ಟ್ರೋಲ್ ಗಳ ನಡುವೆ ಹಾರ್ದಿಕ್ ಪಾಂಡ್ಯ ಸಹೋದರ ಅರೆಸ್ಟ್! – ಪಾಂಡ್ಯ ಬ್ರದರ್ಸ್ ಯಾಮಾರಿದ್ದೇಗೆ..?  

ಟ್ರೋಲ್ ಗಳ ನಡುವೆ ಹಾರ್ದಿಕ್ ಪಾಂಡ್ಯ ಸಹೋದರ ಅರೆಸ್ಟ್! – ಪಾಂಡ್ಯ ಬ್ರದರ್ಸ್ ಯಾಮಾರಿದ್ದೇಗೆ..?  

ಐಪಿಎಲ್ ಸೀಸನ್ 17ನಲ್ಲಿ ತುಂಬಾನೇ ಟ್ರೋಲ್ ಆಗ್ತಿರೋ ಹೆಸ್ರು ಅಂದ್ರೆ ಅದು ಹಾರ್ದಿಕ್ ಪಾಂಡ್ಯ. ಮುಂಬೈ ಟೀಂ ಕ್ಯಾಪ್ಟನ್ಸಿಯಿಂದ ರೋಹಿತ್ ಶರ್ಮಾರನ್ನ ಇಳಿಸೋಕೆ ಪಾಂಡ್ಯರೇ ಕಾರಣ ಅಂತಾ ಅಭಿಮಾನಿಗಳು ರೊಚ್ಚಿಗೆದ್ದಿದ್ದಾರೆ. ಎಂಐ ಪಂದ್ಯದ ವೇಳೆಯಂತೂ ಗ್ರೌಂಡ್​​ನಲ್ಲೇ ಪಾಂಡ್ಯ ವಿರುದ್ಧ ಘೋಷಣೆಗಳನ್ನ ಕೂಗುತ್ತಾ ತಮ್ಮ ಸಿಟ್ಟನ್ನ ಹೊರ ಹಾಕುತ್ತಿದ್ದಾರೆ. ಸೋಶಿಯಲ್ ಮೀಡಿಯಾ ಟ್ರೋಲ್​ನಲ್ಲೂ ಟ್ರೆಂಡಿಂಗ್​ನಲ್ಲಿರೋ ಪಾಂಡ್ಯ ಇದೀಗ ಮತ್ತೊಂದು ವಿಚಾರವಾಗಿ ಭಾರೀ ಸುದ್ದಿಯಲ್ಲಿದ್ದಾರೆ. ಅದೂ ಕೂಡ ತಮ್ಮ ಸಹೋದರನಿಂದಲೇ ವಂಚನೆಗೆ ಒಳಗಾಗಿದ್ದು ಪಾಂಡ್ಯ ಪೊಲೀಸರ ಮೊರೆ ಹೋಗಿದ್ದಾರೆ. ಅಷ್ಟಕ್ಕೂ ಪಾಂಡ್ಯಗೆ ಮೋಸ ಮಾಡಿದ್ದೇಗೆ..? ಪಾಂಡ್ಯ ಬ್ರದರ್ಸ್ ಯಾಮಾರಿದ್ದೇಗೆ..?  ಈ ಬಗ್ಗೆ  ಮಾಹಿತಿ ಇಲ್ಲಿದೆ..

ಇದನ್ನೂ ಓದಿ: ಆರ್‌ಸಿಬಿ ವಿರುದ್ಧ ಮುಂಬೈಗೆ 7 ವಿಕೆಟ್​ಗಳ ಭರ್ಜರಿ ಜಯ – ಸೂರ್ಯನ ವೇಗದ ಆಟಕ್ಕೆ ಎಲ್ಲರೂ ಶಾಕ್​

