ಪೆನ್ಸರ್ ಜಾನ್ಸನ್ ಎಂಟ್ರಿಯಾಗಿದ್ದಾರೆ. ಕೆಕೆಆರ್ ವಿರುದ್ಧದ ಕಳೆದ ಪಂದ್ಯದಲ್ಲಿ ಗಾಯಗೊಂಡಿದ್ದ ವೇಗಿ ಖಲೀಲ್ ಅಹ್ಮದ್ ಅವರು ತಂಡದಿಂದ ಹೊರಗುಳಿದಿದ್ದಾರೆ. ಹೀಗಾಗಿ ಸಿಎಸ್‌ಕೆ ಬೌಲಿಂಗ್ ವಿಭಾಗ ಸ್ವಲ್ಪ ಡಲ್ ಆಗಿತ್ತು. ಇದೀಗ ಗುರುವಾರ (ಏಪ್ರಿಲ್ 23) ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿರುವ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಸ್ಪೆನ್ಸರ್ ಜಾನ್ಸನ್ ಚೆನ್ನೈ ಪರ ಪಾದಾರ್ಪಣೆ ಮಾಡಲಿದ್ದಾರೆ. ವಿಶೇಷ ಎಂದರೆ ಸ್ಪೆನ್ಸರ್ ಜಾನ್ಸನ್ ಈ ಬಾರಿಯ ಐಪಿಎಲ್ಗೆ ಆಯ್ಕೆಯಾಗಿರಲಿಲ್ಲ. ಆದರೆ ಸಿಎಸ್ಕೆ ತಂಡದಲ್ಲಿದ್ದ ಆಸ್ಟ್ರೇಲಿಯಾದ ವೇಗದ ಬೌಲರ್ ನಾಥನ್ ಎಲ್ಲಿಸ್ ಗಾಯಗೊಂಡು ಹೊರಗುಳಿದ ಪರಿಣಾಮ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯು ಸ್ಪೆನ್ಸರ್ ಜಾನ್ಸನ್ ಅವರನ್ನು ಬದಲಿಯಾಗಿ ಆಯ್ಕೆ ಮಾಡಿದ್ದಾರೆ. ವೇಗ ಮತ್ತು ಬೌನ್ಸ್ ಎಸೆತಗಳಿಗೆ ಹೆಸರುವಾಸಿಯಾಗಿರುವ ಸ್ಪೆನ್ಸರ್ ಜಾನ್ಸನ್ ಕಳೆದ ಸೀಸನ್ನಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ಪರ ಕಣಕ್ಕಿಳಿದಿದ್ದರು. ಇದಾಗ್ಯೂ ಅವರಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿರಲಿಲ್ಲ. ಇದೀಗ ಸಿಎಸ್ಕೆ ಪರ ಆಸ್ಟ್ರೇಲಿಯನ್ ಎಡಗೈ ವೇಗಿ ಕಣಕ್ಕಿಳಿಯಲಿದ್ದಾರೆಯ
ಸತತ 4 ಪಂದ್ಯಗಳನ್ನು ಸೋತ ನಂತರ ಮುಂಬೈ ತಂಡ ಗುಜರಾತ್ ವಿರುದ್ಧ ಭರ್ಜರಿ ಜಯ ಸಾಧಿಸಿದೆ. ಗುಜರಾತ್ ವಿರುದ್ಧದ ಪಂದ್ಯದಲ್ಲಿ ಮುಂಬೈ ತಂಡ ಮೂವರು ಅನುಭವಿ ಆಟಗಾರರಾದ ರಯಾನ್ ರಿಕಲ್ಟನ್, ದೀಪಕ್ ಚಹರ್ ಮತ್ತು ಶಾರ್ದೂಲ್ ಠಾಕೂರ್ ಅವರನ್ನು ಕೈಬಿಟ್ಟು, ಅವರ ಸ್ಥಾನದಲ್ಲಿ ಡ್ಯಾನಿಶ್ ಮಾಲೆವಾರ್, ಕ್ರಿಶ್ ಭಗತ್ ಮತ್ತು ಅಶ್ವಿನಿ ಕುಮಾರ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿತ್ತು. ಅದರಲ್ಲಿ ಭಗತ್ ಮತ್ತು ಅಶ್ವಿನಿ ಕುಮಾರ್ ಉತ್ತಮ ಪ್ರದರ್ಶನ ನೀಡಿದರು. ಮುಂಬೈ ತಂಡದ ಮುಂದಿನ ಪಂದ್ಯ CSK ವಿರುದ್ಧ ನಡೆಯಲಿದೆ. ಈ ಪಂದ್ಯ ಗುರುವಾರ, ಏಪ್ರಿಲ್ 23 ರಂದು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿದೆ, ಆದರೆ ಈ ಪಂದ್ಯಕ್ಕೂ ಮೊದಲೇ ಮುಂಬೈ ತಂಡಕ್ಕೆ ಒಳ್ಳೆಯ ಸುದ್ದಿ ಸಿಕ್ಕಿದೆ. ಇಂಗ್ಲೆಂಡ್ ಆಲ್ ರೌಂಡರ್ ವಿಲ್ ಜಾಕ್ಸ್ ಮುಂಬೈ ತಂಡವನ್ನು ಸೇರಿಕೊಂಡಿದ್ದಾರೆ. ಇತ್ತೀಚೆಗೆ ನಡೆದ T20 ವಿಶ್ವಕಪ್‌ನಲ್ಲಿ ವಿಲ್ ಜ್ಯಾಕ್ಸ್ 4 ಪಂದ್ಯಶ್ರೇಷ್ಠ ಪ್ರಶಸ್ತಿಗಳನ್ನು ಪಡೆದಿದ್ದರು.

ನೋಡಿರಿ

