ರೋHIT ಫೇಲಾದ್ರೆ MI ಔಟ್ – IPLನಿಂದ ಮುಂಬೈ ಪಲ್ಟಿ? – ಹಾರ್ದಿಕ್ ಪಾಂಡ್ಯ ಅಂಬಾನಿ ನಂಬಿಕೆ ಉಳಿಸಿಕೊಂಡಿಲ್ವಾ?

ರೋHIT ಫೇಲಾದ್ರೆ MI ಔಟ್ – IPLನಿಂದ ಮುಂಬೈ ಪಲ್ಟಿ? – ಹಾರ್ದಿಕ್ ಪಾಂಡ್ಯ ಅಂಬಾನಿ ನಂಬಿಕೆ ಉಳಿಸಿಕೊಂಡಿಲ್ವಾ?

ರೋಹಿತ್‌ ಶರ್ಮಾನ ಬೆಲೆ ಈಗ ಮುಂಬೈಗೆ ಎಲ್ಲರಿಗಿಂತ ಜಾಸ್ತಿ ಅರ್ಥ ಆಗಿರಬೇಕು.. ಸಾಲು ಸಾಲು ಸೋಲಿನಿಂದ ಕಂಗೆಟ್ಟಿದೆ ಅಂಬಾನಿ ಒಡೆತನದ ಮುಂಬೈ ಇಂಡಿಯನ್ಸ್‌.. ಕಳೆದ ಬಾರಿ ಸಿಕ್ಕಾಪಟ್ಟೆ ಕೆಟ್ಟದಾಗಿ ಆಡಿದ್ದ ಮುಂಬೈ ಇಂಡಿಯನ್ಸ್‌ ತಂಡವನ್ನು ಈ ಬಾರಿ ಚಾಂಪಿಯನ್‌ ಮಾಡಿಸ್ಬೇಕು ಎನ್ನೋ ಉದ್ದೇಶದಿಂದಲೇ ನೀತಾ ಅಂಬಾನಿ ಹದಿನೈದು ಕೋಟಿ ಕೊಟ್ಟು ಜಿಟಿಯಿಂದ ಹಾರ್ದಿಕ್‌ ಪಾಂಡ್ಯಾರನ್ನು ಖರೀದಿಸಿದ್ದರು.. ಆದ್ರೀಗ ಅತ್ತ ಹೊಸ ಕ್ಯಾಪ್ಟನ್‌ ಟೀಂ ಜೊತೆ ಸೆಟ್‌ ಆಗ್ತಿಲ್ಲ.. ಇತ್ತ ಹಳೆ ಕ್ಯಾಪ್ಟನ್‌ ಆಡದಿದ್ರೆ ಟೀಂಗೆ ಭವಿಷ್ಯವಿಲ್ಲ ಎಂಬಂತಾಗಿದೆ ಮುಂಬೈನ ಪರಿಸ್ಥಿತಿ.

ಇದನ್ನೂ ಓದಿ: ಕೊಹ್ಲಿಗೆ ಮಾತ್ರನಾ ಮ್ಯಾಚ್? – ಉದ್ಧಟ ಗಂಭೀರ್ ಗೆ ಉತ್ತರವಿಲ್ವಾ?

