ಅಮಿತಾಭ್, ಅನುಷ್ಕಾ ಶರ್ಮಾ ಬೈಕ್‌ನಲ್ಲಿ ಸವಾರಿ ಮಾಡಿದ್ದೇ ತಪ್ಪಾಯ್ತಾ?

ಅಮಿತಾಭ್, ಅನುಷ್ಕಾ ಶರ್ಮಾ ಬೈಕ್‌ನಲ್ಲಿ ಸವಾರಿ ಮಾಡಿದ್ದೇ ತಪ್ಪಾಯ್ತಾ?

ಬಾಲಿವುಡ್‌ ನಟ ಬಿಗ್‌ ಬಿ ಅಮಿತಾಭ್‌ ಬಚ್ಚನ್‌ ಹಾಗೂ ಅನುಷ್ಕಾ ಶರ್ಮಾ ಟ್ರಾಫಿಕ್‌ ಮಧ್ಯೆ ಸಿಲುಕಿದ್ದರು. ಶೂಟಿಂಗ್‌ ಸ್ಪಾಟ್‌ ಗೆ ಸರಿಯಾದ ಸಮಯಕ್ಕೆ ತೆರಳಲು ಬೈಕ್‌ ಏರಿದ್ದರು. ಆದರೆ ಈ ಇಬ್ಬರು ಸ್ಟಾರ್ಸ್‌ ಬೈಕ್‌ ಏರಿದ್ದೆ ದೊಡ್ಡ ತಪ್ಪಾಗಿದೆ. ಇದೀಗ ಇಬ್ಬರಿಗೂ ಕಾನೂನು ಸಂಕಷ್ಟ ಎದುರಾಗಿದೆ.

ಬಿಗ್ ಬಿ ಅಮಿತಾಭ್ ಬಚ್ಚನ್ ಟ್ರಾಫಿಕ್‌ ಮಧ್ಯೆ ಸಿಲುಕಿದ್ದರಿಂದ ಸರಿಯಾದ ಸಮಯಕ್ಕೆ ಶೂಟಿಂಗ್ ಸ್ಥಳಕ್ಕೆ ಹೋಗಲಾರದೆ ಪರದಾಡುತ್ತಿದ್ದರು. ಬಳಿಕ ಅಭಿಮಾನಿಯೊಬ್ಬರ ಬಳಿ ಲಿಫ್ಟ್ ತೆಗೆದುಕೊಂಡಿದ್ದರು. ಹೆಲ್ಮೆಟ್ ಇಲ್ಲದೆ ಬಿಗ್  ಬಿ ಬೈಕ್ ಏರಿ ಹೊರಟಿದ್ದರು.

ಇದನ್ನೂ ಓದಿ: ಟ್ರಾಫಿಕ್‌ ಮಧ್ಯೆ ಸಿಲುಕಿದ ಅಮಿತಾಭ್‌ ಬಚ್ಚನ್‌ –‌  ಶೂಟಿಂಗ್‌ ಸ್ಪಾಟ್‌ ಗೆ ತೆರಳಲು ಮಾಡಿದ್ದೇನು ಗೊತ್ತಾ?

ಅನುಷ್ಕಾ ಶರ್ಮಾ ತನ್ನ ಬಾಡಿಗಾರ್ಡ್ ಜೊತೆ ಬೈಕ್‌ನಲ್ಲಿ ಹೊರಟಿದ್ದರು. ರಸ್ತೆ ಬ್ಲಾಕ್ ಆಗಿದೆ ಎನ್ನುವ ಕಾರಣಕ್ಕೆ ಅನುಷ್ಕಾ ತನ್ನ ಬಾಡಿಗಾರ್ಡ್ ಜೊತೆ ಹೆಲ್ಮೆಟ್ ಧರಿಸದೆ ಬೈಕ್‌ನಲ್ಲಿ ಹೊರಟಿದ್ದರು. ಇಬ್ಬರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಅಭಿಮಾನಿಗಳು ತರಾಟೆ ತೆಗೆದುಕೊಂಡಿದ್ದರು. ಟ್ರಾಫಿಕ್ ರೂಲ್ಸ್ ಅನುಸರಿಸಿಲ್ಲ, ಇಬ್ಬರ ವಿರುದ್ಧವೂ ಕ್ರಮೆ ತೆಗೆದುಕೊಳ್ಳುವಂತೆ ನೆಟ್ಟಿಗರು ಮುಂಬೈ ಪೊಲೀಸರಿಗೆ ಒತ್ತಾಯಿಸಿದ್ದರು. ಇದೀಗ ಇಬ್ಬರ ಮೇಲೂ ಮುಂಬೈ ಪೊಲೀಸರು ಕ್ರಮ ಕೈಗೊಂಡಿದ್ದಾರೆ.

ಬೈಕ್‌ ನಲ್ಲಿ ಹೋದ ಬಗ್ಗೆ ಅಮಿತಾಭ್ ಬಚ್ಚನ್ ಪೋಸ್ಟ್ ಶೇರ್ ಮಾಡಿ ಸರಿಯಾದ ಸಮಯಕ್ಕೆ ಸ್ಥಳಕ್ಕೆ ಬಿಟ್ಟ ಬೈಕ್ ಚಾಲಕನಿಗೆ ಧನ್ಯವಾದ ತಿಳಿಸಿದ್ದರು. ಅಮಿತಾಭ್ ಬಚ್ಚನ್ ಕಪ್ಪು ಪ್ಯಾಂಟ್, ಜಾಕೆಟ್ ಹಾಗೂ ಕನ್ನಡಕ ಧರಿಸಿದ್ದರು. ಫೋಟೋ ಶೇರ್ ಮಾಡಿ, ‘ರೈಡರ್‌ಗೆ  ಧನ್ಯವಾದ. ನಿಮಗೆ ಗೊತ್ತಿಲ್ಲ. ಆದರೆ ನೀವು ನನ್ನನ್ನು ಸರಿಯಾದ ಸಮಯಕ್ಕೆ ಕರೆದುಕೊಂಡು ಹೋಗಿದ್ದೀರಿ. ವಿಪರೀತ ಟ್ರಾಫಿಕ್ ಜಾಮ್ ತಪ್ಪಿಸಿ ಕರ್ಕೊಂಡು ಹೋಗಿದ್ದೀರಿ. ಶಾರ್ಟ್ ಮತ್ತು ಹಳದಿ ಬಣ್ಣದ ಬಿ ಶರ್ಟ್ ಮಾಲಿಕರಿಗೆ ಧನ್ಯವಾದಗಳು’ ಎಂದು ಬರೆದುಕೊಂಡಿದ್ದರು. ಅಮಿತಾಭ್ ಪೋಸ್ಟ್‌ಗೆ ಅನೇಕರು ಹೆಲ್ಮೆಟ್ ಎಲ್ಲಿ ಸರ್ ಎಂದು ಪ್ರಶ್ನೆ ಮಾಡಿದ್ದರು. ‘ಸರ್, ಹೆಲ್ಮೆಟ್ ಧರಿಸುವುದು ಕಡ್ಡಾಯ. ಕೇವಲ ಒಂದು ಕ್ಯಾಪ್ ಒಂದೇ ಆಗಲ್ಲ’ ಎಂದು ಹೇಳಿದ್ದರು.  ಇದೀಗ ಮುಂಬೈ ಪೊಲೀಸರು ಕೇಸ್ ದಾಖಲಿಸಿಕೊಂಡಿದ್ದಾರೆ.

suddiyaana