ಮುಂಬೈ ಇಂಡಿಯನ್ಸ್‌ ತಂಡದ ಕ್ಯಾಪ್ಟನ್ ಹಾರ್ದಿಕ್‌ ಪಾಂಡ್ಯ ಹಾಗೂ ಲಕ್ನೋ ಸೂಪರ್‌ ಜೈಂಟ್ಸ್‌ ತಂಡದ ಆಟಗಾರ ಕೃನಾಲ್‌ ಪಾಂಡ್ಯ ಅವರ ಮಲಸಹೋದರ ವೈಭವ್‌ ಪಾಂಡ್ಯ ಅವರನ್ನ ಮುಂಬೈ ಪೊಲೀಸರು ಬಂಧಿಸಿದ್ದಾರೆ. 4.3 ಕೋಟಿ ರೂಪಾಯಿ ವಂಚಿಸಿರುವುದಾಗಿ ಹಾರ್ದಿಕ್‌ ಪಾಂಡ್ಯ ನೀಡಿದ ದೂರಿನ ಮೇರೆಗೆ ವೈಭವ್ ಅವರನ್ನ ಅರೆಸ್ಟ್ ಮಾಡಲಾಗಿದೆ. ಹಾರ್ದಿಕ್‌ ಪಾಂಡ್ಯ, ಕೃನಾಲ್‌ ಪಾಂಡ್ಯ ಹಾಗೂ ವೈಭವ್‌ ಪಾಂಡ್ಯ  ಮೂವರು ಸೇರಿ ನಡೆಸುತ್ತಿದ್ದ ಪಾಲುದಾರಿಕೆ ಸಂಸ್ಥೆಯಿಂದ ಪಾಂಡ್ಯ ಬ್ರದರ್ಸ್‌ಗೆ ವೈಭವ್‌ ಮೋಸ ಮಾಡಿದ್ದಾರೆ.  ಅಷ್ಟಕ್ಕೂ ಈ ಮೂವರು ಸಹೋದರರೇ ಆಗಿದ್ದು, ಬ್ಯುಸಿನೆಸ್ ನಲ್ಲಿ ವಂಚಿಸಲಾಗಿದೆ.

ಪಾಂಡ್ಯ ಬ್ರದರ್ಸ್ ಗೆ ಮೋಸ ! 

2024ನೇ ಐಪಿಎಲ್ ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್‌ ತಂಡದ ನಾಯಕನಾಗಿ ಹಾರ್ದಿಕ್ ಪಾಂಡ್ಯ ಆಡುತ್ತಿದ್ದು, ಇನ್ನು ಇವರ ಅಣ್ಣ ಕೃನಾಲ್‌ ಪಾಂಡ್ಯ ಅವರು ಲಕ್ನೋ ಸೂಪರ್‌ ಜೈಂಟ್ಸ್‌ ತಂಡದಲ್ಲಿ ಆಡುತ್ತಿದ್ದಾರೆ. ಹಾರ್ದಿಕ್‌ ಪಾಂಡ್ಯ, ಕೃನಾಲ್‌ ಪಾಂಡ್ಯ ಹಾಗೂ ವೈಭವ್‌ ಪಾಂಡ್ಯ 2021ರಲ್ಲಿ ವ್ಯವಹಾರವೊಂದನ್ನ ಆರಂಭಿಸಿದ್ದರು. ಪಾಲುದಾರಿಕೆ ಸಂಸ್ಥೆ ಒಪ್ಪಂದದ ಪ್ರಕಾರ, ಬಂದ ಲಾಭದಿಂದ ಪಾಂಡ್ಯ ಬ್ರದರ್ಸ್‌ಗೆ ತಲಾ 40%, ವೈಭವ್‌ಗೆ 20% ಹಂಚಿಕೊಳ್ಳಬೇಕಿತ್ತು. ಆದ್ರೆ ವೈಭವ್‌ ಪ್ರತ್ಯೇಕ ಕಂಪನಿಯೊಂದನ್ನ ಸ್ಥಾಪಿಸಿ, ಪಾಂಡ್ಯ ಬ್ರದರ್ಸ್‌ ಸ್ಥಾಪಿಸಿದ್ದ ಸಂಸ್ಥೆ ಹಣವನ್ನ ಅದಕ್ಕೆ ಬಳಸಿಕೊಳ್ಳುತ್ತಿದ್ದರು. ಹಾರ್ದಿಕ್ ಪಾಂಡ್ಯ ಹಾಗೂ ಕೃನಾಲ್​ ಪಾಂಡ್ಯ ಇಬ್ಬರಿಗೂ ತಿಳಿಯದಂತೆ ದಾಖಲೆಗಳನ್ನು ಪೋರ್ಜರಿ ಮಾಡಿ ಹಣವನ್ನು ಸ್ವತಃ ವ್ಯವಹಾರಕ್ಕಾಗಿ ಬಳಸಿಕೊಂಡಿದ್ದಾರೆ. ವೈಯಕ್ತಿಕ ವ್ಯವಹಾರದಲ್ಲಿ ಸುಮಾರು 4.3 ಕೋಟಿ ರೂಪಾಯಿ ವಂಚಿಸಿದ ಆರೋಪದ ಮೇಲೆ ವೈಭವ್ ಪಾಂಡ್ಯ ಅವರನ್ನು ಮುಂಬೈ ಪೊಲೀಸರು ಇತ್ತೀಚಿಗೆ ಬಂಧಿಸಿದ್ದಾರೆ. ಈ ಕುರಿತು ಹಾರ್ದಿಕ್‌ ಪಾಂಡ್ಯ ಅವರು ಮುಂಬೈ ಪೊಲೀಸರ ಆರ್ಥಿಕ ಅಪರಾಧ ವಿಭಾಗಕ್ಕೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ವೈಭವ್‌ ಪಾಂಡ್ಯ ಅವರನ್ನ ಬಂಧಿಸಿದ್ದಾರೆ.

ಹಾರ್ದಿಕ್ ಪಾಂಡ್ಯ 2024ರ ಐಪಿಎಲ್‌ ಋತುವಿನ ಆರಂಭದಿಂದಲೂ ಸುದ್ದಿಯಲ್ಲಿದ್ದಾರೆ. 2022ರಲ್ಲಿ ಪದಾದರ್ಪಣೆ ಮಾಡಿದ ಗುಜರಾತ್‌ ಟೈಟಾನ್ಸ್‌ ತಂಡವನ್ನ ಚೊಚ್ಚಲ ಆವೃತ್ತಿಯಲ್ಲೇ ಚಾಂಪಿಯನ್‌ ಪಟ್ಟಕ್ಕೇರಿಸಿದ್ದ ಪಾಂಡ್ಯ 2024ರ ಆವೃತ್ತಿಯಲ್ಲಿ ಮತ್ತೆ ತವರು ಮುಂಬೈ ತಂಡಕ್ಕೆ ನಾಯಕನಾಗಿ ಮರಳಿದರು. ಆದ್ರೆ ರೋಹಿತ್‌ ಶರ್ಮಾ ಅವರನ್ನು ಮುಂಬೈ ತಂಡದ ನಾಯಕತ್ವದಿಂದ ಕೆಳಗಿಳಿಸಿದ ನಂತರ ಅವರ ಅಭಿಮಾನಿಗಳು ನಿರಾಸೆಯಾಗಿದ್ದಾರೆ. ಮೈದಾನದಲ್ಲೇ ಹಾರ್ದಿಕ್‌ ಪಾಂಡ್ಯ ಅವರನ್ನ ಟೀಕೆ ಮಾಡಲಾಗುತ್ತಿದೆ. ಹೀಗೆ ಮುಂಬೈ ತಂಡದ ಕ್ಯಾಪ್ಟನ್ ಆಗಿ ಒತ್ತಡದಲ್ಲಿರುವ ಹಾರ್ದಿಕ್ ಗೆ ಇದೀಗ ಸಹೋದರನೇ ಮೋಸ ಮಾಡಿರೋದು ಪಾಂಡ್ಯ ತಲೆಬಿಸಿ ಮತ್ತಷ್ಟು ಹೆಚ್ಚಾಗುವಂತೆ ಮಾಡಿದೆ. ಮತ್ತೊಂದೆಡೆ ಸಿಎಸ್​ಕೆ ಮಾಜಿ ಕ್ಯಾಪ್ಟನ್ ಧೋನಿ ಎಂಎಸ್ ಧೋನಿ ಅವರ ಮಾಜಿ ಪಾಲುದಾರ ಉದ್ಯಮಿ ಮಿಹಿರ್ ದಿವಾಕರ್ ಅವರನ್ನು ವಂಚನೆ ಆರೋಪದ ಮೇಲೆ ಪೊಲೀಸರು ಬಂಧಿಸಿದ್ದಾರೆ.

ಧೋನಿಗೆ ವಂಚಿಸಿದ್ದ ಉದ್ಯಮಿ ಅರೆಸ್ಟ್!

ರಾಂಚಿಯ ಜಿಲ್ಲಾ ನ್ಯಾಯಾಲಯದಲ್ಲಿ ಸೌಮ್ಯಾ ದಾಸ್ ಜೊತೆಗೆ ದಿವಾಕರ್ ವಿರುದ್ಧ ಧೋನಿ ದೂರು ದಾಖಲಿಸಿದ್ದರು. ಅರ್ಕಾ ಸ್ಪೋಟ್ರ್ಸ್ ಮ್ಯಾನೇಜ್ಮೆಂಟ್ ಪ್ರೈವೇಟ್ ಲಿಮಿಟೆಡ್​ನ ನಿರ್ದೇಶಕರಾಗಿರುವ ದಿವಾಕರ್ ಅವರನ್ನು ಜೈಪುರ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಕ್ರಿಕೆಟ್ ಅಕಾಡೆಮಿಗಳನ್ನು ಸ್ಥಾಪಿಸಲು ಧೋನಿ ಹೆಸರನ್ನು ಅನಧಿಕೃತವಾಗಿ ಬಳಸಲಾಗಿದೆ ಎಂಬ ಆರೋಪ ಕೇಳಿ ಬಂದಿತ್ತು. ಧೋನಿ ಅಧಿಕಾರವನ್ನು ರದ್ದುಪಡಿಸಿದ ನಂತರವೂ, ದಿವಾಕರ್ ಅವರು ಭಾರತ ಮತ್ತು ವಿದೇಶಗಳಲ್ಲಿ ಭಾರತದ ಮಾಜಿ ನಾಯಕನ ಹೆಸರನ್ನು ಬಳಸಿಕೊಂಡು ಅನೇಕ ಕ್ರಿಕೆಟ್ ಅಕಾಡೆಮಿಗಳನ್ನು ತೆರೆದಿದ್ದಾರೆ. ಎಂಎಸ್ ಧೋನಿ ಕ್ರಿಕೆಟ್ ಮತ್ತು ಸ್ಪೋಟ್ರ್ಸ್ ಅಕಾಡೆಮಿಗಳಿಗೆ ಹಣ ಪಡೆದಿರುವ ಆರೋಪವೂ ದಿವಾಕರ್ ಅವರ ಮೇಲಿದೆ. 15 ಕೋಟಿ ರೂಪಾಯಿಗೂ ಹೆಚ್ಚು ವಂಚನೆಯಾಗಿದೆ. ತನಗೆ ತಿಳಿಯದಂತೆ ಪಾಲುದಾರರು ಕ್ರಿಕೆಟಿಗ ಅಕಾಡೆಮಿಗಳನ್ನು ಸ್ಥಾಪಿಸಿದ್ದಾರೆ ಎಂದು ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಹೇಳಿಕೊಂಡಿದ್ದರು. ಇದಲ್ಲದೆ, ಧೋನಿ ಪಾಲುದಾರರಿಗೆ ಒದಗಿಸಿದ ಅಧಿಕಾರ ಪತ್ರವನ್ನು ಆಗಸ್ಟ್ 15, 2021 ರಂದು ಹಿಂತೆಗೆದುಕೊಂಡಿದ್ದರು. ಪತ್ರವನ್ನು ಹಿಂತೆಗೆದುಕೊಳ್ಳುವ ಹೊರತಾಗಿಯೂ, ಅವರು ಧೋನಿಯೊಂದಿಗೆ ಯಾವುದೇ ಹಣ ಅಥವಾ ಮಾಹಿತಿಯನ್ನು ಹಂಚಿಕೊಳ್ಳದೆ ಅವರ ಹೆಸರಿನಲ್ಲಿ ಕ್ರಿಕೆಟ್ ಅಕಾಡೆಮಿಗಳು ಮತ್ತು ಕ್ರೀಡಾ ಸಂಕೀರ್ಣಗಳನ್ನು ಸ್ಥಾಪಿಸಿದ್ದಕ್ಕಾಗಿ ಬಂಧನ ಮಾಡಲಾಗಿದೆ.

ಒಟ್ನಲ್ಲಿ ಐಪಿಎಲ್ ನಲ್ಲಿ ಪಾಂಡ್ಯ ಮತ್ತು ಧೋನಿ ಬ್ಯುಸಿಯಾಗಿರೋ ಟೈಮಲ್ಲಿ ಬ್ಯುಸಿನೆಸ್ ವಿಚಾರವಾಗಿ ಪಾರ್ಟ್ನರ್ ಗಳು ಅರೆಸ್ಟ್ ಆಗಿದ್ದಾರೆ. ಆಟದ ವಿಚಾರ ಮಾತ್ರವಲ್ಲದೆ ವೈಯಕ್ತಿಕ ವಿಚಾರವಾಗಿಯೂ ಈ ಆಟಗಾರರು ಸುದ್ದಿಯಲ್ಲಿದ್ದಾರೆ.

Shwetha M