ಹ್ಯಾಂಡ್​​ರೈಟಿಂಗ್ ಚೆನ್ನಾಗಿಲ್ಲವೆಂದು ಬಾಲಕ ಕೈ ಸುಟ್ಟ ಟ್ಯೂಷನ್‌ ಟೀಚರ್‌!

ಹ್ಯಾಂಡ್​​ರೈಟಿಂಗ್ ಚೆನ್ನಾಗಿಲ್ಲವೆಂದು ಬಾಲಕ ಕೈ ಸುಟ್ಟ ಟ್ಯೂಷನ್‌ ಟೀಚರ್‌!

ಮಕ್ಕಳು ತಪ್ಪು ಮಾಡಿದ್ರೆ ತಿದ್ದೋ ಕೆಲಸ ಶಿಕ್ಷಕರದ್ದು.. ಹಾಗೇ ಓದೋ ವಿಚಾರದಲ್ಲೂ ಎಲ್ಲ ಮಕ್ಕಳು ಒಂದೇ ರೀತಿ ಇರಲ್ಲ. ಕೆಲವರು ಉತ್ತಮ ಅಂಕ ಗಳಿಸಿದ್ರೆ, ಇನ್ನೂ ಕೆಲವರು ಜಸ್ಟ್‌ ಪಾಸ್‌ ಆಗ್ತಾರೆ.. ಅವರನ್ನ ಅರ್ಥವಾಗುವ ಹಾಗೆ ಹೇಳಿಕೊಡುವುದು ಶಿಕ್ಷಕರ ಕರ್ತವ್ಯ. ಆದ್ರೆ ಇಲ್ಲೊಂದು ಕಡೆ, ವಿದ್ಯಾರ್ಥಿಯ ಹ್ಯಾಂಡ್​​ರೈಟಿಂಗ್  ಚೆನ್ನಾಗಿಲ್ಲ ಎಂದು ಶಿಕ್ಷಕಿ ಸುಟ್ಟಿದ್ದಾರೆ.

ಇದನ್ನೂ ಓದಿ: US ನೌಕಾಪಡೆಯ F-35 ವಿಮಾನ ಸ್ಫೋ*ಟ – ವಾಯುನೆಲೆ ಬಳಿಯೇ ಭೀಕರ ದುರಂತ

ಈ ಘಟನೆ ಮುಂಬೈನ ಮಲಾಡ್ ಎಂಬ ಲ್ಲಿ ನಡೆದಿದೆ. ಬಾಲಕನನ್ನ ಟ್ಯೂಟನ್‌ಗೆಂದು ಕಳುಹಿಸಲಾಗಿತ್ತು. ಈ ವೇಳೆ ಟ್ಯೂಷನ್‌ ಟೀಚರ್‌ ರಾಜಶ್ರೀ ರಾಥೋಡ್ ಎಂಬಾಕೆ ಬಾಲಕನ ಹ್ಯಾಂಡ್‌ರೈಟಿಂಗ್‌ ಚೆನ್ನಾಗಿಲ್ಲ ಎಂದು ಮೇಣದ ಬತ್ತಿಯಿಂದ ಸುಟ್ಟಿದ್ದಾರೆ. ಇದರಿಂದ ಅಂಗೈ ಸಂಪೂರ್ಣವಾಗಿ ಸುಟ್ಟುಹೋಗಿದೆ. ಬಳಿಕ ಶಿಕ್ಷಕಿ ಬಾಲಕನ ಸಹೋದರಿಗೆ ಕರೆ ಮಾಡಿ ಕರೆದುಕೊಂಡು ಹೋಗಲು ಹೇಳಿದ್ದಾರೆ. ಆಕೆ ಬಂದಾಗ, ತನ್ನ ತಮ್ಮ ಕಣ್ಣೀರು ಹಾಕುವುದನ್ನು ನೋಡಿ ಪ್ರಶ್ನೆ ಮಾಡಿದ್ದಾರೆ, ಬಾಲಕನ ಬಲಗೈ ಸುಟ್ಟಿರುವುದನ್ನು ಗಮನಿಸಿದ್ದಾಳೆ. ಶಿಕ್ಷಕಿಯನ್ನು ಪ್ರಶ್ನಿಸಿದಾಗ, ರಾಜಶ್ರೀ ಏನೂ ಆಗಿಲ್ಲ ಎಂದಿದ್ದಾರೆ. ಮನೆಗೆ ಹಿಂದಿರುಗಿದ ನಂತರ ಬಾಲಕ ನಡೆದಿರುವ ವಿಚಾರವನ್ನು ಹೇಳಿಕೊಂಡಿದ್ದಾನೆ. ಕೂಡಲೇ ಬಾಲಕನ್ನ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಲಾಗಿದೆ. ಕುರಾರ್ ಪೊಲೀಸ್ ಠಾಣೆಯಲ್ಲಿ ಔಪಚಾರಿಕ ದೂರು ನೀಡಿದ್ದಾರೆ.  ಅಪ್ರಾಪ್ತ ವಯಸ್ಕನ ಮೇಲೆ ದೈಹಿಕ ಮತ್ತು ಮಾನಸಿಕ ಕ್ರೌರ್ಯ ಎಸಗಿದ ಆರೋಪದ ಮೇಲೆ ಪೊಲೀಸರು ಶಿಕ್ಷಕಿಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಪ್ರಾಥಮಿಕ ವಿಚಾರಣೆಯ ನಂತರ, ಆರೋಪಿಯನ್ನು ಬಂಧಿಸಲಾಗಿದೆ.

ಮುಂಬೈ ಪೊಲೀಸರು ಬಂಧನವನ್ನು ದೃಢಪಡಿಸಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಹೇಳಿದ್ದಾರೆ. ಈ ಪ್ರಕರಣವು ನಗರದಾದ್ಯಂತ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದ್ದು, ಪೋಷಕರು ಮತ್ತು ಮಕ್ಕಳ ಹಕ್ಕುಗಳ ಕಾರ್ಯಕರ್ತರು ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸುತ್ತಿದ್ದಾರೆ ಮತ್ತು ಖಾಸಗಿ ಬೋಧಕರು ಮತ್ತು ಬೋಧನಾ ಕೇಂದ್ರಗಳ ಉತ್ತಮ ನಿಯಂತ್ರಣಕ್ಕಾಗಿ ಒತ್ತಾಯಿಸುತ್ತಿದ್ದಾರೆ.

Shwetha M