ಮುಂಬೈ vs ಹೈದರಾಬಾದ್ ನಡುವೆ ಹೈ-ವೋಲ್ಟೇಜ್ ಪಂದ್ಯ – ಈ ಮ್ಯಾಚ್‌ನಲ್ಲಿ ಗೆದ್ದರೆ ಆರೆಂಜ್‌ ಆರ್ಮಿ ಪ್ಲೇ-ಆಫ್‌ಗೆ ಹತ್ತಿರ

ಮುಂಬೈ vs ಹೈದರಾಬಾದ್ ನಡುವೆ ಹೈ-ವೋಲ್ಟೇಜ್ ಪಂದ್ಯ – ಈ ಮ್ಯಾಚ್‌ನಲ್ಲಿ ಗೆದ್ದರೆ ಆರೆಂಜ್‌ ಆರ್ಮಿ ಪ್ಲೇ-ಆಫ್‌ಗೆ ಹತ್ತಿರ

ಮುಂಬೈನ ಐಕಾನಿಕ್ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿರುವ 2024ರ  ಐಪಿಎಲ್ 55ನೇ ರೋಚಕ ಪಂದ್ಯದಲ್ಲಿ ಆತಿಥೇಯ ಮುಂಬೈ ಇಂಡಿಯನ್ಸ್ ಮತ್ತು ಪ್ರವಾಸಿ ಸನ್ ರೈಸರ್ಸ್ ಹೈದರಾಬಾದ್ ತಂಡಗಳು ಸೆಣಸಾಟ ನಡೆಸಲು ಸಜ್ಜಾಗಿವೆ.  ಪ್ಲೇ ಆಫ್‌ನಿಂದ ಬಹುತೇಕ ಹೊರಬಿದ್ದಿರುವ ಮುಂಬೈ ಇಂಡಿಯನ್ಸ್‌ ತಂಡವು, ಟೂರ್ನಿಯ 55ನೇ ಪಂದ್ಯದಲ್ಲಿ ಸನ್‌ರೈಸರ್ಸ್‌ ಹೈದರಾಬಾದ್‌ ತಂಡವನ್ನು ಎದುರಿಸುತ್ತಿದೆ. ಈಗಾಗಲೇ ಪ್ರಸಕ್ತ ಟೂರ್ನಿಯಲ್ಲಿ ಉಭಯ ತಂಡಗಳ ನಡುವಿನ ಮೊದಲ ಮುಖಾಮುಖಿಯಲ್ಲಿ ಸೋತಿರುವ ಹಾರ್ದಿಕ್‌ ಪಾಂಡ್ಯ ಬಳಗ, ಟೂರ್ನಿಯಲ್ಲಿ ಗೆಲುವಿನ ಹುಡುಕಾಟದಲ್ಲಿದ್ದರೆ, ಇತ್ತ ಸನ್‌ರೈಸರ್ಸ್‌ ಹೈದರಾಬಾದ್‌ ತಂಡ 2020ರ ಬಳಿಕ ಮೊದಲ ಬಾರಿ ಪ್ಲೇ-ಆಫ್‌ಗೇರುವ ನಿರೀಕ್ಷೆಯಲ್ಲಿದೆ.

ಇದನ್ನೂ ಓದಿ: ಲಕ್ನೋ ವಿರುದ್ಧ ಕೆಕೆಆರ್‌ಗೆ ಭರ್ಜರಿ ಜಯ – ಕೋಲ್ಕತ್ತಾದ ಪ್ಲೆ-ಆಫ್‌  ಕನಸು ಇನ್ನೂ ಜೀವಂತ

ಸನ್‌ರೈಸರ್ಸ್‌ ಹೈದರಾಬಾದ್ ಆಡಿರುವ 10 ಪಂದ್ಯಗಳಲ್ಲಿ 6ರಲ್ಲಿ ಜಯಭೇರಿ ಬಾರಿಸಿದೆ. ಮತ್ತೊಂದು ಗೆಲುವು ತಂಡವನ್ನು ಪ್ಲೇ-ಆಫ್‌ನ ಸನಿಹಕ್ಕೆ ತಂದು ನಿಲ್ಲಿಸಲಿದೆ. ಆದರೆ 11ರಲ್ಲಿ 8 ಪಂದ್ಯ ಸೋತಿರುವ ಮುಂಬೈನ ಪ್ಲೇ-ಆಫ್‌ ಬಾಗಿಲು ಬಂದ್‌ ಆಗಿದ್ದು, ಅಧಿಕೃತಗೊಳ್ಳುವುದು ಮಾತ್ರ ಬಾಕಿಯಿದೆ. ಹೀಗಾಗಿ ತಂಡ ಪ್ರತಿಷ್ಠೆಗಾಗಿ ಆಡಬೇಕಿದೆ.

ಟಿ20 ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾ ಸ್ಕ್ವಾಡ್‌ನಲ್ಲಿ ಮಿಂಚುತ್ತಿರೋ ಮುಂಬೈ ಇಂಡಿಯನ್ಸ್‌ನ ನಾಲ್ಕು ಆಟಗಾರರು ಐಪಿಎಲ್ ನಲ್ಲಿ ಫುಲ್ ಸೈಲೆಂಟ್ ಆಗಿದ್ದಾರೆ. ಇದ್ರ ಪರಿಣಾಮ ಮುಂಬೈ ಇಂಡಿಯನ್ಸ್ ತಂಡ ಪ್ಲೇಆಫ್ ರೇಸ್‌ನಿಂದ ಹೊರಬಿದ್ದಿದೆ. ಇವತ್ತು ಸನ್‌ರೈಸರ್ಸ್ ಹೈದ್ರಾಬಾದ್ ಮುಂದೆ ಮುಂಬೈ ಕಣಕ್ಕಿಳಿಯಲಿದೆ. ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯ ಸ್ಟೇಡಿಯಂನಲ್ಲಿ ಫ್ಯಾನ್ಸ್‌ಗೆ ಖುಷಿಯಾಗಲಿ ಅಂತಾ ಏನೇನೋ ಆಕ್ಟಿಂಗ್ ಮಾಡ್ತಿದ್ದಾರೆ ಬಿಟ್ರೆ ಟೀಮ್ ಪರವಾಗಿ ಆಲ್ರೌಂಡರ್ ಆಟ ಪ್ರದರ್ಶನ ಮಾಡ್ತಿಲ್ಲ. ಬೂಮ್ರಾ ಬೌಲಿಂಗ್‌ನಲ್ಲಿ ಮ್ಯಾಜಿಕ್ ಮಾಡಿದ್ರೂ ಕೂಡಾ ತಂಡದ ಗೆಲುವಿಗೆ ಇವರೊಬ್ಬರ ಶ್ರಮ ಸಾಕಾಗ್ತಿಲ್ಲ. ಸೂರ್ಯಕುಮಾರ್ ಯಾದವ್ ಬ್ಯಾಟ್ ಯಾಕೋ ಸೌಂಡೇ ಮಾಡ್ತಿಲ್ಲ. ಇದ್ರಿಂದಾಗಿ 5 ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ಈ ಬಾರಿ ಪಾಯಿಂಟ್ಸ್ ಟೇಬಲ್‌ನಲ್ಲಿ ಲಾಸ್ಟ್ ಅಲ್ಲಿದೆ.

ರನ್ ಮಳೆ ಸುರಿಸೋದ್ರಲ್ಲಿ ಸನ್‌ರೈಸರ್ಸ್ ಹೈದ್ರಾಬಾದ್ ತಂಡ ನಂಬರ್ ಒನ್. ಆದ್ರೆ, ಬೌಲಿಂಗ್ ವಿಭಾಗದಲ್ಲಿ ಬಲವೇ ಇಲ್ಲ. ಇದೇ ತಂಡದ ಸೋಲಿಗೆ ಕಾರಣವಾಗ್ತಿದೆ. ಹೈದ್ರಾಬಾದ್ ತಂಡ ಇದುವರೆಗೆ ಆಡಿರೋ 10 ಪಂದ್ಯಗಳಲ್ಲಿ 6 ಗೆಲುವು ನಾಲ್ಕರಲ್ಲಿ ಸೋಲು ಕಂಡಿದೆ. ಪ್ಯಾಟ್ ಕಮಿನ್ಸ್ ಟೀಮ್ ಪ್ಲೇಆಪ್‌ಗೆ ಲಗ್ಗೆ ಹಾಕೋ ನಿರೀಕ್ಷೆಯಲ್ಲಿದೆ. ಇವತ್ತು ಮುಂಬೈ ಎದುರು ಗೆದ್ದರೆ ಮಾತ್ರ ಎಸ್‌ಆರ್ ಹೆಚ್ ಪ್ಲೇ ಆಫ್ ಚಾನ್ಸ್ ಸಿಗುತ್ತೆ. ಇಲ್ಲಾಂದ್ರೆ ಮಾಡು ಇಲ್ಲವೇ ಮಡಿ ಅನ್ನೋ ಸ್ಥಿತಿ ಈ ಟೀಮ್‌ನದ್ದು.

Shwetha M