ರಾಜಸ್ಥಾನ್‌ ರಾಯಲ್ಸ್‌ ವಿರುದ್ಧದ ಅತ್ಯಂತ ನಿರ್ಣಾಯಕ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ ಹೀನಾಯವಾಗಿ ಸೋತಿದೆ. ಅದಕ್ಕಿಂತಲೂ ಹೀನಾಯವಾಗಿ ಹಾರ್ದಿಕ್‌ ಪಾಂಡ್ಯಾನನ್ನು ಟಾಸ್‌ ವೇಳೆ ಮುಂಬೈ ತಂಡದ ತವರು ನೆಲದಲ್ಲಿಯೇ ಪ್ರೇಕ್ಷಕರು ಕಿಚಾಯಿಸಿದ್ದರು.. ಎಷ್ಟರಮಟ್ಟಿಗೆ ರೋಹಿತ್‌ ರೋಹಿತ್‌ ಎಂಬ ಕೂಗು ಟಾಸ್‌ ವೇಳೆ ಕೇಳಿಬಂದಿತ್ತು ಅಂದ್ರೆ ಪ್ರೇಕ್ಷಕರಿಗೆ ಸರಿಯಾಗಿ ವರ್ತಿಸಿ ಎಂದು ಕಾಮೆಂಟ್ರಿ ಮಾಡುತ್ತಿದ್ದ ಸಂಜಯ್‌ ಮಂಜ್ರೇಕರ್‌ ಹೇಳುವಂತಾಗಿತ್ತು.. ಹಾರ್ದಿಕ್‌ ಮಾತ್ರ ಎಂದಿನ ಬಲವಂತದ ಸ್ಮೈಲ್‌ ಮೂಲಕವೇ ಉತ್ತರ ಕೊಡುವ ಪ್ರಯತ್ನ ಮಾಡಿದ್ದರು.. ಹಾಗಿದ್ದರೂ ಮುಂಬೈ ತಂಡವನ್ನು ಗೆಲ್ಲಿಸಿ ಅಂತಿಮ ನಗು ಬೀರುವ ಅವಕಾಶ ಮಾತ್ರ ಮಿಸ್‌ ಮಾಡ್ಕೊಂಡ್ರು..

ಕಳೆದ ವರ್ಷ ಮುಂಬೈ ಇಂಡಿಯನ್ಸ್‌ ಹೀನಾಯವಾಗಿ ಸೋಲಲು ಕಾರಣವಾಗಿದ್ದು ರೋಹಿತ್‌ ಶರ್ಮಾನ ಕಳಪೆ ಫಾರ್ಮ್.. ಕಳೆದ ಐಪಿಎಲ್‌ನಲ್ಲೂ ರೋಹಿತ್‌ ಶರ್ಮಾ ಸಿಡಿದಿರಲಿಲ್ಲ.. ರೋಹಿತ್‌ ಅಬ್ಬರಿಸಲು ಶುರು ಮಾಡಿದ್ರೆ ಮುಂಬೈ ಇಂಡಿಯನ್ಸ್‌ ತಂಡದಲ್ಲಿ ಆಲ್‌ ಈಸ್‌ ವೆಲ್‌ ಎನ್ನುವಂತಹ ಪರಿಸ್ಥಿತಿ ನಿರ್ಮಾಣ ಆಗಿಬಿಡುತ್ತದೆ.. ಯಾಕಂದ್ರೆ ರೋಹಿತ್‌ ಅಬ್ಬರಿಸಿದ್ರೆ ಎದುರಾಳಿಗಳಿಗೆ ಉತ್ತರ ಇರೋದಿಲ್ಲ.. ಆದ್ರೆ ರೋಹಿತ್ ಕಳೆದ ಒಂದು ವರ್ಷದ ಅವಧಿಯಲ್ಲಿ ಟೀಂ ಇಂಡಿಯಾ ಪರ ಬಹಳ ಚೆನ್ನಾಗಿಯೇ ಬ್ಯಾಟ್‌ ಬೀಸಿದ್ದಾರೆ.. ವರ್ಲ್ಡ್‌ ಕಪ್‌ನಲ್ಲಂತೂ ಮೂರು ಓವರ್‌ ಕ್ರೀಸ್‌ನಲ್ಲಿದ್ದರೂ ಸಾಕು.. ರೋಹಿತ್ ಬ್ಯಾಟಿಂದ ಸಿಡಿಲಬ್ಬರದ ಬೌಂಡರಿ, ಸಿಕ್ಸರ್‌ಗಳು ಸಿಡಿಯುತ್ತಿದ್ದವು.. ಅಷ್ಟರಮಟ್ಟಿಗೆ ರೋಹಿತ್‌ ಟೀಂ ಇಂಡಿಯಾವನ್ನು ಮುನ್ನಡೆಸಿದ್ದರು.. ಆದ್ರೆ ಅದ್ಯಾಕೋ ಐಪಿಎಲ್‌ ಸೀಸನ್‌ ಶುರುವಾಗುತ್ತಿದ್ದಂತೆ ರೋಹಿತ್‌ ಮಂಕಾಗಿದ್ದಾರೆ.. ಮೊದಲ ಪಂದ್ಯದಲ್ಲಿ ಚೆನ್ನಾಗಿಯೇ ಆಡಿದ್ದ  ರೋಹಿತ್‌ ಎರಡನೇ ಪಂದ್ಯದಲ್ಲೂ ಅಸಾಧ್ಯ ಟೋಟಲ್‌ ಚೇಸ್‌ ಮಾಡಲು ಹೊರಟಾಗ ವೇಗವಾಗಿಯೇ ಬ್ಯಾಟ್‌ ಬೀಸಿದ್ದರು.. ಆದ್ರೆ ಮೂರನೇ ಪಂದ್ಯದಲ್ಲಿ ಡಕೌಟ್‌ ಆದ್ರು ನೋಡಿ.. ಮುಂಬೈ ಇಂಡಿಯನ್ಸ್‌ ಕೂಡ ಕೇವಲ126 ರನ್‌ಗಳ ಕಳಪೆ ಟಾರ್ಗೆಟ್‌ ನೀಡುವಂತಾಯಿತು.. ಆರ್‌ ಆರ್‌ ತಂಡದ ಬೌಲರ್‌ಗಳು ಸ್ವಿಂಗ್‌ ಬೌಲಿಂಗ್‌ ಮೂಲಕ ಕಿಂಗ್‌ ಗಳಾದ್ರೆ ಮುಂಬೈ ಇಂಡಿಯನ್ಸ್‌ ಮಕಾಡೆ ಮಲಗಿತು.. ಹಾಗಿದ್ದರೂ ಸೋಮವಾರದ ಪಂದ್ಯದಲ್ಲಿ ಒಂದಂಶವನ್ನು ಗಮನಿಸಬೇಕಿತ್ತು.. ಟಾಸ್‌ ವೇಳೆ ಮುಂಬೈ ಫ್ಯಾನ್ಸ್‌ ನಾಯಕ ಹಾರ್ದಿಕ್‌ ಪಾಂಡ್ಯಾನನ್ನು ಕಿಚಾಯಿಸಿದ್ದರು ನಿಜ.. ಆದರೆ ಯಾವಾಗ ಹಾರ್ದಿಕ್‌ ಪಾಂಡ್ಯ ಚೆನ್ನಾಗಿ ಬ್ಯಾಟ್‌ ಬೀಸಲು ಶುರು ಮಾಡಿದ್ರೋ, ಕಿಚಾಯಿಸುತ್ತಿದ್ದವರು ಇದ್ದಕ್ಕಿದ್ದಂತೆ ಪ್ರೋತ್ಸಾಹಿಸಲು ಆರಂಭಿಸಿದ್ದರು.. ಕ್ರೀಸ್‌ನಲ್ಲಿ ಹಾರ್ದಿಕ್‌ ಬ್ಯಾಟ್‌ ಬೀಸುತ್ತಿದ್ದರೆ, ಫ್ಯಾನ್ಸ್‌ ಸೆಲೆಬ್ರೇಷನ್‌ ಮೋಡ್‌ಗೆ ಜಾರಿದ್ದರು.. ಹಾಗಿದ್ದರೂ ಹಾರ್ದಿಕ್‌ ಪಾಂಡ್ಯಾ ತುಂಬ ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ.. ಕನಿಷ್ಠ ಹಾಫ್‌ ಸೆಂಚುರಿ ಬಾರಿಸುತ್ತಿದ್ದರೆ ಮುಂಬೈ ಇಂಡಿಯನ್ಸ್‌ ಫ್ಯಾನ್ಸ್‌ ಸಂಪೂರ್ಣವಾಗಿ ಹಾರ್ದಿಕ್‌ ಪಾಂಡ್ಯಾನನ್ನು ಕ್ಷಮಿಸುತ್ತಿದ್ದರೋ ಏನೋ.. ಆದ್ರೆ ಇನ್ನೂ ಹತ್ತು ಓವರ್‌ಗೂ ಹೆಚ್ಚು ಬಾಲ್‌ಗಳು ಬಾಕಿ ಇದ್ದಾಗಲೇ ಹಾರ್ದಿಕ್‌ ಪಾಂಡ್ಯಾ ವಿಕೆಟ್‌ ಒಪ್ಪಿಸಿದ್ದರು.. ತಮ್ಮ ವಿರುದ್ಧದ ಎಲ್ಲಾ ಟೀಕೆಗಳಿಗೆ ಉತ್ತರ ಕೊಡುವ ಬೆಸ್ಟ್‌ ಅವಕಾಶ ಸೋಮವಾರ ಹಾರ್ದಿಕ್‌ ಮುಂದಿತ್ತು.. ಆದ್ರೆ ಅರ್ಜೆಂಟಲ್ಲಿ ಆಡೋಕೆ ಹೋಗಿ, 21 ಎಸೆತಗಳಲ್ಲಿ 34 ರನ್‌ ಗಳಿಸಿದ್ದಾಗಲೇ ಹಾರ್ದಿಕ್‌ ವಿಕೆಟ್‌ ಒಪ್ಪಿಸಿದರು.. ಇದ್ರಿಂದಾಗಿ ಮುಂಬೈ ಇಂಡಿಯನ್ಸ್‌ಗೆ ದೊಡ್ಡ ಸ್ಕೋರ್ ದಾಖಲಿಸಲು ಸಾಧ್ಯವಾಗಲಿಲ್ಲ.. ಅದರಲ್ಲೂ ಕ್ರೀಸ್‌ನಲ್ಲಿ ಸೆಟ್‌ ಆಗಿದ್ದ ಹಾರ್ದಿಕ್‌ ಪಾಂಡ್ಯಾ ಜವಾಬ್ದಾರಿಯುತವಾಗಿ ಆಡುವ ಅವಕಾಶವಿತ್ತು.. ಆಡಲು ಬೇಕಷ್ಟು ಓವರ್‌ಗಳೂ ಕೂಡ ಬಾಕಿಯಿದ್ದವು.. ಆರಾಮಾಗಿ ಹಾರ್ದಿಕ್‌ ಆಡಿದ್ದರೆ, ಮುಂಬೈ ತಂಡ ರಾಜಸ್ಥಾನದ ವಿರುದ್ಧ 160ಕ್ಕಿಂತ ಹೆಚ್ಚು ರನ್‌ ದಾಖಲಿಸಲು ಅವಕಾಶವಿತ್ತು.. ಒಂದು ವೇಳೆ 160ಕ್ಕಿಂತ ಹೆಚ್ಚು ರನ್‌ ಹೊಡೆದಿರುತ್ತಿದ್ದರೆ, ಆರ್‌ಆರ್‌ಗೂ ಚೇಸ್‌ ಮಾಡೋದು ಸುಲಭ ಇರಲಿಲ್ಲ.. ಆದ್ರೆ ಒಳ್ಳೆಯ ಅವಕಾಶವನ್ನು ಹಾರ್ದಿಕ್‌ ಪಾಂಡ್ಯಾ ಮಿಸ್‌ ಮಾಡ್ಕೊಂಡರು.. ಇದರಿಂದಾಗಿ ಮುಂಬೈ ಇಂಡಿಯನ್ಸ್‌ನ ಮಾಲಕಿ ನೀತಾ ಅಂಬಾನಿಯವರಿಗೆ ನಿಜಕ್ಕೂ ಹಾರ್ಟ್‌ ಒಡೆದು ಹೋಗಿರುತ್ತದೆ.. ಯಾಕಂದ್ರೆ ಈ ಬಾರಿ ಮುಂಬೈ ಚಾಂಪಿಯನ್‌ ಆಗ್ಲೇಬೇಕು ಎಂಬ ಲೆಕ್ಕಾಚಾರದಿಂದ ಚಾಂಪಿಯನ್‌ ಕ್ಯಾಪ್ಟನ್‌ ಅನ್ನೋ ತಮ್ಮ ಪ್ರಾಂಚೈಸಿಗೆ ಖರೀದಿಸಿದ್ದರು.. ಅಲ್ಲದೆ ಬೌಲಿಂಗ್‌ ಡಿಪಾರ್ಟ್‌ಮೆಂಟ್‌ಗೂ ಶಕ್ತಿ ತುಂಬುವ ಕೆಲಸವನ್ನು ನೀತಾ ಅಂಬಾನಿ ಮಾಡಿದ್ದರು.. ಆದರೆ ಹಾರ್ದಿಕ್‌ ನ ಕೈಗೆ ಕ್ಯಾಪ್ಟೆನ್ಸಿ ಕೊಟ್ಟ ಮೇಲೆ ಮುಂಬೈ ಉದ್ಧಾರ ಆಗುವ ಬದಲು ಮತ್ತಷ್ಟು ಹಳ್ಳ ಹಿಡಿದಿದೆ.. ಜೊತೆಗೆ ರೋಹಿತ್‌ ಹಿಟ್‌ ಮಾಡದಿದ್ದರೆ ಮುಂಬೈ ಇಂಡಿಯನ್ಸ್‌ಗೆ ಬಿಗ್‌ ಸ್ಕೋರ್‌ ದಾಖಲಿಸುವುದು ಅಸಾಧ್ಯ ಎನ್ನುವುದನ್ನು ಮುಂಬೈ ಆಟಗಾರರು ಮತ್ತೆ ಸಾಬೀತುಪಡಿಸಿದ್ದಾರೆ. ಇದ್ರಿಂದಾಗಿ ಬಹಳ ಆರಾಮಾವಾಗಿ ಮುಂಬೈ ಇಂಡಿಯನ್ಸ್‌ ಸೋಲಿಸಿದ ಆರ್‌ಆರ್‌ ಪಾಯಿಂಟ್‌ ಟೇಬಲ್‌ನಲ್ಲಿ ನಂ.1 ಪೊಸಿಷನ್‌ ಪಡೆದುಕೊಂಡಿದೆ.. ಆಡಿದ ಮೂರು ಪಂದ್ಯಗಳನ್ನು ಸದ್ಯ ಗೆದ್ದಿರುವ ಏಕೈಕ ತಂಡವೆಂದರೆ ಅದು ರಾಜಸ್ಥಾನ ರಾಯಲ್ಸ್‌.. ಈಗಾಗ್ಲೇ ಮೂರಕ್ಕೆ ಮೂರೂ ಪಂದ್ಯ ಸೋತಿರುವ ಮುಂಬೈ ಇಂಡಿಯನ್ಸ್‌ ಪಾಯಿಂಟ್‌ ಟೇಬಲ್‌ನಲ್ಲಿ ಹತ್ತನೇ ಸ್ಥಾನದಲ್ಲಿದ್ದಾರೆ.. ಅಲ್ಲಿಂದ ಮೇಲೆ ಬರಬೇಕು ಅಂದ್ರೆ ಮುಂದೆ ಆಡುವ ಪಂದ್ಯಗಳಲ್ಲಿ ಗೆಲುವು ದಾಖಲಿಸಲೇಬೇಕಾದ ಅನಿವಾರ್ಯತೆ ಮುಂಬೈ ತಂಡಕ್ಕಿದೆ.. ಆರ್‌ಆರ್‌ ವಿರುದ್ಧ ಸೋತ ನಂತರ ನಾವು ಒಂದು ಗುಂಪಾಗಿ ಆಡಿದರೆ ಮುಂದೆ ಗೆಲ್ಲಬಹುದು ಎಂದು ನಾಯಕ ಹಾರ್ದಿಕ್‌ ಪಾಂಡ್ಯಾ ಒಪ್ಪಿಕೊಂಡಿದ್ದಾರೆ.. ಆ ಮೂಲಕ ಮುಂಬೈ ಇಂಡಿಯನ್ಸ್‌ ಸದ್ಯ ಒಡೆದ ಮನೆ ಎಂಬುದು ಸಾಬೀತಾಗಿದೆ.. ಇಂತಹ ಒಡಕಿನಿಂದ ಆಡಿದರೆ ತಂಡ ಟೈಟಲ್‌ ಗೆಲ್ಲೋದಿರಲಿ, ಟೂರ್ನಮೆಂಟ್‌ನಿಂದಲೇ ಬೇಗನೆ ಪಲ್ಟಿ ಹೊಡೆದು ಹೊರ ಬೀಳುವುದು ನಿಶ್ಚಿತ..

Sulekha